ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಕಾರ್ಕಳ ದಿನಾಂಕ 08/04/2022 ರಂದು ಬೆಳಿಗ್ಗೆ 7:30 ಗಂಟೆಯಿಂದ 08:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ದುರ್ಗಾ ಗ್ರಾಮದ ನಾರ್ಕಟ್ಟು ರಸ್ತೆ ಬದಿಯಲ್ಲಿರುವ ಬ್ರಹ್ಮಶ್ರೀ ಹನಿಮೊಗೇರ ದೈವಸ್ಥಾನದ ಹೊರಗಡೆ ಜಗಲಿಯಲ್ಲಿ ಇರಿಸಿದ್ದ ಕಾಣಿಕೆ ಡಬ್ಬಿಯನ್ನು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿ ಶ್ರೀ ಸುಬ್ರಾಯ ಭಟ್  ಪ್ರಾಯ: 70 ವರ್ಷ ತಂದೆ: ದಿವಂಗತ  ವಾಸ: ಅರ್ಬಿ ಹೌಸ್ ದುರ್ಗಾ ಅಂಚೆ & ಗ್ರಾಮ, ಕಾರ್ಕಳ ಇವರು ಮಿಯ್ಯಾರು ಗ್ರಾಮದ ಕುರ್ಕಾಲು ಪಲ್ಕೆಯ ಗೋಪಾಲ ಮೇರ ಎಂಬಾತನು ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಕಾಣಿಕೆ ಡಬ್ಬಿಯಲ್ಲಿ ಅಂದಾಜು 300-400 ರೂಪಾಯಿಗಳು ಇರಬಹುದೆಂದು ತಿಳಿಸಿರುತ್ತಾರೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 2022 ಕಲಂ: 379  ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರವಕರಣ

  • ಗಂಗೊಳ್ಳಿ: ಫಿರ್ಯಾದಿ ಶೋಭಾ ಪ್ರಾಯ: 33 ವರ್ಷ, ಗಂಡ: ವಿಶ್ವನಾಥ, ವಾಸ: ಹರ್ಕೂರು ತೋಟದ ಮನೆ, ಕುಂದಾಪುರ ತಾಲೂಕು  ಇವರು ಬೆಳಿಗ್ಗೆ ತನ್ನ ಗಂಡ ವಿಶ್ವನಾಥರವರ ಜೊತೆ ಮಗಳನ್ನು ಡಾನ್ ಬಾಸ್ಕೊ ಶಾಲೆಗೆ ಬಿಟ್ಟು ತಮ್ಮ ಬಾಬ್ತು ಕಾರು KA-20 MA-2577 ಕಾರಿನಲ್ಲಿ ಸಹಸವಾರಳಾಗಿ ಕುಳಿತುಕೊಂಡು ವಿಶ್ವನಾಥರವರು  ಕಾರನ್ನು ಚಲಾಯಿಸಿಕೊಂಡಿದ್ದು ಅರಾಟೆ ಕಡೆಗೆ  ಹೋಗಲು  ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಮೊವಾಡಿ ಕ್ರಾಸ್ ತಿರುವಿನಲ್ಲಿ ನಿಲ್ಲಿಸಿಕೊಂಡಿದ್ದಾಗ  ಸಮಯ ಸುಮಾರು ಬೆಳಿಗ್ಗೆ 9:15 ಗಂಟೆಗೆ ರಾ.ಹೆ 66 ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ವಿರುದ್ಧ ದಿಕ್ಕಿನಲ್ಲಿ ಕಾಮೇಶ್ವರ್ ಎಂಬವರು GA-07 F-1023  ನೇ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಠಾಣಾ  ಅಪರಾಧ ಕ್ರಮಾಂಕ  29 /2022 ಕಲಂ:279   ಐಪಿಸಿ  & 218, 177 ಐ.ಎಂ.ವಿ ಆಕ್ಟ್ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಟ್ಕ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 08-04-2022 ರಂದು ಪಿರ್ಯಾದಿ ಸದಾಶಿವ ಆರ್ ಗವರೋಜಿ ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ.ಇವರು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ 10:30 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಬೀಟ್ ಸಿಬ್ಬಂದಿಯವರಾದ ಪಿಸಿ 1174 ರಾಮ ಪೂಜಾರಿಯವರು ಕುಂದಾಪುರ ಕಸಬಾ ಗ್ರಾಮದ ಶಶಿಧರ ಬಾರ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿಯು ಮಟ್ಕಾ ಜುಗಾರಿ ಆಡುತ್ತಿರುವುದಾಗಿ  ಮಾಹಿತಿ ನೀಡಿದ್ದು  ಈ ಬಗ್ಗೆ ಸದ್ರಿ ಸ್ಥಳಕ್ಕೆ 10:45 ಗಂಟೆಗೆ ತಲುಪಿ ಮರೆಯಲ್ಲಿ ನಿಂತು ನೋಡಲಾಗಿ ಕುಂದಾಪುರ ಕಸಬಾ ಗ್ರಾಮದ ಶಶಿಧರ ಹೋಟೇಲ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿಯು ಸಾರ್ವಜನಿಕರನ್ನು ಸೇರಿಸಿಕೊಂಡಿದ್ದು, 00 ರಿಂದ 99 ರ ಒಳಗೆ ಯಾವುದೇ ನಂಬರ್‌ ಬಂದರೆ 1/-ರೂ ಗೆ 70/-ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನುಪಣವಾಗಿ ಸ್ವೀಕರಿಸಿಕೊಂಡು ಮಟ್ಕಾ ನಂಬ್ರ ಬರೆದು ಕೊಡುತ್ತಿದ್ದು, ಮಟ್ಕಾ ಜುಗಾರಿ ಆಟ ಆಡುತ್ತಿದ್ದುದನ್ನು  ಖಚಿತಪಡಿಸಿಕೊಂಡು, ಸ್ಥಳಕ್ಕೆ ಪಂಚಾಯತುದಾರರನ್ನು ಬರಮಾಡಿಕೊಂಡು 11:30 ಗಂಟೆಗೆ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿದ್ದು , ಮಟ್ಕಾ ಬರೆಯುತ್ತಿದ್ದು ವ್ಯಕ್ತಿಯನ್ನುಹಿಡಿದಾಗ ಆತನು ಸ್ವಂತ ಲಾಭಕ್ಕಾಗಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ತನ್ನ ತಪ್ಪಿತತ್ವವನ್ನು ಒಪ್ಪಿಕೊಂಡಿದ್ದು  ಆತನ  ಹೆಸರು ವಿಳಾಸ ತಿಳಿದು, ಆಪಾದಿತನನ್ನು ವಶಕ್ಕೆ ಪಡೆದು ಆತನಿಂದ  ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ  ನಗದು ರೂಪಾಯಿ 700/-, ಬಾಲ್ ಪೆನ್-1 ಮತ್ತು ಮಟ್ಕಾ ನಂಬ್ರ ಬರೆದ ಚೀಟಿ -1 ನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿ ಕೊಳ್ಳಲಾಯಿತು. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ 41/2022 ಕಲಂ: 78 (i) (iii) KP ACT ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

  • ಕುಂದಾಪುರ: ಪಿರ್ಯಾದಿ ಅನಂತ ಪ್ರಭು ಕೆ, ಪ್ರಾಯ: 28 ವರ್ಷ, ತಂದೆ: ಜನರ್ಧನ್ ಪ್ರಭು, ವಾಸ: ವರದಾನ , ಭಾಗವತ್ ಓಣಿ ರಸ್ತೆ,ಕೋಟೇಶ್ವರ ಇವರ ತಂದೆ 70 ವರ್ಷ ಪ್ರಾಯದ ಜನಾರ್ಧನ ಪ್ರಭು ಎಂಬುವವರು ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದು ಇದರಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ದಿನಾಂಕ: 07/04/2022 ರಂದು ರಾತ್ರಿ 09:00 ಗಂಟೆಗೆ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ಎದ್ದು ನೋಡಲಾಗಿ ಅನಂತ ಪ್ರಭುರವರು ಮನೆಯಲ್ಲಿ ಇಲ್ಲದೇ  ಇದ್ದು ಬೆಳಿಗ್ಗೆ  07:00 ಗಂಟೆ ಸಮಯಕ್ಕೆ ಮನೆಯ ಎದುರಿನ ಬಾವಿಯನ್ನು ನೋಡಲಾಗಿ ಅನಂತ ಪ್ರಭುರವರ ಮೃತದೇಹವು  ಬಾವಿಯ ಹಗ್ಗಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ನೀರಿನಲ್ಲಿ ತೇಲುತ್ತಿರುವುದು ಕಂಡು ಬಂದಿರುತ್ತದೆ. ಪಿರ್ಯಾದುದಾರರ  ತಂದೆಯವರು ಮಾನಸಿಕ  ಖಿನ್ನತೆಗೊಳಗಾಗಿ ದಿನಾಂಕ  08-04-2022  ರಂದು 04:30 ರಿಂದ  07:00 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಯುಡಿಆರ್‌ ನಂ 12/2022 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ ಕೃತಿಕ್ ಸಾಲಿಯಾನ್ (21) ತಂದೆ: ಜಗನ್ನಾಥ ಸಾಲಿಯಾನ್ ವಾಸ:  ಬಜೆ ಪಂಡುಕಟ್ಟೆ, ದರ್ಖಾಸು ಮನೆ, ಕುಕ್ಕೆಹಳ್ಳಿ,ಇವರ ತಂದೆಯವರಾದ ಜಗನ್ನಾಥ ಸಾಲಿಯಾನ್(59) ರವರು ಕೂಲಿಕೆಲಸ ಮಾಡಿಕೊಂಡಿದ್ದು ದಿನಾಂಕ : 08/04/2022 ರಂದು  ಅವರ ಪಕ್ಕದ ಮನೆಯ ರಘುರಾಮ ಶೆಟ್ಟಿಯವರ ಮನೆಯ ಮಾವಿನ ಮರದ ಗೆಲ್ಲುಗಳನ್ನು ಕಡಿಯುವುದಕ್ಕಾಗಿ ಬೆಳಿಗ್ಗೆ 9:30 ಗಂಟೆಗೆ ಮರಕ್ಕೆ ಹತ್ತಿದ್ದು ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು  ಗಾಯಗೊಂಡು ಮೃತಪಟ್ಟಿರುವುದಾಗಿದೆ . ಈ ಬಗ್ಗೆ  ಯಾವುದೇ ಸಂಶಯವಿಲ್ಲ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 16/2022 ಕಲಂ: 174 ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ ಸಂದೀಪ್ ಕುಮಾರ್ (48) ತಂದೆ: ನಾರಾಯಣ ಅಂಚನ್ ವಾಸ: ಕಂಬ್ಲಕಟ್ಟ ಮನೆ ಏಣಗುಡ್ಡೆ ಗ್ರಾಮ ಇವರ ತಾಯಿ ಶ್ರೀಮತಿ ನಳಿನಿ ಅಂಚನ್, ತಂದೆ ನಾರಾಯಣ ಅಂಚನ್, ತಮ್ಮ ಪ್ರದೀಪ್ ಕುಮಾರ್ ರವರು ಪಿರ್ಯಾದಿದಾರರ ಮನೆಯ ಪಕ್ಕದ ಮನೆಯಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಾಯಿ ನಳಿನಿ ಅಂಚನ್ ರವರು ಉಬ್ಬಸ ಹಾಗೂ ನರ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಎಂದಿನಂತೆ ದಿನಾಂಕ 07.04.2022 ರಂದು ರಾತ್ರಿ 11:00 ಗಂಟೆಗೆ ಊಟಮಾಡಿ ಮಲಗಿದ್ದು  ದಿನಾಂಕ 08.04.2022 ರಂದು ಬೆಳಿಗ್ಗೆ 06:30 ಗಂಟೆಗೆ ಪಿರ್ಯಾದಿದಾರರ ತಂದೆ ನಾರಾಯಣ ಅಂಚನ್ ರವರು ಎದ್ದು ನೋಡುವಾಗ  ನಳಿನಿ ಅಂಚನ್ ರವರು ಮನೆಯ ಬದಿಯ ಕೊಟ್ಟಿಗೆಯ ಕಿಟಿಕಿಗೆ ಕೇಬಲ್ ವಯರ್ ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆ ಬಿಗಿದುಕೊಂಡು ನೇತಾಡುತ್ತಿರುವುದಾಗಿ ಪಿರ್ಯಾದಿದಾರರಲ್ಲಿ ತಿಳಿಸಿದ್ದು, ಕೂಡಲೇ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ಕುತ್ತಿಗೆಗೆ ಕಟ್ಟಿಕೊಂಡಿದ್ದ ವಯರ್‌ನ್ನು ಬಿಚ್ಚಿ  ಒಂದು  ವಾಹನದಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ನಂತರ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯರು 08:15  ಪರೀಕ್ಷಿಸಿ ನಳಿನಿ ಅಂಚನ್‌ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಪಿರ್ಯಾದಿದಾರರ ತಾಯಿ ನಳಿನಿ ಅಂಚನ್ ರವರು ತನಗಿದ್ದ ಉಬ್ಬಸ ಮತ್ತು ನರ ಸಂಬಂದಿ ಖಾಯಿಲೆಯಿಂದ ಬಳಲುತ್ತಿದ್ದುಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07.04.2022 ರಂದು 23:00 ಗಂಟೆಯಿಂದ ದಿನಾಂಕ 08.04.2022 ರ 06:30 ಗಂಟೆಯ ಮಧ್ಯಾವಧಿಯಲ್ಲಿ ಕುತ್ತಿಗೆಗೆ ಕೇಬಲ್ ವಯರ್‌ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ.  ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಯು.ಡಿ.ಆರ್‌.ನಂಬ್ರ 07-2022 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-04-2022 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080