ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಶಂಕರನಾರಾಯಣ: ದಿನಾಂಕ  05/04/2021  ರಂದು 17:45  ಗಂಟೆಗೆ  ಶ್ರೀಮತಿ ಯಶೋಧ (42) ಇವರನ್ನು  ಆರೋಪಿ ನಾಗರಾಜ KA- 20-ES-1967 ನೇ  ನಂಬ್ರದ  ಮೋಟಾರ್  ಸೈಕಲ್‌ನಲ್ಲಿ   ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಬ್ರಹ್ಮಾವರ  ತಾಲೂಕಿನ ವಂಡಾರು   ಗ್ರಾಮದ   ಮಾರ್ವಿ  ಎಂಬಲ್ಲಿ  ಮಾವಿನಕಟ್ಟೆ  ಕಡೆಗೆ  ಹೋಗುತ್ತಿರುವಾಗ  ಮೋಟಾರ್  ಸೈಕಲ್  ಚಲಾಯಿಸುತ್ತಿದ್ದ ಆರೋಪಿಯು ಮೋಟಾರ್  ಸೈಕಲ್‌ನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ  ಪರಿಣಾಮ  ಮೋಟಾರ್  ಸೈಕಲ್  ಆತನ  ಹತೋಟಿ ತಪ್ಪಿ ರಸ್ತೆಯ ಮೇಲೆ  ಬಿದ್ದಿದ್ದು ಇದರ  ಪರಿಣಾಮ  ಶ್ರೀಮತಿ ಯಶೋಧ  ಇವರ  ತಲೆಗೆ   ರಕ್ತಗಾಯವಾಗಿದ್ದು,  ಚಿಕಿತ್ಸೆ  ಬಗ್ಗೆ   ಮಣಿಪಾಲ  ಕೆಎಮ್ ಸಿ   ಆಸ್ಪತ್ರೆಯಲ್ಲಿ   ಅರೆ ಪ್ರಜ್ಜಾವಸ್ಥೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021  ಕಲಂ: 279, 338  ಐಪಿಸಿ ಮತ್ತು 134 (ಬಿ) ಜೊತೆಗೆ  187   ಮೊ.ವಾ. ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ; ದಿನಾಂಕ 04/04/2021 ರಂದು ಪಿರ್ಯಾದಿದಾರರಾದ ಭಾಸ್ಕರ ನಾಯ್ಕ್ (57), ತಂದೆ: ಗಣಪತಿ ನಾಯ್ಕ,  ವಾಸ:  ಶಿವಾನಿ ಹೊಯಿಗೆ ಬೆಳಾರ್ ಸಂತೆಕಟ್ಟೆ, 38 ಕಳ್ತೂರು ಗ್ರಾಮ ಉಡುಪಿ ತಾಲೂಕು ಇವರು ತನ್ನ KA-20-EP-4259 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ಸಂತೆಕಟ್ಟೆ- ಬ್ರಹ್ಮಾವರ ರಸ್ತೆಯಲ್ಲಿ ಸಂತೆಕಟ್ಟೆಯಿಂದ ಹೊರಟು ಸಂಜೆ 5:00 ಗಂಟೆಗೆ ಕಳ್ತೂರು ಗ್ರಾಮದ ಹೊಯಿಗೆ ಬೆಳ್ಳಾರ್ ಎಂಬಲ್ಲಿಗೆ ತಲುಪಿ ತನ್ನ ಅಂಗಡಿಗೆ ಹೋಗುವ ಸಲುವಾಗಿ ಮೋಟಾರ್ ಸೈಕಲ್ ಗೆ ಇಂಡಿಕೇಟರ್ ಹಾಕಿ ಬಲಕ್ಕೆ ತಿರುಗಿಸಿದಾಗ ಅವರ ಹಿಂದುಗಡೆಯಿಂದ  KA-20-V-2253 ನೇ ಮೋಟಾರ್ ಸೈಕಲ್ ನ್ನು ಅದರ ಸವಾರ ಪ್ರದೀಪ್ ನಾಯ್ಕ್ ಇವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲ್ ನ ಬಲ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಬ್ಬರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಬಲ ಕಾಲಿನ ಮೊಣಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಹಾಗೂ ಕೈಗೆ ಮತ್ತು ಎಡಭುಜಕ್ಕೆ ಗಾಯವಾಗಿರುತ್ತದೆ  ಅಪಘಾತಪಡಿಸಿದ ಮೋಟಾರು ಸೈಕಲ್ ಸವಾರ ಪ್ರದೀಪ ನಾಯ್ಕ್ ಇವರಿಗೂ ಸಹ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 07/04/2021 ರಂದು ಮಧ್ಯಾಹ್ನ12:00  ಗಂಟೆಗೆ ಕುಂದಾಪುರ  ತಾಲೂಕು ಕೊಟೇಶ್ವರ ಗ್ರಾಮದ ಕಾಮತ್‌ ಪೆಟ್ರೋಲ್‌ ಬಂಕ್‌‌‌ನ ಹತ್ತಿರ ಹವಲ್ದಾರ್‌ ‌‌ರವರ ಸಾಮಿಲ್‌‌ ‌ಬಳಿ ಪಶ್ಚಿಮ ಬದಿಯ NH-66  ರಸ್ತೆಯಲ್ಲಿ ಆಪಾದಿತ ಮೊಹಮ್ಮದ್‌ ‌‌‌ಇಮ್ಮದುದ್ದೀನ್‌‌‌ KA-20-MB-5743 Swift Dzire ನೇ ಕಾರನ್ನು ಕುಂದಾಪುರ  ಕಡೆಯಿಂದ ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ರಸ್ತೆಯ ಬಲಬದಿಗೆ ಚಲಾಯಿಸಿ ಬೀಜಾಡಿಯ ಮನೆಯಿಂದ ಕುಂದಾಪುರ ಕಡೆಗೆ ಪಿರ್ಯಾದಿದಾರರಾದ ಶ್ರೀಮತಿ ಕುಸುಮಾ (39), ತಂದೆ: ಪ್ರದೀಪ್‌ ,‌‌‌‌‌‌‌‌‌‌ವಾಸ:“ಧರ್ಮಶಾಸ್ತ್ರ”  ಫಿಶರಿಸ್‌ ರಸ್ತೆ, ಬೀಜಾಡಿ ಗ್ರಾಮ,  ಕುಂದಾಪುರ ಇವರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EM-4500 TVS Vego ಸ್ಕೂಟರ್ ಗೆ  ಎದುರುಗಡೆಯಿಂದ  ಡಿಕ್ಕಿ  ಹೊಡೆದ ಪರಿಣಾಮ ಕುಸುಮಾ ರವರ  ಬಲಬದಿಯ ಸೊಂಟಕ್ಕೆ  ಮೂಳೆ  ಮುರಿತದ ಗಾಯ  ಹಾಗೂ ಎಡಕಾಲಿಗೆ  ಮತ್ತು ತಲೆಗೆ ತರಚಿದ ರಕ್ತ ಗಾಯ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಪಿರ್ಯಾದಿದಾರರಾದ ಪ್ರಕಾಶ ದೇವಾಡಿಗ (27), ತಂದೆ: ಕೃಷ್ಣ ದೇವಾಡಿಗ, ವಾಸ: ಬೊಟ್ಟೆಕ್ಯಾರ್ ಮನೆ, ಅಡ್ಕ, ವರಂಗ ಗ್ರಾಮ, ಹೆಬ್ರಿ ತಾಲೂಕು ಇವರು ದಿನಾಂಕ 06/04/2021 ರಂದು ನಾರಾಯಣ ಮೂಲ್ಯ ಎಂಬುವವರು ಚಲಾಯಿಸುತ್ತಿದ್ದ KA-20-EN-5104 ನೇ ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರರಾಗಿ ಮುದ್ರಾಡಿ ಯಿಂದ ವರಂಗ ಕಡೆಗೆ ಹೋಗುವಾಗ ಬೆಳಿಗ್ಗೆ 07:45 ಗಂಟೆಗೆ ವರಂಗ ಗ್ರಾಮದ ವರಂಗ ಪೇಟೆಯ ಜಂಕ್ಷನ್ ಬಳಿ ತಲುಪಿದಾಗ ಮೋಟಾರ್ ಸೈಕಲ್ ಚಲಾಯಿಸುತ್ತಿದ್ದ ನಾರಾಯಣ ಮೂಲ್ಯ ರವರು ಮೋಟಾರ್ ಸೈಕಲ್ ನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪಿರ್ಯಾದಿದಾರರಿಗೆ ಎಡ ಕಾಲಿನ ಗಂಟಿನ ಕೆಳಗೆ ಮೂಳೆ ಮುರಿತದ ಗಾಯವಾಗಿರುತ್ತದೆ ಹಾಗೂ ಬಲಕಾಲಿನ ಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕೋಟ: ದಿನಾಂಕ 07/04/2021 ರಂದು ಪಿರ್ಯಾದಿದಾರರಾದ ಪಕೀರಪ್ಪ (21), ತಂದೆ: ಶಿವಲಿಂಗಪ್ಪ, ವಾಸ: ಹೆಚ್ ಬಿ. ಕುಂಟ ಉಚ್ಚಿಲ ಕುಂಟ, ಗ್ರಾಮ ಯಲಬರ್ಗು ತಾಲ್ಲೂಕು ಕೊಪ್ಪಳ ಜಿಲ್ಲೆ ಉಡುಪಿ ಜಿಲ್ಲೆ ಇವರು ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ನರ್ತಕಿ ಬಾರ್ ಎದುರು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಬಳಿ ಕೆಲಸದಿಂದ ಮನೆಗೆ ಬರುವಾಗ ಸಂಜೆ 7:30 ಗಂಟೆಗೆ ನರ್ತಕಿ ಬಾರ್ ಎದುರು ಉಡುಪಿಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ಮುಖ್ಯ ರಸ್ತೆಯಲ್ಲಿ ರಸ್ತೆಯ ಪಶ್ಚಿಮ ಅಂಚಿನಿಂದ ಒಬ್ಬ ವ್ಯಕ್ತಿ ಉಡುಪಿ ಕುಂದಾಪುರ ಮುಖ್ಯ ರಸ್ತೆಯನ್ನು ದಾಟಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಸ್ತೆಯನ್ನು ದಾಟಲು ಡಿವೈಡರ ಬಳಿ ನಡೆದುಕೊಂಡು ಬರುತ್ತಿರುವಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ VRL ಕಂಪೆನಿಯ ಬಸ್ಸಿನ ಚಾಲಕ ತನ್ನ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಭಾಗಕ್ಕೆ ಬಂದು ಡಿವೈಡರ ಬಳಿ ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದಿರುತ್ತಾನೆ. ಇದರಿಂದ ಆ ವ್ಯಕ್ತಿ ರಸ್ತೆಗೆ ಬಿದ್ದಿರುತ್ತಾನೆ. ಕೂಡಲೇ ಹೋಗಿ ನೋಡಲಾಗಿ ಆ ವ್ಯಕ್ತಿಯು ಪಿರ್ಯಾದಿದಾರರ ಜೊತೆ ಕೆಲಸ ಮಾಡುವ ಬೀಮಣ್ಣ (35) ಆಗಿದ್ದು ಅವರ ತಲೆಗೆ ಒಳ ಜಖಂ ಆಗಿದ್ದು ಮಾತನಾಡದ ಸ್ಥಿತಿಯಲ್ಲಿ ಇಲ್ಲದೇ ಇದ್ದು ಅಲ್ಲಿದ್ದವರು ಮೇಲಕ್ಕೆ ಎತ್ತಿ ನೋಡಲಾಗಿ ಬೀಮಣ್ಣ ಸ್ಥಳದಲ್ಲಿ ಮೃತಪಟ್ಟಿರುತ್ತಾರೆ. ಅಪಘಾತ ಎಸಗಿದ  .ಬಸ್ಸಿನ  ನಂಬ್ರ ನೋಡಲಾಗಿ MH-09-EM-3239 ಆಗಿದ್ದು ಅದರ ಚಾಲಕನ ಹೆಸರು ಕಿಶನ್ ಲಾಲ್ ವೈಷ್ಣವ್  ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021  ಕಲಂ: 279,304 (a) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಮೃತ ಶ್ರೀಯಾನ್‌ ಪ್ರಾಯ 4½ ತಿಂಗಳು ಈತನಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ದಿನಾಂಕ 07/04/2021 ರಂದು ಮದ್ಯಾಹ್ನ 12:30 ಗಂಟೆಗೆ ತಿಂಗಳ ಚುಚ್ಚು ಮದ್ದು ನೀಡಿರುತ್ತಾರೆ, ನಂತರ ಶ್ರೀಯಾನ್‌ನನ್ನು  ಮನೆಗೆ ಕರೆದುಕೊಂಡು ಬಂದಿದ್ದು ಮದ್ಯಾಹ್ನ 02:30 ಗಂಟೆಯಿಂದ 03:00 ಗಂಟೆಯ ಅವದಿಯಲ್ಲಿ ಶ್ರೀಯಾನ್‌ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವೃ ರೀತಿಯಲ್ಲಿ ಅಸ್ವಸ್ಥಗೊಂಡವನನ್ನು ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಸಂಜೆ 06:50 ಗಂಟೆಗೆ ಶ್ರೀಯಾನ್‌ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿರುತ್ತಾರೆ. ಶ್ರೀಯಾನ್‌ಗೆ ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು  ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದ್ದಾಗಿ ಮೃತರ ಮರಣದಲ್ಲಿ ಸಂಶಯ ವ್ಯಕ್ತಪಡಿಸಿ ಸುಧಾಕರ ಆರ್‌. ಶೆಟ್ಟಿ (49),ತಂದೆ:ರಾಜು ಶೆಟ್ಟಿ, ವಾಸ:ಗುರುಬೆಟ್ಟು ಮನೆ ಸಾಣೂರು ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು  ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 13/2021 ಕಲಂ: 174(3)(IV) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕಾಣೆ ಪ್ರಕರಣಗಳು

 • ಉಡುಪಿ: ಪಿರ್ಯಾದಿದಾರರಾದ ವಸಂತಿ ಶೇರಿಗಾರ್ತಿ (48) ,ಗಂಡ: ಶಂಕರ ಶೇರಿಗಾರ, ವಾಸ: ಮಟ್ಟು ವಿಷ್ಣುಮೂರ್ತಿ ದೇವಸ್ಥಾದ ಬಳಿ,  ಅಡ್ಕ , ಮಟ್ಟು ಗ್ರಾಮ ಕಾಪು ತಾಲೂಕು ಇವರ ಅಣ್ಣನ ಮಗ ಸಂದೀಪ(30) ರವರು ಪಿರ್ಯಾದಿದಾರರ ಜೊತೆಯಲ್ಲಿಯೇ ವಾಸವಾಗಿದ್ದು, ದಿನಾಂಕ 04/04/2021 ರಂದು ಮಧ್ಯಾಹ್ನ 15:30 ಗಂಟೆಗೆ ಪಿರ್ಯಾದಿದಾರರ ಮನೆಯಾದ ಮಟ್ಟುವಿನಿಂದ ಸಿನೆಮಾ ನೋಡಲು ಉಡುಪಿಯ ಅಲಂಕಾರ್ ಚಲನಚಿತ್ರ ಮಂದಿರಕ್ಕೆ ಪಿರ್ಯಾದಿದಾರರ ಮಕ್ಕಳು ಹಾಗೂ ಸಂದೀಪ ಉಡುಪಿಗೆ ಹೋಗಿದ್ದು, ನಂತರ ಅದೇ ದಿನ ರಾತ್ರಿ 23:00 ಗಂಟೆಗೆ ಪಿರ್ಯಾದಿದಾರರ ಮಕ್ಕಳು ಮನೆಗೆ ಬಂದಿದ್ದು, ಕಾಣೆಯಾದ ಸಂದೀಪನು ಎಲ್ಲಿ ಎಂದು ಮಕ್ಕಳಲ್ಲಿ ಕೇಳಲಾಗಿ, ಸಂದೀಪನು ನಮ್ಮೊಂದಿಗೆ ಚಲನಚಿತ್ರ ನೋಡಲು ಬಂದಿರುವುದಿಲ್ಲ ಎಂದು ಹೇಳಿ ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣದ ಬಳಿ ಹೋಗಿದ್ದ ಎಂದು ತಿಳಿಸಿರುತ್ತಾರೆ. ನಂತರ ಸಂಬಂಧಿಕರ ಮನೆಗೆ ಹಾಗೂ ಪರಿಚಯದವರೆಲ್ಲರಿಗೆ ಕರೆ ಮಾಡಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 64/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಕೇಶವರಾಯ(50), ತಂದೆ: ರಾಮದಾಸ್‌ ನಾಯಕ್‌, ವಾಸ: ಮನೆ ನಂ 6-4-12 ಮಹಾಲಸ ಟವರ್ಸ್‌, 76 ಬಡಗುಬೆಟ್ಟು ಉಡುಪಿ ಇವರ ಅಣ್ಣ ರಮಾನಾಥ ನಾಯಕ್‌(57) ರವರು ಲಕ್ಷ್ಮೀ ನಾರಾಯಣ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರೇ ವಾಸವಾಗಿದ್ದು, ದಿನಾಂಕ 24/03/2021 ರಂದು ಮಧ್ಯಾಹ್ನ 14:00 ಗಂಟೆಗೆ ಪಕ್ಕದ ಮನೆಯ ವಿನಾಯಕ ಬಾಳಿಗರವರಲ್ಲಿ ಗೋವಾ ಹೋಗುವುದಾಗಿ ತಿಳಿಸಿದ್ದು ನಂತರ  ಅವರ ಮೊಬೈಲ್‌‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಎಂದು ಬಂದಿರುತ್ತದೆ. ಸಂಬಂಧಿಕರಲ್ಲೂ ವಿಚಾರಿಸಲಾಗಿ  ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-04-2021 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080