ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ನಿಧೀಶ್ ಶೆಟ್ಟಿ (25), ತಂದೆ: ನಿರಂಜನ್ ಶೆಟ್ಟಿ , ವಾಸ: ಬಡಗರಗುತ್ತು, ಪಣಿಯೂರು ಅಂಚೆ, ಬೆಳಪು ಗ್ರಾಮ, ಕಾಪು ಇವರ ತಂದೆ ನಿರಂಜನ್ ಶೆಟ್ಟಿ (59) ರವರು ಬೆಳಪು ಸಿ.ಎ ಬ್ಯಾಂಕ್ ಪಣಿಯೂರು ಶಾಖೆಯಲ್ಲಿ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದು, ಅನಾರೋಗ್ಯದ ನಿಮಿತ್ತ ಒಂದು ವಾರದ ಹಿಂದೆ ಕೆಲಸಕ್ಕೆ ರಾಜೀನಾಮೆಯನ್ನು ನೀಡಿರುತ್ತಾರೆ. ನಿರಂಜನ್ ಶೆಟ್ಟಿಯವರು ಸುಮಾರು 2 ವರ್ಷಗಳಿಂದ ಲಿವರ್ ಮತ್ತು ಲಂಗ್ಸ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖವಾಗದೇ ಇದ್ದು, ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08/04/2021 ರಂದು  ಬೆಳಿಗ್ಗಿನ ಜಾವ  02:30 ಗಂಟೆಯಿಂದ  05:30 ಗಂಟೆಯ ನಡುವಿನ ಅವಧಿಯಲ್ಲ ಬೆಳಪು ಗ್ರಾಮದ ಪಣಿಯೂರು ಬಡಗರಗುತ್ತು ವಾಸ್ತವ್ಯದ ಮನೆಯ ಹಿಂಬದಿಯಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಅನುಷಾ (24) ಗಂಡ: ಪ್ರಶಾಂತ ಸೇರಿಗಾರ ವಾಸ ಅರ್ಧ ನಾರೀಶ್ವರ ದೇವಸ್ಥಾನದ ಬಳಿ ಹೆಬ್ರಿ ತಾಲೂಕು ಇವರ ಗಂಡ ಪ್ರಶಾಂತ್ ಸೇರಿಗಾರ (29) ಹೆಬ್ರಿಯಲ್ಲಿರುವ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು. ಅವರು ಮಾಡಿರುವ ಸಾಲವನ್ನು ತೀರಿಸಲಾಗದೇ ಮಾನಸಿಕ ಒತ್ತಡಕ್ಕೆ ಒಳಗಾಗಿ ಇದೇ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 08/04/2021 ರಂದು ಬೆಳಿಗ್ಗೆ 04:00 ಗಂಟೆಯಿಂದ ಬೆಳಿಗ್ಗೆ 06:00 ಗಂಟೆಯ ಮದ್ಯಾವಧಿಯಲ್ಲಿ ಚಾರಾ ಗ್ರಾಮದ ಗಾಂಧಿನಗರ ಎಂಬಲ್ಲಿ ಮೃತರ ವಾಸದ ಮನೆಯ ಬಳಿವಿರುವ ಹಂಚು ಛಾವಣಿಯ ಬಸ್ಸು ನಿಲ್ದಾಣದ ಒಳಗಿನ ಮರದ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ಫಿರ್ಯಾದಿದಾರರಾದ ಶ್ರೀಮತಿ ರತ್ನ ಯಾನೆ ಸುಮ ವಿ. ಶೆಟ್ಟಿ(65) ಗಂಡ: ವಿಠ್ಠಲ ಶೆಟ್ಟಿ ವಾಸ: ಮೂಡು ಕಲ್ಮಂಜೆ, ಮಣಿಪುರ ಗ್ರಾಮ ಮತ್ತು ಅಂಚೆ, ಕಾಪು ತಾಲೂಕು ಉಡುಪಿ ಇವರ ತಾಯಿ  ಜಲಜ ಶೆಡ್ತಿ ಎಂಬವರು 11 ಜನ ಮಕ್ಕಳನ್ನು ಹೊಂದಿದ್ದು  76 ಬಡಗುಬೆಟ್ಟು  ಗ್ರಾಮದ ಸ ನಂ 93 ಎ  ರಲ್ಲಿ 0.16 ಸೆಂಟ್ಸ್  ಜಾಗ ಶ್ರೀಮತಿ ರತ್ನ ಯಾನೆ ಸುಮ ವಿ. ಶೆಟ್ಟಿ ಇವರ ತಾಯಿಗೆ ಹಾಗೂ ಮಕ್ಕಳಿಗೆ ಜಂಟಿ ಹಕ್ಕಿಗೆ ವಿಂಗಡಿಸಲ್ಪಟ್ಟಿದ್ದು ಇವರ ತಾಯಿ ಮೃತ ಪಟ್ಟ ಬಳಿಕ 1 ನೇ ಅರೋಪಿ ದಿನೇಶ್ ಶೆಟ್ಟಿ(50) ತಂದೆ: ನಾರಾಯಣ ಶೆಟ್ಟಿ 9 ನೇ ಆರೋಪಿ ಕುಶಾಲ್‌ ಕುಮಾರ್‌ (66) ತಂದೆ: ತೇಜ ಪೂಜಾರಿ, ವಾಸ:ಸುನೀತಾ ರಾವ್‌ ಕಂಪೌಂಡ್‌ ಹರಿಶ್ಚಂದ್ರ ಮಾರ್ಗ, 76 ಬಡಗುಬೆಟ್ಟು ಗ್ರಾಮ ಎಂಬವರಿಗೆ ಮಾರಾಟ ಮಾಡಿದ್ದು ಅಲ್ಲದೆ ರಿಲೀಜು ಪತ್ರವನ್ನು ಸುಳ್ಳಾಗಿ ಬರೆಯಿಸಿರುವುದಲ್ಲದೆ 3 ರಿಂದ 5 ನೇ ವ್ಯಕ್ತಿಗಳ ಭಾವಚಿತ್ರಗಳು ಆರೋಪಿ ಸಂಜೀವ ಪುತ್ರನ್‌(60) ಮೂಡು ಕಲ್ಮಂಜೆ, ಮಣಿಪುರ ಗ್ರಾಮ ಮತ್ತು ಅಂಚೆ, ಕಾಪು ತಾಲೂಕು ಉಡುಪಿ ಜಿಲ್ಲೆ. 4)ಕಲ್ಯಾಣಿ ಶೇರಿಗಾರ್ತಿ(57) ಗಂಡ:ಕೃಷ್ಣ ಶೇರಿಗಾರ್‌ಮೂಡು ಕಲ್ಮಂಜೆ, ಮಣಿಪುರ ಗ್ರಾಮ ಮತ್ತು ಅಂಚೆ, ಕಾಪು ತಾಲೂಕು ಉಡುಪಿ ಜಿಲ್ಲೆ. 5)ಸುನಂದ(60) ಗಂಡ: ಪೋಂಕ್ರಮರಕಾಲ, ಮೂಡು ಅಲೆವೂರು, ಮಣಿಪುರ ಗ್ರಾಮ  ಉಡುಪಿ ಜಿಲ್ಲೆ. ಇವರ ಭಾವಚಿತ್ರಗಳಾಗಿದ್ದು ಆರೋಪಿ 1 ದಿನೇಶ್‌ ಶೆಟ್ಟಿ ಹಾಗೂ 2 ನೇ ಆರೋಪಿ ಶ್ರೀಮತಿ ಗೀತಾ ಶೆಟ್ಟಿ ಇವರು ಪಿರ್ಯಾದಿ  ಹಾಗೂ ಅಕೆಯ 10 ಮಂದಿಗೆ  ಸೇರಿದ ಪಾಲಿನ ಹಕ್ಕನ್ನು ಮೋಸದಿಂದ ಲಪಾಟಾಯಿಸುವ ಉದ್ದೇಶದಿಂದ  ಮತ್ತು ಅ ಮೂಲಕ ದುರ್ಲಾಭ  ಮಾಡುವ ಉದ್ದೇಶದಿಂದ 3 ರಿಂದ 5 ನೇ ವ್ಯಕ್ತಿಗಳನ್ನು  ಪಿರ್ಯಾದುದಾರರ ಸಹೋದರರಲ್ಲವೆಂದು ಗೊತ್ತಿದ್ದು ಅವರೇ ಎಂದು ನಂಬಿಸಿ ಸಭ್‌ರಿಜಿಸ್ಟರ್ ಅಫೀಸಿನಲ್ಲಿ ರಿಲೀಜು ಪತ್ರ ಮಾಡಿದ್ದಲ್ಲದೆ ನಕಲಿ ಜನರಲ್ ಪವರ್ ಅಫ್‌ಅಟಾರ್ನಿ  ಪತ್ರ ಮಾಡಿ  ಪಿರ್ಯಾದುದಾರರಿಗೆ 4 ಜನ ಮಕ್ಕಳಿಗಿರುವುದಾಗಿಯೂ ಅವರ ತಾಯಿ ಸಮೇತ 5 ಜನ ವ್ಯಕ್ತಿಗಳಿಗೆ ಮಾತ್ರ1/5 ಆಂಶ ಹಕ್ಕು ಇರುವುದಾಗಿ ಸುಳ್ಳಾಗಿ ನಮೂದಿಸಿ ಉಳಿದ ಮಕ್ಕಳಿಗೆ ಮೋಸ ಮಾಡಿದ್ದಲ್ಲದೆ ಅರೋಪಿತರು  ಶ್ರೀಮತಿ ರತ್ನ ಯಾನೆ ಸುಮ ವಿ. ಶೆಟ್ಟಿ ಇವರಿಗೆ ಮೋಸ ಮಾಡಿ ದುರ್ಲಾಭ ಮಾಡುವ ಇರಾದೆಯಿಂದ ಕ್ರಿಮಿನಲ್ ಸಂಚು ಮಾಡಿ ಸುಳ್ಳು ಜನರಲ್ ಪವರ್ ಅಫ್ ಅಟರ್ನಿ  ಹಾಗೂ ಸುಳ್ಳು ರೀಲಿಜ್ ಪತ್ರವನ್ನು ಮೋಸದಿಂದ ತಯಾರಿಸಿ 9 ನೇ ಅರೋಪಿಗೆ ಮಾರಾಟ ಮಾಡಿ ಶ್ರೀಮತಿ ರತ್ನ ಯಾನೆ ಸುಮ ವಿ. ಶೆಟ್ಟಿ ಇವರಿಗೆ ಹಾಗೂ ಅವರ ಸಹೋದರರಿಗೆ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ:205, 419, 420, 465, 467, 468, 471, 120B, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 08-04-2021 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ