ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು: ದಿನಾಂಕ 06/03/2023 ರಂದು ಪಿರ್ಯಾದಿದಾರರಾದ ಸಂಜೀವ ನಾಯ್ಕ (65), ತಂದೆ: ದಿ. ರಾಮ ನಾಯ್ಕ,  ವಾಸ: ಹಂಜಾ ಮಡಾಮಕ್ಕಿ ಗ್ರಾಮ ಹೆಬ್ರಿ ತಾಲೂಕು ಇವರು  KA-20-EG-4514  ನೇ ಸ್ಕೂಟಿಯಲ್ಲಿ ತನ್ನ ಅಣ್ಣನ ಮಗ ಉಮೇಶ ನಾಯ್ಕ ರವರ  ಜೊತೆಯಲ್ಲಿ ಸಹ ಸವಾರನಾಗಿ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡು ಮಾಂಡಿ ಮೂರುಕೈಯಿಂದ ಮನೆ ಕಡೆ ಹೋಗುತ್ತಿರುವಾಗ  13:30 ಗಂಟೆಗೆ ಹೆಬ್ರಿ ತಾಲೂಕು ಮಡಾಮಕ್ಕಿ ಗ್ರಾಮದ ಶ್ರೀ ವೀರಭದ್ರ ದೇವಸ್ಥಾನದ ಕ್ರಾಸ್‌ ಬಳಿ ಸೊಮೇಶ್ವರ – ಮಾಂಡಿ ಮೂರು ಕೈ ರಸ್ತೆಯಲ್ಲಿ ಸ್ಕೂಟಿ ಸವಾರ ಉಮೇಶ್‌ನಾಯ್ಕ್‌ ಸ್ಕೂಟಿಯನ್ನು ವೀರ ಭದ್ರ ದೇವಸ್ಥಾನದ ಕಡೆಗೆ ತಿರುಗಿಸುವಾಗ ಸೊಮೇಶ್ವರ ಕಡೆಯಿಂದ ಮಾಂಡಿ ಮೂರು ಕೈ ಕಡೆಗೆ ಆರೋಪಿತ  KA-20-EZ-5451   ನೇ ನಂಬ್ರದ   ಮೋಟಾರು ಸೈಕಲ್ ಸವಾರ ಕೃಷ್ಣ ನಾಯ್ಕ ತನ್ನ ಮೋಟಾರ್ ಸೈಕಲನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು  ಪ್ರಯಾಣಿಸಿಕೊಂಡು ಹೋಗುತ್ತಿದ್ದ ಸ್ಕೂಟಿಯ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ತಲೆಯ ಎಡ ಬದಿ ಎಡಕಣ್ಣಿನ ಮೇಲೆ ರಕ್ತ ಗಾಯವಾಗಿ ಬಲಕಾಲಿಗೆ ಒಳ ಜಖಂ ಉಂಟಾಗಿದ್ದು ಸ್ಕೂಟಿ ಸವಾರ ಉಮೇಶ್‌ನಾಯ್ಕ ಅವರಿಗೂ  ಮೈ ಕೈಗೆ ರಕ್ತ ಗಾಯವುಂಟಾಗಿರುತ್ತದೆ.  ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಶಶಿ ಪ್ರಭು (35), ತಂದೆ:ಪಿ ಶಿವಣ್ಣ ಪ್ರಭು,  ವಾಸ: 1-3A ಮೂಕಾಂಭಿಕ ನಿವಾಸ ಪೆರ್ಣಾಂಕಿಲ ಗ್ರಾಮ ಮತ್ತು ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 04/03/2023 ರಂದು ಸಂಜೆ 06:00 ಗಂಟೆ ಸಮಯಕ್ಕೆ ತನ್ನ ಮೋಟಾರ್‌ಸೈಕಲ್‌ ನಂಬ್ರ KA-20-X-1251‌ನೇದರಲ್ಲಿ  ಸವಾರನಾಗಿ ಅಂಕಿತ್‌ ಎನ್‌ ರವರು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಅದೇ ಮಾರ್ಗದಲ್ಲಿ GA-08-K-4846 ನೇದರ ಕಾರು ಚಾಲಕ ಅಶೋಕ್‌  ತನ್ನ ಕಾರನ್ನು ಎಡ ಬದಿಯಿಂದ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿಂಡಿಕೇಟ್‌ ಸರ್ಕಲ್‌ ಸಮೀಪ ಯಾವುದೇ ಸೂಚನೇ  ನೀಡದೇ ಒಮ್ಮಲೇ ಡೋರ್‌ ತೆಗೆದ ಪರಿಣಾಮ ಪಿರ್ಯಾದಿದಾರರ  ಮೋಟಾರ್‌ಸೈಕಲ್‌ ಕಾರಿನ ಡೋರಿಗೆ ಡಿಕ್ಕಿ ಹೊಡೆದಿದ್ದು ಪಿರ್ಯಾದಿದಾರರು ಮತ್ತು ಸಹ ಸವಾರ ಅಂಕಿತ್‌ ಇಬ್ಬರೂ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಿಗೆ ಎಡ ಕಾಲಿಗೆ ಗುದ್ದಿದ ನೋವು, ಎಡ ಕೈ ಗೆ ತೀವ್ರ ಗಾಯ ಮತ್ತು ಬಲ ಕೈಗೆ ತೆರಚಿದ ಗಾಯವಾಗಿರುತ್ತದೆ. ಹಾಗೂ ಅಂಕಿತ್‌ನಿಗೆ ಸಣ್ಣ ಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಫಿರ್ಯಾದಿದಾರರಾದ ಯಶೋಧ (49), ಗಂಡ: ಶಂಕರ , ವಾಸ: ಹೆಗ್ಡೆ ಹಕ್ಲು , ಕೊಲ್ಲೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 07/03/2023 ರಂದು ಬೆಳಿಗ್ಗೆ  10:45 ಗಂಟೆಗೆ ತಾಯಿಯನ್ನು ನೋಡುವ ಸಲುವಾಗಿ ಕೊಲ್ಲೂರಿನಿಂದ ಯೆಳಜಿತ್ ಗೆ ಬಸ್ಸಿನಲ್ಲಿ  ಬಂದು ಯೆಳಜಿತ್ ಶಾಲೆಯ  ಬಳಿ ಬಸ್ಸಿನಿಂದ  ಇಳಿದು ರಸ್ತೆಯನ್ನು  ದಾಟಿ ರಸ್ತೆಯ ಬಲ  ಬದಿಯಲ್ಲಿ  ನಿಂತಿರುವಾಗ  ಬೈಂದೂರು ಕಡೆಯಿಂದ KA-20-EZ-9278 ನೇ ಟಿ ವಿ ಎಸ್ ಮೋಟಾರು ಸೈಕಲ್ ಸವಾರನು ಆತನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ  ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ತಲೆಯ ಬಲಬದಿಯ ಹಿಂಭಾಗಕ್ಕೆ ಒಳ ನೋವು, ಎಡ ಕಣ್ಣಿನ ಮೇಲ್ಬಾಗದಲ್ಲಿ, ಎಡ ಕೈ ಮಣಿಗಂಟಿಗೆ ,ಎಡ ಕಾಲು ಗಂಟಿಗೆ,  ಬಲ ಕೈಗೆ ಹಾಗೂ ಬಲ ಕಾಲು ಗಂಟಿಗೆ ತರಚಿದ ಗಾಯ ಹಾಗೂ ಒಳ ನೋವು ಉಂಟಾದವರನ್ನು ರಾಜೇಶ್ ಕೊಠಾರಿ ಎಂಬುವವರು ಚಿಕಿತ್ಸೆ ಬಗ್ಗೆ  ಬೈಂದೂರು  ಸರಕಾರಿ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು  ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆಗೆ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ ಮೇರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಮಲ್ಪೆ: ದಿನಾಂಕ 04/02/2023 ರಂದು ಬೆಳಿಗ್ಗೆ 11:00 ಗಂಟೆಗೆ   ಹರೀಶ್‌ ಇವರ  ಮಾಲಕತ್ವದ  ಶಿವಜ್ಯೋತಿ  ಬೋಟಿನ  ಪ್ಯಾನನ್ನು   ಹರೀಶ್‌ರವರು  ದುರಸ್ಥಿ ಬಗ್ಗೆ ಪಿರ್ಯಾದಿದಾರರಾದ ದಯಾನಂದ  ಕಾಂಚನ್(‌49) , ತಂದೆ: ದೇಜಪ್ಪ  ಕರ್ಕೆರಾ ,ವಾಸ: ಹನುಮಾನ ನಗರ  ಮಲ್ಪೆ ,ಕೊಡವೂರು ಗ್ರಾಮ ಇವರ  ಮಲ್ಪೆಯಲ್ಲಿರುವ   ರಾಜೇಶ್ವರಿ ಇಂಜೀನಿಯರಿಂಗ್‌  ವರ್ಕ   ಶಾಪ್‌ನ     ಹೊರಗಡೆ ಇಟ್ಟು ಹೋಗಿದ್ದು   ಪಿರ್ಯಾದಿದಾರರು   ಹಳೆ   ಪ್ಯಾನನ್ನು  ತೆಗೆದು  ಹೊಸ   ಪ್ಯಾನ್  ಹಾಕಿ ಕೊಟ್ಟಿದ್ದು  ಹಳೆ ಪ್ಯಾನನ್ನು   ಹತ್ತು ದಿನಗಳ  ಬಳಿಕ  ತೆಗೆದುಕೊಂಡು ಹೋಗುವುದಾಗಿ ತಿಳಿಸಿ ಹಳೆ  ಪ್ಯಾನನ್ನು   ಪಿರ್ಯಾದಿದಾರರ  ಅಂಗಡಿಯ  ಹೊರಗೆ  ಇಟ್ಟು  ಹೋಗಿರುತ್ತಾರೆ.  ದಿನಾಂಕ 25/02/2023 ರಂದು  ರಾತ್ರಿ 7:00  ಗಂಟೆಗೆ  ವರ್ಕ್  ಶಾಪ್‌ ಬಂದು   ಮಾಡಿ ಹೋಗುವ ಸಮಯ  ಹಳೆ ಪ್ಯಾನ್   ಹೊರಗಡೆ  ಇದ್ದು  ದಿನಾಂಕ   27/02/2023 ರಂದು  ಬೆಳಿಗ್ಗೆ 8:30 ಗಂಟೆಗೆ ಬಂದು  ನೋಡುವಾಗ    ಪ್ಯಾನ್   ವರ್ಕ   ಶಾಪ್‌ನ      ಹೊರಗಡೆ ಇಲ್ಲದೆ  ಇದ್ದು  ಪಿರ್ಯಾದಿದಾರರು  ಹರೀಶ್‌ ರವರಲ್ಲಿ  ವಿಚಾರಿಸಿದಾಗ  ಪ್ಯಾನ್  ನನ್ನು  ತೆಗೆದುಕೊಂಡು ಹೋಗಿರುವುದಿಲ್ಲವಾಗಿ  ತಿಳಿಸಿದ್ದು ಬಳಿಕ  ಪಿರ್ಯಾದಿದರರು   ಸಿ.ಸಿ.ಟಿವಿ ಯನ್ನು  ಪರಿಶೀಲಿಸಿದಾಗ   ದಿನಾಂಕ 27/02/2023  ರಂದು   ರಾತ್ರಿ 01:45   ಗಂಟೆಯ  ಸಮಯಕ್ಕೆ ಅಪರಿಚಿತರು ಪ್ಯಾನನ್ನು  ಕಳ್ಳತನ  ಮಾಡಿ ಒಂದು ವಾಹನದಲ್ಲಿ ಹಾಕಿಕೊಂಡು ಹೋಗಿರುತ್ತಾರೆ. .  ಕಳವಾದ ಬೋಟಿನ  ಪ್ಯಾನಿನ  ಅಂದಾಜು ಮೌಲ್ಯ 1,10,000/-   ರೂಪಾಯಿ  ಆಗಿರುತ್ತದೆ.   ಪ್ಯಾನ್‌ ಕಳವಾದ ಬಗ್ಗೆ  ಬೋಟಿನ  ಮಾಲಕರು  ದೂರು ನೀಡಬಹುದೆಂದು  ಯೋಚಿಸಿ  ಪಿರ್ಯಾದಿದಾರರು  ದೂರು ನೀಡಲು  ವಿಳಂಬವಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಪಿರ್ಯಾದಿದಾರರಾದ ಸುಂದರ (38), ತಂದೆ: ಶಂಕರ, ವಾಸ: ಭಂಡಿಮಠ, ಕೂರಾಡಿ ಅಂಚೆ, ಹನೇಹಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ತಮ್ಮ ಸುರೇಶ (30) ಇವರು ಮನೆಯಲ್ಲಿಯೇ ಇದ್ದು, ಕೆಲವೊಮ್ಮೆ ಕೆಲಸಕ್ಕೆ ಹೋಗುತ್ತಿದ್ದು, ಅವಿವಾಹಿತನಾಗಿರುತ್ತಾನೆ. ಅವರು ದಿನಾಂಕ 07/03/2023 ರಂದು ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮಧ್ಯಾಹ್ನ ಊಟ ಮಾಡಿ ತನ್ನ ಮನೆಯ ಎದುರು ಇರುವ ಬೆಳಿಯ ರವರ ಹಾಳು ಬಿದ್ದ ಮನೆಗೆ ವಿಶ್ರಾಂತಿಗೆಂದು ಹೋಗಿರುತ್ತಾನೆ. ನಂತರ ತಾಯಿ ಮಧ್ಯಾಹ್ನ 3:00 ಗಂಟೆಯ ಸಮಯಕ್ಕೆ ಸುರೇಶನನ್ನು ಕರೆಯಲು ಹೋದಾಗ ಸುರೇಶ್‌ನು ಅದೇ ಹಾಳು ಬಿದ್ದ ಮನೆಯ ಪಕ್ಕಾಸಿಗೆ ನೈಲಾನ್‌ ರೋಪ್‌ನಿಂದ ಕುತ್ತಿಗೆಗೆ ನೇಣು ಬಿಗಿದು ನೇತಾಡುತ್ತಿದ್ದು, ಕೂಡಲೇ ನೆರೆಕೆರೆಯವರ ಸಹಾಯದಿಂದ ಸುರೇಶ್ ನ ಕುತ್ತಿಗೆಯಲ್ಲಿದ್ದ ಉರುಳನ್ನು ಬಿಚ್ಚಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ನಲ್ಲಿ ಬ್ರಹ್ಮಾವರ  ಮಹೇಶ್‌ಆಸ್ಪತ್ರೆಗೆ ಮಧ್ಯಾಹ್ನ 4:45 ಗಂಟೆಗೆ ಕರೆದುಕೊಂಡು ಬಂದಾಗ, ಪರೀಕ್ಷಿಸಿದ ವೈಧ್ಯರು ಸುರೇಶ್‌ನು  ಈಗಾಗಲೇ ಮೃತಪಟ್ಟಿರುವ ಬಗ್ಗೆ ತಿಳಿಸಿರುತ್ತಾರೆ. ಸುರೇಶ್‌ನು ಅವನಿಗೆ ಇರುವ ಯಾವುದೋ ವಯಕ್ತಿಕ ಸಮಸ್ಯೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು:  ಪಿರ್ಯಾದಿದಾರರಾದ ಗುರುರಾಜ (41), ತಂದೆ: ನರಸಿಂಹ ಕೆ, ವಾಸ: ಕಲ್ಲುಕಂಟದ ಮನೆ ಪಡುವರಿ ಸೋಮೇಶ್ವರ ಪಡುವರಿ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 07/03/2023 ರಂದು  ಬೆಳಿಗ್ಗೆ 11:00 ಗಂಟೆಗೆ  ಯಡ್ತರೆ ಗ್ರಾಮದ  ಬೈಂದೂರು ಹೊಸ ತಹಶಿಲ್ದಾರರ ಕಚೇರಿ ಹತ್ತಿರದ ಹೋಟೇಲ್ ಮಂಗೇಶ್ ಶ್ಯಾನುಭಾಗ್ ಬಳಿ ಚಹಾ ಕುಡಿದು ಹೊರಗೆ ಬರುತ್ತಿರುವ ಸಮಯ ಆರೋಪಿ ಸುಬ್ರಹ್ಮಣ್ಯ ಬಿಜೂರು ಪಿರ್ಯಾದಿದಾರರನ್ನು  ಅಡ್ಡಗಟ್ಟಿ  ತಡೆದು ನಿಲ್ಲಿಸಿ  ಬಾಜಲ್ ಬಾಟಲಿಯಿಂದ ಹಲ್ಲೆ ಮಾಡಲು ಬಂದಿದ್ದು ಪಿರ್ಯಾದಿದಾರರು ವಿಚಾರಿಸಿದಾಗ “ನೀನು ಉದ್ಯಮಿಯ  ಜೊತೆ ಇದ್ದಿಯಾ , ಅವರನ್ನು ಮತ್ತು ನಿನ್ನನ್ನು  ಅಂತ್ಯ  ಕಾಣುತ್ತೇನೆ, ನಿನ್ನನ್ನು  ಸುಮ್ಮನೆ  ಬಿಡುವುದಿಲ್ಲ “ ಎಂದು ಹೇಳಿ ಹಲ್ಲೆ ಮಾಡಿರುತ್ತಾನೆ. ಆಗ ಅಲ್ಲಿದ್ದ  ರಾಜೇಶ್ ಹೋಬಳಿದಾರ್, ಪ್ರಕಾಶ ಹೇನುಬೇರ್ ಹಾಗೂ ಇತರರು ಆತನನ್ನು ಹಿಡಿದುಕೊಂಡು  ತಪ್ಪಿಸಿದ್ದು , ಆಗ ಆತನು ಪಿರ್ಯಾದಿದಾರರನ್ನು ಉದ್ದೇಶಿಸಿ ಜೀವ ಬೆದರಿಕೆ ಹಾಕಿರುತ್ತಾನೆ.  ನಂತರ ವಾಟ್ಸಾಪ್ ನಲ್ಲಿ ಪಿರ್ಯಾದಿದಾರರ ಬಗ್ಗೆ ಅವಹೇಳನಕಾರಿ ಬರೆದು ಹಾಕಿರುತ್ತಾನೆ. ಅಲ್ಲದೇ ಆರೋಪಿ  ಕೆಲವು ದಿನಗಳ ಹಿಂದೆ ದಾರಿಯಲ್ಲಿ ಸಿಕ್ಕಿದಾಗ ಒಂದು ಕಟ್ಟಡ  ಕಾಮಗಾರಿಯ ಬಗ್ಗೆ  ಹೇಳಿದ್ದು  ಇದರ  ಬಗ್ಗೆ ಪಿರ್ಯಾದಿದಾರರು ತಲೆಕೆಡಿಸಿಕೊಳ್ಳದೇ ಇದ್ದ  ಕಾರಣ ಆರೋಪಿ   ಹಲ್ಲೆಗೆ ಬಂದಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 36/2023 ಕಲಂ: 341, 324, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-03-2023 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080