ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಫುರ: ದಿನಾಂಕ 08/03/2023 ರಂದು ಬೆಳಗ್ಗಿನ ಜಾವ ಸುಮಾರು 5:30 ಗಂಟೆಗೆ, ಕುಂದಾಪುರ ತಾಲೂಕು, ಕುಂಭಾಶಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿ, ಎನ್‌ ಹೆಚ್‌ 66  ರಸ್ತೆಯಲ್ಲಿ, ಆಪಾದಿತ ಶಶಾಂಕ ದೇವಾಡಿಗ ಎಂಬವರು KA-20 EM-2096 ನೇ ಬೈಕಿನಲ್ಲಿ ಪಿರ್ಯಾದಿದಾರರಾದ ಸತೀಶ ದೇವಾಡಿಗ  ರವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ತೆಕ್ಕಟ್ಟೆ  ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ  ನಿರ್ಲಕ್ಷ್ಯ ತನದಿಂದ  ಸವಾರಿ  ಮಾಡಿಕೊಂಡು  ಬಂದು, ರಸ್ತೆಗೆ ಅಡ್ಡ ಬಂದ ನಾಯಿಗಳಿಗೆ ಡಿಕ್ಕಿ ಹೊಡೆದು ಬೈಕ್‌ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಾದ ಸತೀಶ ದೇವಾಡಿಗ (42) ತಂದೆ ಸಂಜೀವ ದೇವಾಡಿಗ ವಾಸ:  ಸುರನಮನೆ ತೆಕ್ಕಟ್ಟೆ ಗ್ರಾಮ ಕುಂದಾಪುರ ರವರ ಎಡಕಾಲಿನ ಮುಂಗಾಲು ಗಂಟಿನ ಕೆಳಗೆ ಒಳಜಖಂ ಗಾಯ, ಮುಂಗಾಲು ಗಂಟಿಗೆ  ಹಾಗೂ ಗಲ್ಲಕ್ಕೆ ತರಚಿದ  ಗಾಯವಾಗಿದ್ದು, ಆಪಾದಿತನ ಬಲಕೈಗೆ ಒಳನೋವಾದ ಗಾಯವಾಗಿ  ಚಿಕಿತ್ಸೆ  ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 26/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂಧಾಫುರ: ದಿನಾಂಕ 08/03/2023 ರಂದು ಬೆಳಿಗ್ಗೆ 8:10 ಗಂಟೆ , ಕುಂದಾಪುರ  ತಾಲೂಕಿನ, ಕೆಂಚನೂರು ಗ್ರಾಮದ ಈಶಾನಿ ಪೆಟ್ರೋಲ್‌ಬಂಕ್‌‌ಬಳಿ ರಸ್ತೆಯಲ್ಲಿ, ಆಪಾದಿತ ದುರ್ಗಾದಾಸ್‌ ಗೋವಿಂದ ಮೊಗೇರ  ಎಂಬವರು KL-48-A-9776 ನೇ ಟಿಪ್ಪರ್‌ಲಾರಿಯನ್ನು ತಲ್ಲೂರು ಕಡೆಯಿಂದ ನೇರಳಕಟ್ಟೆ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಯಾವುದೇ ಸೂಚನೆ ನೀಡದೇ ರಸ್ತೆಯ ಎಡಬದಿಯಿಂದ ರಸ್ತೆಯ ಬಲಬದಿಯ ಈಶಾನಿ ಪೆಟ್ರೋಲ್‌ಬಂಕ್‌‌ಗೆ ತಿರುಗಿಸಿ, ನೇರಳಕಟ್ಟೆ ಕಡೆಯಿಂದ  ತಲ್ಲೂರು ಕಡೆಗೆ ಸುಮಂತ ಶೆಟ್ಟಿ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-HA-0681 ಬೈಕ್‌‌ಗೆ ಅಪಘಾತಪಡಿಸಿದ ಪರಿಣಾಮ, ಸುಮಂತ ಶೆಟ್ಟಿಯವರ ತಲೆಗೆ, ಮುಖ, ಹಾಗೂ ಕೈ ಕಾಲುಗಳಿಗೆ  ರಕ್ತಗಾಯ ಹಾಗೂ ಒಳನೋವಾದ ಗಾಯವಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ, ಎಂಬುದಾಗಿ ರಿತೇಶ್‌ (25) ತಂದೆ  ನರಸಿಂಹ ವಾಸ:  ಸೌಕೂರು, ಗುಲ್ವಾಡಿ ಗ್ರಾಮ  ಕುಂದಾಪುರ ತಾಲೂಕು ಇವರು ನೀಡಿದ ದೂರಿನಂತೆ  ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾಧ ರಜತ್ ಉದಯ ಪೂಜಾರಿ (21) ತಂದೆ: ಉದಯ ಪೂಜಾರಿ ವಾಸ: 1-265 ಶ್ರೀ ದೇವಿ ನಿಲಯ ಗಾಂದಿ ನಗರ ಹೊನ್ನಾಳ ಬೈಕಾಡಿ ಗ್ರಾಮ , ಉಡುಪಿ ಇವರು ದಿನಾಂಕ 07/03/2023 ರಂದು ರಾತ್ರಿ 10.45 ಗಂಟೆಗೆ ಇವರ ಸ್ನೇಹಿತನಾದ ಕಿರಣ್ ಎಂಬುವವರೊಂದಿಗೆ ಕಿರಣ್ ರವರ ಬಾಪ್ತು ಮೋಟಾರ್ ಸೈಕಲ್ KA-20 EX-0615 ನೇದರಲ್ಲಿ ಹಿಂಬದಿ ಸಹ ಸವಾರರಾಗಿ ಕೂಳಿತುಕೊಂಡು ಉದ್ಯಾವರ ಕಡೆಯಿಂದ ಅಂಬಲಪಾಡಿ ಜಂಕ್ಷನ್ ಮೂಲಕ ಮಾಳವಿಕ ನೆಸ್ಟ್ ಫ್ಲ್ಯಾಟ್ ಗೆ ಹೋಗುವರೇ ಸಾರ್ವಜನಿಕ ಡಾಂಬಾರು ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಅಂಬಲಪಾಡಿ ಗ್ರಾಮದ ಜನಾರ್ಧನ ಹೈಟ್ಸ್ ಫ್ಲ್ಯಾಟ್ ಎದುರು ತಲುಪುವಾಗ ರಾತ್ರಿ ಸಮಯ ಸುಮಾರು 11.00 ಗಂಟೆಗೆ KA-20-EZ-7888 ನೇ ಮೋಟಾರ್ ಸೈಕಲ್ ಸವಾರ ಉಜ್ವಲ್ ಯು ಶೆಟ್ಟಿ  ತನ್ನ ಮೋಟಾರ್ ಸೈಕಲ್ ನ್ನು ಬ್ರಹ್ಮಬೈದರ್ಕಳ ಗರಡಿ ಅಡ್ಡ ರಸ್ತೆಯಿಂದ ಅಂಬಲಪಾಡಿ ಮುಖ್ಯರಸ್ತೆಗೆ ದುಡುಕುತನ ಮತ್ತು ನಿರ್ಲಕ್ಷತದಿಂದ ಚಲಾಯಿಸಿಕೊಂಡು ಬಂದು ಉದಯ ಪೂಜಾರಿ ಇವರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಉದಯ ರವರು ಮತ್ತು ಕಿರಣ್ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು ಇವರಿಗೆ ಸಣ್ಣ ಪುಟ್ಟ ತರಚಿದ ಗಾಯ ಹಾಗು ಕಿರಣ್ ರವರಿಗೆ ಮೂಳೆ ಮುರಿತದ ಗಾಯವಾಗಿದ್ದು ಪ್ರಸ್ತುತ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಅಲ್ಲದೇ ಈ ಅಪಘಾತದಲ್ಲಿ KA-20 EX-0615 ನೇ ಮೋಟಾರ್ ಸೈಕಲ್ ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 26/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 08-03-2023 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080