ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 07/03/2022 ರಂದು ಪಿರ್ಯಾದಿದಾರರಾದ ಮಯೂರ್ ಶ್ಯಾಮ ಶೆಟ್ಟಿ (36), ತಂದೆ: ಮನೋಹರ್ ಶೆಟ್ಟಿ, ವಾಸ: ಮನೆ ನಂಬ್ರ 204, 2ನೇ ಮಹಡಿ. ಸೀತಾರಾಮ್ ಗ್ರೀನ್ ವ್ಯಾಲಿ, ಮಣಿಪಾಲ ಇವರ  ತಂದೆ ಮನೋಹರ್ ಶೆಟ್ಟಿ (82) ರವರು ಮದ್ಯಾಹ್ನ 1:15 ಗಂಟೆಗೆ ಉಡುಪಿ 76 ಬಡಗುಬೆಟ್ಟು ಗ್ರಾಮದ ಲಯನ್ ಸರ್ಕಲ್ ಬಳಿ ಪೈ ಎಲೆಕ್ಟ್ರಾನಿಕ್ಸ್ ಎದುರು ಎಸ್ತೆಯ ಡಿವೈಡರ್ ಬಳಿ ನಿಂತಿರುವಾಗ ಜೋಡುಕಟ್ಟೆ ಕಡೆಯಿಂದ ಉಡುಪಿ ಬಸ್ ನಿಲ್ದಾಣದ ಕಡೆಗೆ KA-19-C-4179 ನೇ ಬಸ್ಸಿನ ಚಾಲಕ ರಾಮಚಂದ್ರ ಸಿ ಆರ್ ತನ್ನ ಬಸ್ಸನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ಬಸ್ಸಿನ ಬಲಭಾಗ  ಮನೋಹರ್  ಶೆಟ್ಟಿಯವರಿಗೆ ಡಿಕ್ಕಿ ಹೊಡೆದ  ಪರಿಣಾಮ, ಮನೋಹರ್ ಶೆಟ್ಟಿಯವರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಗಾಯವಾಗಿ ಮಾತನಾಡದೇ ಇದ್ದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಟಿಎಮ್ಎ ಪೈ ಆಸ್ಪತ್ರೆಗೆ ಕರೆದು ತಂದಾಗ ಪರೀಕ್ಷಿಸಿದ ವೈದ್ಯರು ಮನೋಹರ್ ಶೆಟ್ಟಿ  ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2022 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಮಾಸೆಬೈಲು: ಪಿರ್ಯಾದಿದಾರರಾದ ವಿಜಯ ಶೆಟ್ಟಿ (44), ವಾಸ:ಚಾರ ಮೇಲ್ಬೆಟ್ಟು , ಹೆಬ್ರಿ ತಾಲೂಕು  ಉಡುಪಿ ಜಿಲ್ಲೆ ಇವರು    ದಿನಾಂಕ 07/03/2022 ರಂದು  ತನ್ನ  ಸ್ನೇಹಿತ ಸಂಜೀವ  ಮಾಂಕಪ್ಪ  ರವರ ಮೋಟಾರ್ ಸೈಕಲ್  KA-20-EV-2010   ನೇ  ಯದರಲ್ಲಿ  ಸಹ ಸವಾರನಾಗಿ ಕುಳಿತುಕೊಂಡು ರಟ್ಟಾಡಿ  ಗ್ರಾಮದ  ವಾಲಿಬಾಲ್ ಪಂದ್ಯಾಟ  ವಿಕ್ಷೀಸಿ  ವಾಪಸ್ಸು ಅಮಾಸೆಬೈಲು  ಕಡೆಗೆ  ಬರುವಾಗ ಬೆಳಗ್ಗಿನ ಜಾವ 03:40 ಗಂಟೆಗೆ ರಟ್ಟಾಡಿ  ಗ್ರಾಮದ ಹೊಯ್ಗೆ ಮನೆ ಎಂಬಲ್ಲಿ  ತಲುಪುವಾಗ ಸಂಜೀವ  ರವರು ಮೋಟಾರು   ಸೈಕಲ್ ನ್ನು ಅತಿ  ವೇಗ  ಮತ್ತು  ಅಜಾಗರೂಕತೆಯಿಂದ  ಚಲಾಯಿಸಿದ್ದು   ಆ ಸಮಯದಲ್ಲಿ  ನಾಯಿ  ಅಡ್ಡ  ಬಂದಿದ್ದು  ಒಮ್ಮೇಲೆ   ಬ್ರೇಕ್ ಹಾಕಿದ  ಪರಿಣಾಮ ಮೋಟಾರು  ಸೈಕಲ್   ಸಮೇತ   ಪಿರ್ಯಾದಿದಾರರು ಮತ್ತು ಮೋಟಾರು ಸೈಕಲ್  ಚಾಲಕ    ರಸ್ತೆಗೆ   ಬಿದ್ದು ಮೋಟಾರು   ಸೈಕಲ್   ಚಲಾಯಿಸಿದ  ಸಂಜೀವರವರಿಗೆ ತರಚಿದ   ಗಾಯ ಪಿರ್ಯಾದಿದಾರರಿಗೆ  ಎಡ   ಕಾಲಿನ  ಕೆಳಗಂಟು ಮತ್ತು  ಬೆರಳುಗಳಿಗೆ  ರಕ್ತ  ಗಾಯವಾಗಿದ್ದು ಕೂಡಲೇ  ಅವರನ್ನು ಎನ್ ಆರ್ ಆಚಾರ್ಯ ಅಸ್ಪತ್ರೆಗೆ ಉದಯ ಪೂಜಾರಿಯವರು   ದಾಖಲಿಸಿರುತ್ತಾರೆ .ಪರೀಕ್ಷೀಸಿದ  ವೈದ್ಯರು  ಪಿರ್ಯಾದಿದಾರರನ್ನು ಒಳರೋಗಿಯಾಗಿ  ದಾಖಲಿಸಿಕೊಂಡು  ಸಂಜೀವ  ರವರಿಗೆ  ಪ್ರಥಮ ಚಿಕಿತ್ಸೆ   ನೀಡಿ  ಬಿಡುಗಡೆಗೊಳಿಸಿರುತ್ತಾರೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಲ್ಪೆ: ದಿನಾಂಕ 07/03/2022 ರಂದು ಪಿರ್ಯಾದಿದಾರರಾದ ಹರೀಶ್ ಜಿ  ಮೈಂದನ್ (57), ತಂದೆ: ದಿ ಗಿರಿಯ ಸಾಲ್ಯಾನ್ ವಾಸ: ಚಾಮುಂಡಿ ನಿಲಯ  ಹನುಮಾನ ನಗರ ಮಲ್ಪೆ ಕೊಡವೂರು ಗ್ರಾಮ ಇವರು ಸಂಜೆ ವೇಳೆ ವಾಯುವಿಹಾರಕ್ಕೆ ಬರುತ್ತಿರುವಾಗ ಮಲ್ಪೆ ಹನುಮಾನ ವಿಠೋಭ ಭಜನಾ ಮಂದಿರದ  ಹತ್ತಿರ ಸಮುದ್ರ ಕಿನಾರೆಯಲ್ಲಿ ಸಂಜೆ 5:30 ಗಂಟೆಗೆ ನಡೆದುಕೊಂಡು ಬರುತ್ತಿರುವಾಗ ಅಲ್ಲಿ ತುಂಬಾ ಜನ ಸೇರಿದ್ದು ಪಿರ್ಯಾದಿದಾರರು ನೋಡಿದಾಗ ಓರ್ವ ಗಂಡಸು ಪ್ರಾಯ ಸುಮಾರು 40 ವರ್ಷ ಈತನು ಮಲಗಿದ್ದಲ್ಲೆ ಮೃತಪಟ್ಟಿದ್ದು .ಪಿರ್ಯಾದಿದಾರರು ಪೊಲೀಸರಿಗೆ ವಿಚಾರ ತಿಳಿಸಿ ಪೊಲೀಸರು  ಬಂದು ಪರಿಶೀಲಿಸಿದಾಗ  ಆತನ ಕಿಸೆಯಲ್ಲಿ ಆದಾರ ಕಾರ್ಡ್ ಪ್ರತಿ ದೊರೆತಿದ್ದು,ಅದರಲ್ಲಿ ಆತನ ಹೆಸರು ಗೋಪಾಲ ಮೊಗೇರ, ತಂದೆ: ಅಣ್ಣಪ್ಪ ಮೊಗೇರ, ವಾಸ: ಹೆಬ್ಳೆ ಭಟ್ಕಳ ಎಂಬುದಾಗಿದ್ದು,  ಗೋಪಾಲ ಮೊಗೇರ ಯಾವುದೋ ಕಾಯಿಲೆಯಿಂದ ಅಥವಾ ಇನ್ಯಾವುದೋ ಕಾರಣದಿಂದ  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 13/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಮಲ್ಪೆ: ದಿನಾಂಕ 06/03/2022 ರಂದು ಪಿರ್ಯಾದಿದಾರರಾದ ಸ್ಯಾಮ್ ಸಂನ್  ಲೂಯಿಸ್ (47),  ತಂದೆ: ಬಿ.ಎ ಲೂಯಿಸ್,  ವಾಸ: ಐರೋಡಿ  ಗ್ರಾಮ ಉಡುಪಿ ಇವರು ಎಸ್ಕವೇಟರ್ ನ್ನು  ಕಲ್ಮಾಡಿ   ಚರ್ಚ್  ಹತ್ತಿರ  ಕೆಲಸ ಕ್ಕೆ ತಂದಿದ್ದು,  ಸಂಜೆ 6:00 ಗಂಟೆಗೆ ಕೆಲಸ ಮುಗಿಸಿ ಎಸ್ಕೇವೇಟರ್ ನ್ನು ಅಲ್ಲಿಯೆ ನಿಲ್ಲಿಸಿ ಅದರ ಆಪರೇಟರ್  ಮನೆಗೆ ಹೋಗಿರುತ್ತಾರೆ. ದಿನಾಂಕ 07/03/2022 ರಂದು  ಬೆಳಿಗ್ಗೆ 08:00 ಆಪರೇಟರ್ ಬಂದು ನೋಡುವಾಗ ಎಸ್ಕೇಟರ್ ಮೀಟರ್ ಡಿಸ್ ಪ್ಲೆ  ಕಾಣದೆ ಇದ್ದ ಬಗ್ಗೆ  ಆಪರೇಟರ್ ರಾಜು ಎಂಬುವವರು ಪಿರ್ಯಾದಿದಾರರಿಗೆ ವಿಚಾರ ತಿಳಿಸಿರುತ್ತಾರೆ. ದಿನಾಂಕ 06/03/2022  ರಂದು  ಸಂಜೆ  6:00 ಗಂಟೆಯಿಂದ ದಿನಾಂಕ 07/03/2022  ರ  ಬೆಳಿಗ್ಗೆ  8:00 ಗಂಟೆಯ  ಮದ್ಯಾವಧಿಯಲ್ಲಿ  ಯಾರೋ  ಕಳ್ಳ ರು  ಪಿರ್ಯಾದಿದಾರರ  ಎಸ್ಕವೆಟರಿನ  ಮೀಟರ್  ಡಿಸ್ ಪ್ಲೆ  ಕಳವು ಮಾಡಿಕೊಂಡು  ಹೋಗಿರುತ್ತಾರೆ . ಕಳವಾದ  ಸೊತ್ತಿನ  ಮೌಲ್ಯ  ರೂಪಾಯಿ  1,50,000 ಅಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 26/2022  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 08-03-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080