ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ನಿಶಾನ್ (28), ತಂದೆ:ಜಯ ಕುಮಾರ್, ವಾಸ: ಮೂಡುಬೆಟ್ಟು ಕೊಡವೂರು ಅಂಚೆ ಉಡುಪಿ ಇವರು ದಿನಾಂಕ 07/03/2021 ರಂದು ತನ್ನ ಸ್ನೇಹಿತರೊಂದಿಗೆ KA-19-MG-4072 ನೇ ಟೊಯೊಟೋ ಕೆಂಪು ಕಾರಿನಲ್ಲಿ ಬಿದ್ಕಲ್ ಕಟ್ಟೆಯ ಕೊಳಂಕಲ್ ದೇವಸ್ಥಾನದ ಹತ್ತಿರ ಕ್ರಿಕೇಟ್ ಪಂದ್ಯಾಟ ಆಡಲು ಹೊರಟು ಮಧ್ಯಾಹ್ನ 2:30 ಗಂಟೆಗೆ ಶಿರಿಯಾರ ಗ್ರಾಮದ ಕಲ್ಮರ್ಗಿಯ ಹೆದ್ದಾರಿ ಮಠ ದೇವಸ್ಥಾನದ ಬಳಿ ತಲುಪಿದಾಗ ಹಳ್ಳಾಡಿಯಿಂದ ಬಾರ್ಕೂರು ಕಡೆಗೆ ಓರ್ವ ಕಾರು ಚಾಲಕನು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ KA-19-MG-4072 ನೇ ಟೊಯೊಟೋ ಕೆಂಪು ಕಾರಿಗೆ ರಸ್ತೆಯ ತೀರಾ ಬಲ ಭಾಗಕ್ಕೆ ಬಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಬಲ ಬದಿಯ ಭಾಗ ಸಂಪೂರ್ಣ ಜಖಂ ಗೊಂಡಿರುತ್ತದೆ. ಢಿಕ್ಕಿ ಹೊಡೆದ ಕಾರಿನ ಮುಂಭಾಗದ ಬಾಗಿಲು ಜಖಂ ಗೊಂಡಿರುತ್ತದೆ. ಢಿಕ್ಕಿ ಹೊಡೆದ ಕಾರು ನಂಬ್ರ  MH-12-HL-3655 ಮಾರುತಿ ರಿಡ್ಜ್  ಬಿಳಿ ಬಣ್ಣದ ಕಾರು ಆಗಿದ್ದು ಚಾಲಕ ಸೌಡ ದಿವಾಕರ ಶೆಟ್ಟಿ ಎಂಬುವವರಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಜುಗಾರಿ ಪ್ರಕರಣ

 • ಕಾಪು:ದಿನಾಂಕ 07/03/2021 ರಂದು ಬೆಳಗ್ಗೆ  04:15 ಗಂಟೆಗೆ ಪಿರ್ಯಾದಿದಾರರಾದ ಐ.ಆರ್. ಗಡ್ಡೇಕರ್, ಪೊಲೀಸ್ ಉಪನಿರೀಕ್ಷಕರು ಕಾಪು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬೆಟ್ಟು ಗ್ರಾಮದ ಶಿವಾನಂದ ನಗರದ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ  ಬಂದ ಮಾಹಿತಿಯಂತೆ ದಾಳಿ ನಡೆಸಿ ಇಸ್ಪೀಟ್ ಆಟ ಆಡುತ್ತಿದ್ದ ಆರೋಪಿಗಳಾದ 1) ಭುಜಂಗ ,  2) ಶೇಖರ ಮೊಯಿಲಿ, 3) ಸಂಜೀವ  ಮೊಯಿಲಿ, 4) ಶ್ರೀಶ , 5) ಕಿಟ್ಟ, 6) ಪ್ರಕಾಶ, 7) ನಾರಾಯಣ, 8) ಮುಬಾರಕ್, 9) ಅಣ್ಣಪ್ಪ, 10) ರಂಜಿತ್, 11) ತನುಜಯ, 12) ಅತೀಶ್, 13) ರಮೇಶ, 14) ಪ್ರಜ್ವಲ್ ಪೂಜಾರಿ, 15) ಯತೀಶ್ ಕುಮಾರ, 16) ಶರತಕುಮಾರ ಇವರನ್ನು ವಶಕ್ಕೆ ಪಡೆದು ಒಟ್ಟು 13 ಮೋಬೈಲ್,  ಇಸ್ಪೀಟ್ ಆಟಕ್ಕೆ ಬಳಸಿದ ನಗದು ರೂಪಾಯಿ 16,375/- ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೆ ದಿನ ಪತ್ರಿಕೆಗಳು ಹಾಗೂ ಸ್ಥಳದಲ್ಲಿದ್ದ 07 ವಾಹನಗಳನ್ನು ಮಹಜರ್ ಮುಖೇನ ಸ್ವಾದೀಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಸೊತ್ತುಗಳ ಮೌಲ್ಯ 1,69,375/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021  ಕಲಂ:  87 ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ದಿನಾಂಕ 07/03/2021 ರಂದು ದಾಮೋದರ ಕೆ ಬಿ , ಪೊಲೀಸ್‌ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ ಇವರಿಗೆ ಕಾರ್ಕಳ ತಾಲೂಕು ಕಾರ್ಕಳ ಕಸಬ ಗ್ರಾಮದ ಬಿಬಿಎಮ್‌ ಕಾಲೇಜು ಬಳಿ ಸಾರ್ವಜನಿಕ ಪ್ರದೇಶದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಸ್ಥಳದಲ್ಲಿ ಇಸ್ಪೀಟ್‌ ಜುಗಾರಿ ಆಟ ಆಡುತ್ತಿದ್ದ ಆಪಾದಿತರಾದ 1) ಅಬ್ದುಲ್ ರೆಹಮಾನ್, 2) ಕುಟ್ಟಿ ಶೆಟ್ಟಿ, 3) ಹೇಮಂತ್, 4) ಅಶೋಕ ಹೆಗ್ಡೆ, 5) ಸುಕೇಶ ಇವರನ್ನು ದಸ್ತಗಿರಿ ಮಾಡಿ ಆಪಾದಿತರು ಇಸ್ಪೀಟ್‌ ಜುಗಾರಿ ಆಟಕ್ಕೆ ಬಳಸಿದ್ದ ನಗದು 2400/- ರೂಪಾಯಿ, 52 ಇಸ್ಪೀಟ್‌ ಎಲೆಗಳು ಹಳೆಯ ದಿನಪತ್ರಿಕೆ -1 ನ್ನು  ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ  ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021  ಕಲಂ: 87 ಕರ್ನಾಟಕ ಪೊಲೀಸ್‌ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಶಂಕರ ಪೂಜಾರಿ (50), ತಂದೆ: ಬಚ್ಚ ಪೂಜಾರಿ, ವಾಸ: ಗಣೇಶ ಕೃಪಾ ಬಾಕಾಳಿ ಬೆಟ್ಟು ತೆಕ್ಕಟ್ಟೆ ಕುಂದಾಪುರ ತಾಲೂಕು ಇವರ ಅಕ್ಕನ ಮಗ ಚಂದ್ರ ಪೂಜಾರಿ(34) ರವರು ಪಿರ್ಯಾದಿದಾರರೊಂದಿಗೆ ವಾಸವಾಗಿದ್ದು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇತ್ತೀಚೆಗೆ ಮಾನಸಿಕ ಖಾಯಿಲೆಯ ಬಗ್ಗೆ  ಸರಿಯಾಗಿ ಮಾತ್ರೆ ತೆಗೆದುಕೊಳ್ಳದೇ ಇದ್ದು ಮಾನಸಿಕ ಖಾಯಿಲೆ ಜಾಸ್ತಿಯಾಗಿದ್ದು, ಅಲ್ಲದೇ ಪ್ರತಿದಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಹಾಗೂ ಕಸ ಗುಡಿಸಲು ಹೋಗುತ್ತಿದ್ದು, ದಿನಾಂಕ 07/03/2021 ರಂದು ಬೆಳಿಗ್ಗೆ 05:00 ಗಂಟೆಗೆ ದೇವಸ್ಥಾನಕ್ಕೆ ಮನೆಯಿಂದ ಹೋಗಿದ್ದು ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ತೆಕ್ಕಟ್ಟೆಯ ಮಹಾಲಿಂಗೇಶ್ವರ ದೇವಸ್ಥಾನದ ಪವಳಿಯಲ್ಲಿ  ಪಕಾಸಿಗೆ ಹಗ್ಗದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 09/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಗಂಡಸು ಕಾಣೆ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ಶೇಖರ್ ಕುಂದರ್, ತಂದೆ: ಮುಡೂರ, ವಾಸ: ಮರವಂತೆ, ಮರವಂತೆ ಗ್ರಾಮ, ಬೈಂದೂರು ತಾಲೂಕು ಹಾಗೂ ಯಶಸ್ವಿನಿ ಮತ್ತು ಚಂದ್ರಶೇಖರ ಎಂಬುವವರು ಪಾಲುದಾರಿಕೆಯಲ್ಲಿ IND-KA-03-MM-35 ನೇ ನಂಬರಿನ “ಸಾಗರದೀಪ” ಎಂಬ ಪರ್ಶಿಯನ್ ಬೋಟ್‌ ನಡೆಸಿಕೊಂಡಿದ್ದು, ದಿನಾಂಕ 06/03/2021 ರಂದು ಸಂಜೆ 6:00 ಗಂಟೆಗೆ ಪಾಂಡು (47) ಎಂಬುವವರು ಇತರರೊಂದಿಗೆ ಬೋಟ್‌ನಲ್ಲಿ ಗಂಗೊಳ್ಳಿ ಬಂದರಿನ ಸಮೀಪ ಸಮುದ್ರಕ್ಕೆ ಮೀನುಗಾರಿಕೆ ಬಗ್ಗೆ ಹೋಗಿದ್ದು, ದಿನಾಂಕ 07/03/2021 ರಂದು ಗಂಗೊಳ್ಳಿ ಬಂದರಿನಿಂದ 5 ಕಿ.ಮೀ ದೂರ ಆಳ ಸಮುದ್ರದಲ್ಲಿ ಬೆಳಿಗ್ಗಿನ ಜಾವ 2:00 ಗಂಟೆಗೆ ಪಾಂಡು ರವರು ಇತರರೊಂದಿಗೆ ಬೋಟ್‌ನಲ್ಲಿ ಕೆಲಸ ಮಾಡುತ್ತಿರುವಾಗ ಸಮುದ್ರದಲ್ಲಿ ಒಮ್ಮೆಲೆ ಅಬ್ಬರದ ಅಲೆ ಬಂದ ಪರಿಣಾಮ ಬೋಟ್‌ ತೇಲಿದಾಗ ಪಾಂಡು ರವರು ಆಯಯಪ್ಪಿ ಸಮುದ್ರಕ್ಕೆ ಬಿದ್ದು ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 08-03-2021 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ