ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 07/03/2021 ರಂದು 19:30 ಗಂಟೆಗೆ ಕಾರ್ಕಳ ತಾಲೂಕು ಬೆಳ್ಮಣ್ ಗ್ರಾಮದ ಬಿಲ್ಲವ ಸಂಘದ ಮುಂಭಾಗದಲ್ಲಿ ರಸ್ತೆಯ ಎಡಭಾಗದ ಮಣ್ಣಿನ ದಾರಿಯಲ್ಲಿ ಪಿರ್ಯಾದಿದಾರರಾದ ಸತೀಶ್ (32) ತಂದೆ: ಕುಕ್ರ ವಾಸ: ಆರ್ಯಾಡ್ ಮನೆ ನಂದಳಿಕೆ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ಹಾಗೂ ಅವರ ಅಣ್ಣ ಸಂತೋಷ ಬೆಳ್ಮಣ್ ಕಡೆಯಿಂದ ನಂದಳಿಕೆ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ  ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ KA-12-P-7146 ನೇ ನಂಬ್ರದ ಕಾರು ಚಾಲಕ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಭಾಗಕ್ಕೆ ಚಲಾಯಿಸಿಕೊಂಡು ಬಂದು ಸತೀಶ್ ರವರ ಅಣ್ಣನಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಅವರು ರಸ್ತೆಗೆ ಬಿದ್ದು, ಅವರ ಎಡಕಾಲಿನ ಮೂಳೆಮುರಿತ ಹಾಗೂ ತಲೆಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 279, 338 ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಶಿವಪ್ಪಾ (48), ತಂದೆ: ದಿ. ಆರ್‌ಮುರ್ಗಾ, ವಾಸ: ಸುಮತಿ ಫಾರ್ಮ್‌, ಚಾಂತಾರು, ಚಾಂತಾರು ಗ್ರಾಮ, ಬ್ರಹ್ಮಾವರ ಇವರ ತಮ್ಮನಾದ ಶೀನಪ್ಪ (45) ಎಂಬವರು ವಿಪರೀತ ಮಧ್ಯಪಾನ ಮಾಡುವ ಅಭ್ಯಾಸಹೊಂದಿದ್ದು, ಅವರ ಹೆಂಡತಿ ಮತ್ತು ಮಕ್ಕಳು ಅವರನ್ನು ಬಿಟ್ಟು  ಎಳ್ಳಂಪಳ್ಳಿಯಲ್ಲಿ ಬೇರೆ ವಾಸವಾಗಿರುವುದಾಗಿದೆ. ಶೀನಪ್ಪ ರವರು ಕೆಲಸಕ್ಕೆ ಹೋಗದೇ ತನ್ನ ಸಹೋದರ ಹಾಗೂ ಸಹೋದರಿಯರ ಚಾಂತಾರು ಮತ್ತು ಆರೂರುನಲ್ಲಿರುವ ಮನೆಗಳಲ್ಲಿ ವಾಸವಾಗಿರುತ್ತಿದ್ದರು. ದಿನಾಂಕ 07/03/2021 ರಂದು ಮಧ್ಯಾಹ್ನ ಸುಮಾರು 12:00 ಗಂಟೆಗೆ ಶೀನಪ್ಪ ರವರು ತನ್ನ ತಮ್ಮನಾದ ಮಂಜೇಶನೊಂದಿಗೆ ಪೇತ್ರಿ ಪೇಟೆಯಲ್ಲಿ ರಸ್ತೆ ಬದಿಯಲ್ಲಿ ವಿಪರೀತ ಮಧ್ಯಪಾನ ಮಾಡಿ ಮಲಗಿದ್ದು, ಆಗ ಶಿವಪ್ಪಾ ರವರು ಅವರಿಬ್ಬರನ್ನೂ ಆರೂರು 5 ಸೆಂಟ್ಸ್ ನಲ್ಲಿರುವ ಮಂಜೇಶನ ಮನೆಗೆ ಕರೆದುಕೊಂಡು ಹೋಗಿ ಬಿಟ್ಟು ಹೋಗಿದ್ದು, 08/03/2021 ರಂದು 07:30 ಗಂಟೆಗೆ ಶೀನಪ್ಪ ರವರು ಮಲಗಿದ್ದಲ್ಲಿಯೇ ಇದ್ದು, ಎಬ್ಬಿಸಿದರು ಎಳದಿದ್ದಾಗ ಕೂಡಲೇ ಅಂಬುಲೆನ್ಸ್ ನಲ್ಲಿ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಬೆಳಿಗ್ಗೆ 08:25 ಗಂಟೆಗೆ ಕರೆ ತಂದಾಗ ವೈಧ್ಯರು ಪರೀಕ್ಷಿಸಿ ಶೀನಪ್ಪಾ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಶೀನಪ್ಪ ರವರು ವಿಪರೀತ ಮಧ್ಯಪಾನ ಮಾಡುವ ಅಭ್ಯಾಸಹೊಂದಿರುವುದರಿಂದ ತುಂಬಾ ನಿಶಕ್ತಿಯಿಂದ ಇದ್ದು, ನಿನ್ನೆ ಕೂಡ ವಿಪರೀತ ಮಧ್ಯಪಾನಮಾಡಿ ಮನೆಯಲ್ಲಿ ಮಲಗಿದ್ದವರು ಊಟಕ್ಕೂ ಏಳದೇ ತೀವ್ರ ನಿಶಕ್ತಿ ಹೊಂದಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 08/03/2021 ರಂದು ಸಿಬ್ಬಂದಿಯವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪಿರ್ಯಾದಿದಾರರಾದ ನಾರಾಯಣ, ಪಿ.ಎಸ್.ಐ, ಸೆನ್ ಅಪರಾಧ ಪೊಲೀಸ್ ಠಾಣೆ ಇವರು ಪೊಲೀಸ್ ಅಧೀಕ್ಷಕರ ಅನುಮತಿ ಪಡೆದು, ಪತ್ರಾಂಕಿತ ಅಧಿಕಾರಿ, ಪಂಚರು ಹಾಗೂ ಸಿಬ್ಬಂದಿಯವರ ಸಹಕಾರದೊಂದಿಗೆ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಶಾಂತಿನಗರದ ವಸುಧಾ ಕಂಫರ್ಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳಾದ 1.ಪೂರ್ಣ ಚಂದ್ರ ದಾಸ್ ( 23) ತಂದೆ: ಮುರಳಿದಾಸ್, ವಾಸ: ಕಾನಗುಳಿ ಗ್ರಾಮ, ಈರಸಮ್ಮ ಪೋಸ್ಟ್,  ಜಗತ್ ಸಿಂಗಾಪುರ ಜಿಲ್ಲೆ, ಓರಿಸ್ಸಾ, ಹಾಲಿ ವಾಸ: C/O ಶ್ರಿನಾಥ, 5 ನೇ ಕ್ರಾಸ್, ರಾಜೀವನಗರ, 80 ಬಡಗಬೆಟ್ಟು ಗ್ರಾಮ, ಮಣಿಪಾಲ, ಉಡುಪಿ ತಾಲೂಕು ಮತ್ತು ಜಿಲ್ಲೆ, 2. ಕಮಲು (28) ತಂದೆ: ಗಂಗಪಾಣಿ ವಾಸ: ನೌಕೋಟ್ ಗ್ರಾಮ, ಪಾಪೆದಹಂಡಿ ಪೋಸ್ಟ್, ನಬರಂಗಪುರ ಜಿಲ್ಲೆ.  ಓರಿಸ್ಸಾ ರಾಜ್ಯ, ಹಾಲಿವಾಸ: ಲೇಕ್ ವೀವ್ ಬಾರ್ ಬಳಿ, ಬಾಡಿಗೆ ಮನೆ, ಮಣಿಪಾಲ, ಉಡುಪಿ ತಾಲೂಕು ಪೂರ್ಣಚಂದ್ರ ದಾಸ್ 2. ಕಮಲು ಎಂಬವರುಗಳನ್ನು ಬೆಳಿಗ್ಗೆ 9:30 ಗಂಟೆಗೆ ದಸ್ತಗಿರಿಗೊಳಿಸಿ, ಅವರಿಂದ ಯಾವುದೇ ಪರವಾನಿಗೆ ಇಲ್ಲದೇ, ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 2 ಕಿಲೋ, 020  ಗ್ರಾಂ ತೂಕದ ಗಾಂಜಾವನ್ನು ಮತ್ತು ಗಿರಾಕಿ ಕುದುರಿಸಲು ಬಳಸಿದ್ದ 2 ಮೊಬೈಲ್ ಪೋನ್, ಕಪ್ಪು, ನೀಲಿ ಹಾಗೂ ಬೂದು ಬಣ್ಣ ಮಿಶ್ರಿತ ಸೊಲ್ಡರ್ ಬ್ಯಾಗ್ ಮತ್ತು 18 ಪ್ಲಾಸ್ಟಿಕ್ ತೊಟ್ಟೆಯನ್ನು ವಶಪಡಿಸಿಕೊಂಡಿರುತ್ತಾರೆ. ವಶಪಡಿಸಿದ ಗಾಂಜಾದ ಅಂದಾಜು ಮೌಲ್ಯ ರೂಪಾಯಿ 70,000/=, ಮತ್ತು 2 ಮೊಬೈಲ್ ಹಾಂಡ್‌ಸೆಟ್‌ ಮೌಲ್ಯ ರೂಪಾಯಿ 9,000/= ಆಗಬಹುದಾಗಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2019 ಕಲಂ 8(c), 20 (b) (ii),  (B) ಎನ್.ಡಿ.ಪಿ.ಎಸ್. ಕಾಯ್ದೆ 1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-03-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ