ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 07/02/2023  ರಂದು ಬೆಳಿಗ್ಗೆ  ಸುಮಾರು 11:30 ಗಂಟೆಗೆ,  ಕುಂದಾಪುರ  ತಾಲೂಕಿನ,  ಹೆಮ್ಮಾಡಿ ಗ್ರಾಮದ  ಹೊಸಕಳಿ ಕ್ರಾಸ್‌  ಬಳಿ ಎನ್‌ ಹೆಚ್‌ 66 ರಸ್ತೆಯಲ್ಲಿ,ಆಪಾದಿತ  ಮಂಜುನಾಥ ಎಂಬವರು KA-20 AA-8312 ನೇ ಆಟೋರೀಕ್ಷಾದಲ್ಲಿ ಪಿರ್ಯಾದಿದಾರರರಾದ ಶ್ರೀಮತಿ ತುಂಗಾ ದೇವಾಡಿಗ (68) ಗಂಡ:ಶೀನ ದೇವಾಡಿಗ ವಾಸ:ಸನ್ಯಾಸಿ ಬೆಟ್ಟು,ಮಾರಣಕಟ್ಟೆ ಚಿತ್ತೂರು ಗ್ರಾಮ  ಕುಂದಾಪುರ ಇವರನ್ನು  ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಹೊಸಕಳಿ ದೇವಸ್ಥಾನದ ಕಡೆಯಿಂದ  ಹೆಮ್ಮಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಆಟೋರೀಕ್ಷಾವನ್ನು ಚಲಾಯಿಸಿಕೊಂಡು ಬಂದು ಎದುರುಗಡೆಯಿಂದ ಬಂದ ಬೈಕನ್ನು ನೋಡಿ ಒಮ್ಮೇಲೆ ಬ್ರೇಕ ಹಾಕಿದ ಪರಿಣಾಮ ಆಟೋರೀಕ್ಷಾವು ಅಡ್ಡ ಮಗ್ಗುಲಾಗಿ ರಸ್ತೆಯಲ್ಲಿ ಬಿದ್ದು ಪಿರ್ಯಾದಿ ತುಂಗಾ ರವರಿಗೆ ಎಡಬದಿಯ ಪಕ್ಕೆಲುಬಿಗೆ ಒಳನೋವು,ಎಡ ಪಾದದ ಮೇಲೆ ಹಾಗೂ ಬಲ ಕೈ ಭುಜಕ್ಕೆ ತರಚಿದ ಗಾಯವಾಗಿ ಕುಂದಾಪುರ ವಿನಯ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ  ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 16/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಾಧಕ ವಸ್ತು ಸೇವನೆ ಪ್ರಕರಣ

  • ಕುಂದಾಫುರ: ದಿನಾಂಕ 07/02/2023 ರಂದು ಕುಂದಾಪುರ ಪೊಲೀಸ್ ಠಾಣಾ ಪ್ರಸಾದಕುಮಾರ್‌ ಕೆ-  ಪಿಎಸ್ಐ (ತನಿಖೆ) ಕುಂದಾಪುರ ಪೊಲೀಸ್ ಠಾಣೆ ರವರು ಸಿಬ್ಬಂದಿಗಳೊಂದಿಗೆ ಇಲಾಖಾ ಜೀಪು ನಂಬ್ರ ಕೆಎ-20 ಜಿ-356 ನೇದರಲ್ಲಿ ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ ಕರ್ತವ್ಯದಲ್ಲಿರುವ ಸಮಯ ಬಾತ್ಮೀದಾರರೊಬ್ಬರು ಕರೆ ಮಾಡಿ ವಡೇರಹೋಬಳಿ ಗ್ರಾಮದ ಟಿ.ಟಿ ರಸ್ತೆಯ ಬಳಿ ಗಾಂಜಾ ಸೇವನೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದಂತೆ 09:30  ಗಂಟೆಗೆ ಸ್ಥಳಕ್ಕೆ ತೆರಳಿ ನೋಡಿದಾಗ ಅಲ್ಲಿ ಓರ್ವ ವ್ಯಕ್ತಿ ಅಮಲಿನಲ್ಲಿರುವುದು ಕಂಡುಬಂದಿದ್ದು, ಆತನನ್ನು  ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆತನು  ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ ಬಂದ ಮೇರೆಗೆ ಆತನನ್ನು  ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿ ಹೆಸರು ವಿಳಾಸ ತಿಳಿದುಕೊಳ್ಳಲಾಗಿ  ಆಶಿಶ್, ಎಂಬುದಾಗಿ ತಿಳಿಸಿದ್ದು ಈತ ಗಾಂಜಾದಂತಹ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಅನುಮಾನ ಇದ್ದು ಆತನನ್ನು ವಶಕ್ಕೆ ತೆಗೆದುಕೊಂಡು ಆತನಿಗೆ ಮಾಹಿತಿ ನೀಡಿ ವೈದ್ಯಕೀಯ ತಪಾಸಣೆ ಬಗ್ಗೆ ಶ್ರೀ ಮಾತಾ  ಆಸ್ಪತ್ರೆ ಕುಂದಾಪುರದ  ವೈದ್ಯಾಧಿಕಾರಿಯವರ  ಮುಂದೆ ಹಾಜರುಪಡಿಸಿದ್ದು, ಇತನನ್ನು  ಪರೀಕ್ಷಿಸಿದ ವೈದ್ಯರು ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿದೆ, ದಿನಾಂಕ 07/01/2023 ರಂದು ವರದಿ ನೀಡಿರುವುದಾಗಿದೆ. ಈ ಬಗ್ಗೆ ಕುಂದಾಫುರ ಪೊಲೀಸ್‌ ಠಾಣಾ ಅಪರಾದ 15/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾಧ ಅನಿಲ್ ಬಿ ಎಂ ಪಿಎಸ್‌ಐ ಹಿರಿಯಡ್ಕ ಪೊಲೀಸ್ ಠಾಣೆ  ಇವರು ದಿನಾಂಕ 07/02/2023 ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸನಲ್ಲಿರುವಾಗ  ಬೆಳಿಗ್ಗೆ 10:00 ಗಂಟೆಗೆ ಬೊಮ್ಮರಬೆಟ್ಟು  ಗ್ರಾಮದ ಹಿರಿಯಡ್ಕ ಬಸ್ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಧೀಶ (18) ತಂದೆ: ದಯಾನಂದ ಪೂಜಾರಿ ವಾಸ: ಸುಧೀಶ್ ನಿಲಯ ಕೊಂಡಾಡಿ ಮಂಜೊಟ್ಟಿ ಬೊಮ್ಮರಬೆಟ್ಟು ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನು ತೂರಾಡಿಕೊಂಡಿದ್ದು  ಆತನು ಯಾವುದೋ ನಿಷೇಧಿತ ಮಾಧಕ ವಸ್ತು ಸೇವಿಸಿರುವ ಸಂಶಯದ ಮೇಲೆ  ವಶಕ್ಕೆ ಪಡೆದು,  ಫೊರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ , ಈ ದಿನ ವೈದ್ಯರು ಆಪಾದಿತನು ನಿಷೇಧಿತ ಗಾಂಜಾ (Marijuana) ಎಂಬ ಮಾದಕ ವಸ್ತುವನ್ನು ಸೇವಿಸಿರುವುದಾಗಿ ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾದ 04/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾದ ಅನಿಲ್ ಬಿ ಎಂ ಪಿಎಸ್‌ಐ ಹಿರಿಯಡ್ಕ ಪೊಲೀಸ್ ಠಾಣೆ  ಇವರು ದಿನಾಂಕ 07/02/2023 ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸನಲ್ಲಿರುವಾಗ ಬೆಳಿಗ್ಗೆ 10:00 ಗಂಟೆಗೆ ಬೊಮ್ಮರಬೆಟ್ಟು  ಗ್ರಾಮದ ಹಿರಿಯಡ್ಕ ಬಸ್ ನಿಲ್ದಾಣ ಬಳಿ ಸಾರ್ವಜನಿಕ ಸ್ಥಳದಲ್ಲಿ ರೋಷನ್ 19)ತಂದೆ: ಶ್ರೀಧರ ಶೆಟ್ಟಿ ವಾಸ: ಹರಿಪ್ರಸಾದ್ ಮನೋಲಿಮಾರ್ ಕೊಂಡಾಡಿ,  82 ನೇ ಕುದಿ  ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಎಂಬಾತನು ತೂರಾಡಿಕೊಂಡಿದ್ದು ಆತನು ಯಾವುದೋ ನಿಷೇಧಿತ ಮಾಧಕ  ವಸ್ತು ಸೇವಿಸಿರುವ ಸಂಶಯದ ಮೇಲೆ  ವಶಕ್ಕೆ ಪಡೆದು,  ಫೊರೆನ್ಸಿಕ್‌  ಮೆಡಿಸಿನ್‌  ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ , ಈ ದಿನ ವೈದ್ಯರು ಆಪಾದಿತನು ನಿಷೇಧಿತ ಗಾಂಜಾ (Marijuana)ಎಂಬ ಮಾದಕ ವಸ್ತುವನ್ನು ಸೇವಿಸಿರುವುದಾಗಿ ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾದ 03/2023 ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ವಿರೇಶ್‌.ಎನ್‌ (26) ತಂದೆ: ನರಸಿಂಹ  ವಾಸ: ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಇಂದಿರಾನಗರ, 76-ಬಡಗುಬೆಟ್ಟು ಗ್ರಾಮ, ಉಡುಪಿ ಇವರು ಉಡುಪಿ ತಾಲೂಕು ಇಂದಿರಾ ನಗರದಲ್ಲಿರುವ ಮೆಟ್ರಿಕ್‌ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಡುಗೆ ಮಾಡುವ ಕೆಲಸ ಮಾಡಿಕೊಂಡಿದ್ದು, ಸದರಿ ಹಾಸ್ಟೆಲ್‌ ನಲ್ಲಿ 125 ಜನ ಬಾಲಕರಿದ್ದು, ತೆಂಕನಿಡಿಯೂರು ಸರ್ಕಾರಿ ಪದವಿ ಕಾಲೇಜಿನಲ್ಲಿ ಅಂತಿಮ ಬಿಎ ವಿದ್ಯಾಭ್ಯಾಸ ಮಾಡುತಿದ್ದ ಶಿವಮೊಗ್ಗ ಜಿಲ್ಲೆಯ ಸಿಗಂದೂರಿನ ಭರತ್‌ ಎಂಬಾತನೂ ಸಹ ವಾಸ್ತವ್ಯ ಹೊಂದಿರುತ್ತಾನೆ. ದಿನಾಂಕ 06/02/2023 ರಂದು 22:25 ಗಂಟೆಗೆ 8 ರಿಂದ 10 ಜನ ಹುಡುಗರು ಹಾಸ್ಟೆಲ್‌ ಕಾವಲುಗಾರರನ್ನು ದೂಡಿಕೊಂಡು ಹಾಸ್ಟೆಲ್‌ ಒಳಗೆ ಅಕ್ರಮ ಪ್ರವೇಶ ಮಾಡಿ, ವರಾಂಡದಲ್ಲಿ ಓದುತ್ತಿದ್ದ ಭರತ್‌ ನನ್ನು ಹಿಡಿದು ಏಳೆದಾಡಿ ಆತನ ಬಟ್ಟೆಯನ್ನು ಹರಿದು, ಆತನು ತಪ್ಪಿಸಿಕೊಂಡು ರೂಮ್‌ ಒಳಗೆ ಹೋದಾಗ ಎಲ್ಲರೂ ಆತನನ್ನು ಹೊರಗೆ ಎಳೆದು ಕೈಯಿಂದ ಹಲ್ಲೆ ಮಾಡಿದ್ದು, ಅದರಲ್ಲಿ ಓರ್ವ ತನ್ನ ಕೈಯಲ್ಲಿದ್ದ ಖಡಗವನ್ನು ಹಿಡಿದು ಭರತನ ಹಣೆಗೆ, ಮುಖಕ್ಕೆ, ಎದೆಗೆ ಕೈಗೆ, ಬೆನ್ನಿಗೆ ತಲೆಗೆ ಹೊಡೆದು ಎಲ್ಲರೂ ಸೇರಿ ಕೆಳಗೆ ಹಾಕಿ ತುಳಿದು, ʼಬೋಳಿಮಗನೇ ಕೀಳು ಜಾತಿಯಲ್ಲಿ ಹುಟ್ಟಿದ ನಿನಗೆ ಎಷ್ಟು ಅಹಂಕಾರ, ಹೊಲೆಯ, ಎಂದು ಬೈಯುತ್ತಾ ತಲೆಯನ್ನು ಗೋಡೆಗೆ ಜಜ್ಜಿ, ಹೊಟ್ಟೆ ಹಾಗೂ ಮರ್ಮಾಂಗಕ್ಕೆ ಒದ್ದು, ʼಇನ್ನು ಮೇಲೆ ನೀನು ಓದಬಾರದು, ಉಡುಪಿಯಲ್ಲಿ ಇರಬಾರದು, ನೀನು ಉಡುಪಿಯಿಂದ ಹೊರಗೆ ಹೋಗಿ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿರುತ್ತಾರೆ. ತಡೆಯಲು ಹೋದ ವಿರೇಶ್‌ ಎನ್‌ ರವರನ್ನು ದೂಡಿ, ನೀನು ಪೊಲೀಸ್‌ಗೆ ಕಂಪ್ಲೇಂಟ್‌ ಕೊಟ್ಟರೆ, ಬೇಲ್‌ ತೆಗೆದುಕೊಂಡು ಹೊರಬಂದು ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  20/2023 ಕಲಂ:  143, 147, 447, 324, 323, 504, 506 Rw 149  IPC & 3(1)(r), 3(1)(s), 3(2)(v-a) SC-ST ACT-1989 ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾಧ ರಂಜಿತ್‌ ಪಿಂಟೋ (43) ತಂದೆ: ಜಯಕುಮಾರ್‌ ವಾಸ: ಕೋಟೆ ರಸ್ತೆ, ಕಲ್ಯಾಣ್‌ಪುರ, ಸಂತೆಕಟ್ಟೆ, ಉಡುಪಿ ಇವರಿಗೆ ಆಪಾದಿತ ಕೃಷ್ಣ ಮತ್ತು ರಮೇಶ್ ಎಂಬವರು ಸಮಾನ ಉದ್ದೇಶದಿಂದ ಸೇರಿಕೊಂಡು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಅಂಬಾಗಿಲು ಚಾಲುಕ್ಯ ಬಾರ್‌ಬಳಿ ದಿನಾಂಕ 07/02/2023 ರಂದು ಬೆಳಿಗ್ಗೆ 11:45 ಗಂಟೆಗೆ ಅವಾಚ್ಯ ಶಬ್ದಗಳಿಂದ ಬೈದು, ಸೋಡಾ ಬಾಟಲಿಯಿಂದ ಪಿರ್ಯಾದುದಾರರ ಎಡತಲೆಗೆ ಹೊಡೆದು ರಕ್ತಗಾಯಗೊಳಿರುವುದಾಗಿದೆ ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  21/2023 ಕಲಂ: 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-02-2023 10:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080