ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಬ್ರಹ್ಮಾವರ: ನೋರಿನ್ ಬಾರ್ನೆಸ್ (53 ವರ್ಷ) ಗಂಡ: ವಿಲ್ಪ್ರೇಡ್ ಬಾರ್ನೆಸ್ ವಾಸ: ವೆಲಂಕಣಿ ಕೊಟೇಜ್‌, ಬಬ್ಬು ಸ್ವಾಮಿ ದೇವಸ್ಥಾನದ ಹತ್ತಿರ, ಬಿ.ಸಿ ರೋಡ್ ಬೈಕಾಡಿ ಗ್ರಾಮ ಇವರ ತಮ್ಮನಾದ ತಿನ್‌ಡಾಮಿನಿಕ್‌ಫೆರ್ನಾಂಡೀಸ್‌(47 ವರ್ಷ) ಎಂಬವರು ಈ ಹಿಂದೆ ಅವರ ತಾಯಿ ಮನೆಯಾದ ತೆಂಕನಿಡಿಯೂರು ಗ್ರಾಮದ ತೊಟ್ಟಂನಲ್ಲಿ ವಾಸವಾಗಿರುವುದಾಗಿದ್ದು, ಪ್ರಸ್ತುತ ಒಂದು ವರ್ಷದಿಂದ ಫಿರ್ಯಾದಿದಾರರ ಮನೆಯಲ್ಲಿ ವಾಸವಾಗಿರುತ್ತಾರೆ. ಅವರು ಅವಿವಾಹಿತರಾಗಿದ್ದು, ಮೊದಲು ದುಬಾಯಿಯಲ್ಲಿ ಉದ್ಯೋಗದಲ್ಲಿದ್ದು, ಕೊರೋನಾ ಬಂದ ಸಮಯದಿಂದ ಕೆಲಸ ಕಳೆದುಕೊಂಡು ಊರಿಗೆ ಬಂದಿರುತ್ತಾರೆ. ಇದರಿಂದ ಅವರು ತುಂಬಾ ಬೇಸರಗೊಂಡು ವಿಪರೀತ ಶರಾಬು ಕುಡಿಯುವ ಚಟ ಹೊಂದಿರುತ್ತಾರೆ.  ಅವರು ದಿನಾಂಕ 07.02.2023 ರಂದು ಮಧ್ಯಾಹ್ನ 12:00 ಗಂಟೆಗೆ ಫಿರ್ಯಾದಿದಾರರ ಮನೆಯಿಂದ ಹೊರಗೆ ಹೋದವರು ಇದೂವರೆಗೂ ಮನೆಗೆ ಬಾರದೆ, ಎಲ್ಲಿಯೂ ಪತ್ತೆಯಾಗದೆ ಕಾಣೆಯಾಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ 16/2023: ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾಧಿ: ಕೃಷ್ಣ ಖಾರ್ವಿ ಪ್ರಾಯ: 56 ವರ್ಷ ತಂದೆ: ದಿ. ಬುದ್ದು ಖಾರ್ವಿ ವಾಸ: ಬಹಾದ್ದೂರ್‌ ಷಹಾ ರಸ್ತೆ, ಕಸಬಾ ಗ್ರಾಮ ಇವರ ಹೆಂಡತಿಯ ತಮ್ಮನಾದ ವಿಜಯ್‌ ಇವರು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 08/02/2023 ರಂದು ಸುಮಾರು ಮಧ್ಯರಾತ್ರಿ  01:00 ಗಂಟೆಗೆ ನಸುಕಿನ ವೇಳೆ ಕುಂದಾಪುರ  ಪಂಚಗಂಗಾವಳಿ ಹೊಳೆಗೆ ಮೀನುಗಾರಿಕೆಗೆ ದೋಣಿಯಲ್ಲಿ  ಹೋದವರು ದಿನಾಂಕ 08/02/2023 ರಂದು ಬೆಳಿಗ್ಗೆ 07:45 ಗಂಟೆ ಸಮಯಕ್ಕೆ ನೋಡುವಾಗ ವಿಜಯ್‌ ರವರು ನೀರಿನಲ್ಲಿ  ಮಗುಚಿ ಕೆಸರಿನಲ್ಲಿದ್ದು ರಾತ್ರಿ ವೇಳೆ  ಮೀನುಗಾರಿಕೆ ನಡೆಸುವ ಸಂದರ್ಭದಲ್ಲಿ ತೆರೆ ಅಪ್ಪಳಿಸಿ ನದಿಯ ನೀರಿಗೆ ಆಕಸ್ಮಿಕವಾಗಿ ಬಿದ್ದು ಉಸಿರು ಕಟ್ಟಿ ಮೃತ ಪಟ್ಟಿರಬಹುದು ಅಲ್ಲದೆ ಈ ಮರಣದ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ  ಯುಡಿಆರ್‌ ನಂ  07/2023 ಕಲಂ: 174  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಪಿರ್ಯಾದಿ: ರಾಜು ಮರಾಠಿ ಪ್ರಾಯ: 42 ವರ್ಷ  ತಂದೆ:ಕೃಷ್ಣ ಮರಾಠಿ ವಾಸ: ಕೋಡಿಯಾಲ್ ಕೇರಿ ಮೇಲ್ ಮನೆ ಗೋಳಿಹೊಳೆ ಗ್ರಾಮ ಇವರು  ಗೋಳಿಹೊಳೆ ಗ್ರಾಮದ ಕೋಡಿಯಾಲ್ ಕೇರಿ ಮೆಲ್ಮನೆ ಎಂಬಲ್ಲಿ ತಾಯಿ ಹಾಗೂ  ತಮ್ಮೊಂದಿರೊಂದಿಗೆ  ವಾಸಮಾಡಿಕೊಂಡು ಮೀನು ವ್ಯಾಪಾರ ಮಾಡಿಕೊಂಡಿದ್ದು ಮನೆಯಲ್ಲಿರುವ ಕೃಷಿ ತೋಟದ ಕೆಲಸವನ್ನು  ತಮ್ಮನಾದ ಚಂದ್ರರವರು ಮಾಡಿಕೊಂಡಿರುತ್ತಾರೆ.  ದಿನಾಂಕ 07/02/2023 ರಂದು  ಚಂದ್ರ (38 ವರ್ಷ) ಈತನು ಸಂಜೆ 5:00 ಗಂಟೆಗೆ ಮನೆಯ ತೋಟದಲ್ಲಿರುವ ತೆಂಗಿನ ಮರದಲ್ಲಿರುವ  ತೆಂಗಿನ ಕಾಯಿಯನ್ನು  ಕೀಳಲು  ಮರವನ್ನು ಹತ್ತಿದ್ದು  ತಮ್ಮ ಚಂದ್ರ ರವರು  ಮರದಿಂದ ತೆಂಗಿನ ಕಾಯಿಯನ್ನು ಕೀಳುವ ಸಮಯ ಆಕಸ್ಮಿಕವಾಗಿ ಕಾಲಿನ ಆಯತಪ್ಪಿ  ಜಾರಿ ಮರದ ಮೇಲಿನಿಂದ ಕೆಳಗೆ ಬಿದ್ದವರನ್ನು ಮನೆಯವರು ಉಪಚರಿಸಿ  ಚಿಕಿತ್ಸೆ ಬಗ್ಗೆ ಬೈಂದೂರು  ಸಮುದಾಯ ಆರೋಗ್ಯ ಕೇಂದ್ರಕ್ಕೆ  ಕರೆ ತಂದಲ್ಲಿ ವೈದ್ಯರು ಪರೀಕ್ಷಿಸಿ  ಚಂದ್ರ ರವರು ಮೃತಪಟ್ಟಿರುವುದಾಗಿ ರಾತ್ರಿ 8:00 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಆರ್  07/2023 ಕಲಂ 174 ಸಿ ಆರ್ ಪಿ ಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-02-2023 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080