ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 07/02/2022 ರಂದು ಪಿರ್ಯಾದಿದಾರರಾಧ ಚಂದ್ರ ಶೇಖರ ಸಾಲ್ಯಾನ್‌ (45), ತಂದೆ: ದಿ, ಮುತ್ತ ಮರಕಾಲ, ವಾಸ: ತಲಬ, ಗುಡ್ಡೆಅಂಗಡಿ, ಹಲುವಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು KA-20-EP-1485 ನೇ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಚೇರ್ಕಾಡಿ ಕ್ರಾಸ್‌ ಬಳಿ ಇರುವ ಜೆ.ಆರ್‌.ಜೆ ಫ್ಯಾಕ್ಟರಿಗೆ ರಾತ್ರಿ ಪಾಳಿ ಕೆಲಸಕ್ಕೆ ಹೊರಟು ಹಲುವಳ್ಳಿ ಪೇತ್ರಿ ಮಾರ್ಗವಾಗಿ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 6:45 ಗಂಟೆಗೆ ಹಲುವಳ್ಳಿ ಗ್ರಾಮದ ಬಡಾಬೆಟ್ಟು ಎಂಬಲ್ಲಿ ತಲುಪುವಾಗ ಅವರ ಎದುರಿನಿಂದ ಅಂದರೆ ಪೇತ್ರಿ ಕಡೆಯಿಂದ ಹಲುವಳ್ಳಿ ಕಡೆಗೆ ಆರೋಪಿ ತನ್ನ KA-15 N-6069 ನೇ ನೆಕ್ಸಾನ್‌ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಚಂದ್ರ ಶೇಖರ ಸಾಲ್ಯಾನ್‌ ಇವರ ಮೋಟಾರ್‌ ಸೈಕಲ್‌ಗೆ ಢಿಕ್ಕಿ ಹೊಡೆದಿರುದಾಗಿದೆ. ಸದ್ರಿ ಅಫಘಾತದ ಪರಿಣಾಮ ಇವರು ಮೋಟಾರ್‌ ಸೈಕಲ್‌ ಸಮೇತ  ರಸ್ತೆಗೆ ಬಿದ್ದು ಅವರ ಬಲಕೈ ಮಣಿಗಂಟಿಗೆ ಮತ್ತು ಎಡಕೈಗೆ ತೀವೃ ತರಹದ ಒಳ ಜಖಂ ಆಗಿ ರಕ್ತಗಾಯವಾಗಿದ್ದು ಹಾಗೂ ಬಲಕಾಲಿನ ಮೊಣಗಂಟಿಗೆ ಗುದ್ದಿದ ನೋವು, ಮುಖಕ್ಕೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಚಂದ್ರ ಶೇಖರ ಸಾಲ್ಯಾನ್‌ ರವರನ್ನು ಚಿಕಿತ್ಸೆಗಾಗಿ ಮಹೇಶ್‌ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಲೀಲಾವತಿ (58) ಅಧೀಕ್ಷಕರು, ರಾಜ್ಯ ಮಹಿಳಾ ನಿಲಯ, ನಿಟ್ಟೂರು, ಉಡುಪಿ ಇವರ ರಾಜ್ಯ ಮಹಿಳಾ ನಿಲಯದ ಅಧೀಕ್ಷಕರಾಗಿದ್ದು, ಕಾಣೆಯಾದ ನಳಿನಿ ದೇವಾಡಿಗ ಎಂಬುವರು ಸ್ತ್ರೀಸೇವಾ ನಿಕೇತನದಲ್ಲಿ 05 ದಿನಗಳ ಹಿಂದೆ ದಾಖಲಾಗಿದ್ದು, ದಿನಾಂಕ 07/02/2022 ರಂದು ಸಮಯ ಮುಂಜಾನೆ 10:00 ಗಂಟೆಗೆ ಆರೋಗ್ಯ ತಪಾಸಣೆ ಮಾಡುವರೇ ಉಡುಪಿ ಜಿಲ್ಲಾ ಆಸ್ಪತ್ರೆಗೆ ಸ್ತ್ರೀಸೇವಾ ನಿಕೇತನದ ಮಹಿಳಾ ರಕ್ಷಕಿ ಶ್ರೀಮತಿ ವೀಣಾ ಎಂಬುವರು ಕರೆದುಕೊಂಡು ಹೋಗಿದ್ದು, ಸಮಯ ಸುಮಾರು 12:15 ಗಂಟೆಗೆ ವೀಣಾರವರ ಕಣ್ಣು ತಪ್ಪಿಸಿ ಉಡುಪಿ ಜಿಲ್ಲಾಸ್ಪತ್ರೆಯಿಂದ ನಾಪತ್ತೆಯಾಗಿರುತ್ತಾರೆ. ಕಾಣೆಯಾದ ನಳಿನಿ ದೇವಾಡಿಗರವರು ಮೂಕಿ ಆಗಿರುತ್ತಾರೆ. ಕಾಣೆಯಾದ ನಳಿನಿ ದೇವಾಡಿಗರವರನ್ನು ಜಿಲ್ಲಾ ಆಸ್ಪತ್ರೆ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022  ಕಲಂ: ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ರೂಪಲತಾ, (38) ಗಂಡ: ಕಿರಣ್ ಕುಮಾರ್, ವಾಸ: ಅಯ್ಯಪ್ಪ ನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ಎಂಬವರು ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು ಇವರ ಅತ್ತೆ ಜಾನಕಿ, ಮಾವ ದಾಮೋದರ, ಗಂಡನ ಅಕ್ಕ ಮಂಜಳಾ ಮತ್ತು ಮಂಜುಳಾಳ ಗಂಡ ಆರ್ಮುಗಂ ಎಂಬವರು ಸಹಾ ವಾಸವಾಗಿರುತ್ತಾರೆ. ದಿನಾಂಕ 07/02/2022 ರಂದು ಬೆಳಿಗ್ಗೆ 07:30 ಗಂಟೆಗೆ ರೂಪಲತಾ ರವರು ಮನೆಯೊಳಗೆ ನೆಲವನ್ನು ಒರೆಸಿ ನೀರು ಚೆಲ್ಲಲು ಮನೆಯ ಹೊರಗೆ ಅಂಗಳಕ್ಕೆ  ಹೋದಾಗ ಅಪಾದಿತೆಯಾದ  ಫಿರ್ಯಾದುದಾರರ ಗಂಡನ ಅಕ್ಕ ಮಂಜುಳ ಒಂದು ಅಲ್ಯೂಮಿನಿಯಂ ಪಾತ್ರೆಯಲ್ಲಿ ತಯಾರು ಮಾಡಿ ಇಟ್ಟಿದ್ದ ಸೆಗಣಿ ನೀರನ್ನು ತಂದು ರೂಪಲತಾ ರವರ ತಲೆಯ ಮೇಲೆ ಸುರಿದು ಅದೇ ಪಾತ್ರೆಯಿಂದ ತಲೆಗೆ ಹೊಡೆದ ಪರಿಣಾಮ ತಲೆಗೆ ಒಳಜಖಂ ಆಗಿದ್ದು ಯಾಕೆ ಹೊಡೆಯುತ್ತೀ ಎಂದು ಕೇಳಿದಾಗ ಹಾಗೆಯೇ ಹೊಡೆದು ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಲ್ಲದೇ ಅಪಾದಿತೆಯ ಗಂಡ ಆರ್ಮುಗಂ  ಫಿರ್ಯಾದುದಾರರನ್ನುದ್ದೇಶಿಸಿ ಎಂದು ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ, ಅಪಾದಿತೆ ಮಂಜುಳಾ ರೂಪಲತಾ ಇವರನ್ನು ದೂಡಿ ಬೀಳಿಸಿದ್ದು ಇದರ ಪರಿಣಾಮ ಕೈಗಳಿಗೆ ತರಚಿದ ಗಾಯವಾಗಿದ್ದು, ರೂಪಲತಾ ರವರು ಮನೆಬಿಟ್ಟು ಹೋಗಬೇಕೆಂಬ ಉದ್ದೇಶದಿಂದ ಅಪಾದಿತರು ಹಲ್ಲೆ ಮಾಡಿದ್ದಾಗಿರುತ್ತದೆ ಇವರು ಘಟನೆಯಿಂದ ಗಾಯಗೊಂಡವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 24/2022 ಕಲಂ: 323,324,504,506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಜಾನಕಿ, (65) ಗಂಡ ಕೆ. ದಾಮೋದರ, ವಾಸ ಅಯ್ಯಪ್ಪ ನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ಎಂಬವರು ದಿನಾಂಕ 07/02/2022 ರಂದು ಬೆಳಿಗ್ಗೆ 07:30 ಗಂಟೆಗೆ ಇವರ ಮನೆಯಲ್ಲಿ ತುಳಸಿಕಟ್ಟೆಗೆ ಕೈ ಮುಗಿಯುತ್ತಿದ್ದಾಗ ಇವರ ಸೊಸೆ ರೂಪಲತಾ ಮನೆ ತೊಳೆದ ನೀರು ತಂದು ಶ್ರೀಮತಿ ಜಾನಕಿ ರವರ ಮೇಲೆ ಮತ್ತು ತುಳಸಿಕಟ್ಟೆಯ ಮೇಲೆ ಸುರಿದಾಗ ಶ್ರೀಮತಿ ಜಾನಕಿ ಇವರ ಮಗ ಕಿರಣ್ ಕುಮಾರ್‌ನನ್ನು ಕರೆದು ಬೈದಾಗ ಆತನು ಪಿಕಾಸಿ ಹಿಡಿದುಕೊಂಡು ಬಂದು ತುಳಸಿಕಟ್ಟೆಯನ್ನು  ಒಡೆದು ಹಾಕುತ್ತೇನೆಂದು ಬಂದಾಗ ತಡೆಯಲು ಹೋದ ಶ್ರೀಮತಿ ಜಾನಕಿ ರವರನ್ನು ತಳ್ಳಿ  ಅಪಾದಿತರಾದ   ಕಿರಣ್ ಕುಮಾರ್ ಮತ್ತು  ರೂಪಲತಾ ಕೊಡಪಾನದಿಂದ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಕಿರಣ್ ಕುಮಾರ್‌ನು ಪಿಕಾಸಿಯಿಂದ ಮನೆಯ ಗೋಡೆ ಮತ್ತು ಕನ್ನಡಿಗಳನ್ನು ಒಡೆದು ಅಂದಾಜು ರೂಪಾಯಿ 6000/ ನಷ್ಟವುಂಟುಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 25/2022 ಕಲಂ: 324,504,427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಬಿ. ನಾಗೇಶ, (54) ತಂದೆ: ಸುಬ್ರಾಯ ಶೇರಿಗಾರ, ಅನನ್ಯ ನಿಲಯ, ನಾಣಿಬೆಟ್ಟು, ತಲ್ಲೂರು ಗ್ರಾಮ, ಕುಂದಾಪುರ ಇವರಿಗೆ ಹಾಗೂ ಆಪಾದಿತರಾದ 1) ಚಂದ್ರ ದೇವಾಡಿಗ, (45) ತಂದೆ: ಅನಂತ ದೇವಾಡಿಗ, ನಾಣಿಬೆಟ್ಟು, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು. 2) ಬೇಬಿ (42) ಗಂಡ: ಚಂದ್ರ ದೇವಾಡಿಗ, ವಾಸ; ನಾಣಿಬೆಟ್ಟು, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು. 3) ಬಾಬಕ್ಕ (65) ಗಂಡ: ಅನಂತ ದೇವಾಡಿಗ, ನಾಣಿಬೆಟ್ಟು, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು ಇವರಿಗೆ ದಾರಿ ವೈಷಮ್ಯವಿದ್ದು ಬಿ. ನಾಗೇಶ ರವರಿಗೆ ಸೇರಿದ ತಲ್ಲೂರು ಗ್ರಾಮದ ಸರ್ವೇ ನಂ 83/ಪಿ2-ಪಿ1  ರಲ್ಲಿನ 0.09.50 ಎಕ್ರೆ ಸ್ಥಿರಾಸ್ಥಿಯಲ್ಲಿನ ಜಾಗದಲ್ಲಿ ಕೆಂಪುಕಲ್ಲಿನ  ಕಂಪೌಂಡ್ ಗೋಡೆ ಇದ್ದು ದಿನಾಂಕ 23/11-2021 ರಂದು 20:30 ಗಂಟೆಗೆ  ಆಪಾದಿತರು ಸಮಾನ ಉದ್ದೇಶದಿಂದ ಬಿ. ನಾಗೇಶ ರವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಹಾರೆ ಪಿಕಾಸು ಮುಖಾಂತರ ಪಾಗರದ ಕೆಂಪುಕಲ್ಲನ್ನು ಕಿತ್ತು ಪಾಗರ ನಾಶಪಡಿಸಿದ್ದು ಸದ್ರಿ ವಿಚಾರವನ್ನು ಪ್ರಶ್ನಿಸಿದ ಬಿ. ನಾಗೇಶ ರವರು ಹಾಗೂ ಇವರ ಪತ್ನಿಗೆ ಆಪಾದಿತರುಗಳು ಅವಾಚ್ಯವಾಗಿ ಬೈದು ಕೈಯಿಂದ ದೂಡಿ ಜಾಗದ ವಿಚಾರದಲ್ಲಿ ಕೋರ್ಟಿಗೆ ಹೋಗಿದ್ದೀಯಾ ನಿನ್ನನ್ನು ಹಾಗೂ ನಿನ್ನ ಹೆಂಡತಿಯನ್ನು ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಆಪಾದಿತರ ಕೃತ್ಯದಿಂದಾಗಿ ಬಿ. ನಾಗೇಶ ರವರಿಗೆ 75000/- ರೂಪಾಯಿ ನಷ್ಟ ಉಂಟಾಗಿರುವುದಾಗಿದೆ. ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 15/2022 ಕಲಂ: 447, 448, 323, 354, 506(2) 427 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-02-2022 09:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080