ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 06/02/2021 ರಂದು ಮದ್ಯಾಹ್ನ 2:15 ಗಂಟೆಗೆ, ಕುಂದಾಪುರ  ತಾಲೂಕಿನ,  ಹೆಮ್ಮಾಡಿ  ಗ್ರಾಮದ, ಸುಲ್ಸೆ ಕ್ರಾಸ ಬಳಿ ತಿರುವಿನ ಡಾಮರು ರಸ್ತೆಯಲ್ಲಿ ಆಪಾದಿತ ಸುಖೇಶ ಎಂಬುವವರು KA-53-HF-0373 ನೇ ಬೈಕ್ ನಲ್ಲಿ ಮೊಹಮ್ಮದ ರಫೀ ಎಂಬುವವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಹೆಮ್ಮಾಡಿ ಕಡೆಯಿಂದ ಆಲೂರಿನ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಸುಲ್ಸೆ ಕ್ರಾಸ್ ಬಳಿ ತಿರುವಿನ ಡಾಮರು ರಸ್ತೆಯಲ್ಲಿ ಬೈಕ್ ಸ್ಕಿಡ್‌‌‌  ಆಗಿ ವಾಹನ  ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರಾದ ಮೊಹಮ್ಮದ ರಫೀ (26), ತಂದೆ;ಮಾಬು ಸಾಬ್, ವಾಸ: ಬನ್ನಿಕೊಪ್ಪ ಗ್ರಾಮ,ಈಶ್ವರ ದೇವಸ್ಥಾನದ ಹತ್ತಿರ ಬನ್ನಿಕೊಪ್ಪ, ಶಿರಹಟ್ಟಿ ತಾಲುಕು ಗದಗ ಜಿಲ್ಲೆ ಇವರ ತಲೆಗೆ ಎಡ ಕಣ್ಣಿನ ಹತ್ತಿರ ಹಾಗೂ ಮೇಲ್‌ ತುಟಿಗೆ ಗಾಯ ಹಾಗೂ ಸುಖೇಶ ರವರಿಗೆ ಎಡ ಕಾಲಿಗೆ ಒಳ ಜಖಂ ಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ದಿನಾಂಕ 07/02/2021 ರಂದು  15:55 ಗಂಟೆಗೆ ನಂದಿಕೂರಿನ ಯೂನಿಯನ್ ಬ್ಯಾಂಕ್ ನ ಎದುರು ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿ 01 ರ ಪಕ್ಕದಲ್ಲಿ ಮಣ್ಣು ರಸ್ತೆಯ ಮೇಲೆ ನಿಲ್ಲಿಸಿದ್ದ  KA-17-A 9369 ನೇ ಟಿಪ್ಪರ್ ಲಾರಿಗೆ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ MH-46-BF-2552 ನೇ ಕ್ಯಾಂಟರ್ ಲಾರಿ ಚಾಲಕ ರಾಮ್ ಜೀ ಎಂಬುವವರು ಕ್ಯಾಂಟರ್ ಲಾರಿಯನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯ ವಾಗಿ ಚಲಾಯಿಸಿಕೊಂಡು ಬಂದು KA-17-A 9369 ನೇ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್  ಲಾರಿ ಕ್ಯಾಂಟರ್ ಗೆ ಸಿಲುಕಿ ಮುಂದಕ್ಕೆ ಚಲಿಸಿದ KA-17-A 9369 ನೇ ಟಿಪ್ಪರ್ ಲಾರಿಯು ಬಲಕ್ಕೆ ಬಾಗಶ: ವಾಲಿ KA-17-A -9099 ಟಿಪ್ಪರ್ ಲಾರಿಯ ಮೇಲೆ ಬಿದ್ದ ಪರಿಣಾಮ ಎರಡು ಟಿಪ್ಪರ್ ಲಾರಿಗಳು ಹಾಗೂ ಡಿಕ್ಕಿ ಹೊಡೆದ ಕಂಟೈನರ್ ಜಖಂ ಗೊಂಡಿರುವುದಲ್ಲದೇ ಕಂಟೈನರ್ ನಲ್ಲಿದ್ದ ಪ್ಯ್ಲಾಸ್ಟಿಕ್ ಬ್ಯಾಗ್ ಗಳು ಜಖಂ ಗೊಂಡಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 11/2021 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ಗಣೇಶ ನಾಯ್ಕ (29), ತಂದೆ: ಪುರುಷ ನಾಯ್ಕ , ವಾಸ: ಸ್ಪಂದನಾ, ಬಿಯಾಳಿ ಹೊಳೆ ಜೆಡ್ಡು , 34ನೇ ಕುದಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಪುರುಷ ನಾಯ್ಕ (61) ಎಂಬುವವರು ದಿನಾಂಕ 05/02/2021 ರಂದು ಸಂಜೆ 6:00 ಗಂಟೆಗೆ ಮನೆಯಿಂದ  ಲುಂಗಿಯನ್ನು ಉಟ್ಟುಕೊಂಡು ಬರಿ ಮೈಯಲ್ಲಿ ಮನೆಯಿಂದ ಹೋದವರು ರಾತ್ರಿ  8:00 ಗಂಟೆಯಾದರೂ ಮನೆಗೆ ಬಾರದೇ ಇರುವುದರಿಂದ ಪಿರ್ಯಾದಿದಾರರ ಮನೆಯಿಂದ ಸ್ವಲ್ಪ ದೂರದಲ್ಲಿ ಆಚಾರಡಿ ಎಂಬಲ್ಲಿರುವ ಪಿರ್ಯಾದಿದಾರರ  ದೊಡ್ಡಕ್ಕ ಜ್ಯೋತಿ ರವರಿಗೆ ಪೋನ್‌ ಮಾಡಿ ವಿಚಾರಿಸಿದಾಗ ಪಿರ್ಯಾದಿದಾರರ ತಂದೆ  ಸಂಜೆ 6:15 ಗಂಟೆಗೆ ಅವರ ಮನೆಗೆ ಹೋಗಿ  ಸಾದು ಶೆಟ್ಟಿಯವರಿಗೆ 500 ರೂಪಾಯಿ ಸಾಲ ಕೊಡಬೇಕು ಎಂದು 500 ರೂಪಾಯಿ ಪಡೆದುಕೊಂಡು ಸಾದು ಶೆಟ್ಟಿಯವರ ಮನೆ ಕಡೆಗೆ ಹೋಗಿರುವುದಾಗಿ ಹೇಳಿದ್ದು ನಂತರ ಅಲ್ಲಿಗೆ ಹೋಗಿ ವಿಚಾರಿಸಿದ್ದಲ್ಲಿ ಪಿರ್ಯಾದಿದಾರರ  ತಂದೆ ಸಂಜೆ 6:30 ಗಂಟೆಗೆ ಸಾದು ಶೆಟ್ಟಿಯವರ ಮನೆಗೆ ಹೋಗಿ  500 ರೂಪಾಯಿಯನ್ನು ಕೊಟ್ಟು ಮನೆ ಕಡೆಗೆ ಹೋಗಿರುವುದಾಗಿ ಸಾಧು ಶೆಟ್ಟಿಯವರು ತಿಳಿಸಿದ್ದು, ಪಿರ್ಯಾದಿದಾರರ ತಂದೆಯವರು ಮನೆಗೆ  ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಗಂಗೊಳ್ಳಿ:  ಪಿರ್ಯಾದಿದಾರರಾದ ಸಂಗೀತಾ (46), ಗಂಡ: ರಮೇಶ, ವಾಸ: ಹೊಸಮನೆ, ನಾಯಕವಾಡಿ ಗುಜ್ಜಾಡಿ ಗ್ರಾಮ, ಕುಂದಾಪುರ ತಾಲೂಕು ಇವರ ಮಗ ಸಚಿನ್ (24) ರವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, 2020 ನೇ ಏಪ್ರಿಲ್  ನಿಂದ ಊರಿಗೆ  ಬಂದು “ Work from home “  ಕೆಲಸ ಮಾಡಿಕೊಂಡಿದ್ದವರು.  ಸಂಬಳ ಸಾಕಾಗದೇ ಇತ್ತೀಚೆಗೆ ತುಂಬಾ ಬೇಸರದಲ್ಲಿ ಇದ್ದು ಕೆಲವು ಬ್ಯಾಂಕ್  ಗಳಲ್ಲಿ  ಹಾಗೂ ಕೆಲವರಲ್ಲಿ ಕೈ ಸಾಲ ಮಾಡಿಕೊಂಡಿದ್ದು ಸಾಲ ತೀರಿಸಲಾಗದೇ ಮಾನಸಿಕವಾಗಿ  ನೊಂದುಕೊಂಡಿದ್ದು ಸಾಲದ ಸಮಸ್ಯೆಯಿಂದ ಬೇಸರಗೊಂಡು " ನನ್ನ ಸಾವಿಗೆ  ನಾನೇ ಕಾರಣ ‘’ ಎಂದು ಡೆತ್ ನೋಟ್ ಬರೆದಿಟ್ಟು  ದಿನಾಂಕ 06/02/2021  ರಂದು  ಸಾಯಂಕಾಲ  6:00  ಗಂಟೆಯಿಂದ  ದಿನಾಂಕ  07/02/2021 ರಂದು ಬೆಳಿಗ್ಗೆ 7:00  ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಸಮೀಪ ಗಣಪತಿ ಮೇಸ್ತ ಎಂಬುವವರ ತೋಟದ ಬಾವಿಗೆ ಹಾರಿ ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 07/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ದೀಪಾ (40), ಗಂಡ: ಸಂತೋಷ ನಾಯಕ್, ವಾಸ: ಗೋಪಲಾಡಿ ರೋಡ್, ಶಶಿಕಂಪೌಂಡ್ ಅಂಕದಕಟ್ಟೆ  ಕೋಟೇಶ್ವರ ಗ್ರಾಮ ಕುಂದಾಪುರ ತಾಲೂಕು ಇವರು  ಕುಂದಾಪುರದ  ಬಿಬಿ ಹೆಗ್ಡೆ ಕಾಲೇಜಿನ ಹಿಂದಿ ಉಪನ್ಯಾಸಕಿ ಆಗಿ ಕರ್ತವ್ಯ ಮಾಡಿಕೊಂಡಿದ್ದು  ತನ್ನ ಅಗತ್ಯಕ್ಕೆಂದು  ಪಿ.ಎಫ್‌ ಹಣ ನಗದು 48,000/- ಕ್ಲೈಮ್ ಮಾಡಿಸಿಕೊಂಡು ತನ್ನ ಕೆನರಾ ಬ್ಯಾಂಕಿನ ಖಾತೆಗೆ ಚೆಕ್ ಮೂಲಕ ಜಮಾ ಮಾಡಲು ತನ್ನ ಸಂಬಂಧಿಗೆ  ಹೇಳಿದಂತೆ ಅವರು ಕೆನರಾ  ಬ್ಯಾಂಕಿಗೆ  ಹೋಗಿ 48.000/- ರೂಪಾಯಿಯನ್ನು  ವಿತ್‌ ಡ್ರಾ ಮಾಡಿಸಿಕೊಂಡು  ಬಿಬಿ ಹೆಗ್ಡೆ ಕಾಲೇಜಿನ ಕಚೇರಿ ಸಿಬ್ಬಂದಿಯಾದ ಶರತ್ ಎಂಬುವವರ ಮುಖಾಂತರ ಪಿರ್ಯಾದಿದಾರರು ದಿನಾಂಕ 06/02/2021 ರಂದು 13:15 ಗಂಟೆಗೆ ತೆಗೆದುಕೊಂಡಿದ್ದು ನಂತರ ಪಿರ್ಯಾದಿದಾರರು ತನ್ನ  ವ್ಯಾನಿಟಿ ಬ್ಯಾಗ್‌ನಲ್ಲಿ  ಹಣವನ್ನು ಇಟ್ಟುಕೊಂಡು ಜಿಪ್  ಹಾಕಿ ನಂತರ 13:25  ಗಂಟೆಗೆ ಪ್ರವೀಣ್ ಎಂಬ  ಹೆಸರಿನ ಬಸ್ಸಿನಲ್ಲಿ ಕುಂದಾಫುರ ಶಾಸ್ತ್ರೀ ಪಾರ್ಕ್ ಗೆ 13:35 ಗಂಟೆಗೆ ಬಂದು ಇಳಿದು ಹಣವನ್ನು ಶ್ರೀ ರಾಮಕೃಷ್ಣ  ಕ್ರೆಡಿಟ್ ಕೋ ಆಪರೇಟಿವ್  ಸೊಸೈಟಿಗೆ ಚಿನ್ನದ ಸಾಲ ಕಟ್ಟಲು  ಹೋಗಿ ವ್ಯಾನಿಟಿ ಬ್ಯಾಗಿನಿಂದ ಹಣ ತೆಗೆಯಲು ಹೋದಾಗ  ಬ್ಯಾಗಿನ ಜಿಪ್ ತೆರೆದಿರುತ್ತದೆ. ಯಾರೋ ಕಳ್ಳರು ಪಿರ್ಯಾದಿದಾರರ ವ್ಯಾನಿಟಿ ಬ್ಯಾಗಿನಲ್ಲಿಟ್ಟಿದ್ದ ನಗದು 48,000/ ರೂಪಾಯಿಯನ್ನು  ಕಳವು ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 19/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಕಾರ್ಕಳ: ದಿನಾಂಕ 06/02/2021 ರಂದು ರಾತ್ರಿ 9:40 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಭುವನೇಶ್ವರಿ ನಿಲಯ ಎಂಬಲ್ಲಿ ಪಿರ್ಯಾದಿದಾರರಾದ ರಾಜೇಶ್ವರಿ (46), ಗಂಡ:ಮಂಜುನಾಥ, ವಾಸ:ಭುವನೇಶ್ವರಿ ನಿಲಯ, ಅಯ್ಯಪ್ಪನಗರ, ಕುಕ್ಕುಂದೂರು ಪೋಸ್ಟ್‌, ಕಾರ್ಕಳ ತಾಲೂಕು ಇವರ ಮನೆಯ ಅಂಗಳದಲ್ಲಿ ಇರುವಾಗ ಆರೋಪಿ 1) ಸುಬ್ರಹ್ಮಣ್ಯ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದು ಪಿರ್ಯಾದಿದಾರರಿಗೆ ಹೊಡೆದು ದೂಡಿ ಹಾಕಿದ್ದಲ್ಲದೇ ಪಿರ್ಯಾದಿದಾರರ ಮನೆಯ ಅಂಗಳದಲ್ಲಿದ್ದ ಕಾರಿನ ಎಡಭಾಗದ ಸೈಡ್‌ ಮೀರರ್ ಗ್ಲಾಸನ್ನು ಕಲ್ಲಿನಿಂದ ಹೊಡೆದು ಪುಡಿ ಮಾಡಿದ್ದಲ್ಲದೆ , ಸ್ಥಳಕ್ಕೆ ಬಂದ ಆರೋಪಿ 2) ಕೋಕಿಲ ರವರು ಪಿರ್ಯಾದಿದಾರರ ಮನೆಗೆ ಬೆಂಕಿ ಕೊಡು, ಗ್ಲಾಸ್‌ಪುಡಿ ಮಾಡುವಂತೆ ಆರೋಪಿ 1ನೇಯವರಿಗೆ ಕುಮ್ಮಕ್ಕು ನೀಡಿದ್ದರಿಂದ ಆರೋಪಿ 1ನೇಯವರು ಪಿರ್ಯಾದಿದಾರರ ಮನೆಯ ಕಿಟಕಿಯ ಗ್ಲಾಸನ್ನು ಪುಡಿ ಮಾಡಿದ್ದು ಇದರಿಂದ 10,000/- ನಷ್ಟವುಂಟಾಗಿರುತ್ತದೆ. ನಂತರ  ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈದು,  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021  ಕಲಂ: 323, 447, 354, 504, 506, 427 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಗಗನ್ (23), ತಂದೆ: ರಾಜು ಕುಂದರ್, ವಾಸ: 5 ನೇ ಕ್ರಾಸ್ ಇಂದಿರಾನಗರ ಚಿಟ್ಪಾಡಿ ಇವರು ದಿನಾಂಕ 06/02/2021 ರಂದು ಉಡುಪಿಯ ಸಿಲ್ವರ್ ಕಾಯಿನ್ ಹೋಟೆಲ್ ಗೆ ಊಟದ ಸಲುವಾಗಿ ಸ್ನೇಹಿತರಾದ ತಿಲಕ್ ಹಾಗೂ ರತನ್ ರವರೊಂದಿಗೆ ಹೋಗಿದ್ದು ಊಟ ಮುಗಿಸಿ ವಾಪಾಸು ಮನೆಗೆ ಹೋಗುವಾಗ ರಾತ್ರಿ 11:30 ಗಂಟೆಗೆ ಜಾಮೀಯ ಮಸೀದಿ ಯ ರಸ್ತೆಯಿಂದ ಹೋಗುತ್ತಿದ್ದು  ಕಾಫಿಯ ಹೋಟೆಲ್ ಬಳಿ ತಲುಪಿದಾಗ ರಸ್ತೆಯಲ್ಲಿ ಅಪರಿಚಿತ 7-8 ಜನ ನಿಂತಿದ್ದು ಅವರು ಸ್ಕೂಟಿಯನ್ನು ತಡೆದು ನಿಲ್ಲಿಸಿ ಯಾಕೆ ಜೋರಾಗಿ ಮಾತನಾಡುವುದು ಎಂದು ಹೇಳಿ ಅವರೆಲ್ಲರು ಸೇರಿ ಕೈಗಳಿಂದ ದೂಡಿದ್ದು ಅವರುಗಳ ಪೈಕಿ ಒಬ್ಬ ಯಾವುದೋ ಒಂದು ಚೂಪಾದ ಆಯುಧದಿಂದ ತಿಲಕ್ ಗೆ ತಿವಿದಿದ್ದು ಆ ಸಮಯ ಜೋರಾಗಿ ಬೊಬ್ಬೆ ಹೊಡೆದ ಕಾರಣ ಅವರುಗಳು ಅಲ್ಲಿಂದ ಓಡಿ ಹೋಗಿರುತ್ತಾರೆ. ತಿಲಕ್ ನನ್ನು ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 143,147,341,323,234 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 08-02-2021 09:56 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080