ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾಪು: ಪಿರ್ಯಾದಿ: ಹರಿಶ್ಚಂದ್ರ ಆಚಾರ್ಯ ಪ್ರಾಯ : 55 ವರ್ಷ  ತಂದೆ : ದಿ. ಅನಂತಯ್ಯ ಆಚಾರ್ಯ  ವಾಸ : ಹೊಸ ಮಾರಿಗುಡಿ ಹಿಂಭಾಗ ದೇವರ ತೋಟ, ಪಡು ಗ್ರಾಮ ಇವರು ದಿನಾಂಕ: 06/01/2023 ರಂದು 08.30 ಗಂಟೆಗೆ ಪಡು ಗ್ರಾಮದ ಕೊಪ್ಪಲಂಗಡಿಯ ಬಿಸ್ಲೇರಿ ನೀರಿನ ಫ್ಯಾಕ್ಟರಿ ಬಳಿ ರಾ ಹೆ 66 ರ ಉಡುಪಿ ಮಂಗಳೂರು ರಸ್ತೆಯನ್ನು ದಾಟಿ, ಮಂಗಳೂರು ಉಡುಪಿ ರಸ್ತೆಯನ್ನು ದಾಟುತ್ತಾ ರಸ್ತೆ ಪೂರ್ವ ಬದಿಯ ಅಂಚಿನಲ್ಲಿರುವಾಗ, ಅದೇ ರಸ್ತೆಯಲ್ಲಿ ಅನಿಲ ರವರು ತನ್ನ ಬಾಬ್ತು ಕೆ.ಎ. 20 ಇ.ಯು. 5746 ನೇ ಸ್ಕೂಟರ್‌ನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದಿದ್ದು  ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು, ಹಾಗೂ ಸ್ಪಲ್ಪ ಮುಂದಕ್ಕೆ ಹೋಗಿ ಅನಿಲ ಸ್ಕೂಟರ್‌‌ಸಮೇತ ರಸ್ತೆಗೆ ಬಿದ್ದಿದ್ದು,  ಪಿರ್ಯಾದಿದಾರರಿಗೆ ತಲೆಗೆ, ಎಡಭುಜಕ್ಕೆ, ಎಡ ಬದಿಯ ಸೊಂಟಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು, ಅನಿಲ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಅನಿಲ ಮತ್ತು ವಿಶ್ವನಾಥ ಎಂಬವರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಇಬ್ಬರನ್ನೂ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ . ಕಾಪು ಠಾಣೆ ಅಪರಾಧ ಕ್ರಮಾಂಕ 04/2023 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ: ದಿನಾಂಕ 27.12.2022  ರಂದು 17;20 ಘಂಟೆಗೆ   ಫಿರ್ಯಾದಿ: ರಘುರಾಮ  ಶೆಟ್ಟಿ   ಪ್ರಾಯ 72 ವರ್ಷ ತಂದೆ, ದಿ,. ಮಹಾಬಲ  ಶೆಟ್ಟಿ ವಾಸ, ಹಾಡಿಗದ್ದೆ  ಮನೆ 76 ಹಾಲಾಡಿ  ಗ್ರಾಮ ಕುಂದಾಪುರ  ತಾಲೂಕು   ಇವರ  ಮಗ   ಶರತ್  ಶೆಟ್ಟಿ ಈತನು  ಬ್ರಹ್ಮಾವರ  ತಾಲೂಕಿನ  ಹಿಲಿಯಾಣ ಗ್ರಾಮದ  ಹ್ಯೊಗೆಬೆಳ್ಳಾರ್  ಎಂಬಲ್ಲಿ  ಕೆಎ. 06 ಹೆಚ್.ಎಲ್ . 5065 ನೇ ನಂಬ್ರದ  ಮೋಟಾರ್  ಸೈಕಲ್ನಲ್ಲಿ    ಹಾಲಾಡಿ ಕಡೆಯಿಂದ ಗೋಳಿಯಂಗಡಿ  ಕಡೆಗೆ  ಹೋಗುತ್ತಿರುವಾಗ  ಆರೋಪಿಯು  ಕೆಎ.20  ಇಎ. 9483  ನೇ  ನಂಬ್ರದ  ಮೋಟಾರ್  ಸೈಕಲ್ನ್ನು ಅತೀ  ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ  ಹೊಡೆದಿರುತ್ತಾನೆ,ಇದರ ಪರಿಣಾಮ  ಎರಡು ಮೋಟಾರ್  ಸೈಕಲ್ನವರು  ರಸ್ತೆಯ  ಮೇಲೆ  ಬಿದಿದ್ದು, ಇದರ  ಪರಿಣಾಮ  ಶರತ್  ಶೆಟ್ಟಿ   ಇವರಿಗೆ    ಪೆಟ್ಟಾಗಿದ್ದು   ಈ   ಸಮಯ   108 ವಾಹನದಲ್ಲಿ  ಚಿಕಿತ್ಸೆಯ  ಬಗ್ಗೆ  ಮಣಿಪಾಲದ ಕೆ,.ಎಮ್.ಸಿ   ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು. ಅಲ್ಲಿ  ಆತನ   ಬಲಕಾಲಿಗೆ ಗಂಭೀರ ಸ್ವರೂಪದ  ಗಾಯವಾಗಿದೆ, ಎಂದು ಹೇಳಿ ಒಳರೋಗಿಯಾಗಿ  ದಾಖಲು  ಮಾಡಿಕೊಂಡಿದ್ದು, ಪ್ರಸುತ್ತ  ಮಣಿಪಾಲ ಕೆ.ಎಮ್.ಸಿ  ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆದುಕೊಂಡಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  04/2023  ಕಲಂ: 279, 338.ಐ.ಪಿಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ: ಡಾ. ಚಂದ್ರಶೇಖರ ರಾವ್‌.ಹೆಚ್ ಪ್ರಾಯ: 38 ವರ್ಷ ತಂದೆ: ಹೆಚ್‌. ವಿಜಯ್‌ ಕುಮಾರ್‌ ವಾಸ: ಶ್ರೀ ಕೃಷ್ಣ ಸೌರಭ, ಚರ್ಚ್‌ ಎದುರು, ಕೆ.ಎಂ ಮಾರ್ಗ, ಇವರು ಆಯುರ್ವೇದ ವೈದ್ಯರಾಗಿದ್ದು, ಉಡುಪಿ ನಗರದ ಕೆ.ಎಂ ಮಾರ್ಗದಲ್ಲಿರುವ ಮದರ್‌ ಆಫ್‌ ಸಾರೋಸ್‌ ಚರ್ಚ್‌ ಎದುರು ಇರುವ ಉಡುಪಿ ಆಯುರ್ವೇದ ಸ್ಟೋರ್ಸ್‌ ಅಂಗಡಿಯನ್ನು ಹೊಂದಿದ್ದು, ದಿನಾಂಕ 06/01/2023 ರಂದು 22:15 ಗಂಟೆಯಿಂದ ದಿನಾಂಕ 07/01/2023 ರಂದು ಬೆಳಿಗ್ಗೆ 09:40 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದುದಾರರ ಅಂಗಡಿಯ ಶೆಟರ್‌ ನ್ನು ಎಳೆದು ಒಳಪ್ರವೇಶಿಸಿ, ಕ್ಯಾಶ್‌ ಕೌಂಟರ್‌ ನ ಬೀಗ ಮುರಿದು ಅದರಲ್ಲಿದ್ದ ನಗದು ರೂ. 7300/-, ರೂ. 9,000 ಮೌಲ್ಯದ 5 ರೂ. ನಾಣ್ಯಗಳು, Honor 8x ಕಂಪೆನಿಯ ಮೊಬೈಲ್‌-1 ಹಾಗೂ ಕೆಲವು ಡ್ರೈಪ್ರೂಟ್ಸ್‌ ಪ್ಯಾಕೇಟ್‌ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂ. 20,000/- ಆಗಬಹುದು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   02/2023 ಕಲಂ:  454 457 380  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿ: ಸುರೇಂದ್ರ ಶೆಟ್ಟಿ ಪ್ರಾಯ 45  ವರ್ಷ  ತಂದೆ: ರಮೇಶ್ ಶೆಟ್ಟಿ  ವಾಸ:  ಸಹನ ಎಸ್ಟೇಟ್ ಅಂಕದಕಟ್ಟೆ ಕೋಟೇಶ್ವರ ಗ್ರಾಮ  ಇವರು ಸಹನಾ  ಎಸ್ಟೇಟ್ ಆಡಳಿತ ಸಂಸ್ಥೆಯ ಪಾಲುದಾರರಾಗಿದ್ದು ಕುಂದಾಫುರ ಮಿತ್ರ ಪತ್ರಿಯ ಸಂಪಾದಕರಾದ ಆರೋಪಿ ಟಿಪಿ  ಮಂಜುನಾಥ,  ಕರಾವಳಿ ಚಾಣಕ್ಯ ಪತ್ರಿಕೆಯ ಹರೀಶ್ ಭಂಡಾರಿ  ಕುಂಭಾಶಿ ಇವರಿಗೆ  ವರದಿ ಮಾಡಿ ಕೊಡಲು ಮಜಾರ್ ಖಾರ್ವಿಕೇರಿ ಹಾಗೂ  ಇನ್ನಿತರ  ನಕಲಿ  ಪತ್ರಕರ್ತರು ಸೇರಿಕೊಂಡು ಪಿರ್ಯಾದಿದಾರರನ್ನು ಗುರಿಯಾಗಿಟ್ಟುಕೊಂಡು ದಿನಾಂಕ 03/12/2022 ರಂದು  “ಕುಂದಾಫುರ ಮಿತ್ರ” ಎಂಬ  ಪತ್ರಿಕೆಯಲ್ಲಿ ಸಹನೆ  ಇಲ್ಲದ  ಸಲಿಂಗಕಾಮಿಗೆ ಉದಯೋನ್ಮುಕ ಯುವಕನ ಬದುಕು ಢಮಾರ್? ಎಂಬ  ಶೀರ್ಷಿಕೆಯಡಿ ಪಿರ್ಯಾದಿದಾರರ  ಮತ್ತು ಅವರ  ಸಂಸ್ಥೆಯ ಹೆಸರನ್ನು  ಕೆಡಿಸಿ ಬ್ಲ್ಯಾಕ್ ಮೇಲ್ ಮಾಡಲು ಒಳಸಂಚು ರೂಪಿಸಿ  ದಿನಾಂಕ 07/12/2022 ರಂದು ರಾತ್ರಿ 11:30 ಗಂಟೆಗೆ  ಪಿರ್ಯಾದಿದಾರರ ಮೊಬೈಲ್ ವ್ಯಾಟ್ಸಪ್‌ಗೆ ಪೋಟೋಸ್ ಕಳುಹಿಸಿ ಅದೇ ಕೂಡಲೇ ಡಿಲಿಟ್ ಮಾಡಿ ನಂತ್ರ ಪಿರ್ಯಾದಿದಾರರ ಸಂಸ್ಥೆಯ ಪಾಲುದಾರರಾದ ಅಕ್ಷಯ್ ಕುಮಾರ್ ರವರಿಗೂ  ಕೂಡಾ ಪೇಪರ್‌ನ  ಮೊದಲ ಪುಟ ಕಳುಹಿಸಿ,ಇದೆಂತಾ ಅಕ್ಷಯ್ ಎಂದು ಮೆಸೇಜ್ ಮಾಡಿದ್ದು, ಅವರಿಬ್ಬರಲ್ಲೂ ಹಣವನ್ನು ಕೇಳಿದ್ದು, ನಂತ್ರ ದಿನಾಂಕ 07/12/2022 ರಂದು ಹರೀಶ್ ಭಂಡಾರಿ ಕುಂಬಾಶಿ ಯು  ಪಿರ್ಯಾದಿದಾರರಿಗೆ  ಮತ್ತು  ಅಕ್ಷಯ್ ರವರಿಗೆ  ರಾತ್ರಿ 11:30  ಗಂಟೆಗೆ ಕುಂದಾಫುರ ಮಿತ್ರ ಪತ್ರಿಕೆಯ ಮೊದಲು ಪುಟದ ಫೋಟೋ ಕಳುಹಿಸಿದ್ದು ಇದಕ್ಕೆ  ಪಿರ್ಯಾದಿದಾರರು ಕರೆ ಮಾಡಿ ಕೇಳಿದ್ದಕ್ಕೆ  ಇದು  ಕೇವಲ  ಪ್ರಾಯೋಜಿತ ಸಂಚಿಕೆ ಕೇವಲ ಮುಖಪುಟದಲ್ಲಿ ಮುದ್ರಣವಾಗಿದೆ ಎಂದು ಹೇಳಿರುತ್ತಾನೆ. ನಂತ್ರ  ಪಿರ್ಯಾದಿದಾರರು ನೇಪಾಳದಿಂದ  ಕುಂದಾಫುರಕ್ಕೆ  ಬಂದು  ಟಿಪಿ ಮಂಜುನಾಥ ಗಾಣಿಗರನ್ನು  ವಿಚಾರಣೆ  ಮಾಡಿದಾಗ ಇದನ್ನು ನನಗೆ  ಕುಂದಾಫುರದ  ವರದಿಗಾರರು ತಂದು  ಕೊಟ್ಟಿದ್ದು  ಈ ಸಂಚಿಕೆ  ಕೇವಲ  500 ಪ್ರತಿ ಮಾತ್ರ  ಪ್ರಿಂಟ್ ಆಗಿದ್ದು  ಅದರಲ್ಲಿ  ಕೇವಲ  20 ಪ್ರತಿಗಳನ್ನು ಬೇರೆ ಬೇರೆ ವಿಷಯಕ್ಕೆ  ಕೊಟ್ಟಿದ್ದೇನೆಂದು ಒಪ್ಪಿಕೊಂಡಿರುತ್ತಾನೆ. ನಂತ್ರ  ಕುಂದಾಫುರ ಮಿತ್ರ ಪತ್ರಿಕೆಯ ಟಿ.ಪಿ ಮಂಜುನಾಥ ಗಾಣಿಗನು ದಿನಾಂಕ 03/12/2022 ರಂದು  ಪತ್ರಿಕೆಯ ಸಂಚಿಕೆಯಲ್ಲಿ  ಹಣದ ಆಸೆಗೆ  ಪಿರ್ಯಾದಿದಾರರ ಹೆಸರು ಹಾಕಿ “ಕಾರ್ಕಳ  ವಿಧಾನಸಬಾ  ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಕುಂದಾಫುರದ  ಸಹನಾ  ಸುರೇಂದ್ರ ಶೆಟ್ಟಿ” ಎಂದು  ವರದಿ ಬರೆದಿದ್ದು  ನಂತ್ರ  ಪಿರ್ಯಾದಿದಾರರು ದಿನಾಂಕ 15/12/2022 ರಂದು ಟಿ.ಪಿ  ಮಂಜುನಾಥ ಗಾಣಿಗ  ಇತನನ್ನು ವಿಚಾರಣೆ ಮಾಡಿದಾಗ ಇದನ್ನು ನನಗೆ  ವರದಿ ಮಾಡಲು ಮಜಾರ್  ಮತ್ತು ಇನ್ನೊರ್ವ ವರದಿಗಾರ ವಿನಯ್ ಪಾಯಸ್ ಎಂಬವರು ಹೇಳಿದ್ದು  ಎಂದು  ಒಪ್ಪಿಕೊಂಡಿರುತ್ತಾರೆ.  ನಂತ್ರ  ಪಿರ್ಯಾದಿದಾರರು  ಹರೀಶ್ ಭಂಡಾರಿ ಕುಂಭಾಶಿ ಯನ್ನು  ವಿಚಾರಿಸಿದಾಗ  ನಾನು ನಿಮಗೆ ಸಹಾಯ ಮಾಡುತ್ತೇನೆ, ನನಗೆ ಹಣದ  ರೂಪದಲ್ಲಿ ಸಹಾಯ ಮಾಡಿ ನನ್ನ ಮನೆ  ಬ್ಯಾಂಕ್‌ಸಾಲದಿಂದ  ಹರಾಜಿಗೆ ಬಂದಿರುತ್ತದೆ. ಎಂದು  ನಾಟಕ ಮಾಡಿ ಟಿ.ಪಿ  ಮಂಜುನಾಥನು  ನಾನು  ಹೇಳಿದ ಹಾಗೇ ಕೇಳುತ್ತಾನೆ ಮುಂದೆ ನಿನಗೆ  ಏನು  ತೊಂದರೆ ಆಗದ ಹಾಗೇ  ನೋಡಿಕೊಳ್ಳುತ್ತೇನೆ ಎಂದು ಹೇಳಿರುತ್ತಾನೆ. ಹರೀಶ್ ಭಂಡಾರಿ  ಕುಂಭಾಶಿಯವರಲ್ಲಿ  ಹಣ ಕೇಳಿದಾಗ ವಾಟ್ಸಾಪ್ ನಲ್ಲಿ ಬೆದರಿಕೆ  ಹಾಗೂ ಅವಾಚ್ಯ ಶಬ್ದಗಳಿಂದ  ಬೈದು  ಮತ್ತು  ಪತ್ರಿಕೆಯ ಮುಂದಿನ ಸಂಚಿಕೆಯಲ್ಲಿ ಕೆಟ್ಟದಾಗಿ ಬರೆಯುತ್ತೇನೆಂದು  ಬೆದರಿಸಿರುತ್ತಾನೆ. ಆಪಾದಿತರೆಲ್ಲರೂ ಸೇರಿ ಒಳಸಂಚು ರೂಪಿಸಿಕೊಂಡು ಮಾನಹರಣ ಮಾಡುವಂತಹ ವರದಿ ಮಾಡಿದ  400 ಕ್ಕೂ  ಹೆಚ್ಚು  ಪತ್ರಿಕೆಯನ್ನು  ಇರಿಸಿಕೊಂಡಿದ್ದು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವುದರ ಜೊತೆಗೆ ಸುಮಾರು 50,00,000/- ನಗದು ಹಣ ನೀಡಬೇಕೆಂದು ನೀಡಬೇಕು ಇಲ್ಲವಾದರೇ ಈ ಪತ್ರಿಕೆಯ ಪ್ರತಿಯನ್ನು ಪಿರ್ಯಾದಿದಾರರು ಕಾರ್ಕಳ  ವಿಧಾನಸಭಾ ಚುನಾವಣೆಯ  ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಮಯದಲ್ಲಿ  ಪತ್ರಿಕೆಯ ಪ್ರತಿಯನ್ನು ಹಂಚುತ್ತೇವೆಂದು ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ    ಕುಂದಾಪುರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 03/2023 ಕಲಂ: 384, 120(B) 504, 506 ಜೊತೆಗೆ 34 IPC ಯಂತೆ ಪ್ರಕರಣ ದಾಕಲಿಸಲಾಗಿದೆ.
  • ಮಲ್ಪೆ: ದಿನಾಂಕ;06-01-2023 ರಂದು ಮದ್ಯಾಹ್ನ 14:30 ಗಂಟೆಗೆ ಪಿರ್ಯಾಧಿ ಶ್ರೀಮತಿ ಮಾಲತಿ ಪ್ರಾಯ: 54 ವರ್ಷ ಗಂಡ: ದಿ// ಜಗನ್ನಾಥ ವಾಸ: ಮಾಲತಿ ನಿಲಯ, ಅನಘ ಕಂಪೌಂಡ, ಕಲ್ಮಾಡಿ, ಇವರು ತನ್ನ  ಮನೆ ಬಳಿ ಇರುವ ತೆಂಗಿನ  ತೋಟದಲ್ಲಿ ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯುಸುತ್ತಿರುವಾಗ ನೆರೆಮನೆಯ ಶ್ರವಣ್ ಎಂಬುವರು ಅಲ್ಲಿಗೆ ಬಂದು ಸದ್ರಿ ತೆಂಗಿನ ಮರವು ನಿಮಗೆ ಸೇರಿದಲ್ಲ ಆದ್ದರಿಂದ ನೀವು ತೆಂಗಿನಕಾಯಿ ತೆಗಿಯಬಾರದು ಎಂಬುದಾಗಿ ಆಕ್ಷೇಪಿಸಿ ಅವಾಚ್ಯ  ಶಬ್ದಗಳಿಂದ ಪಿರ್ಯಾಧಿದಾರರಿಗೆ ಬೈದು, ಪಿರ್ಯಾಧಿದಾರರ ಕುತ್ತಿಗೆ ಹಿಸುಕಿ ಅವರ ತಲೆಗೆ ಮತ್ತು ಕೈಗೆ ಹೊಡೆದಿದ್ದು ಆ ಸಮಯ ಪಿರ್ಯಾಧಿದಾರರ ಕುತ್ತಿಗೆಯಲ್ಲಿದ್ದ ಬಂಗಾರದ ಚೈನು ತುಂಡಾಗಿ ಬಿದ್ದು ಹೋಗಿರುತ್ತದೆ, ಪಿರ್ಯಾಧಿದಾರರು ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ  ಪಡೆದು ಈ ದಿನ ದಿನಾಂಕ:07-01-2023 ರಂದು  ಮದ್ಯಾಹ್ನ 02:30 ಗಂಟೆಗೆ ಠಾಣೆಗೆ ಬಂದು ತನ್ನಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ಧಗಳಿಂದ ಬೈದಿರುವುದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 05/2023 ಕಲಂ 504, 324, 354 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ದಿನಾಂಕ 06-01-2023 ರಂದು ಪಿರ್ಯಾದಿ ಶ್ರವಣ ಕುಮಾರ(32) ತಂದೆ: ಉದಯಕುಮಾರ ವಾಸ: ಶ್ರಾವ್ಯ ನಿಲಯ, ಕಲ್ಮಾಡಿ, ಕೊಡವೂರು ಗ್ರಾಮ ಉಡುಪಿ ಇವರ ಮನೆ ಸಮೀಪ ಶ್ರೀಮತಿ ಗೀತಾರವರಿಗೆ  ಸಂಬಂದಪಟ್ಟ ತೋಟದಲ್ಲಿ ಪಿರ್ಯಾದಿದಾರರ ನೆರೆಮನೆಯ ಸಚೀನ್ ರವರ ತಾಯಿ ಶ್ರೀಮತಿ ಮಾಲತಿ ಇವರು ತೆಂಗಿನಕಾಯಿ ಕೊಯ್ಯುತ್ತಿದ್ದು ಇದನ್ನು ಪಿರ್ಯಾದಿದಾರರು ನೋಡಿ ತೆಂಗಿನ ಕಾಯಿ ಕೊಯ್ಯುವುದು ಬೇಡ ಎಂದು ತಿಳಿಸಿದ್ದು ಬಳಿಕ ಮಾಲತಿ ರವರು ತೆಂಗಿನಕಾಯಿ ತೆಗೆದುಕೊಂಡು ಹೋಗಿರುತ್ತಾರೆ. ಈ ವಿಚಾರವನ್ನು ಪಿರ್ಯಾದಿದಾರರು ಸಚೀನ್ ಇವರಿಗೆ ಪೋನ್ ಮಾಡಿ ತಿಳಿಸಿದ್ದು ಮದ್ಯಾಹ್ನ 12-30 ಗಂಟೆಗೆ ಸಚೀನ್ ಈತನು ಪಿರ್ಯಾದಿದಾರರ ಮನೆಯ ಒಳಗೆ ಬಂದು ಪಿರ್ಯಾದಿದಾರರಿಗೆ ಕೆನ್ನೆಗೆ, ಮೂಗಿಗೆ ರಕ್ತ ಬರುವಂತೆ ಕೈಯಿಂದ ಹೊಡೆದು ಹೋಗಿರುತ್ತಾನೆ. ಪಿರ್ಯಾಧಿದಾರರ ಕುತ್ತಿಗೆ ಹಾಗೂ ಕಿವಿ ನೋವು ಇದ್ದ ಕಾರಣ ಈ ದಿನ ದಿನಾಂಕ 07-01-2023 ರಂದು ಉಡುಪಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಠಾಣೆಗೆ ಬಂದು ದೂರುನೀಡಿರುವುದಾಗಿದೆ. ಈ ಬಗ್ಗೆ  ಮಲ್ಪೆ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ 448, 323 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಂಕರನಾರಾಯಣ : ಆರೋಪಿ  ಶರತ್  ಪೂಜಾರಿ  ಈತನು ಫಿರ್ಯಾದುದಾರರ  ಹೆಂಡತಿಗೆ ಪದೇ ಪದೇ  ಮೊಬೈಲ್  ಪೋನ್‌‌ಗೆ  ಕಾಲ್  ಮಾಡಿ ತೊಂದರೆ ಮಾಡುತ್ತಿದ್ದನು, ಈ  ವಿಷಯದಲ್ಲಿ  ದಿನಾಂಕ  17.06.2022 ರಂದು  ಶರತ್  ಪೂಜಾರಿ  ಇವರ  ವಿರುದ್ದ ಫಿರ್ಯಾದಿ: ರಾಘವೇಂದ್ರ ಶೆಟ್ಟಿ  ಪ್ರಾಯ 42 ವರ್ಷ ತಂದೆ,ರಾಜು  ಶೆಟ್ಟಿ  ವಾಸ, ಕಲ್ಸಂಕ ಕೊಳ್ಕೆಬೈಲ್  ಶಿರಿಯಾರ  ಗ್ರಾಮ ಇವರ  ಭಾವ  ಪ್ರಸಾದ  ಶೆಟ್ಟಿ  ಇವರು  ಫಿರ್ಯಾದಿ ನೀಡಿರುತ್ತಾರೆ, ಇದೇ  ವಿಷಯದಲ್ಲಿ  ಕಳೆದ  1  ವಾರದ ಹಿಂದೆ    ಆರೋಪಿ ಫಿರ್ಯಾಧುದಾರರ   ಬೇಕರಿಯ ಬಳಿ ಬಂದು  ಅವರಿಗೆ  ಹಾಗೂ ಅವರ ಹೆಂಡತಿಗೆ   ಕೆಟ್ಟ   ಕೆಟ್ಟ ಮಾತುಗಳಿಂದ ಬೈದು   ಜೀವ ಬೆದರಿಕೆ  ಹಾಕಿ ಹೋಗಿರುತ್ತಾನೆ, ಈ  ಸಮಯ  ಊರಿನವರ  ಮುಖಾಂತರ ಅವರನ್ನು ಕರೆದು ರಾಜಿ ಮಾಡಿಕೊಂಡಿರುತ್ತಾರೆ, ಆ  ಬಳಿಕ  ದಿನಾಂಕ 06.01.2023  ರಂದು  ಫಿರ್ಯಾದು ದಾರರ  ಭಾವ  ಪ್ರಕಾಶ  ಶೆಟ್ಟಿ  ಇವರ ಮೊಬೈಲ್‌ನಂ, 8073411834 ನಂಬ್ರಕ್ಕೆ  ಶರತ್ ಪೂಜಾರಿ  ಈತನ  ಮೊಬೈಲ್ ನಂ ಗೆ ಪೋನ್ ಮಾಡಿ   ನಿನ್ನ  ಭಾವ  ಹಾಗೂ  ಅಕ್ಕನನ್ನು ಕೊಂದು ಹಾಕುತ್ತೇನೆ ಎಂದು ಬೆದರಿಕೆ   ಹಾಕಿರುತ್ತಾನೆ,ಆ  ಬಳಿಕ ಸುಮಾರು 22;00 ಘಂಟೆಗೆ ಫಿರ್ಯಾದುದಾರರು   ಹಾಗೂ  ಪ್ರಕಾಶ ಶೆಟ್ಟಿ ಇವರು  ಕುಂಧಾಪುರ  ತಾಲೂಕಿನ  ಸಿದ್ದಾಪುರಗ್ರಾಮದ  ಸಿದ್ದಾಪುರ  ಸೊಸೈಟಿಯ ಬಳಿ  ಇರುವ  ದುರ್ಗಾ  ಬೇಕರಿ  ಎದುರುಗಡೆ  ರಸ್ತೆಯ  ಬದಿಯಲ್ಲಿ ನಿಂತುಕೊಂಡಿರುವಾಗ  ಶರತ್  ಪೂಜಾರಿ  ಈತನು  ಶ್ರೀಕಾಂತ  ಶೆಟ್ಟಿ   ಇವರೊಂದಿಗೆ ಕೆಎ, 20 ಇಡಬ್ಲು.2713 ನೇ  ನಂಬ್ರದ  ಮೋಟಾರ್  ಸೈಕಲ್‌‌ನಲ್ಲಿ ಬಂದು   ಫಿರ್ಯಾದುದಾರರಿಗೆ ಕೆಟ್ಟ ಕೆಟ್ಟ   ಶಬ್ದಗಳಿಂದ   ಬೈದು   ಕೋಳಿ ಕತ್ತಿ ಹಿಡಿದುಕೊಂಡು  ಬಂದು ಇವತ್ತು ನಿನ್ನ  ಕೊಲ್ಲುತ್ತೇನೆ  ಎಂದು  ಬೆದರಿಕೆ  ಹಾಕಿ   ಕೈಗೆ  ಹೊಡೆಯಲು ಬಂದಾಗ  ಅವರು ತಪ್ಪಿಸಿಕೊಂಡಿದ್ದು, ಈ  ಸಮಯ   ಕೋಳಿ  ಕತ್ತಿ ಅವರ ಬಲಕಾಲಿನ  ಮೊಣಗಂಟಿಗೆ  ತಾಗಿ  ಗಂಭಿರ  ಸ್ವರೂಪದ  ರಕ್ತಗಾಯವಾಗಿರುತ್ತದೆ . ಈ ಬಗ್ಗೆ   ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ:326,504,506ಜೊತೆಗೆ  34    ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.    
  • ಶಂಕರನಾರಾಯಣ : ಪಿರ್ಯಾದಿ: ಶರತ್  ಪೂಜಾರಿ   ಪ್ರಾಐ 29 ವರ್ಷ ತಂದೆ, ರಘು ಪೂಜಾರಿ ವಾಸ, ಚೌಕುಳಮಕ್ಕಿ  ಆಜ್ರಿ ಗ್ರಾಮ  ಇವರಿಗೂ  ಆರೋಪಿ  ರಾಘವೇಂದ್ರ  ಶೆಟ್ಟಿ   ಪ್ರತಿಮಾ  ಎಂಬುವರಿಗೆ ಹಣಕಾಸಿನ  ವ್ಯವಹಾರವಿದ್ದು, ಅದರಂತೆ ಪ್ರತಿಮಾ ಇವರು   ಫಿರ್ಯಾಧುದಾರರಿಂದ  2,00,000/- ರೂ ಹಣವನ್ನು ಪಡೆದುಕೊಂಡಿದ್ದು, ಈ ಬಗ್ಗೆ   ಫಿರ್ಯಾದುದಾರರು  ಹಣ  ವಾಪಾಸು  ಕೇಳಿ  ಪದೇ ಪದೇ  ಪೋನ್  ಮಾಡಿದಕ್ಕ   ಅವರು  ಫಿರ್ಯಾದುದಾರರ ವಿರುದ್ದ  ಶಂಕರನಾರಾಯಣ ಪೊಲೀಸ್   ಠಾಣೆಯಲ್ಲಿ  ಪ್ರಸಾದ  ಶೆಟ್ಟಿ ಎಂಬುವರು  ದೂರು  ಅರ್ಜಿ  ನೀಡಿರುತ್ತಾರೆ, ಆ  ಬಳಿಕ  ಫಿರ್ಯಾಧುದಾರರು  ಪೋನ್  ಮಾಡಿರಲಿಲ್ಲ. ಅದೇ  ವಿಷಯದಲ್ಲಿ ದಿನಾಂಕ  06.01.2023  ರಂದು ಫಿರ್ಯಾದುದಾರರು  ಬೆಳಿಗ್ಗೆ  ಸುಮಾರು  9;30 ಘಂಟೆಗೆ  ಸಿದ್ದಾಪುರದ  ಚಕ್ರವರ್ತಿ ಬಾರ್ ಬಳಿ  ಹೋದಾಗ  ಅಲ್ಲಿ  ಆರೋಪಿ  ಪ್ರಕಾಶ  ಶೆಟ್ಟಿ ಆತನ    ಮೋಟಾರ್  ಸೈಕಲ್‌ನ್ನು ಫಿರ್ಯಾದುದಾರ ಮೋಟಾರ್   ಸೈಕಲ್‌‌ಗೆ  ಅಡ್ಡ ಇರಿಸಿರುತ್ತಾನೆ,  ಈ   ಬಗ್ಗೆ ಕೇಳಿದಾಗ ಎನ್ನು ಮಾತನಾಡಿರುವುದಿಲ್ಲ, ಆ ನಂತರ  ಸುಮಾರು  19;00  ಗಂಟೆಗೆ  ಪ್ರಕಾಶ ಶೆಟ್ಟಿ  ಈತನು  ಫಿರ್ಯಾದುದಾರರ   ಮೊಬೈಲ್ ನಂ ಗೆ ಕಾಲ್   ಮಾಡಿ   ಅವಾಚ್ಯ  ಶಬ್ದದಿಂದ  ಬೈದಿರುತ್ತಾರೆ, ಆ ನಂತರ  ಸುಮಾರು 21;00 ಘಂಟೆಗೆ  ಪುನ: ಪೋನ್ ಮಾಡಿ  ನಾನು ಬೇಕರಿಯ  ಬಳಿ ಇದೆನೆ  ಬಾ  ಎಂದು  ಜೋರು  ಮಾಡಿ  ಕರೆದ ರು, ಈ ಸಮಯ  ಫಿರ್ಯಾದುದಾರರು ಹಾಗೂ ಅವ ರ  ಸ್ನೇಹಿತ   ಶ್ರೀಕಾಂತ  ಶೆಟ್ಟಿ   ಸಿದ್ದಾಪುರ    ಗ್ರಾಮದ   ದುರ್ಗಾ ಬೇಕರಿಯ ಬಳಿ  ಹೋದಾಗ ಅಲ್ಲಿ  ಆರೋಪಿಗಳಿಗೂ ಫಿರ್ಯಾಧುದಾರರಿಗೂ  ಮಾತುಕತೆಯಾಗಿ  ಜಗಳ  ಆಗಿರುತ್ತದೆ, ಆಗ ಅವರಿಗೆ ಹೊಡೆಯಲು  ಎಂದು ಹೇಳಿ   ಕೋಳಿ ಕತ್ತಿ  ಹಿಡಿದು  ಹೊಡೆಯಲು ಹೋದಾಗ ಆರೋಪಿಗಳು ಸೇರಿ ಸಮಾನ ಉದ್ದೇಶದಿಂದ   ಫಿರ್ಯಾಧುದಾರರ  ಕೈಯಲ್ಲಿ ಇದ್ದ   ಕೋಳಿ  ಕತ್ತಿಯನ್ನು  ಕಸಿದುಕೊಂಡು ಬಲಕೈ ಮಣಿಗಂಟಿನ  ಬಳಿ  ಗಂಭೀರ  ಸ್ವರೂಪದ ಗಾಯವನ್ನುಂಟು  ಮಾಡಿರುತ್ತಾರೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  03/2022  ಕಲಂ:341,326,504,506 ಜೊತೆಗೆ 34    ಐ.ಪಿಸಿ    ಯಂತೆ ಪ್ರಕರಣ ದಾಖಲಿಸಲಾಗಿದೆ.     

ಮಾದಕ ವಸ್ತು ಸೇವನೆ ಪ್ರಕರಣ

  • ಮಣಿಪಾಲ:   ದಿನಾಂಕ  05.01.2023 ರಂದು 20:00 ಗಂಟೆಗೆ ಮಣಿಪಾಲ ಪೊಲೀಸ್‌ ಠಾಣಾ ಹೆಚ್ ಸಿ 164 ಪ್ರಸನ್ನ ಹಾಗೂ ಹೆಚ್ ಸಿ 1094 ಇಮ್ರಾನ್ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಫರೇಶ್‌, ಪ್ರಾಯ: 20 ವರ್ಷ, ತಂದೆ: ಅಬ್ದುಲ್‌ಶುಕುರ್, ವಾಸ:‌ಶಾರದಾಂಭ ಟೆಂಪಲ್‌ಬಳಿ ಚಿಟ್ಪಾಡಿ, ಉಡುಪಿ ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ 7th Heaven ಪಬ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿರುತ್ತಾರೆ ಅದೇ ದಿನ ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಅಬ್ದುಲ್ ಖಾದರ್ ಪೊಲೀಸ್ ಉಪನಿರೀಕ್ಷಕರು ರವರು  ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಎ ಎಸ್ ಐ ಶೈಲೇಶ್ ಕುಮಾರ್ ಹಾಗೂ ಪಿ ಸಿ 189 ಉಮೇಶ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ.  ಆರೋಪಿ ಫರೇಶ್‌, ಪ್ರಾಯ: 20 ವರ್ಷ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 07.01.2023 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 07/2023, ಕಲಂ: 27(b) NDPS Act ಯಂತೆ ಪ್ರಕರಣ ದಾಖಲಿಸಲಾಗಿದೆ.,
  • ಮಣಿಪಾಲ: ದಿನಾಂಕ  05.01.2023 ರಂದು 20:00 ಗಂಟೆಗೆ ಮಣಿಪಾಲ ಪೊಲೀಸ್‌ ಠಾಣಾ ಹೆಚ್ ಸಿ 164 ಪ್ರಸನ್ನ ಹಾಗೂ ಹೆಚ್ ಸಿ 1094 ಇಮ್ರಾನ್ ಇವರುಗಳು ಮಾದಕ ವಸ್ತು ಗಾಂಜಾವನ್ನುಸೇವಿಸಿರುವ ಸಂದೇಹದ ಮೇಲೆ ಪ್ರತೀಕ್, ಪ್ರಾಯ: 22 ವರ್ಷ, ತಂದೆ: ಹರೀಶ್‌ಮೊಗವೀರ್, ವಾಸ: ಬೈಲೂರು ಕಾಪ್ಲೆಕ್ಸ ಒಳಕಾಡು, ಉಡುಪಿ ತಾಲೂಕು ಎಂಬಾತನನ್ನು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ 7th Heaven ಪಬ್ ಬಳಿ ಸಾರ್ವಜನಿಕ ಸ್ಥಳದಲ್ಲಿ  ವಶಕ್ಕೆ ಪಡೆದು ಠಾಣೆಗೆ ಹಾಜರುಪಡಿಸಿರುತ್ತಾರೆ ಅದೇ ದಿನ ಮಣಿಪಾಲ ಪೊಲೀಸ್‌ ಠಾಣಾ ಪ್ರಭಾರದಲ್ಲಿದ್ದ ಅಬ್ದುಲ್ ಖಾದರ್ ಪೊಲೀಸ್ ಉಪನಿರೀಕ್ಷಕರು ರವರು  ಸದರಿ ವ್ಯಕ್ತಿ ಗಾಂಜಾ ಸೇವನೆ ಮಾಡಿದ ಕುರಿತು ಪರೀಕ್ಷೆ ನಡೆಸುವ ಬಗ್ಗೆ ಎ ಎಸ್ ಐ ಶೈಲೇಶ್ ಕುಮಾರ್ ಹಾಗೂ ಪಿ ಸಿ 189 ಉಮೇಶ್ ರವರ ಜೊತೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಲು ಕಳುಹಿಸಿಕೊಟ್ಟಿರುತ್ತಾರೆ.   ಆರೋಪಿ ಪ್ರತೀಕ್, ಪ್ರಾಯ: 22 ವರ್ಷ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು ಈ ದಿನ ದಿನಾಂಕ: 07.01.2023 ರಂದು ದೃಢಪತ್ರವನ್ನು ನೀಡಿರುತ್ತಾರೆ, ಈ ಬಗ್ಗೆ ಬಗ್ಗೆ  ಮಣಿಪಾಲ ಠಾಣಾ ಅಪರಾಧ ಕ್ರಮಾಂಕ : 08/2023, ಕಲಂ: 27(b) NDPS Act ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 08-01-2023 11:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080