ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ: ಪಿರ್ಯಾದಿ: ಅಕ್ಷಿತ್ ಶೆಟ್ಟಿ  ಪ್ರಾಯ:30 ವರ್ಷ ತಂದೆ:ಕೆ ದಿನಕರ ಶೆಟ್ಟಿ ವಾಸ : ಸೂರ್ಯ ಸುಬಾಷ್ ನಗರ , ಕುರ್ಕಾಲು ಗ್ರಾಮ, ಕಾಪು ಇವರ  ಸಂಬಂಧಿಯಾದ ಸುಶೀಲ್ ರಘುರಾಮ್ ಶೆಟ್ಟಿ ಪ್ರಾಯ 42 ವರ್ಷ ಇವರು ಮುಂಬಾಯಿ ನಿವಾಸಿಯಾಗಿದ್ದು, ದಿನಾಂಕ: 28/12/2022ರಂದು ಮುಂಬಾಯಿಂದ ಊರಿಗೆ ಬಂದವರು ದಿನಾಂಕ: 30/12/2022ರಿಂದ ಮಲ್ಪೆಯ ಕಾರ್ತೀಕ್‌ ಲಾಡ್ಜ್‌ನ ರೂಮ್‌ ನಂಬ್ರ 201 ರಲ್ಲಿ ತಂಗಿದ್ದು, ದಿನಾಂಕ: 06/01/2023ರಂದು ರಾತ್ರಿ 12 ಗಂಟೆಗೆ ಲಾಡ್ಜ್‌ನ ಸಿಬ್ಬಂದಿ ಜೊತೆ ಮಾತನಾಡಿ ರೂಮ್‌ಗೆ ಹೋದವರು ದಿನಾಂಕ: 07/01/2023ರಂದು ರೂಮ್‌ ನಿಂದ ಹೊರಗೆ ಬಾರದೇ ಇದ್ದುದರಿಂದ ಸಂಶಯಗೊಂಡು ರಾತ್ರಿ ಸುಮಾರು 11:00 ಗಂಟೆಗೆ ಪಿರ್ಯಾದಿದಾರರು, ಹೊಟೇಲ್‌ ಸಿಬ್ಬಂದಿ, ಪೊಲೀಸರ ಸಮಕ್ಷಮದಲ್ಲಿ ರೂಮ್‌ನ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಸುಶೀಲ್‌ ರಘುರಾಮ್‌ ಶೆಟ್ಟಿರವರು ಮಲಗಿದ ಸ್ಥಿತಿಯಲ್ಲಿದ್ದು, ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಕಂಡುಬಂದಿದ್ದು, ಸದ್ರಿಯವರು ದಿನಾಂಕ:06/01/2023 ರ ರಾತ್ರಿ 12:೦೦ ಗಂಟೆಯಿಂದ ದಿನಾಂಕ: 07/೦1/2023ರ ರಾತ್ರಿ 11:೦೦ ಗಂಟೆ ಮಧ್ಯೆ ಅವಧಿಯಲ್ಲಿ ಮೃತರಾಗಿದ್ದಾಗಿದೆ. ಈ ಬಗ್ಗೆ ಮಲ್ಪೆ ಠಾಣಾ ಯು.ಡಿ.ಆರ್ ನಂಬ್ರ 05/2023  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 

  • ಕಾಪು: ಪಿರ್ಯಾದಿ ಭರತೇಶ್ ಕೆ ಪಿಎಸ್‌ಐ (ತನಿಖೆ)ಕಾಪು ಪೊಲೀಸ್ ಠಾಣೆ ಇವರಿಗೆ ದಿನಾಂಕ:08-01-2023 ರಂದು 05:30 ಗಂಟೆಗೆ ದೊರೆತ ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಯವರಾದ ಹೆಚ್.ಸಿ 28 ನಾರಾಯಣ, ಪಿ.ಸಿ 113 ನೇ ಗಣೇಶ್‌ ಶೆಟ್ಟಿ,  ಇಲಾಖಾ ಜೀಪು ಚಾಲಕ ಎ.ಹೆಚ್.ಸಿ. 91 ಜಗದೀಶ ರವರೊಂದಿಗೆ ಇಲಾಖಾ ಜೀಪು ನಂಬ್ರ ಕೆ.ಎ. 20 ಜಿ. 275 ನೇದರಲ್ಲಿ ಪಂಚರಾದ ಮಧುಸೂದನ್‌ ರಾವ್‌ ಹಾಗೂ ನಾಗೇಶ್‌ ರವರೊಂದಿಗೆ ಹೊರಟು ಮಾಹಿತಿ ಬಂದ ಸ್ಥಳವಾದ ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ಬೆಳಿಗ್ಗೆ 6:30 ಗಂಟೆಗೆ ತಲುಪಿ ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿರುವ ರಜಾಕ್‌ ರವರ ಬಾಬ್ತು ಬಾಟಲಿ ಫ್ಯಾಕ್ಟರಿಯ ಸಮೀಪ ಜೀಪನ್ನು ನಿಲ್ಲಿಸಿ ಮರೆಯಲ್ಲಿ ನಿಂತು ನೋಡಿದಾಗಿ ಫ್ಯಾಕ್ಟರಿಯ ಹಿಂಭಾಗದ ಹಾಡಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ತರ್ಪಾಲ್‌ ನ ಮೇಲೆ ಮರದ ದಿನ್ನೆ ಹಾಗೂ ಕತ್ತಿಯ ಸಹಾಯದಿಂದ ದನದ ಮಾಂಸವನ್ನು ಕಟಾವು ಮಾಡುತ್ತಿರುವುದು ಕಂಡುಬಂದಿದ್ದು, ಅದರಲ್ಲಿ ಓರ್ವ ಕಾಪು ಭಾರತ್‌ ನಗರದ ನಿವಾಸಿ ಮೊಹಮ್ಮದ್‌ ಆರೀಫ್ ಆಗಿದ್ದು, ಇನ್ನೋರ್ವ ಯಾರೆಂಬುದು ತಿಳಿದಿರುವುದಿಲ್ಲ. ಪಿರ್ಯಾದಿದಾರರು ಕೂಡಲೇ ಸಿಬ್ಬಂದಿಗಳ ಮುಖೇನ ಬೆಳಿಗ್ಗೆ 06:40 ಗಂಟೆಗೆ ದನ ಕಟಾವು ಮಾಡುತ್ತಿದ್ದ ಸ್ಥಳಕ್ಕೆ ಧಾಳಿ ನಡೆಸಿದಾಗ ಪೊಲೀಸರನ್ನು ನೋಡಿ ಮಾಂಸ ಕಟಾವು ಮಾಡುತ್ತಿದ್ದ ಮೊಹಮ್ಮದ್‌ ಆರೀಫ್ ಹಾಗೂ ಇನ್ನೋರ್ವ ಪಕ್ಕದಲ್ಲಿಯೇ ಇದ್ದ  ಹಾಡಿಯೊಳಗೆ ಓಡಿ ಹೋಗಿದ್ದು, ಅವರುಗಳನ್ನು ಸುಮಾರು ದೂರದವರೆಗೆ ಪಿರ್ಯಾದಿದಾರರು ಹಾಗೂ ಸಿಬ್ಬಂದಿಗಳು ಹಿಂಭಾಲಿಸಿದ್ದು ಎಲ್ಲಿಯೂ ಪತ್ತೆಯಾಗದೇ ತಪ್ಪಿಸಿಕೊಂಡು ಹೋಗಿರುತ್ತಾರೆ. ಬಳಿಕ ದನದ ಮಾಂಸವಿದ್ದ ಸ್ಥಳಕ್ಕೆ ಬಂದು ಸ್ಥಳವನ್ನು ಪರಿಶೀಲಿಸಲಾಗಿ ಸ್ಥಳದಲ್ಲಿ ಎರಡು ಕಪ್ಪು ಬಣ್ಣದ ದನದ ತಲೆಗಳು, ಅಕ್ಕಿ ತುಂಬುವ ರೀತಿಯ 9 ಚೀಲದಲ್ಲಿ ಸುಮಾರು 200 ಕೆಜಿಯಷ್ಟು ದನದ ಮಾಂಸ, 1 ಕಬ್ಬಿಣದ ಕತ್ತಿ, 1 ಕಬ್ಬಿಣದ ಚೂರಿ, ಮಾಂಸ ಕಟಾವು ಮಾಡಲು ಬಳಸಿದ ಮರದ ದಿನ್ನೆ, 2 ತರ್ಪಾಲ್‌ ಗಳು, 1 ಬಿಳಿ ಬಣ್ಣದ ನೈಲಾನ್‌ ಹಗ್ಗ ಇದ್ದು, ಮಾಂಸ ಕಟಾವು ಮಾಡುತ್ತಿದ್ದ ಸ್ಥಳದ ಪಕ್ಕದಲ್ಲಿಯೇ KA 20 ET 9675 ನೇ HONDA UNICORN ಬೈಕ್‌ ನಿಂತಿದ್ದು, ಅದರ ಟ್ಯಾಂಕ್‌ ಕವರ್‌ ನಲ್ಲಿ ಮೊಹಮ್ಮದ್‌ ಆರೀಫ್‌ ರವರ ಬಾಬ್ತು ನಕಲು ಡಿ.ಎಲ್‌ ಪ್ರತಿ. ಬೈಕ್‌ ನ ನಕಲು ಆರ್.ಸಿ ಪ್ರತಿಗಳು ದೊರೆತಿದ್ದು ಸದ್ರಿ ಸ್ವತ್ತುಗಳನ್ನು ಪಂಚಾಯತುದಾರರ ಸಮಕ್ಷಮ ಮಹಜರು ಮುಖೇನ  ಸ್ಥಳದಲ್ಲಿ ಸ್ವಾಧೀನಪಡಿಸಿಕೊಂಡು ಠಾಣೆಗೆ ಬಂದು ಪ್ರಕರಣದಾಖಲಿಸುವಂತೆ ವರದಿ ನೀಡಿರುವುದಾಗಿದೆ . ಈ ಬಗ್ಗೆ ಕಾಪು ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ 05/2023 ಕಲಂ 379 ಐ.ಪಿ.ಸಿ & ಕಲಂ  4, 5, 7, 12, ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ   ಮತ್ತು ಸಂರಕ್ಷಣಾ ಆದ್ಯಾದೇಶ 2020. ರಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

  • ಹೆಬ್ರಿ: ಫಿರ್ಯಾದಿ : ಸುಬ್ರಹ್ಮಣ್ಯ (30) ತಂದೆ: ವಿಜಯೇಂದ್ರ ರಾವ್‌ ವಾಸ; ಜಂಟಿ ಗುಡ್ಡೆಕೊಪ್ಪ ಅಂಚೆ ತೀರ್ಥಹಲ್ಲಿ ತಾಲೂಕು ಶಿವಮೊಗ್ಗ ರವರು ದಿನಾಂಕ: 06/01/2023 ರಂದು ಅವರ ಬಾಬ್ತು KA14 EJ 3622 ನೇ ಮೋಟಾರ್‌ ಸೈಕಲ್‌ ನ್ನುಸವಾರಿ ಮಾಡಿಕೊಂಡು ಬ್ರಹ್ಮಾವರದಿಂದ ತೀರ್ಥಹಳ್ಳಿಗೆ ಹೋಗುತ್ತಿರುವಾಗ ಅವರು ಸಮಯ ಸುಮಾರು ಸಂಜೆ 06:00 ಗಂಟೆಗೆ ಬ್ರಹ್ಮಾವರ ತಾಲೂಕು ಕಳ್ತೂರು ಗ್ರಾಮದ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ಮಂದಿರ ಎಂಬಲ್ಲಿ ತಲುಪುವಾಗ ಅವರ ಬಲಭಾಗದಿಂದ ಗಣೇಶ ರವರು ಅವರ KA 20 S 8463 ನೇ ಮೋಟಾರ್‌ ಸೈಕಲ್‌ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಅಯ್ಯಪ್ಪ ಸ್ವಾಮೀ ಮಂದಿರದ ಅಡ್ಡರಸ್ತೆಯಿಂದ  ಸವಾರಿ ಮಾಡಿಕೊಂಡು ಬಂದು ಫಿರ್ಯಾದಿದಾರರ ಮೋಟಾರ್‌ ಸೈಕಲ್‌ ಗೆ ಢಿಕ್ಕಿ ಪಡಿಸಿದ ಪರಿಣಾಮ ಸುಬ್ರಹ್ಮಣ್ಯ ರವರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಎಡಕೈ ಮೂಳೆ ಮುರಿತವಾಗಿರುತ್ತದೆ ಹಾಗೂ ಎಡಕಾಲು ಪಾದದ ಬಳಿ ಮೂಳೆ ಮುರಿತವಾಗಿರುತ್ತದೆ .ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 01/2023 US 279,338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

  • ಉಡುಪಿ : ದಿನಾಂಕ 08/01/2023 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿ: ಮಂಜಪ್ಪ ಡಿ.ಆರ್‌,  ಪೊಲೀಸ್‌ ನಿರೀಕ್ಷಕರು, ಉಡುಪಿ ನಗರ ಪೊಲೀಸ್‌ ಠಾಣೆ.  ಇವರು ವಿಶ್ರಾಂತಿಯಲ್ಲಿರುವಾಗ ಠಾಣಾ ಸರಹದ್ದಿನಲ್ಲಿ 3 ಕಡೆಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 06:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಹಳೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಬಳಿ ಶಾಂತಲಾ ಟವರ್ಸ್‌ ಕಟ್ಟಡದ ಎದುರು ತಲುಪಿ, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು,  ಬೆಳಿಗ್ಗೆ 06:45 ಗಂಟೆಗೆ ದಾಳಿ ನಡೆಸಿ, ಆಪಾದಿತ ರಾಘವೇಂದ್ರ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಆಪಾದಿತನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತಪಡಿಸಿಕೊಂಡು, ಆಪಾದಿತನ ದಸ್ತಗಿರಿ ಕ್ರಮ ಜರುಗಿಸಿ, ಆತನ ವಶದಿಂದ ಒಟ್ಟು ರೂ. 8,700/- ಮೌಲ್ಯದ ವಿವಿಧ ಬ್ರ್ಯಾಂಡ್‌ ನ ಮದ್ಯದ ಸಾಚೇಟ್‌ ಹಾಗೂ ಬಾಟಲಿಗಳನ್ನು ಮತ್ತು ನಗದು ರೂ. 3,100/- ನ್ನು ವಶಪಡಿಕೊಂಡು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಪಾದಿತ ಹಾಗೂ ಸ್ವತ್ತು ಸಮೇತ ವರದಿಯನ್ನು ಸಿಬ್ಬಂದಿಯವರ ಮುಖೇನ ಕಳುಹಿಸಿಕೊಟ್ಟಿರುವುದಾಗಿದೆ . ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  03/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ದಿನಾಂಕ 08/01/2023 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿ: ನಾರಾಯಣ.ಬಿ,  ಎಎಸ್‌ಐ, ಉಡುಪಿ ನಗರ ಪೊಲೀಸ್‌ ಠಾಣೆ.  ಇವರಿಗೆ ಠಾಣೆಯ ಪಿಐ ರವರು ದೂರವಾಣಿ ಕರೆ ಮಾಡಿ ಅಭ್ಯೂದಯ ಬ್ಯಾಂಕ್ ಎ.ಟಿ.ಎಂ ಬಳಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ ಮೇರೆಗೆ, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 06:40 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಹಳೆ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಬಳಿ ಅಭ್ಯೂದಯ ಬ್ಯಾಂಕ್ ಎ.ಟಿ.ಎಂ ಬಳಿ ತಲುಪಿ, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು,  ಬೆಳಿಗ್ಗೆ 06:50 ಗಂಟೆಗೆ ದಾಳಿ ನಡೆಸಿ, ಆಪಾದಿತರಾದ ಪ್ರವೀಣ್‌ ಶೇರಿಗಾರ್‌ ಮತ್ತು ಜಯಪ್ರಕಾಶ್‌ ಶೆಟ್ಟಿ ಎಂಬವರನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಆಪಾದಿತರು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ತಮ್ಮ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತಪಡಿಸಿಕೊಂಡು, ಆಪಾದಿತರ ದಸ್ತಗಿರಿ ಕ್ರಮ ಜರುಗಿಸಿ, ಅವರ ವಶದಿಂದ ಒಟ್ಟು ರೂ. 17,900/- ಮೌಲ್ಯದ ವಿವಿಧ ಬ್ರ್ಯಾಂಡ್‌ ನ ಮದ್ಯದ ಸಾಚೇಟ್‌ ಗಳನ್ನು ಮತ್ತು ನಗದು ರೂ. 1,500/- ನ್ನು ವಶಪಡಿಸಿಕೊಂಡು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಪಾದಿತರು ಹಾಗೂ ಸ್ವತ್ತುಗಳ ಸಮೇತ ವರದಿಯನ್ನು ಸಿಬ್ಬಂದಿಯವರ ಮುಖೇನ ಕಳುಹಿಸಿಕೊಟ್ಟಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  04/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ದಿನಾಂಕ 08/01/2023 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿ: ವಾಸಪ್ಪ ನಾಯ್ಕ್‌, ಪಿಎಸ್‌ಐ ತನಿಖೆ-2,  ಉಡುಪಿ ನಗರ ಪೊಲೀಸ್‌ ಠಾಣೆ ಇವರಿಗೆ ಠಾಣೆಯ ಪಿಐ ರವರು ದೂರವಾಣಿ ಕರೆ ಮಾಡಿ ಬೀಡಿನಗುಡ್ಡೆ ಹಳೆ ಮೀನು ಮಾರ್ಕೇಟ್‌ ಬಳಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತಿದ್ದು, ದಾಳಿ ನಡೆಸಿ ಕ್ರಮ ಕೈಗೊಳ್ಳುವಂತೆ ತಿಳಿಸಿದ ಮೇರೆಗೆ, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಬೆಳಿಗ್ಗೆ 07:15 ಗಂಟೆಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬೀಡಿನಗುಡ್ಡೆ ಹಳೆ ಮೀನು ಮಾರ್ಕೇಟ್‌ ಬಳಿ ತಲುಪಿ, ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತಪಡಿಸಿಕೊಂಡು,  ಬೆಳಿಗ್ಗೆ 07:30 ಗಂಟೆಗೆ ದಾಳಿ ನಡೆಸಿ, ಆಪಾದಿತ ಸತೀಶ್‌ ಶೆಟ್ಟಿ ಎಂಬಾತನ್ನು ವಶಕ್ಕೆ ಪಡೆದು ವಿಚಾರಿಸಲಾಗಿ, ಆಪಾದಿತನು ಯಾವುದೇ ಪರವಾನಿಗೆಯಿಲ್ಲದೆ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ತನ್ನ ಸ್ವಂತ ಲಾಭಕ್ಕಾಗಿ ಮದ್ಯ ಮಾರಾಟ ಮಾಡುತ್ತಿರುವುದಾಗಿ ಖಚಿತಪಡಿಸಿಕೊಂಡು, ಆಪಾದಿತನ ದಸ್ತಗಿರಿ ಕ್ರಮ ಜರುಗಿಸಿ, ಆತನ ವಶದಿಂದ ಒಟ್ಟು ರೂ. 4,700/- ಮೌಲ್ಯದ ವಿವಿಧ ಬ್ರ್ಯಾಂಡ್‌ ನ ಮದ್ಯದ ಸಾಚೇಟ್‌ ಗಳನ್ನು ಮತ್ತು ನಗದು ರೂ. 930/- ನ್ನು ವಶಪಡಿಸಿಕೊಂಡು, ಈ ಬಗ್ಗೆ ಸೂಕ್ತ ಕಾನೂನು ಕ್ರಮಕ್ಕಾಗಿ ಆಪಾದಿತ ಹಾಗೂ ಸ್ವತ್ತುಗಳ ಸಮೇತ ವರದಿಯನ್ನು ಸಿಬ್ಬಂದಿಯವರ ಮುಖೇನ ಕಳುಹಿಸಿಕೊಟ್ಟಿರುವುದಾಗಿದೆ. ಈ  ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  05/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ-1965 ಯಂತೆ ಪ್ರಕರಣ ದಾಖಲಿಸಲಾಗಿದೆ

ಇತ್ತೀಚಿನ ನವೀಕರಣ​ : 08-01-2023 08:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080