ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ರವೀಂದ್ರ ಶೆಟ್ಟಿ ಇವರು ದಿನಾಂಕ 06-01-2022  ರಂದು ಬೆಳಿಗ್ಗೆ 11:00 ಗಂಟೆಗೆ  ಶಿರೂರು ಗ್ರಾಮದ ಮೈದಿನಪುರ  ಹೆಚ್ ಪಿ ಪೆಟ್ರೋಲ್ ಬಂಕ್ ಬಳಿಯ ತನ್ನ ಮನೆಯ ಕಂಪೌಂಡ್ ಹೊರಗಡೆ ನಿಂತುಕೊಂಡಿರುವಾಗ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ KA19AB1160 ಟ್ಯಾಂಕರ್ ಲಾರಿ ಚಾಲಕ ಲಾರಿಯನ್ನು ವೇಗದಿಂದ ಚಲಾಯಿಸಿಕೊಂಡು ಬಂದು ಶಿರೂರು ಮೈದಿನಪುರ ಹೆಚ್ ಪಿ ಪೆಟ್ರೋಲ್ ಬಂಕ್ ಬಳಿ ಯು-ಟರ್ನ ನಲ್ಲಿನ ಡೈವರ್ಶನ್ ಬಳಿ ಪೂರ್ವ ಬದಿಯ ರಸ್ತೆಯಿಂದ  ಪಶ್ಚಿಮ ಬದಿಯ ರಸ್ತೆಗೆ ತಿರುಗಿಸಿ ಚಲಾಯಿಸಲು ರಸ್ತೆಯ ಎಡಭಾಗದಿಂದ ರಾ.ಹೆ 66 ನೇದರ ಬಲಕ್ಕೆ ಚಲಾಯಿಸಿದ ಪರಿಣಾಮ  ಭಟ್ಕಳ ಕಡೆಯಿಂದ ಬರುತ್ತಿದ್ದ KA 20ER 0489 ನಂಬ್ರದ ಬೈಕ್ ವೊಂದು ಲಾರಿಗೆ ಡಿಕ್ಕಿ ಹೊಡೆದು ಬೈಕ್ ನ ಲ್ಲಿ ಬರುತ್ತಿದ್ದ ಸವಾರ ಹಾಗೂ ಸಹ ಸವಾರ  ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು  ಪಿರ್ಯಾದುದಾರರು ಹಾಗೂ ಇತರರು ಸ್ಥಳಕ್ಕೆ ಹೋಗಿ ಸವಾರ ಹಾಗೂ ಸಹ ಸವಾರನನ್ನು ಎತ್ತಿ ಉಪಚರಿಸಿದ್ದು , ಈ ಅಪಘಾತದ ಪರಿಣಾಮ ಬೈಕ್ ಸವಾರ ಗಣಪತಿ ಗೊಂಡ ಎಂಬವರಿಗೆ ಕೈ ಕಾಲಿಗೆ ತರಚಿದ ಗಾಯವಾಗಿದ್ದು, ಸೊಂಟದ ಕೆಳ ಭಾಗ ತೀವ್ರವಾಗಿ ಜಖಂಗೊಂಡಿರುತ್ತದೆ ಹಾಗೂ  ಸಹ ಸವಾರ  ವೆಂಕಟೇಶ್ ಗೊಂಡ ಎಂಬವರಿಗೆ ತಲೆಗೆ ತೀವ್ರ ಸ್ವರೂಪದ ಗಾಯವಾಗಿದ್ದು ಪಿರ್ಯಾದುದಾರರು ಹಾಗೂ ಇತರರು ಗಾಯಾಳುಗಳನ್ನು ರಿಕ್ಷಾದಲ್ಲಿ  ಬೈಂದೂರು  ಸರಕಾರಿ ಆಸ್ಪತ್ರೆಗೆ  ಕರೆದು ಕೊಂಡು  ಹೋಗಿದ್ದು  ಅಲ್ಲಿನ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಗಾಯಾಳುಗಳ ಮನೆಯವರು ಗಾಯಾಳುಗಳನ್ನು ಅಂಬುಲೆನ್ಸ್ ನಲ್ಲಿ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ  ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022 ಕಲಂ. 279, 338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹೆಬ್ರಿ: ಫಿರ್ಯಾದಿ ಶ್ರೀಮತಿ ಸುಲೋಚನಾ ಶೆಟ್ಟಿ ಇವರು  ದಿನಾಂಕ 07/01/2022 ರಂದು ಮಧ್ಯಾಹ್ನ 13:00 ಗಂಟೆಗೆ ಚಾರ ಗ್ರಾಮದ ಹಂದಿಕಲ್ಲು ಎಂಬಲ್ಲಿರುವ ಅವರ ಮನೆಯ ಬಳಿಯ ತೋಟದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ಮಗ ಸುಭೋದ ಶೆಟ್ಟಿ ಎಂಬುವವರು ಜಾಗದ ವಿಚಾರದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022 ಕಲಂ:,341,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ನಾಗರಾಜ ದೇವಾಡಿಗ ಪ್ರಾಯ:43 ವರ್ಷ ಎಂಬಾತನು ಮುರ್ಡೆಶ್ವರದಲ್ಲಿ  ಪ್ರಥಮ ವರ್ಷದ ಮೆಕ್ಯಾನಿಕಲ್ ಡಿಪ್ಲೋಮ ಮುಗಿಸಿದ ಬಳಿಕ ಕಿರಿಮಂಜೇಶ್ವರ ಗ್ರಾಮದ ನಾಗೂರು  ಹೊಸ್ಮನೆ   ಎಂಬಲ್ಲಿ ವಾಸವಾಗಿದ್ದು ದಿನಾಂಕ 04/01/2022 ರಂದು ಬೆಳಿಗ್ಗೆ 10:00  ಗಂಟೆಗೆ ಮನೆಯಿಂದ ನಾಗೂರು ಪೇಟೆಗೆಂದು ಹೇಳಿ ಹೋದವನು ವಾಪಾಸು ಮನೆಗೆ ಬಾರದೇ  ಇದ್ದು , ಸಂಬಂಧಿಕರು ಹಾಗೂ ನೆರೆಕೆರೆಯವರಲ್ಲಿ ವಿಚಾರಿಸಿ ಹುಡುಕಾಡಿದಲ್ಲಿ  ಈ ವರೆಗೂ ಪತ್ತೆಯಾಗದೇ ಇದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 07/01/2022 ರಂದು ಪಿರ್ಯಾದಿ ಶ್ರೀಮತಿ ಸರಸ್ವತಿ ಇವರು ಅವರ ಬಾಬ್ತು KA.05.TG.4836 ನೇ ನಂಬರಿನ ಹೊಂಡ ಆ್ಯಕ್ಟಿವಾ ಸ್ಕೂಟರ್‌ನಲ್ಲಿ ಬ್ರಹ್ಮಾವರ ತಾಲೂಕು, ನೀಲಾವರ ಗ್ರಾಮದ ಹೆಬ್ಬಾರಬೆಟ್ಟು ಎಂಬಲ್ಲಿರುವ ಅವರ ಮನೆಯಿಂದ ಆರೂರು ಕ್ರಾಸ್ ಬಳಿ ಇರುವ ಅವರ ದಿನಸಿ ಅಂಗಡಿಗೆ ಹೊರಟು ಸ್ವಲ್ಪ ದೂರದಲ್ಲಿರುವ ಮಣ್ಣು ರಸ್ತೆಗೆ ಪ್ರವೇಶಿಸುವಾಗ  ಸಂಜೆ 5:15 ಗಂಟೆಗೆ ಅವರ ಮನೆಯ ಹತ್ತಿರದ ವಾಸಿಗಳಾದ 1ನೇ ಆರೋಪಿ ದೀಪಾ ಶೆಟ್ಟಿ ಹಾಗೂ ಅವರ ತಾಯಿಯಾದ 2ನೇ ಆರೋಪಿ ಇಂದಿರಾ ಶೆಟ್ಟಿ ಎಂಬವರು ಪಿರ್ಯಾದಿದಾರರ ಸ್ಕೂಟರ್‌ಗೆ ಅಡ್ಡ ಬಂದು, ತಡೆದು ನಿಲ್ಲಿಸಿ 2ನೇ ಆರೋಪಿಯು ಅವರ ಕೈಯಲ್ಲಿ ಇದ್ದ ಕತ್ತಿಯ ಬೆನ್ನು ಭಾಗದಿಂದ ಪಿರ್ಯಾದಿದಾರರ ತಲೆಯ ಹಿಂಬದಿಗೆ ಜೋರಾಗಿ ಹೊಡೆದುದರಿಂದ  ಪಿರ್ಯಾದಿದಾರರು ಆಯ ತಪ್ಪಿ ಸ್ಕೂಟರ್ ಸಮೇತ ನೆಲದ ಮೇಲೆ ಬಿದ್ದಿರುತ್ತಾರೆ. ಆಗ 1 ನೇ ಆರೋಪಿಯು ಕಬ್ಬಿಣದ ರಾಡ್‌ನಿಂದ ಪಿರ್ಯಾದಿದಾರರ ಎರಡೂ ಕಾಲುಗಳ ಮೊಣಗಂಟಿನ ಕೆಳಗೆ ಜೋರಾಗಿ ಹೊಡೆದಿದ್ದು ಪಿರ್ಯಾದಿದಾರರ ನೋವಿನಿಂದ ಬೊಬ್ಬೆ ಹಾಕಿದಾಗ ಅವರ ಮನೆಯವರು ಅವರ ಬಳಿ ಓಡಿ ಬಂದಿರುತ್ತಾರೆ. ಅದನ್ನು ನೋಡಿದ ಆರೋಪಿಗಳು ಪಿರ್ಯಾದಿದಾರರನ್ನು ಉದ್ದೇಶಿಸಿ ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ 341, 324, 326, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-01-2022 10:54 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080