ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪುಡುಬಿದ್ರಿ: ಪಿರ್ಯಾದಿ ಅನುಪ್‌ ಕುಮಾರ್ ಇವರು ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದುದಾರರ ತಂದೆ ಕೃಷ್ಣ.ಡಿ (63) ಎಂಬುವರು ದಿನಾಂಕ 06.12.2022 ರಂದು 12:45 ಗಂಟೆಗೆ ಎರ್ಮಾಳ್ ಪೇಟೆಗೆ ಹೋಗಿ  ವಾಪಾಸ್ಸು  ಮನೆ ಕಡೆಗೆ  ನಡೆದುಕೊಂಡು ಬರುತ್ತಾ  ಕಾಪು  ತಾಲೂಕು  ತೆಂಕ ಎರ್ಮಾಳ್ ಗ್ರಾಮದ  ಪೂಂದಾಡು ಕ್ರಾಸ್ ರಸ್ತೆಗೆ ಹೋಗಲು  ಮಂಗಳೂರು-ಉಡುಪಿ ರಾ.ಹೆ-66 ನ್ನು  ದಾಟಿ,  ಉಡುಪಿ-ಮಂಗಳೂರು  ರಾ ಹೆ-66 ರ ಪಶ್ಚಿಮ ಬದಿಯ ಡಿವೈಡರ್ ಬಳಿ  ದಾಟಲು  ನಿಂತಿರುವಾಗ ಉಡುಪಿ ಕಡೆಯಿಂದ KA-20-MD-1026 ನೇ ನಂಬ್ರದ ಕಾರನ್ನು ಅದರ  ಚಾಲಕ ಅಂಕಿತ್ ಉಡುಪಿ  ಎಂಬುವರು ಅತೀವೇಗ ಹಾಗೂ ನಿರ್ಲಕ್ಷತನದಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ  ತಂದೆಗೆ ಡಿಕ್ಕಿ ಹೊಡೆದ  ಪರಿಣಾಮ  ಅವರು ಕಾರಿನ ಮೇಲೆ  ಬಿದ್ದು,  ಬಳಿಕ ರಸ್ತೆಗೆ ಬಿದ್ದು ತಲೆ, ಕೈ, ಕಾಲುಗಳಿಗೆ ಗಾಯ ಉಂಟಾಗಿದ್ದು, ಗಾಯಗೊಂಡ ಕೃಷ್ಣಾರ ವರನ್ನು ಚಿಕಿತ್ಸೆಯ  ಬಗ್ಗೆ ರಿಕ್ಷಾ ಒಂದರಲ್ಲಿ ಅಪಘಾತ ಕಂಡ ಸಚಿನ್ ಮತ್ತು  ಸದಾಶಿವ ಎಂಬುವರು ಕಾಪುವಿನ ಪ್ರಶಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಚಿಕಿತ್ಸೆ ಕೊಡಿಸಿ  ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮದ್ಯಾಹ್ನ ಸುಮಾರು 14:00 ಗಂಟೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪರೀಕ್ಷಿಸಿದಾಗ  ಕೃಷ್ಣಾರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 153/2022 ಕಲಂ: 279,304(A) ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಬೈಂದೂರು: ಫಿರ್ಯಾದಿ ಚಂದು ಇವರಿಗೂ   ಹಾಗೂ  ಪಿರ್ಯಾದುದಾರರ   ತಂಗಿ ಬಚ್ಚಿ ಎಂಬವರಿಗೂ  ಕುಟುಂಬದ  ಆಸ್ತಿಯ  ವಿಚಾರದಲ್ಲಿ ತಕರಾರು    ಇರುತ್ತದೆ.   ಪಿರ್ಯಾದುದಾರರು ಮನೆಯ ಬಳಿ ಇರುವ  ಅವರ  ಪಾಲಿನ  7-8  ತೆಂಗಿನ ಮರಗಳ   ಕಾಯಿ ತೆಗೆಯುತ್ತಿದ್ದರು.  ದಿನಾಂಕ  05-12-2022  ರಂದು  ಪಿರ್ಯಾದುದಾರರು ಮನೆಯಲ್ಲಿ ಇರುವಾಗ ಬೆಳಿಗ್ಗೆ ಸುಮಾರು 11-30  ಗಂಟೆಗೆ   ಮನೆಯ ಬಳಿ   ತೆಂಗಿನ ಕಾಯಿ  ತೆಗೆಯುವ ಶಬ್ದ ಕೇಳಿ ಮನೆಯ ಮುಂಭಾಗ ಬಂದು  ಬಾಗಿಲಿನ ಬಳಿ  ನಿಂತು   ನೋಡುವಾಗ   ಆಪಾದಿತ  ನಿತ್ಯಾನಂದ   ದೇವಾಡಿಗ ಎಂಬವನು  ಕೊಕ್ಕೆ  ಕಟ್ಟಿಕೊಂಡು   ತೆಂಗಿನ ಕಾಯಿ ಕೊಯ್ಯುವುದನ್ನು  ನೋಡಿ, ಅಲ್ಲಿಯೇ   ಹತ್ತಿರದಲ್ಲಿ ನಿಂತ್ತಿದ್ದ ತಂಗಿ ಬಚ್ಚಿ ರವರಲ್ಲಿ ಪಿರ್ಯಾದುದಾರರು ನಿಮಗೆ  ನಾಚಿಕೆ  ಆಗುವುದಿಲ್ಲವಾ ನಮ್ಮ ಪಾಲಿಗೆ  ಬಂದ ತೆಂಗಿನ ಮರದ ಕಾಯಿ ತೆಗೆಯಲು  ಎಂದು ಹೇಳಿರುತ್ತಾರೆ. ಆಗ  ನಿತ್ಯಾನಂದನು   ಕೊಕ್ಕೆಯನ್ನು ಬಿಸಾಡಿ   ಪಿರ್ಯಾದುದಾರರ  ಮನೆಯ ಒಳಗಡೆ ಬಂದು   ಕೈಯಿಂದ ಪಿರ್ಯಾದುದಾರರ  ಮುಖಕ್ಕೆ  ಹೊಡೆದು  ಹಿಂದಿಯಲ್ಲಿ ಮಾದ್ರ್ ಚೋದ್ ‘’  ರಾಂಡ್’’  ಎಂದು  ಅವಾಚ್ಯ ಶಬ್ದ ಗಳಿಂದ ಬೈದು  ನಿನ್ನನ್ನು ಕೊಂದೇ  ಹಾಕುತ್ತೇನೆ  ಎಂದು  ದೂಡಿಹಾಕಿ  ಎದೆಗೆ, ಹೊಟ್ಟೆಗೆ  ಕಾಲಿನಿಂದ  ತುಳಿದಿರುತ್ತಾನೆ.    ಹಲ್ಲೆಯಿಂದ   ಪಿರ್ಯಾದುದಾರರ  ಮುಖಕ್ಕೆ, ತಲೆಗೆ  ಎದೆಗೆ ಹೊಟ್ಟೆಗೆ   ನೋವುಂಟುಮಾಡಿರುತ್ತಾನೆ. ಪಿರ್ಯಾದುದಾರನ್ನು ಅವರ  ಮಗ ನರಸಿಂಹ ದೇವಾಡಿಗ  ಎಂಬವನು  ಕುಂದಾಪುರ ಸಾರ್ವಜನಿಕ ಆಸ್ಪತ್ರೆಗೆ  ಚಿಕಿತ್ಸೆಗೆ ಧಾಖಲಿಸಿರುತ್ತಾನೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 237/2022 ಕಲಂ. 448, 323,  504,  506,  354 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕುಂದಾಪುರ: ದಿನಾಂಕ 05/12/2022 ರಂದು ರಾತ್ರಿ 11:00 ಗಂಟೆಯಿಂದ ದಿನಾಂಕ 06/12/2022 ರಂದು ಬೆಳಿಗ್ಗೆ 06:30 ಗಂಟೆಯ ಮದ್ಯಾವಧಿಯಲ್ಲಿ ಪಿರ್ಯಾದಿ ಮುಬಸ್ಸೀರ್ ಇವರು ಮತ್ತು ಅವರ ಸ್ನೇಹಿತನಾದ ರಿಯಾಜ್ ರವರು ಉಳಿದುಕೊಂಡಿದ್ದ ಕುಂದಾಪುರದ ಶಿವಪ್ರಸಾದ ಗ್ರ್ಯಾಂಡ್ ಹೋಟೆಲಿನ ನಂಬ್ರ 304 ನೇ ರೂಂನ ಬಾಗಿಲನ್ನು ತೆಗೆದು ಯಾರೋ ಕಳ್ಳರು ಒಳಪ್ರವೇಶಿಸಿ ರಿಯಾಜ್ ರವರ ಬಾಬ್ತು ರೂ 70000/- ಮೌಲ್ಯದ  ಸ್ಯಾಮಸಂಗ್ ಕಂಪನಿಯ FLY 3 ಮೊಬೈಲ್-1, ರೂ 20000/- ಮೌಲ್ಯದ ಒಪ್ಪೋ ಕಂಪನಿಯ ಮೊಬೈಲ್-1, ನಗದು 138000/-  ಹಾಗೂ ಪಿರ್ಯಾದಿದಾರರಾದ ಮುಬಸ್ಸಿರ್ ರವರ ಬಾಬ್ತು ಪರ್ಸಿನಲ್ಲಿದ್ದ  ನಗದು ಹಣ ರೂ 12,000 ಸೇರಿದಂತೆ ಒಟ್ಟು 240000/- ಮೌಲ್ಯದ ನಗದು ಮತ್ತು ಮೊಬೈಲ್ ಫೋನ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 130/2022 ಕಲಂ: 380 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿ ದೀಪಾ ರೈ ಇವರು ದಿನಾಂಕ :06.12.2022 ರಂದು ನಡೆಯಲಿರುವ ಅತ್ತೆಯ ಮಗಳ ಮದುವೆಯ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮದುವೆ ಕಾರ್ಯಕ್ರಮದಲ್ಲಿ ಧರಿಸಲು ಚಿನ್ನಾಭರಣಗಳನ್ನು 3 ಬ್ಯಾಗ್ ಗಳಲ್ಲಿ ಸೀರೆಯ ಮಧ್ಯ ಭಾಗದಲ್ಲಿ ಇಟ್ಟುಕೊಂಡು  ಊರು ಮನೆಯಾದ ಆದ ಕಟಪಾಡಿಗೆ ದಿನಾಂಕ : 05.12.2022 ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬಯಿಯ ಪನ್ ವೇಲಿನಿಂದ ಮತ್ಸ್ಯಗಂದ ರೈಲಿನ A1 ಕೋಚ್ ನಲ್ಲಿ ಉಡುಪಿಗೆ ಹೊರಟಿದ್ದು, ದಿನಾಂಕ: 06.12.2022 ರಂದು ಬೆಳಿಗ್ಗೆ ಸುಮಾರು 05:00 ಗಂಟೆಗೆ ಕುಂದಾಪುರ ಸ್ಟೇಷನ್ ತಲುಪಿದ್ದು, ಉಡುಪಿಯಲ್ಲಿ ಇಳಿಯುವ ಸಲುವಾಗಿ ತಾವು ತಂದಿದ್ದ ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದು, ರೈಲು  ಮುಂಜಾವ ಸುಮಾರು 5.40 ಗಂಟೆಗೆ ಉಡುಪಿಯ ರೈಲು ಸ್ಟೇಷನ್ ಗೆ ಬಂದಿರುತ್ತದೆ. ಬಳಿಕ ಮನೆಯಾದ ಕಟಪಾಡಿಗೆ ಹೋಗಿ ಬ್ಯಾಗ್ ಪರಿಶೀಲಿಸಿದಲ್ಲಿ 3 ಬ್ಯಾಗ್ ನಲ್ಲಿಟ್ಟಿರುವ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳು ಕಳವಾಗಿರುವುದು ಕಂಡು ಬಂದಿರುತ್ತದೆ.ಕಳುವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ ಆಗಿದ್ದು, ಅಂದಾಜು ಮೌಲ್ಯ  34 ಲಕ್ಷ ರೂಪಾಯಿ ಆಗಬಹುದು ಹಾಗೂ  ಕಳುವಾದ ಡೈಮಂಡ್ ನ ಅಂದಾಜು ಮೌಲ್ಯ 6 ಲಕ್ಷ ರೂಪಾಯಿ ಆಗಬಹುದು ಕಳುವಾದ ಸ್ವತ್ತಿನ ಒಟ್ಟು ಮೌಲ್ಯ ಸುಮಾರು 40 ಲಕ್ಷ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 212/2022  ಕಲಂ: 379 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌‌

  • ಕಾರ್ಕಳ: ಪಿರ್ಯಾದಿ ಅಶೋಕ ಇವರ ತಂದೆ ಚುಕುಡ, ಪ್ರಾಯ:65 ವರ್ಷ ರವರು ದಿನಂಪ್ರತಿ ಸಾಯಂಕಾಲ ಸುಮಾರು 4:30 ಗಂಟೆಗೆ ತೋಟಕ್ಕೆ ಬಾವಿಯಿಂದ ನೀರು ತೆಗೆದು ಹಾಕುವರೇ ಅದೇ ರೀತಿ ದಿನಾಂಕ: 06.12.2022 ರಂದು ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ಮೇಲ್ಜಡ್ಡು ದರ್ಖಾಸು ಎಂಬಲ್ಲಿ ಪಿರ್ಯಾದಿದಾರರ ಮನೆಯ ತೋಟದ ಬಳಿ ಸಮಯ ಸಾಯಂಕಾಲ ಸುಮಾರು 4:30 ಗಂಟೆಯಿಂದ 5:10 ಗಂಟೆಯ ಮದ್ಯಾವಧಿಯಲ್ಲಿ ಚುಕುಡರವರು ಮನೆಯಿಂದ ಹೊರಟು ತೋಟದಲ್ಲಿರುವ ಬಾವಿಗೆ ಇರುವ ಮೆಟ್ಟಿಲಿನಿಂದ ಇಳಿದು ಕೊಡಪಾನದಲ್ಲಿ ತೋಟದಲ್ಲಿರುವ ಗಿಡಗಳಿಗೆ ನೀರು ಹಾಕುವರೇ, ನೀರು ತರುವಾಗ ಆಕಸ್ಮಿಕವಾಗಿ ಮೆಟ್ಟಲಿನಿಂದ ಕಾಲು ಜಾರಿ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯು.ಡಿ.ಆರ್ 30/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 07-12-2022 10:03 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080