ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು

  • ಬ್ರಹ್ಮಾವರ: ಪಿರ್ಯಾದಿ ಸುರೇಶ್‌ ದೇವಾಡಿಗ (52), ತಂದೆ; ದಿ. ಕೃಷ್ಣ ದೇವಾಡಿಗ, ವಾಸ: ಮನೆ ನಂ 8-37, ಕರಂಬಳ್ಳಿ ಗ್ರಾಮ, ಇವರು ಉಡುಪಿ ತಾಲೂಕು ನಿಟ್ಟೂರು ಆಭರಣ ಮೋಟಾರ್ಸ್‌ ಮಾರುತಿ ಶೋ ರೂಮ್ ನಲ್ಲಿ ಸೆಕ್ಯೂರಿಟಿ ಸೂಪರ್‌ವೈಸರ್‌ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಸದ್ರಿ ಶೋ ರೂಮ್‌ನ ವಾಹನಗಳನ್ನು ಬ್ರಹ್ಮಾವರ ತಾಲೂಕು ಉಪ್ಪೂರು ಗ್ರಾಮದ, ರಾಹೆ 66 ರ ಬದಿಯಲ್ಲಿರುವ ಮಾರುತಿ ಕಾರುಗಳ ಸ್ಟಾಕ್‌ ಯಾರ್ಡ್‌ ನಲ್ಲಿ. ನಿಲ್ಲಿಸುತ್ತಿದು, ಫಿರ್ಯಾದುದಾರರು ತಿಂಗಳಿಗೊಮ್ಮೆ ಸದ್ರಿ ಯಾರ್ಡ್‌ ನಲ್ಲಿ ನಿಲ್ಲಿಸಿದ್ದ ಕಾರುಗಳನ್ನು ಪರಿಶೀಲನೆ ಮಾಡುತ್ತಿರುವುದಾಗಿದೆ. ಅದೇ ರೀತಿ ದಿನಾಂಕ 28.11.2022 ರಂದು ಮಧ್ಯಾಹ್ನ 4:00 ಗಂಟೆಗೆ ಪರಿಶೀಲನೆ ಮಾಡುವಾಗ ಕಾರುಗಳು ಯಥಾ ಸ್ಥಿತಿಯಲ್ಲಿರುತ್ತದೆ, ಆದರೇ ದಿನಾಂಕ: 06.12.2022 ರಂದು ಮಧ್ಯಾಹ್ನ 3:30 ಗಂಟೆಗೆ ಅವರ ಟೆಕ್ನಿಶೀಯನ್‌ ಕಾರುಗಳನ್ನು ಚೆಕ್‌ ಮಾಡುವಾಗ ನೊಂದಣಿ ಆಗದೇ ಇರುವ 1] ENGINE NO : G12BN1177827, CHESSIS NO; MA3EZLFIT00260806, 2] ENGINE NO: G12BN1142829, CHESSIS NO: MA3EZLF1TOO252406, 3] ENGINE NO: G12BN1177662, CHESSIS NO : MA3EZLF1T002607970 ನಂಬ್ರ ಹೊಂದಿರುವ ಮೂರು ಮಾರುತಿ ಸೂಪರ್‌ ಕ್ಯಾರಿ ಗೂಡ್ಸ್‌ ವಾಹನಗಳ ಸೈಲೆನ್ಸ್‌ರನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ಮೂರು ಸೈಲೆನ್ಸರ್‌ ಗಳ ಒಟ್ಟು ಮೌಲ್ಯ ರೂ. 2,10,000/- ಆಗಿರುತ್ತದೆ ಈ ಬಗ್ಗೆ ಬ್ರಹ್ಮಾವರ ಠಾಣೆ ಅಪಾಧ ಕ್ರಮಾಂಕ 208/2022 ಕಲಂ : 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಪಘಾತ ಪ್ರಕರಣಗಳು

  • ಪಡುಬಿದ್ರಿ:  ಪಿರ್ಯಾದಿ ಅಹಮ್ಮದ್ ರಿಯಾಜ್, ಪ್ರಾಯ: 29 ವರ್ಷ, ತಂದೆ: ಹಮೀದ್, ವಾಸ: #1-213, ಜವನರಕಟ್ಟೆ, ಬೆಳಪು ಅಂಚೆ ಮತ್ತು ಗ್ರಾಮ ಇವರ ತಮ್ಮ ಮಹಮ್ಮದ್ ರಮೀಝ್ (21) ಎಂಬಾತನು ಉಚ್ಚಿಲದಲ್ಲಿ ಪಿರ್ಯಾದಿದಾರರೊಂದಿಗೆ ಮೀನು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದು,  ದಿನಾಂಕ: 07.12.2022 ರಂದು ಬೆಳಿಗ್ಗೆ ಅವರ ಚಿಕ್ಕಪ್ಪನ  KA-20-EM-4454 ನೇ ನಂಬ್ರದ TVS XL-100 ಮೋಟಾರ್ ಸೈಕಲ್ಲಿಗೆ ಬುದಗಿ ಪೆಟ್ರೋಲ್ ಪಂಪ್‌‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಉಚ್ಚಿಲದ ಕಡೆಗೆ ಬರುತ್ತಾ, ಸಮಯ ಸುಮಾರು 08:30 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲ ಪೇಟೆಯ ಪಣಿಯೂರು ಕ್ರಾಸ್ ನ ಡಿವೈಡರ್ ಬಳಿ ತಲುಪುತ್ತಿದ್ದಂತೆ KA-51-D-9446  ನೇ ನಂಬ್ರದ ಬಸ್ಸು ಚಾಲಕ ಮಣಿಕಂಠ ಎಂಬಾತನು ತನ್ನ  ಬಸ್ಸನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮಹಮ್ಮದ್ ರಮೀಝನು ಚಲಾಯಿಸಿಕೊಂಡು ಹೋಗುತ್ತಿದ್ದ ಲೂನಾ ಕ್ಕೆಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ, ರಮೀಝನು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು,ಅತನ ಹಣೆಗೆ, ಮೂಗಿಗೆ, ಗಲ್ಲಕ್ಕೆ, ಎಡಕೈ ಮೊಣಗಂಟಿನ ಬಳಿ ತೋಳಿಗೆ,ಬಲಕಾಲಿನ ಮೊಣಗಂಟಿಗೆ ತರಚಿದ ಗಾಯಗಳಾಗಿದ್ದು, ಎಡಕಾಲಿನ ಮೊಣಗಂಟಿನ ಮೂಳಗೆ ಮುರಿತ ಆಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  154/2022 ಕಲಂ 279,  338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 07-12-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080