ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಬೈಂದೂರು: ಪಿರ್ಯಾದಿದಾರರಾದ ಧನರಾಜ್ ಪೂಜಾರಿ (29), ತಂದೆ:ಜೋಗಯ್ಯ ಪೂಜಾರಿ, ವಾಸ: ಕೊಡ್ಲ ಹಿತ್ಲು, ನಿರ್ಗದ್ದೆ, ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 05/12/2021 ರಂದು ರಾತ್ರಿ 08:00 ಗಂಟೆಗೆ ಅವರ ಚಿಕ್ಕಪ್ಪನ ಮನೆಯ ಎದುರು ಮಿನಿ ಬಸ್ಸನ್ನು ತೊಳೆಯುತ್ತಿರುವಾಗ ಶಿರೂರು ಗ್ರಾಮದ ನಿರ್ಗದ್ದೆ  ಬಳಿ ರಾಷ್ಟ್ರೀಯ  ಹೆದ್ದಾರಿ 66 ರ ಪಶ್ಚಿಮ ಬದಿಯ ರಸ್ತೆಯ ಮಣ್ಣು  ರಸ್ತೆಯಲ್ಲಿ ಪರಿಚಯದ ನಾಗೇಂದ್ರ ಎಂಬುವವರು ನಿರ್ಗದ್ದೆ ಕಡೆಯಿಂದ ಶಿರೂರು ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಗ್ರೀನ್ ವ್ಯಾಲಿ ಕಾಲೇಜ್ ಕಡೆಯಿಂದ KA-20-AA-0355 ನೇ TATA ACE ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು  ಹೋಗುತ್ತಿದ್ದ ನಾಗೇಂದ್ರ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ರಕ್ತ ಗಾಯವಾಗಿದ್ದು ಅವರನ್ನು ಅಲ್ಲಿ ಸೇರಿದವರು ಉಪಚರಿಸಿ 108 ವಾಹನದಲ್ಲಿ ಬೈಂದೂರು ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು  ವೈದ್ಯಾಧಿಕಾರಿಯವರು ಪರೀಕ್ಷೀಸಿದ್ದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 196/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಅಜಯ್  (26), ತಂದೆ: ತಿಮ್ಮಪ್ಪ ಬಿ, ವಾಸ: ದೇವಾನುಗ್ರಹ, ವಿಠೋಬ ಭಜನಾ ಮಂದಿರದ ಬಳಿ, ಅಂಬಲಪಾಡಿ, ಉಡುಪಿ ತಾಲೂಕು ಇವರು ದಿನಾಂಕ 06/12/2021 ರಂದು ಬೆಳಿಗ್ಗೆ ಅವರ ಮೋಟಾರು ಸೈಕಲ್ ನಂಬ್ರ KA-20-EK- 8869 ನೇದರಲ್ಲಿ ಲೈನ್ ಸೇಲ್ ಬಗ್ಗೆ ಹಿರಿಯಡ್ಕಕ್ಕೆ ಹೊರಟಿದ್ದು, ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಹಿರಿಯಡ್ಕಕ್ಕೆ ಬರುತ್ತಿದ್ದಾಗ ಬೆಳಿಗ್ಗೆ 10:15 ಗಂಟೆಗೆ ಓಂತಿಬೆಟ್ಟು ದೇವಿ ಪ್ರಸಾದ್ ಮನೆಯ ಎದುರು ತಲುಪುವಾಗ ಅವರ ಎದುರಿನಿಂದ ಹಿರಿಯಡ್ಕ ಕಡೆಯಿಂದ ಉಡುಪಿ ಕಡೆಗೆ ಒಂದು ಬೊಲೆರೊ ಗೂಡ್ಸ್ ವಾಹನವನ್ನು ಅದರ ಚಾಲಕ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಒಂದು ಆಟೋ ರಿಕ್ಷಾವನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಬಲಕೈಗೆ ಮೂಳೆ ಮುರಿತದ ಜಖಂ ಆಗಿದ್ದು, ಎಡ ಕಾಲಿಗೆ ರಕ್ತ ಗಾಯವಾಗಿರುತ್ತದೆ ಹಾಗೂ ಮೈ ಮೇಲೆ ಅಲ್ಲಲ್ಲಿ ತರಚಿದ ರಕ್ತ ಗಾಯವಾಗಿರುತ್ತದೆ. ಆಗ ರಸ್ತೆಯಲ್ಲಿ ಹೋಗುತ್ತಿದ್ದ ವಾಹನದವರು ಅಲ್ಲಿಗೆ ಬಂದು ಅವರನ್ನು ಎತ್ತಿ ಉಪಚರಿಸಿರುತ್ತಾರೆ. ಅವರಿಗೆ ಢಿಕ್ಕಿ ಹೊಡೆದ ಬೊಲೆರೋ ಗೂಡ್ಸ್ ವಾಹನದ ನಂಬ್ರ KA-35-P-2378 ಆಗಿರುತ್ತದೆ. ಅದರ ಚಾಲಕನ ಹೆಸರು ಶಿವಕುಮಾರ್ ಆಗಿರುತ್ತದೆ. ಅಲ್ಲಿ ಸೇರಿದವರು ಒಂದು ರಿಕ್ಷಾದಲ್ಲಿ ಪಿರ್ಯಾದಿದಾರನ್ನು ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅಲ್ಲಿ  ವೈಧ್ಯರು ಚಿಕಿತ್ಸೆ ನೀಡಿ ಸಂಜೆ ಅಲ್ಲಿಂದ ಬಿಡುಗಡೆ ಮಾಡಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಮಲ್ಪೆ : ಪಿರ್ಯಾದಿದಾರರಾದ ಜಯ ಭಂಡಾರಿ (62), ತಂದೆ: ದಿ. ಗೋವಿಂದ ಭಂಡಾರಿ, ವಾಸ: 8-64 ಸಿ  ಟಿ ಎ ಪೈ ರಸ್ತೆ ಕಡೇಕಾರು ಇವರ ಮಗ ಅಮಿತ್ ಭಂಡಾರಿ (30) ರವರು ಮುಂಬೈಯಲ್ಲಿ ಕಂಪ್ಯೂಟರ್ ಸಾಫ್ಟ್ ವೇರ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 12/12/2021 ರಂದು  ಬಾರ್ಕೂರು ದೇವಸ್ಥಾನದಲ್ಲಿ  ಮದುವೆ ಕಾರ್ಯಕ್ರಮ ಇಟ್ಟುಕೊಂಡಂತೆ , 10 ದಿನಗಳ  ಹಿಂದೆ ಅವರ ಮದುವೆಯ ಬಗ್ಗೆ ಊರಿಗೆ  ಬಂದಿರುತ್ತಾರೆ . ದಿನಾಂಕ 05/12/2021 ರಂದು ರಾತ್ರಿ 8:30 ಗಂಟೆಗೆ ಹೋಟೆಲ್ ಗೆ ಊಟ ಮಾಡಿ ಬರುವುದಾಗಿ ಮನೆಯಿಂದ ಹೋದವರು ಈವರೆಗೆ ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಮಣಿಪಾಲ: ಪಿರ್ಯಾದಿದಾರರಾದ ದೇವಿ (28), ಗಂಡ: ಸತೀಶ್, ವಾಸ: 4 ನೇ ಕ್ರಾಸ್ , ನೇತಾಜಿ ನಗರ, 80 ಬಡಗುಬೆಟ್ಟು  ಗ್ರಾಮ, ಉಡುಪಿ ತಾಲೂಕು ಇವರ ಎದುರು ಮನೆಯ ಜಯಲಕ್ಷ್ಮೀ ಎಂಬುವವರು ಎರಡು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಹೋಗಲು ನಿರಾಕರಿಸುತ್ತಿದ್ದರು, ಈ ಹಿಂದೆ ಹಲವಾರು  ಬಾರಿ ಆತ್ಮಹತ್ಯೆಗೂ ಪ್ರಯತ್ನಿಸಿದ್ದು ನೆರೆ ಕೆರೆಯವರು ತಪ್ಪಿಸಿರುತ್ತಾರೆ, ಇವರು ಮಾನಸಿಕ ಖಿನ್ನತೆಯಿಂದಲೋ ಅಥವಾ ಇತರೆ ಯಾವುದೋ ಹೇಳಿಕೊಳ್ಳಲಾಗದ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/12/2021 ರಂದು ಬೆಳಿಗ್ಗೆ 10:30 ಗಂಟೆಯಿಂದ 12:45  ಗಂಟೆ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ನೇತಾಜಿನಗರದ, 80 ಬಡಗುಬೆಟ್ಟು ಗ್ರಾಮದ  ಮನೆಯ ಹಾಲ್ ನ ಕಬ್ಬಿಣದ ಪಕ್ಕಾಸಿಗೆ ಸೀರೆಯನ್ನ ಕಟ್ಟಿ ಇನ್ನೊಂದು ತುದಿಯನ್ನು  ಕುತ್ತಿಗೆಗೆ ಕಟ್ಟಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ : ಪಿರ್ಯಾದಿದಾರರಾದ ದಿನೇಶ್‌ ಶೆಟ್ಟಿ (42), ತಂದೆ: ನೋನು ಶೆಟ್ಟಿ, ವಾಸ: ಮೇಗಿನ ಮನೆ, ಚೆಂಡೆ ಬಸದಿ ಬಳಿ, ನಲ್ಲೂರು ಗ್ರಾಮ, ಕಾರ್ಕಳ ತಾಲೂಕು ಇವರ ತಂಗಿಯ ಗಂಡ ದಿನೇಶ್ ಶೆಟ್ಟಿ (45) ಇವರು ಕಾರ್ಕಳ ತಾಲೂಕು ರೆಂಜಾಳ ಗ್ರಾಮದ ಮಹಾಲಕ್ಷ್ಮೀ ದೇವಸ್ಥಾನದ ಬಳಿ ಇರುವ ಲೀಲಾ ಸದನದಲ್ಲಿ ವಾಸವಾಗಿದ್ದು, ದಿನಾಂಕ 06/12/2021 ರಂದು ಮದ್ಯಾಹ್ನ 2:45 ಗಂಟೆಗೆ ಹೃದಯಾಘಾತವಾಗಿ ಕಾರ್ಕಳದ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 46/2021 ಕಲಂ: 174 (3) (iv) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-12-2021 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080