ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿ ಲಕ್ಷ್ಮಣ ಪಿ.ಎ (55) ತಂದೆ: ದಿ. ಅಣ್ಣಯ್ಯ ಪೂಜಾರಿ ವಾಸ: ಹೌಸ್ ನಂಬ್ರ 1-132, ರಾಜೀವನಗರ, ಕೊಳಂಬೆ, ಬ್ರಹ್ಮಾವರ ಇವರು  ದಿನಾಂಕ: 28/11/2021 ರಂದು ಬೆಳಿಗ್ಗೆ 05:30 ಗಂಟೆಗೆ ಎಂದಿನಂತೆ ಶಾರದ ಕಲ್ಯಾಣಮಂಟಪ ಜಂಕ್ಷನ್ ಕಡೆಯಿಂದ ಮಣಿಪಾಲ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ರಾ.ಹೆ 169(ಎ) ರಲ್ಲಿ ಮೆಸ್ಕಾಂ ಗೆಸ್ಟ್ ಹೌಸ್ ಎದುರು ತಲುಪುವಾಗ ಕಲ್ಸಂಕ ಕಡೆಯಿಂದ ಮಣಿಪಾಲ ಕಡೆಗೆ ಓರ್ವ ಅರಿಚಿತ ಸ್ಕೂಟರ್ ಸವಾರ ತನ್ನ ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು  ಬಂದು ತೀರಾ ಎಡಬದಿಗೆ ಬಂದು ಪಿರ್ಯಾದಿದಾರರಿಗೆ ಹಿಂದಿನಿಂದ ಡಿಕ್ಕಿಹೊಡೆದ  ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಕೈಗೆ ಮೂಳೆಮುರಿತ ಉಂಟಾಗಿರುತ್ತದೆ. ಅಪರಿಚಿತ ಸ್ಕೂಟರ್ ಸವಾರ ತನ್ನ ಸ್ಕೂಟರನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 82/2021 ಕಲಂ  279 338 ಐಪಿಸಿ. ಮತ್ತು 134(ಎ)&(ಬಿ) ಜೊತೆಗೆ 187 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಸಮೀಕ್ಷ ಪ್ರಾಯ :20 ವರ್ಷ ತಂದೆ: ಸುದೇಶ್ ಹೆಗ್ಡೆ   ವಾಸ : ಬಿ. 201, ಶ್ರೇಯಸ್ ಅಪಾರ್ಟಮೆಂಟ್, ಚಾಂತಾರು  ರಸ್ತೆ, ಬ್ರಹ್ಮಾವರ, ಉಡುಪಿ ತಾಲೂಕು ಇವರು ಹಾಗು ಅವರ ಸ್ನೇಹಿತೆ ರೈಸಾ ಶಾರೋಮ್ ಡಿಸೋಜಾರವರು ದಿನಾಂಕ : 30.11.2021 ರಂದು ಸಂಜೆ ಎಂ.ಐ.ಟಿಯಿಂದ ಸ್ಕೂಟಿಯಲ್ಲಿ ಹೊರಟು ಇಂದ್ರಾಳಿ ಲಕ್ಷ್ಮೀಂದ್ರ ನಗರದ ಬಳಿ ಉಡುಪಿ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 169 (ಎ) ರಸ್ತೆಯ ಎಡ ಬದಿಯಲ್ಲಿ ತಾವು ಹೋಗಿದ್ದ ಸ್ಕೂಟಿಯನ್ನು ನಿಲ್ಲಿಸಿ, ರಸ್ತೆಯ ಬಲಬದಿಯಲ್ಲಿದ್ದ ಝುಡಿಯೋ ಬಟ್ಟೆ ಅಂಗಡಿಗೆ ಹೋಗಿ ಬಳಿಕ ವಾಪಾಸು ಸುಮಾರು 18.50 ಗಂಟೆಗೆ ತಾವು ಇಟ್ಟ ಸ್ಕೂಟಿಯ ಬಳಿ ನಡೆದುಕೊಂಡು ಬರುತ್ತಿರುವಾಗ ಮಣಿಪಾಲ ಕಡೆಯಿಂದ ಉಡುಪಿ ಕಡೆಗೆ KA20EK6433  ನೇ ಸ್ಕೂಟರನ್ನು ಅದರ ಸವಾರನು ಹಿಂಬದಿಯಲ್ಲಿ ಓರ್ವ ಸಹಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗು ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು ರೈಸಾ ಡಿಸೋಜಾರವರಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ರೈಸಾ ಡಿಸೋಜಾರವರು ರಸ್ತೆಗೆ ಬಿದ್ದು ತೀವ್ರ ಸ್ವರೂಪದ ರಕ್ತಗಾಯವಾಗಿದ್ದು, ಮೋಟಾರು ಸೈಕಲ್ ಸವಾರರಿಗೆ ಸಾದಾ ಸ್ವರೂಪದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 160/2021 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ದಿನಾಂಕ 29/11/2021 ರಂದು ಬೆಳಿಗ್ಗೆ  ಸುಮಾರು 10:20 ಗಂಟೆಗೆ, ಕುಂದಾಪುರ  ತಾಲೂಕಿನ, ಕಾಳಾವರ ಗ್ರಾಮದ   ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಹಾಲು ಡೈರಿ ಹತ್ತಿರ   ಕಾಂಕ್ರೀಟ್  ರಸ್ತೆಯಲ್ಲಿ , ಆಪಾದಿತ ಚರಣ್ ರಾಜ್   ಎಂಬವರು   KA 20 EN 0507  ನೇ ಬುಲೇಟ್ ಬೈಕನ್ನು ಕಾಳಾವರ ಜಂಕ್ಷನ್  ಕಡೆಯಿಂದ ಶ್ರೀ ಸುಬ್ರಹ್ಮಣ್ಯ  ದೇವಸ್ಥಾನದ    ಕಡೆಗೆ   ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ರಸ್ತೆಯ ತೀರಾ ಬಲ ಬದಿಗೆ ಸವಾರಿ ಮಾಡಿಕೊಂಡು  ಬಂದು,  ಕಾಳಾವರ ಶ್ರೀ ಸುಬ್ರಹ್ಮಣ್ಯ  ದೇವಸ್ಥಾನದ  ಕಡೆಯಿಂದ ಕುಂದಾಪುರ ಕಡೆಗೆ  ನಾಗೇಂದ್ರ ಆಚಾರ್ಯ  ಎಂಬುವರು  ಮಹಾಬಲ ಆಚಾರ್ಯ  ಎಂಬುವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು  ಸವಾರಿ  ಮಾಡಿಕೊಂಡು ಬರುತ್ತಿದ್ದ   KA 19 EJ 5605 ನೇ ಬೈಕಿಗೆ  ಮುಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಎರಡೂ ಬೈಕಿನವರು  ಬೈಕ್ ಸಮೇತ ರಸ್ತೆಗೆ  ಬಿದ್ದ ಪರಿಣಾಮ ನಾಗೇಂದ್ರ  ರವರಿಗೆ  ಬಲಕೈ ಬೆರಳುಗಳಿಗೆ ಹಾಗೂ ಸೊಂಟಕ್ಕೆ ಒಳನೋವಾಗಿದ್ದು    ಕೋಟೇಶ್ವರ ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು , ಮಹಾಬಲ ಆಚಾರ್ಯ ಎಂಬುವರಿಗೆ  ತಲೆಗೆ ರಕ್ತಗಾಯವಾಗಿದ್ದು  ಸದ್ರಿಯವರಿಗೆ ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ  ಕೆ ಎಂ ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು  ಹೋಗಿರುತ್ತಾರೆ. ಹಾಗೂ ಆಪಾದಿತ ಚರಣ್ ರಾಜ್ ಎಂಬುವರಿಗೆ  ಎರಡು ಕೈಗಳಿಗೆ  ಗಾಯ ನೋವು ಉಂಟಾಗಿ  ಎನ್ ಆರ್ ಆಚಾರ್ಯ ಆಸ್ಪತ್ರೆಯಲ್ಲಿ ಹೋರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಮಣಿಪಾಲದ   KMC  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದ  ಮಹಾಬಲ ಆಚಾರ್ಯ (62) ರವರು  ಚಿಕಿತ್ಸೆ  ಫಲಕಾರಿಯಾಗದೇ ಈ ದಿನ  ದಿನಾಂಕ 07/12/2021 ರಂದು ಬೆಳಿಗ್ಗೆ 11.30   ಗಂಟೆಗೆ  ಮೃತಪಟ್ಟಿರುತ್ತಾರೆ ಠಾಣೆ, ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 98/2021 ಕಲಂ   279,337, 338   IPC & Altered    279,337, 304 (A)  ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಧನಶ್ರೀ ಕುಡ್ವ, ಪ್ರಾಯ: 28 ವರ್ಷ, ಗಂಡ: ಧೀಮಂತ್ ಭಂಢಾರ್ ಕರ್, ವಾಸ: ಶ್ರೀ ಗುರುಕೃಪಾ ಹೌಸ್, ಅರಮನೆ ಬಾಗಿಲು, ಕೊಂಡೆ ಸ್ಟ್ರೀಟ್, ಮೂಡುಬಿದ್ರೆಯಲ್ಲಿ ಗಂಡನ ಮನೆಯಲ್ಲಿ ವಾಸವಾಗಿದ್ದು ಜ್ಞಾನಸುಧಾ ಪಿಯು ಕಾಲೇಜಿನಲ್ಲಿ  ಅಧ್ಯಾಪಕಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ., ಅವರ ತಂದೆ ಸುರೇಂದ್ರ ಕುಡ್ವ(70 ವರ್ಷ)  ಮತ್ತು ತಾಯಿ ಗೀತಾ(68 ವರ್ಷ) ರವರು  ಕಾರ್ಕಳ ಕುಂಟಲ್ಪಾಡಿಯ ಅತ್ರಿ ಅಪಾರ್ಟ್ ಮೆಂಟ್‌ನಲ್ಲಿ ಇಬ್ಬರೇ  ವಾಸವಾಗಿದ್ದರು. ದಿನಾಂಕ 06-12-2021 ರಂದು ಹತ್ತಿರದ ಫ್ಲಾಟ್‌ನವರು ಪಿರ್ಯಾದಿಗೆ ಫೋನ್ ಮೂಲಕ ತಾಯಿಗೆ ಬೆಂಕಿಯಿಂದ ಸುಟ್ಟ ಗಾಯಗಳಾಗಿರುವುದಾಗಿ ತಿಳಿಸಿದರು. ಕೂಡಲೇ ಅವರಿಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸಿದ್ದು ಫಿರ್ಯಾದುದಾರರು ಕಾರ್ಕಳ  ಆಸ್ಪತ್ರೆಗೆ ಬಂದು ತಾಯಿಯಲ್ಲಿ ವಿಚಾರಿಸಿದಾಗ ತಾನೇ ಹಾಕಿಕೊಂಡಿದ್ದಾಗಿ ತಿಳಿಸಿದರು ಇಡೀ ದೇಹದಲ್ಲಿ ಸುಟ್ಟ ಗಾಯಗಳಾಗಿದ್ದು ಕಾರ್ಕಳ ಆಸ್ಪತ್ರೆಯ  ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗುವಂತೆ ತಿಳಿಸಿದ್ದು, ಫಿರ್ಯಾದುದಾರರು ತಾಯಿಯನ್ನು ಮಣಿಪಾಲಕ್ಕೆ ಅಂಬುಲೆನ್ಸ್ ನಲ್ಲಿ  ಹೆಚ್ಚಿನ ಚಿಕಿತ್ಸೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಈ ದಿನ ದಿನಾಂಕ 07-12-2021 ರಂದು ಬೆಳಿಗ್ಗೆ 05-30 ಗಂಟೆಗೆ ಮೃತಪಟ್ಟಿರುತ್ತಾರೆ.  ತನ್ನ ತಂದೆ ಸುಡುತ್ತಾ ಇರುವ ತನ್ನ ತಾಯಿಯನ್ನು ನೋಡಿಯೂ ಏನೂ ಮಾಡದೇ ಎದುರು ನಿಂತಿರುತ್ತಾರೆ ಎಂದು ಫ್ಲಾಟ್‌ನ ಮನೆಯವರು ಹೇಳಿರುವುದು ಅನುಮಾನ. ಫ್ಲಾಟ್‌ನ ವಿಚಾರದ ಬಗ್ಗೆ ತಂದೆ ಹಾಗೂ ಅವರ ತಮ್ಮಂದಿರ ಕೇಸ್ ನೋಟೀಸ್ ದಾಖಲಾಗಿರುತ್ತದೆ. ಆದ್ದರಿಂದ ತಾಯಿಗೆ ಮಾನಸಿಕ ಕಿರುಕುಳ ಕೊಟ್ಟು ಈ  ರೀತಿ ಮಾಡಿಕೊಳ್ಳುವ ಹಾಗೂ ತಂದೆ ಹಾಗೂ  ಮನೆಯವರು ಪ್ರೇರೆಪಿಸಿರುವುದು  ಸತ್ಯ ಆದ್ದರಿಂದ ತಂದೆ ಸುರೇಂದ್ರ ಕುಡ್ವ,ಮತ್ತು ಅವರ  ತಮ್ಮಂದಿರಾದ ನಿತ್ಯಾನಂದ ಕುಡ್ವ, ವಿಜೇಂದ್ರ ಕುಡ್ವ, ಮುಕುಂದ ಕುಡ್ವ,  ಹಾಗೂ ತಂಗಿ ಪುಷ್ಪಲತಾ ಮೇಲೆ ಅನುಮಾನ ಇರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ಸಂಖ್ಯೆ 46/2021 ಕಲಂ 174C CRPC ಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಹೆಚ್ .ನಾರಾಯಣ ಶಾಸ್ತ್ರಿ ಪ್ರಾಯ 68 ವರ್ಷ  ತಂದೆ: ದಿ .ರಾಮ ಚಂದ್ರ ಶಾಸ್ತ್ರಿ ವಾಸ: ಗೋಪಾಲ ಕೃಷ್ಣ ದೇವಸ್ಥಾನ (ಗುರು ನರಸಿಂಹ ದೇವಸ್ಥಾನದ  ಬಳಿ ) ಸಾಲಿಗ್ರಾಮ ಚಿತ್ರಪಾಡಿ ಗ್ರಾಮ . ಇವರು ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಬಳಿಯಿರುವ ಗೋಪಾಲ ಕೃಷ್ಣ ದೇವಸ್ಥಾನದ ಅರ್ಚಕರಾಗಿದ್ದು ದಿನಾಂಕ 07/12/2021 ರಂದು ಬೆಳಿಗ್ಗೆ ಗೋಪಾಲ ಕೃಷ್ಣ ದೇವರ ಗುಡಿಯ ಎದುರು ನಿಂತು ಕೊಂಡಿರುವಾಗ  ಓರ್ವ ವ್ಯಕ್ತಿ  ಗುರು ನರಸಿಂಹ ದೇವಸ್ಥಾನದ  ಕಡೆಯಿಂದ ಓಡೋಡಿ ಬಂದು ಕೆರೆಗೆ ಹಾಕಿದ ತಡೆಬೇಲಿಯನ್ನು ಹಾರಿ ಏಕಾಏಕಿ  ಕೆರೆಗೆ ಹಾರಿರುತ್ತಾನೆ. ಆತನು ಈಜಲು ಹಾರಿರಬಹುದೆಂದು ಭಾವಿಸಿದ್ದು,ಆದರೆ ಆತನು ಮುಳುಗಿ ಕೈಯನ್ನು ಮೇಲಕ್ಕೆತ್ತಿ  ನಂತರ ಮುಳುಗಿರುತ್ತಾನೆ. ಕೆರೆಯಲ್ಲಿ ಸುಮಾರು 20 ಅಡಿ ಆಳದಷ್ಟು  ನೀರು ಇದ್ದುದರಿಂದ  ಮೇಲಿನಿಂದ ಆತನು ಕಾಣುತ್ತಿರಲಿಲ್ಲ.ಕೂಡಲೇ ಅಗ್ನಿ ಶಾಮಕದಳದವರಿಗೆ ತಿಳಿಸಿದಂತೆ ಅವರು ಸ್ಥಳಕ್ಕೆ ಬಂದು ಮೃತ ವ್ಯಕ್ತಿಯನ್ನು ಮೇಲಕ್ಕೆತ್ತಿ ನೋಡಲಾಗಿ  ಸದ್ರಿ ವ್ಯಕ್ತಿಯು ಚೇಂಪಿ ಹಾಲು ಡೈರಿಯ ಬಳಿಯಿರುವ ಸುನೀಲ್ ಎಂಬುವುದಾಗಿ ಅಲ್ಲಿ ಸೇರಿದ ಸಾರ್ವಜನಿಕರು ತಿಳಿಸಿರುತ್ತಾರೆ. ಮೃತ ಸುನೀಲ್ ನು ಸ್ವಲ್ಪ ಸಮಯದಿಂದ ಮಾನಸಿಕವಾಗಿ ಒಬ್ಬನೇ ಮಾತನಾಡುವುದು ಇತರರೊಂದಿಗೆ ಗಲಾಟೆ ಮಾಡಿಕೊಳ್ಳುತ್ತಿದ್ದು ಆತನು ಇದೇ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು  ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್  ಠಾಣೆ ಯುಡಿಆರ್‌ ಸಂಖ್ಯೆ 48/2021 ಕಲಂ 174 CRPC ಯಂತೆ  ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಫಿರ್ಯಾದಿ ಶ್ರೀಮತಿ ಆಶಾ ಪ್ರಾಯ: 23  ವರ್ಷ ಗಂಡ:ಕುಮಾರ ವಾಸ:  1-94, ಪಲ್ಲವಿ ನಿಲಯ, ಕೊರಂಗ್ರಪಾಡಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ  ಇವರ  ಗಂಡ ಮೃತ ಕುಮಾರ್ ಪ್ರಾಯ 28 ವರ್ಷ ರವರು  ಕಳೆದ 3 ವರ್ಷದಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಆ ಬಗ್ಗೆ ಉಡುಪಿ ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಒಂದು ವರ್ಷದ ಹಿಂದೆ ತುಂಬಾ ಮಾತ್ರೆಗಳನ್ನು ಸೇವಿಸಿದ್ದು ಅಲ್ಲದೇ  ಕಳೆದ ಎರಡು ತಿಂಗಳ ಹಿಂದೆ ಇಲಿ ಪಾಷಣವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದವರನ್ನು ಫಿರ್ಯಾದುದಾರರು ಮಣಿಪಾಲ ಮತ್ತು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುತ್ತಾರೆ. ಅವರು ವಿಪರೀತ ಮಾನಸಿಕ ಅಸ್ವಸ್ಥತೆ ಹಾಗೂ ಇತ್ತಿಚೆಗೆ ಸುಮಾರು 10 ಲಕ್ಷ ರೂಪಾಯಿ ಕೈ ಸಾಲ ಪಡೆದಿದ್ದು ಸಾಲ ತೀರಿಸಲಾಗದೇ ಡಿಪ್ರೇಶನ್‌ ಗೆ ಒಳಗಾಗಿ ತಾನು ಸಾಯುತ್ತೇನೆ, ತನಗೆ ಬದುಕಲು ಇಷ್ಟವಿಲ್ಲ ಎಂಬುದಾಗಿ ಹೇಳಿಕೊಂಡು ತಿರುಗುತ್ತಿದ್ದು ದಿನಾಂಕ:05/12/2021 ರಂದು ಬೆಳಿಗ್ಗೆ ಸುಮಾರು 7-30 ಗಂಟೆಗೆ ಬಚ್ಚಲು ಮನೆಗೆ ಸ್ನಾನಕ್ಕೆಂದು ಹೋದವರು ಸುಮಾರು ಹೊತ್ತಾದರೂ ಬಚ್ಚಲು ಮನೆಯಿಂದ ಹೊರಗೆ ಬಾರದ ಕಾರಣ ಫಿರ್ಯಾದುದಾರರು ಸುಮಾರು 8:00 ಗಂಟೆಗೆ ಬಚ್ಚಲು ಮನೆಯ ಕಿಂಡಿಯಿಂದ ನೋಡಿದಾಗ ಅವರು ಕಬ್ಬಿಣದ ಸರಳಿಗೆ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿದ್ದವರನ್ನು ಫಿರ್ಯಾದುದಾರರು ಕೂಡಲೇ ನೆರೆಮನೆಯವರ ಸಹಾಯದಿಂದ ಬಾಗಿಲನ್ನು ಬಲಪ್ರಯೋಗಿಸಿ ಓಪನ್ ಮಾಡಿ ಒಳಗೆ ಹೋಗಿ ತನ್ನ ಗಂಡನನ್ನು ನೇಣಿನಿಂದ ಬಿಡಿಸಿ, ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಅಲ್ಲಿಯ ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ದಿನಾಂಕ: 06/12/2021 ರಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ:07/12/2021 ರಂದು ಬೆಳಿಗ್ಗಿನ ಜಾವ ಸುಮಾರು 00:10 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್  ಠಾಣೆ ಯುಡಿಆರ್‌ ಸಂಖ್ಯೆ 51/2021 ಕಲಂ 174 CRPC ಯಂತೆ  ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

  • ಕುಂದಾಪುರ : ದಿನಾಂಕ 07.12.20212 ರಂದು ಫಿರ್ಯಾದುದಾರರಾದ ರಮೇಶ ಇವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿದಾರು ಹಾಗೂ ಆರೋಪಿತ ರಾಘವೇಂದ್ರನು ಈ ಹಿಂದೆ ನಡೆದ ಕರ್ಕುಂಜೆ ಗ್ರಾಮದ ಬಾಬು ಶೆಟ್ಟಿ ಎನ್ನುವವರ ಕೊಲೆ ಪ್ರಕರಣದ ಆರೋಪಿಗಳಾಗಿದ್ದು. ದಿನಾಂಕ: 06.12.2021 ರಂದು ರಾತ್ರಿ 08:00 ಗಂಟೆಗೆ ಆರೋಪಿತ ರಾಘವೇಂದ್ರನು ಆತನ ಮೊಬೈಲ್ ನಂಬ್ರ 8904145336 ನಂಬ್ರದಿಂದ ಫಿರ್ಯಾದುದಾರರ ಮೊಬೈಲ್ ನಂಬ್ರ 7795923708 ಕ್ಕೆ ಕರೆ ಮಾಡಿ ನನಗೆ ಕೊಲೆ ಕೇಸ್‌‌ನಲ್ಲಿ ಜಾಮೀನು ಪಡೆಯಲು  55,000/- ರೂಪಾಯಿ ಖರ್ಚು ಆಗಿದ್ದು, ಈ ಹಣವನ್ನು ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದು, ಫಿರ್ಯಾದುದಾರರು ಹಣ ಇಲ್ಲ ಎಂದು ಹೇಳಿದಾಗ ಆರೋಪಿತನು ಫಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಣ ಕೊಡದೇ ಇದ್ದಲ್ಲಿ ನಿನ್ನ ಮನೆಗೆ ನುಗ್ಗಿ ಹೊಡೆದು ಜೀವ ತೆಗೆಯುತ್ತೇನೆ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ :69/2021 ಕಲಂ:387,504,506 ಐಪಿಸಿ ಯಂತೆ  ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 07-12-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080