ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸರ್ವತ್ (23), ತಂದೆ: ರವಿ ಹಗ್ಡೆ, ವಾಸ: ಪಿಂಕಿ ಹೌಸ್, ಮೈತ್ರಿ ಗ್ಯಾರೇಜ್ ಬಳಿ, ಕುಂಟಲ್ಪಾಡಿ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರು KA-20-AB-5167 ನೇ ನೋಂದಣಿ ಸಂಖ್ಯೆಯ ಆಟೋ ರಿಕ್ಷಾದ ಚಾಲಕ ಮಾಲಕನಾಗಿದ್ದು, ದಿನಾಂಕ 06/11/2022 ರಂದು ಮದ್ಯಾಹ್ನ 2:45 ಗಂಟೆಗೆ ಮಾರ್ಕೆಟ್ ರಸ್ತೆಯಲ್ಲಿರುವಾಗ ದೀಪಕ್ ಎಂಬ ಪ್ರಯಾಣಿಕರು ಪಿರ್ಯಾದಿದಾರರ ಆಟೋ ಹತ್ತಿ ಗುಂಡ್ಯಡ್ಕಕ್ಕೆ ಹೋಗುವಂತೆ ತಿಳಿಸಿದಂತೆ ಪಿರ್ಯಾದಿದಾರರು ಆಟೋವನ್ನು ಚಲಾಯಿಸಿಕೊಂಡು ಮೂರು ಮಾರ್ಗ, ವೆಂಕಟರಮಣ ದೇವಾಸ್ಥಾನ ಆಗಿ ಮದ್ಯಾಹ್ನ 3:00 ಗಂಟೆಗೆ ಕಾರ್ಕಳ ಕಸಬಾ ಗ್ರಾಮದ ಸಾಲ್ಮರ ಗ್ಯಾಲಾಕ್ಸಿ ಹಾಲ್ ಬಳಿ ತಲುಪುವಾಗ ಸಾಲ್ಮರ ಕಡೆಯಿಂದ ಕಾರ್ಕಳ ಪೇಟೆ ಕಡೆಗೆ KA-20-MA-1973 ನೇ ನೋಂದಣಿ ಸಂಖ್ಯೆಯ ಕಾರು ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಪಿರ್ಯಾದಿದಾರರ ವಿರುದ್ದ ದಿಕ್ಕಿನಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಟೋರಿಕ್ಷಾ ರಸ್ತೆಯಲ್ಲಿ ಮಗುಚಿ ಬಿದ್ದಿದ್ದು ಎರಡು ವಾಹನಗಳು ಜಖಂಗೊಂಡಿರುತ್ತವೆ. ಅಪಘಾತದಿಂದ ಪಿರ್ಯಾದಿದಾರರ ಎಡಕೈ ಮಣಿಗಂಟಿಗೆ, ಎಡಕಾಲಿನ ಮೊಣಗಂಟಿಗೆ ರಕ್ತ ಗಾಯವಾಗಿದ್ದು, ಎಡಕಾಲಿನ ಹೆಬ್ಬೆರಳಿಗೆ ತರಚಿದ ಗಾಯವಾಗಿದ್ದು, ಗಲ್ಲದ ಕೆಳಗೆ, ಎಡಹುಬ್ಬಿನ ಮೇಲ್ಭಾಗ ಕೂಡಾ ತರಚಿದ ಗಾಯವಾಗಿರುತ್ತದೆ. ರಿಕ್ಷಾದಲ್ಲಿದ್ದ ಪ್ರಯಾಣಿಕ ದೀಪಕ್ ರವರಿಗೆ ಎಡಕೈ ಮೂಳೆ ಮುರಿತಕ್ಕೊಳಗಾಗಿ, ಮೂಗಿನ ಬಳಿ ಗಾಯವಾಗಿ ರಕ್ತ ಸುರಿಯುತ್ತಿರುತ್ತದೆ. ಪಿರ್ಯಾದಿದಾರರನ್ನು ಹಾಗೂ ಗಾಯಗೊಂಡ ಪ್ರಯಾಣಿಕ ದೀಪಕ್ ನನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ:  279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 05/11/2022 ರಂದು  ಸಂಜೆ  5:20  ಗಂಟೆಗೆ ಕುಂದಾಪುರ  ತಾಲೂಕಿನ, ಕಾಳಾವರ ಗ್ರಾಮದ  ಗರಗದ್ದೆಯ ಪಿರ್ಯಾದಿಯ ಮನೆಯ ಬಳಿ  ರಸ್ತೆಯಲ್ಲಿ ಆಪಾದಿತ ಪ್ರವೀಣ್‌  ಮೆನೆಜಿಸ್‌ ಎಂಬುವವರು KA-19-ED-3234 ನೇ  ಬೈಕನ್ನು  ವಕ್ವಾಡಿ ಕಡೆಯಿಂದ  ಕಾಳಾವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ಪಿರ್ಯಾದಿದಾರರ ಜೋತೆ ನಿಂತುಕೊಂಡಿದ್ದ ಅವರ  9 ವರ್ಷದ ಮಗ ಚಿನ್ಮಯಿ ಯವರಿಗೆ ಡಿಕ್ಕಿ  ಹೊಡೆದ  ಪರಿಣಾಮ ಚಿನ್ಮಯಿಯ  ಬಲಕಾಲಿನ ಮುಂಗಾಲು ಗಂಟಿಗೆ,ಬಲಕೈ,ಬಲ ಕೆನ್ನಗೆ ಗಾಯ ನೋವಾಗಿ ಕೊಟೇಶ್ವರ  ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸಂತೋಷ್ ಕುಮಾರ್ ಶೆಟ್ಟಿ (32), ತಂದೆ: ರವಿರಾಜ ಶೆಟ್ಟಿ , ವಾಸ: ಬಾಳಿಕೆರೆ ದೇವಲ್ಕುಂದ ಗ್ರಾಮ ಇವರು  ಕುಂದಾಪುರದ ಕಸಬಾ ಗ್ರಾಮದ ಪಿಶ್ ಮಾರ್ಕೆಟ್ ರಸ್ತೆಯಲ್ಲಿರುವ ಚಾಲುಕ್ಯ ಬಾರ್ ಆಂಡ್ ರೆಸ್ಟೋರೆಂಟ್ ನಲ್ಲಿ ಸುಮಾರು 5 ತಿಂಗಳಿಂದ ಮ್ಯಾನೇಜರ್ ಹಾಗೂ ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದು ಅದೇ ಬಾರ್ ನಲ್ಲಿ ವೈಟರ್ ಆಗಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ದಿನಾಂಕ 05/11/2022 ರಂದು ಸಂಜೆ 4:00 ಗಂಟೆಗೆ ಇತರ 3 ಜನರನ್ನು ಕರೆದುಕೊಂಡು ಬಾರ್ ನ ಒಳಗಡೆ ಅಕ್ರಮ ಪ್ರವೇಶ ಮಾಡಿ, ಪಿರ್ಯಾದಿದಾರರಿಗೆ ಸಂಬಳ ಕೊಡುವ ವಿಚಾರದಲ್ಲಿ  ಅವಾಚ್ಯ ಶಬ್ದಗಳಿಂದ ಬೈದು ಸಂಬಳ ಈಗಲೇ ಕೊಡಬೇಕು ಎಂದು ಹೇಳಿ ಕೈಯಿಂದ ಕಪಾಳಕ್ಕೆ ಹೊಡೆದು ಬಾರ್ ಕೌಂಟರ್ ನ್ನು  ಕೈಯಿಂದ ಗುದ್ದಿದ್ದು, ಅಲ್ಲದೇ ಆತನ ಜೊತೆಗೆ ಬಂದ ಇತರ ಮೂವರು ಸೇರಿ ಪಿರ್ಯಾದಿದಾರರಿಗೆ ಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿದ್ದಲ್ಲದೇ ಬಾರ್ ನ ಮಾಲಿಕರಿಗೂ ಕೂಡಾ ಆರೋಪಿತರೂ ಸೇರಿಕೊಂಡು ಅವಾಚ್ಯವಾಗಿ ಬೈದಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 119/2022 ಕಲಂ: 448, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ಪಿರ್ಯಾದಿದಾರರರಾದ ಚಂದ್ರಕಾಂತಿ (41), ಗಂಡ : ಮೋಹನ ಡಿ. ಪುತ್ರನ್, ವಾಸ : ಶ್ವೇತ ರೆಸಿಡೆನ್ಸಿ, 202, ಫಣಿಯೂರು ರಸ್ತೆ, ಉಚ್ಚಿಲ,  ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 04/11/2022 ರಂದು ಶಾಲೆಯಲ್ಲಿರುವಾಗ 12:30 ಗಂಟೆಗೆ ಪಿರ್ಯಾದಿದಾರರ ಅಣ್ಣನ  ಹೆಂಡತಿ ಜ್ಯೋತಿ ರವರು ಕರೆ ಮಾಡಿ, ಅವರು ವಾಸವಾಗಿರುವ  ಕಾಪು ಪಡು ಗ್ರಾಮದ ರಾಮನಗರದಲ್ಲಿರುವ ಪಿರ್ಯಾದಿದಾರರ ಮಾವ (ತಾಯಿಯ ತಮ್ಮ)  ಶ್ರೀನಿವಾಸ ಪುತ್ರನ್ ರವರ ಮನೆ ಹಾಗೂ ಜಾಗದ ಪಕ್ಕದಲ್ಲಿ ವಾಸವಾಗಿರುವ ಶ್ರೀಮತಿ ಶಕುಂತಳ ಪುತ್ರನ್  ಹಾಗೂ ಅವಳ ಮಗ ವಿಪಿನ್ ಪುತ್ರನ್ ರವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ಕಲ್ಲು ಕಂಬ ನೆಡಲು ಪ್ರಯತ್ನಿಸಿದ್ದು, ಆ ಸಮಯ ನಾನು ಜಾಗದ  ತಕರಾರಿಗೆ ಸಂಬಂಧಿಸಿದಂತೆ ವ್ಯಾಜ್ಯವು ಮಾನ್ಯ ನ್ಯಾಯಾಲಯದಲ್ಲಿದ್ದು, ತಡೆಯಾಜ್ಞೆ ಇರುವುದರಿಂದ, ಕಲ್ಲು ಕಂಬ ನೆಡದಂತೆ ಹೇಳಿದರೂ  ಕೇಳದೆ ಕಲ್ಲು ಕಂಬ ನೆಟ್ಟಿದ್ದು ಎಂದು ಹೇಳಿ, ಪಿರ್ಯಾದಿದಾರರಿಗೆ ಅಲ್ಲಿಗೆ ಬರುವಂತೆ ತಿಳಿಸಿದ್ದು, ಅದರಂತೆ ಪಿರ್ಯಾದಿದಾರರು ಅಣ್ಣ ಅತ್ತಿಗೆ ವಾಸವಾಗಿರುವ  ಮಾವನ ಮನೆ ಬಂದಿದ್ದು, ಆ ಸಮಯ 14:00 ಗಂಟೆಗೆ ಶಕುಂತಳ ಹಾಗೂ ಅವಳ ಮಗ ವಿಪಿನ್ ರವರು ಕಲ್ಲು ಕಂಬದ ಬುಡಕ್ಕೆ ಸಿಮೆಂಟ್ ಕಾಂಕ್ರಿಟ್ ಹಾಕಲು ಪುನ: ಪಿರ್ಯಾದಿದಾರರ ಮಾವನ ಜಾಗಕ್ಕೆ ಬಂದಿದ್ದು, ಆಗ ಪಿರ್ಯಾದಿದಾರರು ಅವರಲ್ಲಿ ಜಾಗದ ತಕರಾರಿಗೆ ಸಂಬಂಧಿಸಿದಂತೆ ಈಗಾಗಲೇ ಮಾನ್ಯ ನ್ಯಾಯಾಲಯದಲ್ಲಿ ಪ್ರಕರಣವು ವಿಚಾರಣೆಯಲ್ಲಿರುವುದರಿಂದ ನೀವು ಯಾವುದೇ ಕೆಲಸ ಮಾಡಬೇಡಿ,  ನ್ಯಾಯಾಲಯದ ಆದೇಶದಂತೆ ನಡೆದುಕೊಳ್ಳಿ ಎಂದು ಹೇಳಿದರೂ, ಕೇಳದೆ ಪಿರ್ಯಾದಿದಾರರಿಗೆ ಹಾಗೂ ಅವರ ಅತ್ತಿಗೆ ಜ್ಯೋತಿ ರವರಿಗೆ ಶಕುಂತಳ ಪುತ್ರನ್ ಹಾಗೂ ವಿಪಿನ್ ರವರು ಅವಾಚ್ಯ ಶಬ್ದಗಳಿಂದ ಬೈದು ವಿಪಿನ್ ರವರು ಪಿರ್ಯಾದಿದಾರರನ್ನು ದೂಡಿದ್ದು, ಆಗ ಪಿರ್ಯಾದಿದಾರರು ನೆಲಕ್ಕೆ ಬಿದ್ದು, ಬಲಭುಜಕ್ಕೆ ನೋವುಂಟಾಗಿರುತ್ತದೆ. ಈ ಸಮಯ ಪಿರ್ಯಾದಿದಾರರ ಅಣ್ಣ ಲಾಲಾಜಿ ಪುತ್ರನ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿ ಶಾರದಾ ಕುಂದರರವರನ್ನು ನೋಡಿ ಕೊಳ್ಳಲು ಆಸ್ಪತ್ರೆಗೆ ಹೋಗಿದ್ದ ಕಾರಣ ಪಿರ್ಯಾದಿದಾರರು ಹಾಗೂ ಜ್ಯೋತಿ ರವರು ಏನು ಮಾತನಾಡದೇ ಮನೆಯೊಳಗೆ ಹೋಗಿದ್ದು,  ವಿಚಾರವನ್ನು ಗಂಡನೊಂದಿಗೆ ಚರ್ಚಿಸಿ, ದಿನಾಂಕ  05/11/2022 ರಂದು ಶಾಲೆ ಇದ್ದ ಕಾರಣ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 121/2022 ಕಲಂ: 447, 323, 504, 354 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ಪಿರ್ಯಾದಿದಾರರಾದ ಗುಣವತಿ (38), ಗಂಡ: ಅರುಣ್, ವಾಸ: ಓಡರಬೆಟ್ಟು ಮನೆ, ಪಟ್ಟಿಬಾವು 41 ನೇ ಶಿರೂರು ಗ್ರಾಮ ಮತ್ತು ಅಂಚೆ ಉಡುಪಿ  ತಾಲೂಕು ಇವರು ವಾಸವಾಗಿರುವ ಶಿರೂರು ಗ್ರಾಮದ ಸರ್ವೆ ನಂಬ್ರ 54 ರಲ್ಲಿ 57 ಸೆಂಟ್ಸ್ ಜಾಗವು ಅವರ ತಾಯಿಯ ಹೆಸರಿನಲ್ಲಿ ಇರುವ ಪಟ್ಟಾ ಜಾಗವಾಗಿರುತ್ತದೆ.  ಜಾಗದ ಪಕ್ಕದಲ್ಲಿ ಅವರ  ಕುಟುಂಬದವರಾದ ಅಚ್ಚಣ್ಣ ಪೂಜಾರಿಯವರ ಮನೆ ಹಾಗೂ ಜಾಗ ಇರುತ್ತದೆ.  ಅವರ ಮನೆಗೆ ಹೋಗಲು ಪಿರ್ಯಾದಿದಾರರ ಜಾಗದಲ್ಲಿ ರಸ್ತೆ ನೀಡಬೇಕೆಂದು ಅವರು ಮೊದಲಿನಿಂದಲೂ ಗಲಾಟೆ ಮಾಡಿ ಅವರಿಗೆ ತೊಂದರೆ ನೀಡುತ್ತಾ ಬಂದಿರುತ್ತಾರೆ. ಪಿರ್ಯಾದಿದಾರರು ಜಾಗದಲ್ಲಿ ಅವರಿಗೆ ನಡೆದಾಡಲು ದಾರಿಯನ್ನು ಮೊದಲಿನಿಂದಲೂ ನೀಡಿರುತ್ತಾರೆ. ಆದರೆ ಅವರು ಅಲ್ಲಿ ತಮಗೆ ರಸ್ತೆಗೆ ಜಾಗ ನೀಡಬೇಕೆಂದು ಗಲಾಟೆ ಮಾಡಿಕೊಂಡು ಬಂದಿರುತ್ತಾರೆ. ದಿನಾಂಕ 06/11/2022 ರಂದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರು ಹಾಗೂ ಅವರ ಮನೆಯವರು ಮನೆಯಲ್ಲಿರುವಾಗ ಅಚ್ಚಣ್ಣ ಪೂಜಾರಿ, ಅವರ ಹೆಂಡತಿಯ ತಮ್ಮ ಜಯಕರ ಪೂಜಾರಿ, ಅಚ್ಚಣ್ಣ ಪೂಜಾರಿಯವರ ಹೆಂಡತಿಯ ತಂಗಿ ಬೇಬಿ ಪೂಜಾರ್ತಿ, ಅಚ್ಚಣ್ಣ ಪೂಜಾರಿಯವರ ಮಕ್ಕಳಾದ ದಯಾನಂದ ಪೂಜಾರಿ, ಪ್ರವೀಣ ಪೂಜಾರಿ, ಪ್ರಭಾಕರ ಪೂಜಾರಿ, ಕರುಣಾಕರ ಪೂಜಾರಿ, ಅಚ್ಚಣ್ಣ  ಪೂಜಾರಿಯವರ ಹೆಂಡತಿಯ ತಂಗಿಯ ಮಗನಾದ ಜಗದೀಶ ಪೂಜಾರಿ ರವರು ಗುಂಪು ಸೇರಿಕೊಂಡು ಕೈಯಲ್ಲಿ ಹಾರೆ, ಪಿಕ್ಕಾಸಿ ಹಿಡಿದುಕೊಂಡು ಅವರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಅವರಿಗೆ ನಡೆದಾಡಲು ಕೊಟ್ಟ ದಾರಿಯನ್ನು ಅಗೆದು ರಸ್ತೆಯನ್ನು ಮಾಡಲು ಪ್ರಾರಂಭಿಸಿ ಅಲ್ಲಿ ಪಿರ್ಯಾದಿದಾರರು ಕೃಷಿ ಮಾಡಿರುವ ಅಡಿಕೆ ಸಸಿಗಳನ್ನು ಕಿತ್ತು ಅದರ ಹೊಂಡವನ್ನು ಮಣ್ಣು ಹಾಕಿ ಮುಚ್ಚಿರುತ್ತಾರೆ. ಆಗ ಪಿರ್ಯಾದಿದಾರ ತಾಯಿ ಪ್ರೇಮರವರು ಕೇಳಲು ಹೋದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಿದರರ ತಾಯಿಯನ್ನು ಬೇಬಿ ಪೂಜಾರ್ತಿಯವರು ಕೈಯಲ್ಲಿ ಹಿಡಿದು ಎಳೆದಾಡಿ ದೂಡಿ ಹಾಕಿದ್ದು, ಆಗ ಪಿರ್ಯಾದಿದಾರರು ಹಾಗೂ ಮನೆಯವರು ಕೇಳಲು ಹೋದಾಗ ಅವರನ್ನು ಉದ್ದೇಶಿಸಿ ದಯಾನಂದ ಪೂಜಾರಿ, ಕರುಣಾಕರ ಪೂಜಾರಿ, ಜಗದೀಶ ಪೂಜಾರಿ, ಪ್ರವೀಣ ಪೂಜಾರಿ ಹಾಗೂ ಬೇಬಿರವರು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ : 143, 147, 447, 323, 504, 506 ಜೊತೆಗೆ 149  ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 07-11-2022 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080