ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 06/11/2022 ರಂದು ಸಂಜೆ 6:45 ಗಂಟೆಗೆ  ಕುಂದಾಪುರ  ತಾಲೂಕಿನ, ಹಂಗಳೂರು ಗ್ರಾಮದ  ವಿನಾಯಕ ಟಾಕೀಸ್‌ಬಳಿ, ಪೂರ್ವ ಬದಿಯ ಎನ್‌‌. ಹೆಚ್‌ ‌66 ರಸ್ತೆಯಲ್ಲಿ ಆಪಾದಿತ KA-23-N-4589ನೇ ಚಾಕಲೇಟ್‌ ‌ಬಣ್ಣದ  ಡಸ್ಟರ್‌ ಕಾರಿನ  ಚಾಲಕ, ಕಾರನ್ನು ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟಲು ನಿಂತುಕೊಂಡಿದ್ದ ಪಿರ್ಯಾದಿದಾರರಾದ ಪುಷ್ಪರಾಜ್‌‌ ‌ರಾವ್‌ (65), ತಂದೆ: ದಿ. ರಾಮಚಂದ್ರ ರಾವ್‌, ವಾಸ: ಸಿಂಡಿಕೇಟ್‌ಬ್ಯಾಂಕ್‌‌‌ ಎದುರುಗಡೆ,  ಮುಖ್ಯ  ರಸ್ತೆ, ಕಸಬಾ ಗ್ರಾಮ,ಕುಂದಾಪುರ ಇವರಿಗೆ  ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತವಾದ ಗಾಯ ಹಾಗೂ ಎಡಕಾಲಿಗೆ  ತರಚಿದ ಗಾಯವಾಗಿ ಕುಂದಾಪುರ  ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಆಪಾದಿತನು  ಅಪಘಾತಪಡಿಸಿದ ಕಾರನ್ನು  ಅಪಘಾತ ಸ್ಥಳದಿಂದ  ಸ್ವಲ್ಪ  ಮುಂದೆ ನಿಲ್ಲಿಸಿ,  ಬಳಿಕ  ಕಾರನ್ನು ಉಡುಪಿ  ಕಡೆಗೆ  ಚಲಾಯಿಸಿಕೊಂಡು  ಹೋಗಿರುತ್ತಾನೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 116/2022 ಕಲಂ: 279, 338 ಐಪಿಸಿ  & 134 (A) & (B) IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ರವೀಂದ್ರ ಇವರು ಆದಿಉಡುಪಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 06/11/2022 ರಂದು 19:00 ಗಂಟೆಯಿಂದ ದಿನಾಂಕ 07/11/2022 ರಂದು ಬೆಳಿಗ್ಗೆ 08:30 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಶಾಲಾ ಕಛೇರಿಯ ಬೀಗ ಒಡೆದು ಒಳಪ್ರವೇಶಿಸಿ, ಕಬಾಟಿನಲ್ಲಿದ್ದ ಆರ್‌.ಡಿ ರೂಪಾಯಿ 8,900/-, ಪ್ರೈವೇಟ್‌ ರೂಪಾಯಿ 1,644/-, ಪ್ರಿಂಟರಿನಿಂದ ರೂಪಾಯಿ 4,425/-, ಝೆರಾಕ್ಸ್‌ನಿಂದ ಜಮಾ ಆದ ರೂಪಾಯಿ 3,796/-, ಅಕ್ಷರ ದಾಸೋಹದ ರೂಪಾಯಿ 5,179/-, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ರೂಪಾಯಿ 17,200/- ಮತ್ತು ಉಳಿದ ರೂಪಾಯಿ 4000/- ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಒಟ್ಟು ಮೌಲ್ಯ ರೂಪಾಯಿ 45,144/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 161/2022 ಕಲಂ:  457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಮನುಷ್ಯ ಕಾಣೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಶಶಾಂಕ ಶಿವತ್ತಾಯ ಹೆಚ್‌ (32), ತಂದೆ: ಬಿ.ಎಸ್‌ಹರಿ ಕೃಷ್ಣ ಶಿವತ್ತಾಯ , ವಾಸ: ಸತ್ಯಶ್ರೀ,  ಮೂಡು ಪೆರಂಪಳ್ಳಿ, ಶಿವಳ್ಳಿ ಗ್ರಾಮ, ಉಡುಪಿ  ತಾಲೂಕು ಇವರ ದೊಡ್ಡಪ್ಪ ರಾಮದಾಸ ಶಿವತ್ತಾಯ (75)  ರವರು ಪಿರ್ಯಾದಿದಾರರ ಮನೆಯ ಎದುರು ಇರುವ ಹಳೆಯ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದು ದಿನಾಂಕ 06/11/2022 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರಲ್ಲಿ ಉಡುಪಿಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅದಕ್ಕೆ ಪಿರ್ಯಾದಿದಾರರು ಸಕಾರಣವಿಲ್ಲದೇ ಉಡುಪಿಗೆ ಹೋಗುವುದು ಬೇಡ, ಬಿಸಿಲು ಜೋರಾಗಿ ಇದೆ ಎಂದಾಗ ಒಪ್ಪಿ ವಾಪಾಸ್ ತನ್ನ ಮನೆಗೆ ಹೋಗಿರುತ್ತಾರೆ. ಪಿರ್ಯಾದಿದಾರರು ಹಾಗೂ ಅವರ ತಂದೆ ತಾಯಿ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ವಾಪಾಸ್‌ ಬರುವಾಗ ಹಳೆಯ ಮನೆಗೆ ಬೀಗ ಹಾಕಿರುತ್ತದೆ. ಪಿರ್ಯಾದಿದಾರರು ದೊಡ್ಡಪ್ಪ ರಾಮದಾಸ ಶಿವತ್ತಾಯ ರವರನ್ನು ಉಡುಪಿ ಪರಿಸರದಲ್ಲಿ ಹಾಗೂ ಸಂಬಂದಿಕರ ಮನೆಯಲ್ಲಿ, ನರೆಕರೆಯಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 198/2022  ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ರವಿ ಎಂ ಎಸ್ (49), ತಂದೆ: ಶ್ರೀನಿವಾಸ, ವಾಸ: 4/192 ಈಶ್ವರನಗರ , ತೆಂಕನಿಡಿಯೂರು ಗ್ರಾಮ ಇವರ ಮಗ ಸಾಗರ್(20)  ರವರು ಅಂಬಲಪಾಡಿಯಲ್ಲಿ ಎನಿಮೇಷನ್  ಕೆಲಸ ಮಾಡಿಕೊಂಡಿದ್ದು , ಅವರಿಗೆ ಮಧ್ಯಪಾನ  ಸೇವನೆ ಮಾಡುವ  ಅಭ್ಯಾಸವಿರುತ್ತದೆ. ದಿನಾಂಕ 06/11/2022 ರಂದು   ಪಿರ್ಯಾದಿದಾರರ  ಮಗನಿಗೆ ರಜೆ ಇದ್ದುದರಿಂದ ಮನೆಯಲ್ಲಿಯೆ   ಇದ್ದು  ರಾತ್ರಿ  11:15 ಗಂಟೆಗೆ ಮಧ್ಯಪಾನ ಸೇವಿಸಿ ಮನೆಗೆ ಬಂದಿದ್ದು , ಮನೆ ಮಾರಾಟ ಮಾಡುವ ವಿಷಯದಲ್ಲಿ  ಪಿರ್ಯಾದಿದಾರರೊಂದಿಗೆ ಜಗಳ ಮಾಡಿ ಪಿರ್ಯಾದಿದಾರರ ಹೆಂಡತಿಯ ತಮ್ಮನ ಮನೆಗೆ ಹೋಗಿರುತ್ತಾನೆ. 11:45  ಗಂಟೆಗೆ  ಪಿರ್ಯಾದಿದಾರರ  ಹೆಂಡತಿಯ ತಮ್ಮ ಮಹೇಶ  ಕರೆ ಮಾಡಿ  ಸಾಗರ ಮನೆಯಲ್ಲಿ  ಗಲಾಟೆ  ವಿಚಾರ ತಿಳಿಸಿದ್ದು , ವಾಪಸ್ಸು ಮನೆಗೆ ಬರುತ್ತಿರುವುದಾಗಿ ತಿಳಿಸಿರುತ್ತಾನೆ.  ದಿನಾಂಕ 07/11/2022 ರಂದು  ಬೆಳಿಗ್ಗೆ 4:00 ಗಂಟೆಗೆ  ಪಿರ್ಯಾದಿದಾರರು ಮನೆಯ ಬಚ್ಚಲು ಮನೆಗೆ ಹೋದಾಗ  ಸಾಗರ ಮನೆಯ ಬಚ್ಚಲು ಮನೆಯ ಜಂತಿಗೆ ಚೂಡಿದಾರ ವೇಲ್ ನ್ನು ಕಟ್ಟಿ ಕುತ್ತಿಗೆಗೆ  ನೇಣು ಬಿಗಿದು  ಆತ್ಮಹತ್ಯೆ  ಮಾಡಿಕೊಂಡಿರುತ್ತಾನೆ . ಪಿರ್ಯಾದಿದಾರರ ಮಗ ಸಾಗರ ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು ಅಲ್ಲದೆ ಮನೆ ಮಾರಾಟದ ವಿಚಾರದಲ್ಲಿ ಪದೇ ಪದೇ ಗಲಾಟೆ ಮಾಡುತ್ತಿದ್ದು ಅದೇ ವಿಚಾರದಲ್ಲಿ  ಜೀವನದಲ್ಲಿ ಜೀಗುಪ್ಸೆಗೊಂಡು  ದಿನಾಂಕ 06/11/2022 ರಂದು ರಾತ್ರಿ 11:45  ಗಂಟೆಯಿಂದ ದಿನಾಂಕ 07/11/2022 ರಂದು ಬೆಳಿಗ್ಗೆ 4:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಬಚ್ಚಲು ಮನೆಯ ಸಿಮೆಂಟ್ ಸೀಟಿನ ಮಾಡಿನ ಪಕ್ಕಾಸಿಗೆ ಚೂಡಿದಾರ ವೇಲ್ ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 62/2022  ಕಲಂ: 174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   

ಇತರ ಪ್ರಕರಣ

  • ಕೋಟ: ದಿನಾಂಕ 07/11/2022 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ಸಂಪಾವತಿ  ಶೆಡ್ತಿ (62),  ಗಂಡ: ಕಾಳು ಶೆಟ್ಟಿ, ವಾಸ: ಮಕ್ಕಿಮನೆ ಮಧುವನ ಅಚ್ಲಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ  ಮನೆಯ ಗದ್ದೆಯ ಕಟಾವು ಮಾಡಲು ಕಟಾವು ಯಂತ್ರ ಬಂದಿರುತ್ತದೆ. ಪಿರ್ಯಾದಿದಾರರ ಮನೆಯ ಪಕ್ಕದ ಚಂದ್ರ ಹಾಗೂ ಲತಾರವರು  ಪಿರ್ಯಾದಿದಾರರ ಗದ್ದೆಯಲ್ಲಿ ಭತ್ತವನ್ನು ಕೊಂಡೊಯ್ಯಲು ದಾರಿ ಕೇಳಿದಾಗ ಪಿರ್ಯಾದಿದಾರರು ಗದ್ದೆಯ ಬದಿಯಲ್ಲಿ ಹೋಗಲು ಒಪ್ಪಿಗೆ ಕೊಟ್ಟಿರುತ್ತಾರೆ. ಆದರೆ ಇತರ ಮನೆಯವರು  ಗದ್ದೆಯ ಮಧ್ಯದಲ್ಲಿ ದಾರಿ ಬೇಕು ಎಂದು ಕೇಳಿದಾಗ ಆಗುವುದಿಲ್ಲ ಎಂದು ಹೇಳಿದ್ದಕ್ಕೆ ಬೆಳಿಗ್ಗೆ 11:30 ಗಂಟೆಯ ಸಮಯಕ್ಕೆ ಸುಶೀಲ ,ಶಾಂತ ಹಾಗೂ ಸಾಕು ಎಂಬುವವರು ಪಿರ್ಯಾದಿದಾರಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಬೋಗಿ ಕೋಲಿನಿಂದ  ಕೈಗೆ ಬೆನ್ನಿಗೆ ಹೊಡೆದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 192/2022 ಕಲಂ: 323, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 07/11/2022 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಸುಶೀಲಾ ಶೆಡ್ತಿ (67),  ಗಂಡ: ದಿ. ಗೋಪಾಲ ಶೆಟ್ಟಿ, ವಾಸ: ಮಕ್ಕಿಮನೆ ಅಚ್ಲಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮಾವನ ಮನೆಯ ಗದ್ದೆ ಕಟಾವಿಗೆ ಕಟಾವು ಮಾಡುವ ಯಂತ್ರ ಬಂದಿದ್ದು  , ಕಟಾವು ಯಂತ್ರವು ಪಿರ್ಯಾದಿದಾರರ ನೆರೆಮೆನೆಯ ಸಂಪಾ ಶೆಡ್ತಿಯವರ ಗದ್ದೆಯ ಮುಖಾಂತರ  ಹೋದಾಗ ಸಂಪಾ ಶೆಡ್ತಿಯವರು ಹಾಗೂ ಅವರ ಗಂಡ ಕಾಳು ಶೆಟ್ಟಿಯವರು  ಪಿರ್ಯಾದಿದಾರರಿಗೆ ಹಾಗೂ ಅವರ ತಂಗಿ ಸಾಕುರವರಿಗೆ ಅವಾಚ್ಯ ಶಬ್ದಗಳಿಂದ ಬೈದು ಸಂಪಾ ಶೆಡ್ತಿಯವರು ಸಾಕುರವರಿಗೆ ಕೋಲಿನಿಂದ ಹಣೆಗೆ ಹೊಡೆದಿದ್ದು ಅಲ್ಲದೇ ಕಾಳು ಶೆಟ್ಟಿಯವರು ಕೈಯಿಂದ ಹೊಡೆದು ನೆಲಕ್ಕೆ ದೂಡಿ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕೊಲೆ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 191/2022 ಕಲಂ: 323, 324, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .      

ಇತ್ತೀಚಿನ ನವೀಕರಣ​ : 07-11-2022 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080