ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 06/11/2021 ರಂದು ಬೆಳಿಗ್ಗೆ 9:00 ಗಂಟೆಗೆ, ಕುಂದಾಪುರ  ತಾಲೂಕು, ಕಾವ್ರಾಡಿ  ಗ್ರಾಮದ ಕಂಡ್ಲೂರು  ಜುಮ್ಮಾ ಮಸೀದಿಯ ಬಳಿ ರಾಜ್ಯ ರಸ್ತೆ 52 ರಲ್ಲಿ,  ಆಪಾದಿತ ಗೋಪಾಲ ಎಂಬುವವರು ನೊಂದಣಿ ನಂಬ್ರ ಇಲ್ಲದ ಹೊಸ HONDA ACTIVA ಸ್ಕೂಟರ್‌‌‌ ನ್ನು ಬಸ್ರೂರು ಕಡೆಯಿಂದ ಕಂಡ್ಲೂರು ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಸ್ಕೂಟರ್‌‌‌ ನ್ನು ಒಮ್ಮೇಲೆ ರಸ್ತೆಯ  ಬಲಬದಿಗೆ  ಸವಾರಿ ಮಾಡಿ, ಕಂಡ್ಲೂರು  ಕಡೆಯಿಂದ ಬಸ್ರೂರು  ಕಡೆಗೆ  ಪಿರ್ಯಾದಿದಾರರಾದ ಚಂದ್ರ (37), ತಂದೆ: ಕುಷ್ಟ,  ವಾಸ: ಜನತಾ ಕಾಲೋನಿ,  ಕಂಡ್ಲೂರು, ಕಾವ್ರಾಡಿ ಗ್ರಾಮ,  ಕುಂದಾಪುರ  ತಾಲೂಕು ಇವರು KA-19-EG-9509 ನೇ ಹೀರೋ ಮೇಸ್ಟ್ರೋ ಸ್ಕೂಟರ್‌‌ ನಲ್ಲಿ  ಅವರ ತಮ್ಮನ ಮಗಳು ಸುಶ್ಮೀತಾ (14) ರವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಬರುತ್ತಿದ್ದ ಸ್ಕೂಟರ್‌‌ ಗೆ  ಎದುರುಗಡೆಯಿಂದ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರ ಬಲಭುಜಕ್ಕೆ, ಎಡಕಾಲಿಗೆ, ಬಲಕೈಗೆ ಒಳನೋವಾದ ಗಾಯ, ಸುಶ್ಮೀತಾಳಿಗೆ ಬಲಕಾಲಿನ ಮುಂಗಾಲು ಗಂಟಿಗೆ ಮುಳೆ ಮುರಿತವಾದ ಗಾಯ ಹಾಗೂ ಆಪಾದಿತನ ಎಡಕಾಲಿನ ಮುಂಗಾಲು ಗಂಟಿಗೆ, ಎಡಭುಜ, ಹಾಗೂ ಎಡ ಹಣೆಗೆ ಗಾಯನೋವಾಗಿ ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಪಿರ್ಯಾದಿದಾರರಾದ ಚಂದ್ರ ಹಾಗೂ ಸುಶ್ಮೀತಾ ಹೆಚ್ಚಿನ  ಚಿಕಿತ್ಸೆ  ಬಗ್ಗೆ  ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 06/11/2021 ರಂದು 10:00 ಗಂಟೆಗೆ ಪಿರ್ಯಾದಿದಾರರಾದ ಕೇಶವ  ನಾಯ್ಕ (35), ತಂದೆ: ಬಾಬಣ್ಣ ನಾಯ್ಕ,    ವಾಸ: ಮಕ್ಕಿ ಮನೆ ಶಂಕರ ನಾರಾಯಣ  ಗ್ರಾಮ ಕುಂದಾಪುರ  ತಾಲೂಕು ಇವರು ಕುಂದಾಪುರ  ತಾಲೂಕಿನ   ಶಂಕರನಾರಾಯಣ  ಗ್ರಾಮದ   ಅರಣ್ಯ ಇಲಾಖೆಯ  ಕಚೇರಿಯ ಬಳಿ ವಾಂಟೆ  ಹಾಡಿ  ಕಡೆಗೆ  ಹೋಗುವ  ಮಣ್ಣು  ರಸ್ತೆಯಲ್ಲಿ KA-20-EX-0343 ನೇ ನಂಬ್ರದ ಮೋಟಾರ್  ಸೈಕಲ್ ನಿಲ್ಲಿಸಿಕೊಂಡು ನಿಂತುಕೊಂಡಿರುವಾಗ  ಆರೋಪಿ ಗುರುಪ್ರಸಾದ  KA-20-EJ-7388ನೇ  ನಂಬ್ರದ ಮೋಟಾರ್ ಸೈಕಲನ್ನು ಹಾಲಾಡಿ  ಕಡೆಯಿಂದ   ಶಂಕರ ನಾರಾಯಣ  ಕಡೆಗೆ ಅತೀ  ವೇಗ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು  ಡಿಕ್ಕಿ  ಹೊಡೆದಿದ್ದು, ಇದರ  ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 98/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಅಬ್ದುಲ್ ರಜಾಕ್ (33), ತಂದೆ: ದಿ. ಪಿ.ಕೆ. ಬಾಷಾ , ವಾಸ: ಮನೆ ನಂಬ್ರ. 1-6-58ಎ, ಕಂಚಿನಡ್ಕ, ನಡ್ಸಾಲು  ಗ್ರಾಮ, ಪಡುಬಿದ್ರಿ ಅಂಚೆ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಅಜ್ಜ ಇಸ್ಮಾಯಿಲ್ (73) ರವರು ದಿನಾಂಕ 06/11/2021 ರಂದು ಬೆಳಿಗ್ಗೆ. ಪಡುಬಿದ್ರಿ ಮೆಸ್ಕಾಂ ಕಛೇರಿಗೆ ಬಂದು ವಿದ್ಯುತ್ ಬಿಲ್ ಕಟ್ಟಿ ವಾಪಸ್ಸು ತನ್ನ KA-20-S-6000  ನೇ ಹೋಂಡಾ ಮೆಟ್ರಿಕ್ಸ್ ಸ್ಕೂಟರ್  ನಲ್ಲಿ ಸವಾರಿ ಮಾಡಿಕೊಂಡು ಪಡುಬಿದ್ರಿ ಪೇಟೆ ಕಡೆಗ ಬರುತ್ತಾ ಬೆಳಿಗ್ಗೆ. 11:15 ಗಂಟೆಗೆ ಪಡುಬಿದ್ರಿ ಕೆಳಪೇಟೆಯ ಡೌನ್ ಟೌನ್ ಬಾರಿನ ಎದುರು ರಾಷ್ಟ್ರೀಯ ಹೆದ್ದಾರಿ.66 ರ ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಬರುವಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-B-7486 ನೇ ನಂಬ್ರದ ಕೋಹಿನೂರು ಹೆಸರಿನ ಬಸ್ ನ್ನು ಅದರ ಚಾಲಕ ಮೊಹಮ್ಮದ್ ಆರೀಫ್  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು KA-20-S-6000 ನೇ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇಸ್ಮಾಯಿಲ್ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಅವರ ಹಣೆಯ ಮೇಲ್ಬದಿಗೆ, ತುಟಿಯ ಮೇಲ್ಭಾಗಕ್ಕೆ, ಎರಡೂ ಕೈಯ ಮೊಣಗಂಟಿಗೆ, ಹಸ್ತದ ಮೇಲ್ಬದಿಗೆ, ಬಲಕಾಲಿನ ಕೋಲು ಕಾಲಿಗೆ, ಎಡಕಾಲಿನ ಪಾದದ ಗಂಟಿಗೆ ಗಾಯವಾಗಿದ್ದು, ಅವರನ್ನು ಚಿಕಿತ್ಸೆ ಬಗ್ಗೆ ಸುರತ್ಕಲ್ ಅಥರ್ವ ಆಸ್ಫತ್ರೆಗೆ ದಾಖಲಿಸಿದ್ದು, ಇಸ್ಮಾಯಿಲ್ ರವರ ಬಲಕಾಲಿನ ಮೂಳೆ ಮುರಿತವಾಗಿರುವುದು ತಿಳಿದು ಬಂದಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಶಂಕರನಾರಾಯಣ: ಮಹೇಂದ್ರ  ಕೊಠಾರಿ (27) ಇವರು  ಸುಮಾರು  ಸಮಯದಿಂದ  ಮಾನಸಿಕ  ಕಾಯಿಲೆಯಿಂದ ಬಳಲುತ್ತಿದ್ದು, ಈ  ಬಗ್ಗೆ  ಉಡುಪಿಯ  ಬಾಳಿಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು, ಆದರೆ ಮಾನಸಿಕ  ಕಾಯಿಲೆ  ಸರಿಯಾಗಿ ಗುಣವಾಗಿರಲಿಲ್ಲ,  ಈ ಹಿಂದೆ  2-3  ಸಲ  ಮನೆ   ಬಿಟ್ಟು ಹೋಗಿದ್ದು, ಅದರಂತೆ  ದಿನಾಂಕ  05/11/2021  ರಂದು  ರಾತ್ರಿ  10:00 ಗಂಟೆಗೆ  ಊಟ  ಮಾಡಿ  ಮಲಗಿದವರು, ನಂತರ  ಬೆಳಗ್ಗಿನ ಜಾವ  3:00  ಗಂಟೆಗೆ ಮನೆಯ ಬಾಗಿಲು ತೆರೆದಿದ್ದು, ನೋಡಿ ಮಹೇಂದ್ರ  ಕೊಠಾರಿ ಮಲಗಿದ  ಜಾಗದಲ್ಲಿ ಇರಲಿಲ್ಲ. ಆ ಬಳಿಕ ಎಲ್ಲಾ ಕಡೆ   ಹುಡುಕಾಡಿದಾಗ  ಮಹೇಂದ್ರ ತನಗಿರುವ  ಮಾನಸಿಕ  ಕಾಯಿಲೆಯಿಂದ  ಮನನೊಂದು ಕುಂದಾಪುರ  ತಾಲೂಕಿನ  ಆಜ್ರಿ ಗ್ರಾಮದ ಕೇವರ್ಗಿ  ಎಂಬಲ್ಲಿ  ಶಂಕರ ಕೊಠಾರಿ  ಎಂಬುವರಿಗೆ ಸೇರಿದ  ಬಾವಿಗೆ  ಹಾರಿ  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಭಾಸ್ಕರ  ಶೇರಿಗಾರ (68), ತಂದೆ: ದಿ. ಹನುಮಂತಯ್ಯ ಶೇರಿಗಾರ,  ವಾಸ: ಸ್ಕಂದ ನಿಲಯ ಪರಿಮಳ ಸ್ಟೋರ್ ಬಳಿ ಹಂಗಳೂರು ಗ್ರಾಮ , ಕುಂದಾಪುರ  ತಾಲೂಕು ಇವರ ಬಾವ ಬಾಬು ಶೇರಿಗಾರ (65) ರವರು ಹೆಂಡತಿ ಮಕ್ಕಳೊಂದಿಗೆ ಆಸ್ಟೇಲಿಯಾದಲ್ಲಿದ್ದವರು 8 ತಿಂಗಳ ಹಿಂದೆ ಅವರ ಮನೆಯಾದ ಕುಂದಾಪುರ ತಾಲೂಕು ಕೋಣಿ ಗ್ರಾಮದ ಶಾಲೆಯ ರಸ್ತೆಯಲ್ಲಿರುವ ಪವಿತ್ರ  ನಿಲಯಕ್ಕೆ ಬಂದು ಒಬ್ಬರೆ ವಾಸವಾಗಿದ್ದು ಇತ್ತೀಚೆಗೆ ಅವರು ಉಬ್ಬಸ ಕಾಯಿಲೆಯಿಂದ ಬಳಲುತಿದ್ದು  ಹಾಗೂ ಮಧ್ಯಪಾನ ಮಾಡುವ ಚಟವಿದ್ದು   ದಿನಾಂಕ  06/11/2021 ರಂದು ಮದ್ಯಾಹ್ನ 12:15 ಗಂಟೆಯಿಂದ ಸಂಜೆ 6:00 ಗಂಟೆ ಮದ್ಯಾವಧಿಯಲ್ಲಿ ಆರೋಗ್ಯ ಸಮಸ್ಯೆಯಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮನನೋಂದು  ಅವರ ಮನೆಯಾದ ಕೋಣಿಯ  ಪವಿತ್ರ  ನಿಲಯದ  ಬೆಡ್ ರೂಮಿನ ಕಿಟಕಿಗೆ ಬಟ್ಟೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 46/2021ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕೋಟ: ದಿನಾಂಕ 06/11/2021 ರಂದು ಬೆಳಿಗ್ಗೆ ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಪಡುಮುಂಡು ಎಂಬಲ್ಲಿ  ದಿನೇಶ  ಶೆಟ್ಟಿ ಎಂಬುವವರ  ವಾಸ್ತವ್ಯದ ಮನೆಯ  ಕಾರ್‌  ಶೆಡ್‌ನಲ್ಲಿ ಯಾವುದೋ  ಸ್ಪೋಟಕ  ವಸ್ತು ಸಿಡಿದು  ಬೆಂಕಿ ಅನಾಹುತವಾಗಿರುವುದಾಗಿ ಬಂದ  ಮಾಹಿತಿಯಂತೆ ಸಂತೋಷ  ಬಿ.ಪಿ, ಪೊಲೀಸ್ ಉಪನಿರೀಕ್ಷಕರು, ಕೋಟ  ಪೊಲೀಸ್‌  ಠಾಣೆ ಇವರು ಸಿಬ್ಬಂದಿಯವರೊಂದಿಗೆ ಸ್ತಳಕ್ಕೆ ಹೋಗಿ  ಪರಿಶೀಲಿಸಿದಲ್ಲಿ  ದಿನೇಶ  ಶೆಟ್ಟಿ  ರವರು  ವಾಸ್ತವ್ಯ  ಇದ್ದ  ಮನೆಯ  ಕಾರ್‌ ಸಿಟೌಟ್‌ ನ ಮೇಲ್ಚಾವಣಿಯಲ್ಲಿದ್ದ  ಲೈಟ್‌ ಹಾಗೂ ಗೋಡೆಯಲ್ಲಿದ್ದ  ಲೈಟ್‌ ಮತ್ತು  ಸ್ವೀಚ್ಗಳು  ಸುಟ್ಟಿದ್ದು,  ಕಾರ್‌  ಶೆಡ್‌ ಗೆ  ಹೊಂದಿಕೊಂಡಿರುವ ಅಡುಗೆ  ಮನೆಯ  ಕಿಟಕಿಯ ಗಾಜು  ಬಿರುಕು  ಬಿಟ್ಟಿದ್ದು  ಕಾರ್‌ ಶೆಡ್‌ನಲ್ಲಿದ್ದ KA-20-ET-8175 ನೇ  ಸ್ಕೂಟಿಯು ಭಾಗಶ: ಸುಟ್ಟಿರುತ್ತದೆ.  ಈ  ಸ್ಪೋಟದಿಂದುಂಟಾದ ಬೆಂಕಿಯನ್ನು ನಂದಿಸಲು  ಸ್ತಳದಲ್ಲಿದ್ದವರು ನೀರನ್ನು ಹಾಕಿರುವುದಾಗಿ  ಮತ್ತು ಸ್ಪೋಟದಿಂದ ಸುಟ್ಟಂತಹ ಅವಶೇಷಗಳ ವಸ್ತುಗಳನ್ನು ಮತ್ತು  ಸೈಕಲನ್ನು  ದಿನೇಶ ಶೆಟ್ಟಿ  ರವರ ಮನೆ  ಹಿಂಭಾಗದಲ್ಲಿ  ಮತ್ತು ದಿನೇಶ  ಶೆಟ್ಟಿ  ರವರ  ಕಾರು ನಂಬ್ರ  KA-20-MB-8647  ನೇದನ್ನು  ನೆರೆಯ ಜನಾರ್ಧನ ಆಚಾರ್‌ ರವರ ಮನೆ  ಬಳಿ  ಇಟ್ಟಿರುವುದಾಗಿ ಸ್ತಳೀಯರು ತಿಳಿಸಿದಂತೆ ನೋಡಲಾಗಿ ಕಾರ್‌ನ ಹೊರಭಾಗ ಸುಟ್ಟಿರುವುದು ಕಂಡು ಬಂದಿರುತ್ತದೆ. ಈ ಅವಘಡವು  ಬೆಳಿಗ್ಗೆ 7:15 ಗಂಟೆಯಿಂದ 7:45 ಗಂಟೆಯ ಮಧ್ಯಾವದಿಯಲ್ಲಿ ಸಂಭವಿಸಿದ್ದು, ಕೃತ್ಯದಿಂದ ದಿನೇಶ ಶೆಟ್ಟಿ ಹಾಗೂ ಅವರ ಪತ್ನಿ ವಸಂತಿ ಶೆಟ್ಟಿ ರವರಿಗೆ ತೀವ್ರ ತರದ ಸುಟ್ಟ ಗಾಯಗಳಾಗಿದ್ದು  ಚಿಕಿತ್ಸೆಗಾಗಿ ಕೆ.ಎಮ್.ಸಿ. ಮಣಿಪಾಲ ಆಸ್ಪತ್ರೆಗೆ  ದಾಖಲಿಸಿರುವುದಾಗಿ ತಿಳಿದು ಬಂದಿರುತ್ತದೆ.    ಈ ಕೃತ್ಯಕ್ಕೆ ದಿನೇಶ  ಶೆಟ್ಟಿ ರವರು ತಮ್ಮ ಮನೆಯ ಕಾರ್‌ ಪಾರ್ಕಿಂಗ್‌ನಲ್ಲಿ ಯಾವುದೋ ಸ್ಪೋಟಕವನ್ನು ಅಥವಾ ಯಾವುದೋ  ದಹ್ಯ  ವಸ್ತುವನ್ನು ಅಥವಾ ಇನ್ಯಾವುದೋ ಪಟಾಕಿಯಂತಹ ವಸ್ತುವನ್ನು ಯಾವುದೇ ಮುಂಜಾಗ್ರತೆ ವಹಿಸದೆ ನಿರ್ಲಕ್ಷತನದಿಂದ ಇರಿಸಿದ್ದು ಯಾವುದೋ ಕಾರಣದಿಂದ ಅದು  ಸ್ಪೋಟಗೊಂಡಿದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 187/2021 ಕಲಂ:  9(B)1(b) Explosive Act 1884 , Sec 285, 286, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 06/11/2021 ರಂದು 17:30 ಗಂಟೆಗೆ ಪಿರ್ಯಾದಿದಾರರಾದ ಭಾಸ್ಕರ ಪೂಜಾರಿ (35), ತಂದೆ: ಮಂಜು ಪೂಜಾರಿ, ವಾಸ: ಲಕ್ಷ್ಮೀ ನಿಲಯ ಕಂಜಾರು ಅಂಪಾರು ಗ್ರಾಮ ಕುಂದಾಪುರ  ತಾಲೂಕು ಇವರು ಶಂಕರನಾರಾಯಣ ಬಾರ್ ಹತ್ತಿರ ಪರಿಚಯದ   ಕೊಕ್ಕೋಡು  ಹರೀಶ್ ಶೆಟ್ಟಿ ಮತ್ತು ಪಿರ್ಯಾದಿದಾರರಿಗೂ ಈ ಹಿಂದೆ ಹಣದ ವಿಚಾರವಾಗಿ ವೈಮನಸ್ಸು ಉಂಟಾಗಿದ್ದು ಅದೇ ವಿಚಾರವಾಗಿ  ಜಗಳ ಮಾಡಿರುತ್ತಾರೆ. ನಂತರ ಪಿರ್ಯಾದಿದಾರರು ಅಂಪಾರು ಗ್ರಾಮ ನಾಗಶ್ರೀ ಬಾರ್ 18:30 ಗಂಟೆಗೆ  ನಿಂತಿರುವಾಗ ಅಪಾದಿತ  ಹರೀಶ್ ಶೆಟ್ಟಿ ಪಿರ್ಯಾದಿದಾರರ ಬಳಿ ಬಂದು ನಿನ್ನನ್ನು ನಾನು ಕೊಲ್ಲದೇ ಬಿಡುವುದಿಲ್ಲ ಎಂದು ಆತನ ಬೇಬಿನಲ್ಲಿದ್ದ ಬಟನ್ ಚಾಕು ತೆಗೆದು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಚಾಕುವನ್ನು ಕುತ್ತಿಗೆಗೆ ಬಿಸಿದ್ದು ಪಿರ್ಯಾದಿದಾರರು ಹೆದರಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ತನ್ನ ಎಡಕೈಯನ್ನು ಮುಂದೆ ಚಾಚಿದ್ದ  ಪರಿಣಾಮ ಪಿರ್ಯಾದಿದಾರರ ಎಡಕೈ ತೋರ ಬೆರಳಿಗೆ ರಕ್ತ ಗಾಯವಾಗಿರುತ್ತದೆ ಮತ್ತು ಪಿರ್ಯಾಧಿದಾರ ದ್ವಿಚಕ್ರ ವಾಹನ  KA-20-K- 1785 ನೇ ವಾಹನದ ಡೂಮ್ ನ್ನು  ಆಪಾದಿತನು ಜಜ್ಜಿ ಜಖಂ ಮಾಡಿ ಅಲ್ಲಿಂದ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 99/2021  ಕಲಂ:  307, 427, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 06/11/2021 ರಂದು ಪಿರ್ಯಾದಿದಾರರಾದ ಸುದರ್ಶನ (26), ತಂದೆ: ರಮೇಶ್, ವಾಸ: ಗುಡ್ಡಕೇರಿ ಹೌಸ್, ಸಿಂಡಿಕೇಟ್ ಬ್ಯಾಂಕ್ ಬಳಿ, ಕೌಡೂರು ಗ್ರಾಮ, ಬೈಲೂರು ಪೋಸ್ಟ್, ಕಾರ್ಕಳ ತಾಲೂಕು ಇವರು 19:00 ಗಂಟೆಗೆ ಬೈಲೂರು ಪೇಟೆಯಲ್ಲಿ  ಚಂದನ್ ವೈನ್  ಶಾಪ್ ಬಳಿ ನಿಂತುಕೊಂಡಿರುವಾಗ ಅಪಾದಿತರಾದ 1. ಸಂತೋಷ್, 2. ಸಂದೇಶ್, 3. ಸುದೀಪ್, 4. ಸುರೇಂದ್ರ, 5. ಶಿವಪ್ರಸಾದ್, 6. ವಿಕಾಸ್,7. ದಿವಾಕರ, 8. ಪ್ರಭಾಕರ, 9. ಗೌತಮ್, 10. ಶಶಿಕಾಂತ್, 11. ಪ್ರಸನ್ನ, 12. ಸಂಜಯ್, 13. ವಿಜಯಾ ಇವರೆಲ್ಲರೂ ಸೇರಿ ಮಾರಕಾಯುಧವನ್ನು ಹಿಡಿದುಕೊಂಡು ಅಟೋರಿಕ್ಷಾ ಮತ್ತು 3 ಬೈಕ್ ಗಳಲ್ಲಿ  ಬಂದು ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ಯಾರಿಗೆ ವಾಟ್ಸಾಪ್ ಸ್ಟೇಟಸ್  ಹಾಕಿದ್ದೀಯ  ಎಂದು ಅವಾಚ್ಯ  ಶಬ್ದಗಳಿಂದ ಬೈದು, ಕೈಯಿಂದ ಹೊಡೆದು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದಿರುತ್ತಾರೆ.ಅಲ್ಲದೇ ಸುಧಾರಿಸಿಕೊಂಡು ಎದ್ದಾಗ ಅಪಾದಿತ ಸಂತೋಷನು ಪಿರ್ಯಾದಿದುದಾರರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಸೋಂಟೆಯಿಂದ ತಲೆಯ ಮಧ್ಯಭಾಗಕ್ಕೆ ಹೊಡೆಯಲು ಬಂದಾಗ ಪಿರ್ಯಾದಿದಾರರು ತಪ್ಪಿಸಿದಾಗ ಸೋಂಟೆಯಿಂದ ಪೆಟ್ಟು ಮುಂದಲೆಗೆ ಬಿದ್ದಿದ್ದು ಸಂದೇಶನು ಸಹಾ ಸೋಂಟೆಯಿಂದ ಮುಖಕ್ಕೆ ಹೊಡೆದಿದ್ದು ತುಟಿಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದುದಾರರ ಸ್ನೇಹಿತ ರಾಜೇಶ ಎಂಬುವವರು ಕಾರ್ಕಳ ಸರಕಾರಿ  ಆಸ್ಪತ್ರೆ ಗೆ  ಕರೆದುಕೊಂಡು ಬಂದು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಅಪಾದಿತರು ಸೋಂಟೆಯಿಂದ ಹೊಡೆದು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 145/2021 ಕಲಂ: 143, 147, 148, 504, 506(2), 323, 324, 307, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ:ದಿನಾಂಕ 06/11/2021 ರಂದು ಪಿರ್ಯಾದಿದಾರರಾದ ಸುಮಂತ್ (22), ತಂದೆ: ಸುಧಾಕರ, ವಾಸ: ಪೇಟೆಮನೆ, ಬೈಲೂರು, ಕೌಡೂರು ಗ್ರಾಮ, ಬೈಲೂರು ಪೋಸ್ಟ್, ಕಾರ್ಕಳ ತಾಲೂಕು ಇವರು ಬೈಲೂರು ಆರೂರ್ಸ್‌ ನರ್ಸಿಂಗ್‌‌ ಹೋಮ್‌‌ನಲ್ಲಿ ಬೆನ್ನು ನೋವು ಮತ್ತು ಕಿವಿನೋವು ಬಗ್ಗೆ ರಾತ್ರಿ 7.00 ಗಂಟೆಗೆ ಚಿಕಿತ್ಸೆ ಪಡೆದು ಹೊರಗೆ ಇರುವಾಗ ಆಪಾದಿತರಾದ 1.ಸುದೀಪ್, 2. ಸಂದೇಶ್, 3. ಪ್ರಸಾದ್ ಮತ್ತು ಇತರ 5 ಜನರು ಸೇರಿ ರಿಕ್ಷಾ ಒಂದರಲ್ಲಿ ಬಂದು ಪಿರ್ಯಾದಿದಾರರನ್ನು ರಿಕ್ಷಾದಿಂದ ಹೊರಗೆ ಎಳೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಎಳೆದಾಡಿ, ಪಿರ್ಯಾದಿದಾರರ ಕೆನ್ನೆಗೆ ಕೈಯಿಂದ ಹೊಡೆದು ನೆಲಕ್ಕೆ ತಳ್ಳಿ ತುಳಿದಿದ್ದು, ಇದರಿಂದ ಪಿರ್ಯಾದಿದಾರರ ಸೊಂಟದ ಭಾಗಕ್ಕೆ ಮತ್ತು ಕೆನ್ನೆ ಹಾಗೂ ಕಿವಿಯ ಭಾಗಕ್ಕೆ ನೋವಾಗಿರುತ್ತದೆ. ಆಪಾದಿತರು ಯಾವ ಕಾರಣಕ್ಕೆ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಿಗೆ ತಿಳಿದಿರುವುದಿಲ್ಲವಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 143,147, 504, 323,149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ  06/11/2021 ರಂದು ಸಂಜೆ 6:00 ಗಂಟೆಗೆ ಪಿರ್ಯಾದಿದಾರರಾದ ವಿಜಯಾ (43), ತಂದೆ: ತಿಮ್ಮ, ವಾಸ: ಪೇಟೆಮನೆ, ಬೈಲೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ಬೈಲೂರು ಪೇಟೆಯಲ್ಲಿ ಮೀನು ಅಂಗಡಿಯ ಬಳಿ ನಿಂತುಕೊಂಡಿರುವಾಗ ಆಪಾದಿತ ಪಕ್ರು, ವಾಸ: ಬೈಲೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ಪಿರ್ಯಾದಿದಾರರ ಬಳಿ ಬಂದು ಮೈಗೆ ಕೈ ಹಾಕಿ ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿದ್ದ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಗಲಾಟೆ ವಿಷಯ ತಿಳಿದು ಅಲ್ಲಿಗೆ ಬಂದ ಪಿರ್ಯಾದಿದಾರರ ತಮ್ಮ ಸಂತೋಷ ಗಲಾಟೆಯನ್ನು ಬಿಡಿಸಿ, ನಂತರ ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಘಟನೆಯಿಂದ ಪಿರ್ಯಾದಿದಾರರ ತಲೆಗೆ ಒಳಜಖಂ ಆಗಿರುತ್ತದೆ. ಆಪಾದಿತನು ಯಾವ ಕಾರಣಕ್ಕೆ ಹಲ್ಲೆ ಮಾಡಿರುತ್ತಾರೆ ಎಂಬುದಾಗಿ ಪಿರ್ಯಾದಿದಾರರಿಗೆ ತಿಳಿದಿರುವುದಿಲ್ಲವಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147/2021 ಕಲಂ: 324, 504  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.          

ಇತ್ತೀಚಿನ ನವೀಕರಣ​ : 07-11-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080