ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ : ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಅಜೆಕಾರು ಮಂಗಳ ನಗರ 5 ಸೆಂಟ್ಸ್ ನಿವಾಸಿ, ಕೃಷ್ಣಾನಂದ (27) ಇವರು ವಿಪರೀತ ಮಧ್ಯಪಾನ ಮಾಡುವ ಅಭ್ಯಾಸ ಉಳ್ಳವರಾಗಿದ್ದು, ಹಲವಾರು ವರ್ಷಗಳಿಂದ ಬೇರೆ ಬೇರೆ ಕಡೆಗಳಲ್ಲಿ ಹೊಟೇಲು ಕೆಲಸ ಮಾಡಿಕೊಂಡಿದ್ದು, ಪ್ರಸ್ತುತ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿರುವ ಸಚಿನ್ ಶೆಟ್ಟಿ ಎಂಬುವವರ ಹೊಟೇಲಿನಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ಸಮೀಪ ಇರುವ ಪ್ರವೀಣ ಆಚಾರ್ಯರವರ ಬಾಡಿಗೆ ರೂಮಿನಲ್ಲಿ ಒಬ್ಬಂಟಿಯಾಗಿ ವಾಸವಿದ್ದವರು ಯಾವುದೋ ಕಾರಣದಿಂದ ದಿನಾಂಕ 06/11/2021 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 07/11/2021 ರಂದು ಮಧ್ಯಾಹ್ನ 12:00 ಗಂಟೆಯ ಮಧ್ಯೆ ತಾನು ವಾಸವಿರುವ ಬಾಡಿಗೆ ರೂಮಿನಲ್ಲಿ ತೀವೃ ಅಸ್ವಸ್ಥಗೊಂಡವರನ್ನು ಚಿಕಿತ್ಸೆ ಬಗ್ಗೆ ಸಾರ್ವಜನಿಕ ಸರಕಾರಿ ಆಸ್ಪತ್ರೆ ಕಾರ್ಕಳ ಇಲ್ಲಿಗೆ ಕರೆದುಕೊಂಡು ಹೋಗಿ ವೈದ್ಯರ ಮುಂದೆ ಮಧ್ಯಾಹ್ನ 12:15 ಗಂಟೆಗೆ ಹಾಜರುಪಡಿಸಿದಲ್ಲಿ, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಜಯಗಣೇಶ ಬೀಡು (77) ,ತಂದೆ: ವೆಂಕಟರಮಣ ಬೀಡು, ವಾಸ: ಮನೆ ನಂಬ್ರ: 3-2-32K1, ‘ದರ್ಶನ್‌’, ಸಿಪಿಸಿ ಲೇಔಟ್‌, ಅಂಬಲ್ಪಾಡಿ ಗ್ರಾಮ, ಉಡುಪಿ ತಾಲೂಕು ಇವರು ಉಡುಪಿ ತಾಲೂಕು ಅಂಬಲ್ಪಾಡಿ ಗ್ರಾಮದ ಸಿಪಿಸಿ ಲೇಔಟ್‌ನ ದರ್ಶನ್‌ ಎಂಬ ಹೆಸರಿನ ಮನೆ ನಂಬ್ರ: 3-2-32K1 ರಲ್ಲಿ ವಾಸ್ತವ್ಯವಿದ್ದು, ದಿನಾಂಕ 06/11/2021 ರಂದು 18:15 ಗಂಟೆಯಿಂದ ದಿನಾಂಕ 07/11/2021 ರಂದು ಬೆಳಿಗ್ಗೆ 10:45 ಗಂಟೆ ನಡುವೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಕಿರು ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಒಳ ಪ್ರವೇಶಿಸಿ, ಒಳಗಿನ ಬಾಗಿಲಿನ ಚಿಲಕದ ಬದಿ ಮುರಿದು ಮಾಸ್ಟರ್‌ ಬೆಡ್‌ರೂಮಿನ ಕೀ ತೆಗೆದು ಒಳಪ್ರವೇಶಿಸಿ, ಕಪಾಟನ್ನು ಹಾಗೂ ಲಾಕರ್‌ನ್ನು ಬಲಾತ್ಕಾರವಾಗಿ ಮೀಟಿ ತೆಗೆದು, ಅದರಲ್ಲಿದ್ದ ಪಿರ್ಯಾದಿದಾರರ ಹೆಂಡತಿಯ 2 ಪವನ್‌ ತೂಕದ ಸಣ್ಣ ಪೆಂಡೆಂಟ್‌ ಇರುವ ಬಂಗಾರದ ನೆಕ್ಲೇಸ್‌- 1, 4 ಪವನ್‌ ತೂಕದ ಕೃಷ್ಣನ ಪೆಂಡೆಂಟ್‌ ಇರುವ ಬಂಗಾರದ ನೆಕ್ಲೇಸ್‌- 1, 5 ಪವನ್‌ ತೂಕದ ಬಂಗಾರದ ಬಳೆಗಳು- 4, 1½ ಪವನ್‌ ತೂಕದ ಕರಿಮಣಿ ಬಳೆ- 1, 3 ಪವನ್‌ ತೂಕದ ಮುತ್ತಿನ ಸರ- 1, 6 ಪವನ್‌ ತೂಕದ ಬಂಗಾರದ ಅವಲಕ್ಕಿ ಸರ- 1, 3½ ಪವನ್‌ ತೂಕದ ವೆಂಕಟೇಶ್ವರ ಪೆಂಡೆಂಟ್‌ ಇರುವ ಬಂಗಾರದ ಸರ- 1, 3 ಪವನ್‌ ತೂಕದ ವಜ್ರದ ಕಿವಿ ಓಲೆ- 2, ಸಣ್ಣ ಸ್ಟೋನ್‌ ಇರುವ ವಜ್ರದ ಕಿವಿ ಓಲೆ- 2, ವಜ್ರದ ಉಂಗುರು-1, 1 ಪವನ್‌ ತೂಕದ ನವರತ್ನದ ಉಂಗುರ-1, 2½ ಪವನ್‌ ತೂಕದ ಸಣ್ಣ ರೂಬಿ ಸ್ಟೋನ್‌ ನಕ್ಲೇಸ್‌-1, 2½ ಪವನ್‌ ತೂಕದ ಚಿನ್ನದ ಪೆಂಡೆಂಟ್‌ ಮತ್ತು ಉಂಗುರ, ಹಾಗೂ ಪಿರ್ಯಾದಿದಾರರ 1 ಪವನ್‌ ತೂಕದ ಚಿನ್ನದ ನವರತ್ನದ ಉಂಗುರ-1, 1 ಪವನ್‌ ತೂಕದ ಚಿನ್ನದ ಪವಿತ್ರ ಉಂಗುರ-1, 1½ ಪವನ್‌ ತೂಕದ ಪಚ್ಚೆಕಲ್ಲು ಚಿನ್ನದ ಉಂಗುರ-1, 1 ಪವನ್‌ ತೂಕದ ನವರತ್ನ ಚಿನ್ನದ ಪೆಂಡೆಂಟ್‌-1, ಒಟ್ಟು ರೂ. 14 ಲಕ್ಷ ಮೌಲ್ಯದ 332 ಗ್ರಾಂ ತೂಕ ಚಿನ್ನಾಭರಣಗಳು ಹಾಗೂ ಗೆಸ್ಟ್‌ ರೂಮಿನ ಕಪಾಟಿನ ಲಾಕರ್‌ ಒಡೆದು ಅದರಲ್ಲಿದ್ದ ರೂಪಾಯಿ. 3,00,000/- ಹಣವನ್ನು ಮತ್ತು ಸುಮಾರು 1,35,000/- ಮೌಲ್ಯದ 45 ಹಳೆಯ ಬೆಳ್ಳಿಯ ನಾಣ್ಯಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ. 18,35,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 160/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-11-2021 06:44 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080