ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

 • ಬೈಂದೂರು: ಪಿರ್ಯಾದಿ ವೀರಭದ್ರ ಗಾಣಿಗ ಪ್ರಾಯ: 39 ವರ್ಷ ತಂದೆ: ಅಣ್ಣಪ್ಪ ಗಾಣಿಗ ವಾಸ:ಶೇಡಿನಗದ್ದೆ ತಗ್ಗರ್ಸೆ  ಇವರು  ದಿನಾಂಕ 06-10-2022 ರಂದು ಸಂಜೆ 5:00 ಗಂಟೆಗೆ ತಗ್ಗರ್ಸೆ ಗ್ರಾಮದ ಶೇಡಿನ ಗದ್ದೆ ಎಂಬಲ್ಲಿನ ಮನೆಯಲ್ಲಿ ತನ್ನ ಹೆಂಡತಿ ಮಕ್ಕಳು,  ತಂದೆ ಹಾಗೂ ಅಣ್ಣ ಗೋವಿಂದ ಮತ್ತು  ಅಣ್ಣನ ಹೆಂಡತಿ ಮಕ್ಕಳೊಂದಿಗೆ  ಮನೆಯಲ್ಲಿರುವಾಗ  ಫಿರ್ಯಾದಿದಾರರ ಸಹೋದರ ಮಂಜುನಾಥ ಯಾನೆ ಮಹೇಶ್ ಗಾಣಿಗ ಎಂಬವರು ಮನೆಗೆ  ಬಂದು ಜಾಗದ ವಿಚಾರದಲ್ಲಿ ತಕರಾರು ತೆಗೆದು ಫಿರ್ಯಾದಿದಾರರ ತಂದೆಯವರಲ್ಲಿ ಜಾಗದ ದಾಖಲೆಗಳನ್ನು ಕೊಡುವಂತೆ ಕೇಳಿದ್ದು ಆಗ ಫಿರ್ಯಾದಿದಾರರು ಆಪಾದಿತನಲ್ಲಿ  4 ವರ್ಷಗಳಿಂದ ನೀನು ಮನಗೆ ಬಂದಿಲ್ಲ ಮನೆಯ ಯಾವುದೇ ವಿಚಾರದಲ್ಲಿ ನೀನು ಇಲ್ಲ  ಊರಿಗೆ ಬಂದಾಗ ಎಲ್ಲಿಯೋ ಉಳಿದುಕೊಳ್ಳುತ್ತಿಯಾ ಎಂದು ಹೇಳಿದ್ದು ಆ ಸಮಯ ಆಪಾದಿತನು ಕೋಪದಲ್ಲಿ ಕತ್ತಿಯಿಂದ ಫಿರ್ಯಾದುದಾರರಿಗೆ ಕಡಿಯಲು ಬಂದಿದ್ದು  ಫಿರ್ಯಾದುದಾರರು ತಪ್ಪಿಸಿಕೊಂಡಾಗ  ಕತ್ತಿಯನ್ನು ಬೀಸಿದ್ದು  ಆ ಸಮಯ ಫಿರ್ಯಾದುದಾರರ ಅಣ್ಣ ಗೋವಿಂದ ರವರು  ಆಪಾದಿತನ ಕೈಯನ್ನು ಹಿಡಿದಾಗ ಕತ್ತಿ ಗೋವಿಂದ ರವರ ಎಡ ಕೈ ಹಸ್ತಕ್ಕೆ ತಾಗಿ ರಕ್ತಗಾಯ ಉಂಟಾಗಿರುತ್ತದೆ. ಆ ಸಮಯ ಆಪಾದಿತನಿಗೆ ಹಲ್ಲೆ ಮಾಡದಂತೆ ಉಳಿದವರು ತಡೆದಾಗ ಕತ್ತಿಯನ್ನು ಅಲ್ಲೇ ಬಿಸಾಡಿ ನಿಮಗೆ ಇಷ್ಟೇ  ಅಲ್ಲಾ ಇನ್ನೊಮ್ಮೆ ಬಂದು ನಿಮ್ಮನ್ನು   ಕೊಲ್ಲುವುದಾಗಿ  ಬೆದರಿಕೆ ಹಾಕಿ ಅಲ್ಲಿಂದ  ಹೊರಟು ಹೋಗಿರುತ್ತಾನೆ,. ಗಾಯಾಳು ಗೋವಿಂದ ರವರವನ್ನು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಅಜ್ಜರಕಾಡು  ಸರಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 202/2022 ಕಲಂ.  324, 504, 506 ಭಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ: ಪಿರ್ಯಾದಿ ಸುಬ್ಬ ಭಂಡಾರಿ 62 ವರ್ಷ ತಂದೆ: ದಿ ಗಿರಿಯ ಭಂಡಾರಿ ವಾಸ: ಮಾಜಿ ಸೈನಿಕರು ಅಚ್ಲಾಡಿ ಗ್ರಾಮ ಇವರು  ದಿನಾಂಕ 07/10/2022 ರಂದು ಬೆಳಿಗ್ಗೆ 09.30   ಗಂಟೆಗೆ ತನ್ನ ಹಕ್ಕಿನ ಸ್ಥಳವಾದ  ಅಚ್ಲಾಡಿ ಗ್ರಾಮದ ಸರ್ವೆ ನಂಬ್ರ 84/2 ವಿಸ್ತೀರ್ಣ 1.92 ಎಕ್ರೆ ಮತ್ತು 46/5 ವಿಸ್ತೀರ್ಣ  0.80 ಎಕ್ರೆ ಸ್ಥಳದಲ್ಲಿ ಎಂದಿನಂತೆ  ಕೃಷಿ ಚಟುವಟಿಕೆ ಮಾಡುತ್ತಿರುವಾಗ  ಪಕ್ಕದ ಮನೆಯವರಾದ ಜಗನ್ನಾಥ ಶೆಟ್ಟಿ ,ಗುಲಾಬಿ ಶೆಟ್ಟಿ ಹಾಗೂ ಇತರ ಇನ್ನಿಬ್ಬರು ಅಪರಿಚಿತರು ಸೇರಿ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿ ಕೊಲ್ಲದೇ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಹಲ್ಲೆಯಿಂದ  ಪಿರ್ಯಾದಿದಾರರ ಕೈ ಕಾಲು ಹಾಗೂ ತಲೆಗೆ  ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 167/2022 ಕಲಂ:447.504.324.506 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

  ಅಸ್ವಾಭಾವಿಕ ಮರಣ ಪ್ರಕರಣಗಳು

 •  ಬ್ರಹ್ಮಾವರ: ಪಿರ್ಯಾದಿ ಪುರುಷೋತ್ತಮ (52 ವರ್ಷ). ತಂದೆ: ನಾರಾಯಣ ಆಚಾರ್‌, ವಾಸ: ಪ್ರಣವ್‌, ನೀರ್‌ ಜೆಡ್ಡು, ಹೆಗ್ಗುಂಜೆ ಗ್ರಾಮ ಇವರ ಮನೆಯಲ್ಲಿ ಒರಿಸ್ಸಾ ರಾಜ್ಯದ ಮಯೂರ ಬಾಂಜ್‌ ಜಿಲ್ಲಾ ನಿವಾಸಿಯಾದ ಕಾಮೊ ಮರಾಂಡಿ ( ಪ್ರಾಯ: 46 ವರ್ಷ) ಎಂಬವರು ಸುಮಾರು 5 ತಿಂಗಳಿನಿಂದ ಮನೆಯ ಮೇಲ್ಬಾಗದ ಬಾಡಿಗೆ ರೂಮ್‌ನಲ್ಲಿ ವಾಸವಾಗಿದ್ದುಕೊಂಡು,  ನೀರ್‌ಜಡ್ಡು K.P.T.C.L ಪವರ್‌ ಸ್ಟೇಶನ್‌ ನಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸಮಾಡಿ ಕೊಂಡಿರುತ್ತಾರೆ. ದಿನಾಂಕ 06.10.2022 ರಂದು ಕಾಮೊ ಮರಾಂಡಿ ರವರಿಗೆ ಬೆಳಿಗ್ಗೆ ಸ್ವಲ್ಪ ಎದೆನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಸಂಜೆ ಸ್ಥಳೀಯ ವೈಧ್ಯರಲ್ಲಿ ಚಿಕಿತ್ಸೆ ಪಡೆದು ರೂಮ್‌ನಲ್ಲಿ ಒಬ್ಬರೇ ಮಲಗಿದ್ದು, ರಾತ್ರಿ 9:15 ಗಂಟೆಗೆ ಅವರ  ರೂಮ್‌ನಲ್ಲಿ ವಾಸವಾಗಿರುವ ರಾಹುಲ್‌ ಕುಮಾರ್‌ ಹೆಮ್‌ಬ್ರಮ್‌ ರವರು ಕೆಲಸ ಮುಗಿಸಿ ರೂಮಿಗೆ ಬಂದಾಗ ರೂಮ್‌ನ ಹಾಲ್‌ನಲ್ಲಿ ಕಾಮೊ ಮರಾಂಡಿ ರವರು ಅಂಗಾತನೇ ಬಿದ್ದುಕೊಂಡು ಉಸಿರಾಟದ ಪ್ರತಿಕ್ರಿಯೆ ಕಂಡು ಬಾರದಿದ್ದಾಗ, ಅವರನ್ನು ಕೂಡಲೇ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಅವರನ್ನು ಪರೀಕ್ಷಿಸಿದ ವೈಧ್ಯರು ಕಾಮೊ ಮರಾಂಡಿ ರವರು ಈಗಾಗಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 48/2022 ಕಲಂ 174  ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಿರುತ್ತಾರೆ.
 • ಮಲ್ಪೆ: ಪಿರ್ಯಾದಿ ಶ್ರೀಮತಿ ವಸಂತಿ ಆರ್ ಕೋಟ್ಯಾನ್ ಪ್ರಾಯ: 70 ವರ್ಷ ಗಂಡ:ದಿ/ ರಘುನಾಥ ಪುತ್ರನ್ ವಾಸ:  ಹೆಜಮಾಡಿ  ಇವರ ಅಣ್ಣ ರಮೇಶ ಕೋಟ್ಯಾನ್ ( 75 ವರ್ಷ) ರವರು  ದೇವದಾಸ್  ಎಂಬವರ ಮಾಲೀಕತ್ವದ  ಗುರುರಾಘವೇಂದ್ರ ಎಂಬ ಬೋಟಿನಲ್ಲಿ  ಕಲಾಸಿ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ: 07-10-2022 ರಂದು  ಎಂದಿನಂತೆ ಮೀನುಗಾರಿಕೆಯ ಬಗ್ಗೆ  ಬೆಳಿಗ್ಗೆ 4:00 ಗಂಟೆಗೆ  ಮಲ್ಪೆ ಬಂದರಿಗೆ  ಹೋಗಿದ್ದು, ಸುಮಾರು ಬೆಳಿಗ್ಗೆ 5:30 ಗಂಟೆಗೆ ತಾಂಡೇಲ ರಾದ ದೇವದಾಸ್  ರವರು ಕರೆ ಮಾಡಿ ಮೀನುಗಾರರಾದ ರವೀಂದ್ರ  ಕೋಟ್ಯಾನ್, ರಮೇಶ ಕೋಟ್ಯಾನ್, ಏಕನಾಥ ಕರ್ಕೆರ, ಗೋವರ್ಧನ  ಕೋಟ್ಯಾನ್, ಸುಧಾಕರ  ಕರ್ಕೆರಾ  ರವರೊಂದಿಗೆ  ಮೀನುಗಾರಿಕೆ ಬಗ್ಗೆ  ಮಲ್ಪೆ ಬಂದರಿನ ಎರಡನೇ ಟೀ ಧಕ್ಕೆಯಿಂದ  ಹೊರಡುವ ಸಮಯದಲ್ಲಿ ರಮೇಶ ಕೋಟ್ಯಾನ್ ರವರು ಆಕಸ್ಮಿಕವಾಗಿ ಕಾಲುಜಾರಿ  ಬೋಟಿನಿಂದ ಧಕ್ಕೆಯ ನೀರಿಗೆ ಬಿದ್ದಿದ್ದು, ಬೆಳಿಗ್ಗೆ 7:30 ಗಂಟೆಯ ಸಮಯಕ್ಕೆ  ರಮೇಶ ಕೋಟ್ಯಾನ್ ರವರ  ಮೃತದೇಹ ಬಂದರಿನ ಧಕ್ಕೆಯ ನೀರಿನಲ್ಲಿ ದೊರೆತಿರುತ್ತದೆ, ರಮೇಶ ಕೋಟ್ಯಾನ್ ರವರು  ಮೀನುಗಾರಿಕೆಗೆ ತೆರಳುವ ಸಮಯ  ಆಕಸ್ಮಿಕವಾಗಿ ಧಕ್ಕೆಯ ನೀರಿಗೆ  ಬಿದ್ದು ಮೃತಪಟ್ಟಿರುವುದೇ ವಿನ: ಮೃತರ ಸಾವಿನಲ್ಲಿ ಬೇರಾವುದೇ ಸಂಶಯವಿರುವುದಿಲ್ಲ ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯುಡಿಆರ್‌ ನಂ 55/2022 . ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಮಣಿಪಾಲ: ಉಡುಪಿ ಕುಕ್ಕಿಕಟ್ಟೆಯ ಜಂಟಿಲ್‌ ಪ್ರೀತಂ ಎಂಬವರು 2 ತಿಂಗಳ ಹಿಂದೆ ಪಿರ್ಯಾದಿ ಹರೀಶ್‌ ಶೆಟ್ಟಿಗಾರ ಪ್ರಾಯ: 42 ವರ್ಷ ತಂದೆ: ನಾರಾಯಣ ಶೆಟ್ಟಿಗಾರ ವಿಳಾಸ: ಜೆ ಎಸ್‌ ಕಾಂಪೌಂಡ್‌ 76 ಬಡಗಬೆಟ್ಟು ಬೈಲೂರು ಇವರಿಗೆ KA-19-V-9728 ನೇ  ಹಿರೋ ಹೊಂಡಾ ಗ್ಲಾಮರ್‌  ಮೋಟಾರ್‌ ಸೈಕಲ್‌ ನ್ನು ನೋಡಿಕೊಳ್ಳಲು ಕೊಟ್ಟು ಅವರು ವಿದೇಶಕ್ಕೆ ಹೋಗಿದ್ದು, ಪಿರ್ಯಾಧಿದಾರರು ದಿನಾಂಕ:25.08.2022 ರಂದು ರಾತ್ರಿ 08.00 ಗಂಟೆ ಸಮಯಕ್ಕೆ ತನ್ನ  ಗ್ಯಾರೇಜ್‌ ಮುಂದೆ ಸದ್ರಿ ಮೋಟಾರ್ ಸೈಕಲ್‌ ನ್ನು ನಿಲ್ಲಿಸಿ  ಗ್ಯಾರೇಜ್‌ ಒಳಗಡೆ ಆನ್‌ ಲೈನ್‌ ಮೀಟಿಂಗ್‌ ನಲ್ಲಿ ಇದ್ದು ನಂತರ ವಾಪಾಸ್ಸು  ರಾತ್ರಿ 10.00 ಗಂಟೆಗೆ ಮೀಟಿಂಗ್‌ ಮುಗಿಸಿಕೊಂಡು ಗ್ಯಾರೇಜ್‌ ಹೊರಗೆ ಬಂದು ನೋಡಿದಾಗ  ಮೋಟಾರ್‌ ಸೈಕಲ್‌ ಸ್ಥಳದಲ್ಲಿ ಇಲ್ಲದೇ ಇದ್ದು, ಯಾರೋಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರು ಸೈಕಲ್‌ ನ ಅಂದಾಜು ಮೌಲ್ಯ 5,000/- ರೂಪಾಯಿ ಎಂಬಿತ್ಯಾದಿ. ಕಳವಾದ ಮೋಟಾರ್‌ ಸೈಕಲ್‌ನ ವಿವರ : KA-19-V-9728 ನೇ ಹಿರೋಹೊಂಡಾ ಗ್ಲಾಮರ್‌  ಮೋಟಾರ್‌ ಸೈಕಲ್‌ ಬಣ್ಣ:  ಕಪ್ಪು, ಕೆಂಪು ಸ್ಟಿಕ್ಕರ್‌ .ಇಂಜಿನ್‌ ನಂಬರ್:‌06FCAM00144 ಚಾಸಿಸ್‌ ನಂಬರ್:‌ 06FCAC00126  ಅಂದಾಜು ಮೌಲ್ಯ: 5,000/ ರೂಪಾಯಿಗಳು. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 185/2022, ಕಲಂ; 379. ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಕೋಟ: ಪಿರ್ಯಾದಿ ವಿಘ್ನೇಶ್ವರ ಭಟ್  ಬಿ ಇವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಬಿದ್ಕಲ್ ಕಟ್ಟೆ ಇಲ್ಲನ ಪ್ರಾಂಶುಪಾಲರಾಗಿದ್ದು ದಿನಾಂಕ 06.10.2022 ರಂದು ಮಧ್ಯಾಹ್ನ 1.00 ಗಂಟೆಗೆ ಕಾಲೇಜಿನ ಕಛೇರಿ ಹಾಗೂ ಪ್ರೌಢಶಾಲಾ ವಿಭಾಗದ ಕಛೇರಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ಬೆಳಿಗ್ಗೆ 09.10 ಗಂಟೆಗೆ  ಕಛೇರಿಗೆ ಬಂದಾಗ ಯಾರೋ ಕಳ್ಳರು ಪಿರ್ಯಾದಿದಾರರ ಕಛೇರಿಯ ಎದುರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ  ಕಛೇರಿಯ ಕಪಾಟನ್ನು  ಒಡೆದು ದಾಖಲಾತಿಗಳನ್ನು ಚಲ್ಲಾಪಿಲ್ಲಿ ಮಾಡಿದ್ದು ಕಂಡು ಬಂದಿದ್ದು ಯಾವುದೇ ವಸ್ತು ಕಳವಾಗಿರುವುದಿಲ್ಲ. ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲರ ಕೊಠಡಿಯ ಎದುರು ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ ಕಚೇರಿಯ ಕಪಾಟನ್ನು ಅಲ್ಲಿಯೇ ಇದ್ದ ಕಪಾಟಿನ ಬೀಗದ ಕೀಯಿಂದ  ತೆರೆದು ಕಪಾಟಿನಲ್ಲಿದ್ದ  ಸುಮಾರು 60,000 ಮೊತ್ತದ ಹಣ ಹಾಗೂ 3000 ಮೌಲ್ಯದ ಒಂದು ಜಿಯೋ ಮೊಬೈಲ್ (ಸಂಖ್ಯೆ 7975114530)  ಕಳವಾಗಿರುತ್ತದೆ  ಅಲ್ಲದೇ ಇತರ ವಸ್ತುಗಳು ಕೊಠಡಿಯ ತುಂಬಾ ಹರಡಿರುತ್ತದೆ ಹಾಗೂ ಎಲ್ಲಾ ನೀರಿನ ಟ್ಯಾಪ್ ಗಳು ಕಳವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  168/2022 ಕಲಂ:454.457.380 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.       

ಇತ್ತೀಚಿನ ನವೀಕರಣ​ : 07-10-2022 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080