ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವಾ: ದಿನಾಂಕ 06/10/2022 ರಂದು  ಮಧ್ಯಾಹ್ನ 01:40 ಗಂಟೆಗೆ ಪಿರ್ಯಾದಿದಾರರಾದ ಸತೀಶ ಭಂಡಾರಿ (49), ತಂದೆ: ದಿ. ಸಂಜೀವ ಭಂಡಾರಿ, ವಾಸ: ರಾಮ ನಿವಾಸ, ಸಡಂಬೈಲ್ ,ಕುಂಜಾರುಗಿರಿ ಅಂಚೆ, ಬೆಳ್ಳೆ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ತನ್ನ ಅಂಗಡಿಯ ಎದುರು  ನಿಂತುಕೊಂಡಿರುವಾಗ  ಶಿರ್ವಾ ಗ್ರಾಮದ ಬಂಟಕಲ್ಲಿನ ಶಿರ್ವ – ಕಟಪಾಡಿ  ಸಾರ್ವಜನಿಕ  ರಸ್ತೆಯ ಮಾರ್ಟಿಸ್ ಕಾಂಪ್ಲೆಕ್ಸ್ ಎದುರುಗಡೆ ಅವರ ಪರಿಚಯದ ಶಂಕರ ಕೋಟ್ಯಾನ್ ರವರು KA-20-EF-4158ನೇ ಮೋಟಾರ್ ಸೈಕಲ್ ನ್ನು ಬಿ.ಸಿ ರೋಡ್ ಕಡೆಯಿಂದ ಅರಸೀಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು ಆ ಸಮಯಕ್ಕೆ ಕಟಪಾಡಿ ಕಡೆಯಿಂದ ಶಿರ್ವಾ ಕಡೆಗೆ KA-20-C-9272ನೇ ಅಟೋರಿಕ್ಷಾವನ್ನು ಅದರ ಚಾಲಕ ಗುರುಪ್ರಸಾದ್ ಅತಿವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ  ಚಲಾಯಿಸಿಕೊಂಡು ಬಂದು ಶಂಕರ ಕೋಟ್ಯಾನ್ ರವರು ಸವಾರಿ ಮಾಡುತ್ತಿದ್ದ ಮೋಟಾರು  ಸೈಕಲ್ ಗೆ ಢಿಕ್ಕಿ ಹೊಡೆದ ರಭಸಕ್ಕೆ ಶಂಕರ್ ಕೋಟ್ಯಾನ್ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು , ಅಟೋ ರಿಕ್ಷಾ ಕೂಡಾ ಮಗುಚಿ ಬಿದ್ದಿರುತ್ತದೆ. ಅಪಘಾತದ  ಪರಿಣಾಮ ಶಂಕರ ಕೋಟ್ಯಾನ್ ರವರ ತಲೆಗೆ, ಕಣ್ಣಿಗೆ ಮುಖಕ್ಕೆ ತೀವ್ರ ತರಹದ ಗಾಯವಾಗಿದ್ದು, ಮೂಗಿನಲ್ಲಿ ರಕ್ತ ಹೊರಬರುತ್ತಿದ್ದು ಮಾತನಾಡುತ್ತಿರಲಿಲ್ಲ. ಅಟೋ ಚಾಲಕನಿಗೂ ರಕ್ತಗಾಯವಾಗಿರುತ್ತದೆ. ಶಂಕರ ಕೋಟ್ಯಾನ್ ರವರನ್ನು ಕೂಡಲೇ ಅಂಬುಲೆನ್ಸ್‌  ವಾಹನದಲ್ಲಿ  ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್ ಸಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಮಧ್ಯಾಹ್ನ 2.12 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 72/22 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿದಾರರಾದ ಫಾಝೀಯ (35),  ಗಂಡ: ಶರೀಫ್ , ವಾಸ: ದಾರುಸಲಾಂ,  ಮಂಜಿಲ್ ಕೋಡಿ, ಕುಂದಾಪುರ  ತಾಲೂಕು ಇವರು ದಿನಾಂಕ 05/10/2022  ರಂದು   ಭಟ್ಕಳದಲ್ಲಿ  ತನ್ನ ಗಂಡನ ಮಾವನ ಮನೆಯಲ್ಲಿ ನಡೆಯುವ ಪೂಜಾ  ಕಾರ್ಯಕ್ರಮಕ್ಕೆ KA-20-MA-8364 OMINI ಯಲ್ಲಿ  ಅತ್ತೆ ಆಯಿಷಾ, ಅತ್ತಿಗೆಯ ಮಗಳು  ಅಫಿಜಾ , ಮೈದುನನ ಹೆಂಡತಿ ನೌಶತ್ ,ನೌಶತ್  ರವರ ಮಗಳು  ಆಯಿಷಾ ಇಝಾ (2ವರ್ಷ)  ರವರ ಜೊತೆಯಲ್ಲಿ   ಹೋಗಿದ್ದು , ಓಮಿನಿಯ ಚಾಲಕನಾಗಿ   ಮಹಮ್ಮದ್  ರಹೀಂರವರು ಇದ್ದರು ಭಟ್ಕಳದಲ್ಲಿ ಪೂಜೆ  ಮುಗಿಸಿಕೊಂಡು  ಸಂಜೆ   ಕುಂದಾಪುರಕ್ಕೆ ಹೊರಟಿದ್ದರು  ರಾಷ್ಟ್ರೀಯ ಹೆದ್ದಾರಿ  66 ರಲ್ಲಿ  ಕಿರಿಮಂಜೇಶ್ವರ   ಗ್ರಾಮದ  ಕಿರಿಮಂಜೇಶ್ವರ   ಎಂಬಲ್ಲಿ  ತಲುಪುವಾಗ   ಓಮಿನಿಯನ್ನು ಚಾಲಕನು ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಚಲಾಯಿಸಿ  ಒಂದು ದನ ಅಡ್ಡ  ಬಂದಾಗ  ಒಮ್ಮೆಲೆ  ಬ್ರೇಕ್   ಹಾಕಿದ್ದು ಓಮಿನಿ  ನಿಯಂತ್ರಣ  ತಪ್ಪಿ   ಡಿವೈಡರಿಗೆ  ಡಿಕ್ಕಿಹೊಡೆದು  ಉರುಳಿಕೊಂಡು ಹೋಗಿ  ಬಿದ್ದಿದ್ದು  ಪರಿಣಾಮ   ಓಮಿನಿಯಲ್ಲಿ ಪ್ರಯಾಣಿಸುತ್ತಿದ್ದ   ಪಿರ್ಯಾದಿದಾರಿಗೆ   ಎಡಕಾಲಿನ ಪಾದಕ್ಕೆ  ಹಾಗೂ ಕಾಲಿಗೆ  ರಕ್ತಗಾಯ  ಉಂಟಾಗಿರುತ್ತದೆ. ಆಯಿಷಾ  ರವರಿಗೆ  ಸೊಂಟಕ್ಕೆ  ಒಳನೋವು  ಉಂಟಾಗಿರುತ್ತದೆ.  ಅಫಿಝಾ ರವರಿಗೆ  ಬಲಕಾಲಿನ  ಹಿಮ್ಮಡಿಗೆ  ಮೂಳೆ  ಮುರಿತ ಉಂಟಾಗಿತ್ತು.  ನೌಶತ್  ರವರಿಗೆ  ಎರಡು ಕಾಲಿಗೆ  ರಕ್ತಗಾಯ ಉಂಟಾಗಿರುತ್ತದೆ.  ಓಮಿನಿ  ಚಾಲಕನಿಗೂ ಸಣ್ಣಪುಟ್ಟ ತರಚಿದ ಗಾಯ  ಉಂಟಾಗಿರುತ್ತದೆ . ಗಾಯಾಳುಗಳು  ಕುಂದಾಪುರ  ಚಿನ್ಮಯಿ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ  ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 201/2022 ಕಲಂ: 279 , 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮೊಹಮ್ಮದ್ ತಾಹಿರ್ (43), ತಂದೆ: ಮುಸ್ತಾಕ್ ಅಹಮ್ಮದ್, ವಾಸ: ಖಂಡಿಗ ದರ್ಕಾಸು, ಬೆಳುವಾಯಿ ಗ್ರಾಮ, ಮೂಡಬಿದ್ರೆ ತಾಲೂಕು. ದ.ಕ ಜಿಲ್ಲೆ ಇವರು ಕಾರ್ಕಳ ಕಸಬಾ ಗ್ರಾಮದ ಮಾರ್ಕೆಟ್ ರಸ್ತೆಯಲ್ಲಿ ರಾಧಿಕಾ ಟಾಕೀಸು ಮುಂಭಾಗದಲ್ಲಿ ಪ್ರೀತಿ ಟೈಮ್ಸ್ ಎಂಬ ವಾಚ್ ಮಾರಾಟ ಮತ್ತು ಸರ್ವೀಸ್ ಅಂಗಡಿಯನ್ನು ನೆಡೆಸುತ್ತಿದ್ದು, ದಿನಾಂಕ 05/10/2022 ರಂದು ರಾತ್ರಿ 8:00 ಗಂಟೆಗೆ ಅಂಗಡಿ ಬಾಗಿಲು ಹಾಕಿ ಬೀಗ ಹಾಕಿ ಮನೆಗೆ ಹೋಗಿದ್ದು, ದಿನಾಂಕ 06/10/2022 ರಂದು ಬೆಳಗ್ಗೆ 07:30 ಗಂಟೆಗೆ ಅಂಗಡಿಯ ಮಾಲೀಕರಾದ ಟಿ. ಕೆ. ರಘುವೀರ್ ಎಂಬುವವರು ಪೋನ್ ಮಾಡಿ ಅಂಗಡಿಯ ಬೀಗ ಒಡೆದಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಬೆಳಗ್ಗೆ 08:30 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಅಂಗಡಿಗೆ ಹಾಕಿದ ಶೆಟರ್ ಬೀಗ ಹಾಗೂ ಸೆಂಟರ್ ಲಾಕ್ ನ್ನು ಯಾರೋ ಕಳ್ಳರು ಮುರಿದಿದ್ದು ಒಳಗೆ ಹೋಗಿ ನೋಡಿದಾಗ 25,000/- ರೂಪಾಯಿ ಮೌಲ್ಯದ Sunsui, Golstar ಕಂಪೆನಿಯ 16 ಮಹಿಳೆಯರ ವಾಚ್ ಗಳು ಮತ್ತು 700/- ನಗದು ರೂಪಾಯಿ ಕಳ್ಳತನವಾಗಿರುವುದು ಕಂಡು ಬಂದಿರುತ್ತದೆ. ಕಳವಾದ ನಗದು ಮತ್ತು ವಾಚ್ ಗಳ ಒಟ್ಟು ಮೌಲ್ಯ 25,700/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 131/2022 ಕಲಂ: 380, 454, 457 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಸಮೀನಾ ಬಾನು (25), ಗಂಡ : ಮಹಮ್ಮದ್ ಖುರೈಶಿ, ತಂದೆ : ಜಾಬೀರ್‌ ಹುಸೇನ್, ವಾಸ : ಜೆ.ಎಸ್. ಮಂಜಿಲ್, ಉರ್ದು ಶಾಲೆಯ ಹತ್ತಿರ ಪಕೀರನಕಟ್ಟೆ  ಮಲ್ಲಾರು  ಗ್ರಾಮ  ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 11/05/2022 ರಂದು ಕಾಪು ಕೊಪ್ಪಲಂಗಡಿಯ ಕಮ್ಯುನಿಟಿ ಹಾಲ್‌ ನಲ್ಲಿ ಮಹಮ್ಮದ್ ಖುರೈಸಿ ರವರನ್ನು ವಿವಾಹವಾಗಿದ್ದು, ಗಂಡನ ಮನೆಯ ಬೇಡಿಕೆಯಂತೆ ತಂದೆಯ ಮನೆಯವರು ವಿವಾಹದಲ್ಲಿ  30 ಪವನ್  ಚಿನ್ನ ಹಾಕಿದ್ದು, ಅದಲ್ಲದೆ ಮದುವೆಗೆ ಸುಮಾರು 07 ಲಕ್ಷದವರೆಗೆ ಖರ್ಚು ಮಾಡಿರುವುದಾಗಿದೆ. ಪಿರ್ಯಾದಿದಾರರು ವಿವಾಹವಾಗಿ ಗಂಡನ ಮನೆಗೆ ಹೋಗಿದ್ದು, ಅಲ್ಲಿ ಪಿರ್ಯಾದಿದಾರರ ಗಂಡ ಮಹಮ್ಮದ್ ಖುರೈಸಿ, ಮಾವ  ಮೊಹಮ್ಮದ್ ಗೌಸ್, ಅತ್ತೆ  ಮಮ್ತಾಜ್, ಮೈದುನ ಮಹಮ್ಮದ್ ಅರಾಫತ್ ವಾಸಮಾಡಿಕೊಂಡಿದ್ದು, ಗಂಡ ಚಾಲಕ ಕೆಲಸ ಮಾಡಿಕೊಂಡಿರುವುದಾಗಿದೆ. ಪಿರ್ಯಾದಿದಾರರು ಗಂಡನ ಬೈಯುತ್ತಿದ್ದು ಹಾಗೂ ಕೆಲವೊಮ್ಮೆ ಹೊಡೆಯುತ್ತಿದ್ದು ಈ ವಿಷಯವನ್ನು ಪಿರ್ಯಾದಿದಾರರು ಗಂಡನ ಹಾಗೂ ತಂದೆಯ ಮನೆಯವರಿಗೆ ತಿಳಿಸಿದ್ದು, ಯಾವುದೇ ಪ್ರಯೋಜನ ಆಗಿರುವುದಿಲ್ಲ, ಪಿರ್ಯಾದಿದಾರರ ಗಂಡ ಡ್ರೈವಿಂಗ್ ಕೆಲಸಕ್ಕೆಂದು ಹೋದರೆ 3-4 ದಿನಗಳವರೆಗೆ ವಾಪಾಸ್ಸು ಬರುತ್ತಿರಲಿಲ್ಲ. ಹಾಗೂ ಕೆಲಸಕ್ಕೆ ಹೋಗುವಾಗ ಪಿರ್ಯಾದಿದಾರರಲ್ಲಿ ಹೇಳದೆ ಹೋಗುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ಗಂಡನಲ್ಲಿ ಕೇಳಿದಾಗ ಜೋರು ಮಾಡಿ ಹೋಡೆಯುತ್ತಿದ್ದು, ಫೋನ್ ಕರೆ ಮಾಡಿದಾಗ ಉತ್ತರ ನೀಡುತ್ತಿರಲ್ಲಿಲ್ಲ.  ಪಿರ್ಯಾದಿದಾರರು ಗಂಡನೊಂದಿಗೆ ಎಲ್ಲಿಗಾದರೂ ಹೋದರೆ ದೂರ ನಿಲ್ಲುವಂತೆ ಹಾಗೂ ಬಸ್ಸಿನಲ್ಲಿ ಒಟ್ಟಾಗಿ ಕುಳಿತುಕೊಳ್ಳಬಾರದಂತೆ ಬೈಯುತ್ತಿದ್ದ.  ನಂತರ ತನಗೆ ವಿಸಾಕ್ಕೆ ಹಣ ಬೇಕೆಂದು ಪಿರ್ಯಾದಿದಾರರ ತಂದೆಯ ಮನೆಯವರು ಹಾಕಿದ ಎಲ್ಲಾ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದು, ಈ ಬಗ್ಗೆ ನಿನ್ನ ಮನೆಯವರಿಗೆ ತಿಳಿಸಿದರೆ ನಿನ್ನನ್ನು ಕೊಲ್ಲುತ್ತೇನೆ. ಎಂದು ಗಂಡ, ಮಾವ, ಅತ್ತೆ ಬೆದರಿಕೆ ಹಾಕಿರುತ್ತಾರೆ.  ದಿನಾಂಕ 16/09/2022 ರಂದು ರಾತ್ರಿ ಪಿರ್ಯಾದಿದಾರರ ದೂಡಿ ಹೊಡೆದು ನೀನು ನನಗೆ ಬೇಡ ಎಂದು ಹೇಳಿರುತ್ತಾನೆ.   ಈ ವಿಚಾರವಾಗಿ ದಿನಾಂಕ 17/09/2022 ರಂದು ಪಿರ್ಯಾದಿದಾರರ ಮನೆಯವರು ಗಂಡನ ಮನೆಗೆ ಬಂದು ಬುದ್ಧಿವಾದವನ್ನು ಹೇಳಿ ಚೆನ್ನಾಗಿ ಇರುವಂತೆ ತಿಳಿಸಿದಂತೆ,  ಚೆನ್ನಾಗಿ ಇರುವುದಾಗಿ ಹೇಳಿರುತ್ತಾನೆ.  ಆದರೂ ಮನೆಯಿಂದ 8 ದಿನಕ್ಕೆಂದು ಹೋಗಿ ದಿನಾಂಕ 24/09/2022 ರಂದು ಬಂದು ಪಿರ್ಯಾದಿದಾರರಿಗೆ ನಿನ್ನ ಮನೆಯವರಿಂದ 5,00,000/- ರೂಪಾಯಿ ಹಣ  ತೆಗೆದುಕೊಂಡು ಬಾ ಎಂದು ಹೊಡೆದಿದ್ದು, ದಿನಾಂಕ 25/09/2022 ರಂದು ಬೆಳಗ್ಗೆ ಪಿರ್ಯಾದಿದಾರರಿಗೆ ಎಲ್ಲಿದೆ ಹಣ ಎಂದು ಪ್ರಶ್ನಿಸಿ ಹೊಡೆದು, ನೀನು ಬೇಡ ವಿಚ್ಛೇದನ ಕೊಡು ಎಂದು ಹೇಳಿದ್ದು, ಈ ಬಗ್ಗೆ ಪಿರ್ಯಾದಿದಾರರ ಮನೆಯವರು ಮಂಜೇಶ್ವರ ಠಾಣಾಧಿಕಾರಿಯವರಲ್ಲಿ ಹೇಳಿ ಒಂದು ಹೇಳಿಕೆಯನ್ನು ಬರೆಸಿ, ಗಂಡನ ಮನೆಯವರನ್ನು ಕರೆಸಿ ಠಾಣಾಧಿಕಾರಿಯವರಿಂದ ಬುದ್ದಿವಾದ  ಹೇಳಿದ ನಂತರ  ಪಿರ್ಯಾದಿದಾರರು  ತಾಯಿಯ ಮನೆಗೆ ಬಂದಿರುವುದಾಗಿದೆ.   ದಿನಾಂಕ 28/09/2022 ರಂದು ಪಿರ್ಯಾದಿದಾರರನ್ನು ಕರೆದುಕೊಂಡು ಹೋಗಲು ಗಂಡ ಮನೆಗೆ ಬಂದಿದ್ದು,  ಗುರುಹಿರಿಯರು ಬುದ್ಧಿವಾದ ಹೇಳಿ ತನ್ನ ಹಿರಿಯರನ್ನು ಕರೆದುಕೊಂಡು ಬಾ ಎಂದು ಕಳಿಸಿರುತ್ತಾರೆ. ಈವರೆಗೂ ಯಾವುದೇ ರೀತಿಯ ಪ್ರತಿಕ್ರಿಯೆ ಕೊಡಲಿಲ್ಲ ಮತ್ತು ಫೋನ್ ಕಾಲ್ ತೆಗೆಯುದಿಲ್ಲ. ಈ ಬಗ್ಗೆ ಅತ್ತೆ ಮಾವರಲ್ಲಿ ವಿಚಾರಿಸಿದಾಗ ನನಗೆ ಗೊತ್ತಿಲ್ಲ, ಪಾಸ್‌ಪೋರ್ಟ್‌ ತೆಗೆದುಕೊಂಡು ಹೋಗಿದ್ದಾನೆಂದು ಹೇಳಿರುತ್ತಾರೆ. ಪಿರ್ಯಾದಿದಾರರಿಗೆ ಗಂಡ, ಮಾವ, ಅತ್ತೆ, ಮೈದುನ ಹಾಗೂ ಅತ್ತೆಯ ತಮ್ಮ ವರದಕ್ಷಿಣೆ ಬೇಡಿಕೆ ಇಟ್ಟು ಮಾನಸಿಕ, ದೈಹಿಕ ಕಿರುಕುಳ ಹಾಗೂ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ, ಜೀವ ಬೇದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2022 ಕಲಂ: 498(A), 323, 504, 506 ಜೊತೆಗೆ 149 ಐಪಿಸಿ. ಮತ್ತು ಕಲಂ: 3 ,4 ಡಿ.ಪಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ಗದೆ.  

ಇತ್ತೀಚಿನ ನವೀಕರಣ​ : 07-10-2022 09:30 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080