ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಅಂಬಾ (44) ಗಂಡ: ಭೀಮರಾಯ ವಾಸ : ಬೊರ್ಗಿ ಗ್ರಾಮ ಸಿಂದಗಿ ತಾಲೂಕು ವಿಜಯಪುರ ಇವರು ಮಲ್ಲಾರಿನ ಕೊಂಬಗುಡ್ಡೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸಮಾಡಿಕೊಂಡಿದ್ದು, ಅಂಬಾ ರವರತಮ್ಮ ಅಶೋಕ ಕುಂಬಾರರವರಿಗೆ ಸುಮಾರು 30 ವರ್ಷ ಪ್ರಾಯವಾಗಿದ್ದು, ಆವನು ಇವರ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಸುಮಾರು 1 ತಿಂಗಳ ಹಿಂದೆ ಆತನಿಗೆ ಹಾಗೂ ಆತನ ಹೆಂಡತಿಗೆ ವೈಮನಸ್ಸು ಉಂಟಾಗಿ ಆತನು ಕಲ್ಯದ ಇಂದಿರಾ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿರುವುದಾಗಿ ತಿಳಿದಿರುತ್ತದೆ. ಆತನು ಇತ್ತೀಚೆಗೆ ಶರಾಬು ಕುಡಿಯುವ ಅಭ್ಯಾಸ ಹೊಂದಿದ್ದು, ಪ್ರತಿನಿತ್ಯ ಶರಾಬು ಕುಡಿದು ಅಂಬಾ ರವರ ಮನೆಗೆ ಬಂದು ಹೋಗುತ್ತಿದ್ದ, ದಿನಾಂಕ 06/10/2021 ರಂದು ಅಂಬಾ ರವರಿಗೆ ಅವರ ಊರಿನವರು ಫೋನ್ ಮಾಡಿ ನಿಮ್ಮ ತಮ್ಮ ಕಲ್ಯದ ಬಾಡಿಗೆ ಮನೆಯಲ್ಲಿ ರೂಮ್‌ನಲ್ಲಿ ಮಾಡಿನ ಜಂತಿಗೆ ನೈಲಾನ್ ಹಗ್ಗವನ್ನು ಕಟ್ಟಿಕೊಂಡು ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವುದಾಗಿ ತಿಳಿಸಿದಂತೆ ಅಂಬಾ ರವರು ಕೂಡಲೇ ಅವರ ಮಗನೊಂದಿಗೆ ಕಲ್ಯದ ಇಂದಿರಾ ಶೆಟ್ಟಿಯವರ  ಬಾಡಿಗೆ ಮನೆಗೆ ಬಂದು ನೋಡುವಾಗ ಅಂಭಾ ರವರ ತಮ್ಮ ಅಶೋಕ ಕುಂಬಾರ ಮಾಡಿನ ಜಂತಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ನೇತಾಡುತ್ತಿದ್ದು, ಸ್ಥಳೀಯರೊಂದಿಗೆ ನೋಡುವಾಗ ಆತ ಮೃತ ಪಟ್ಟಿರುವುದಾಗಿ ತಿಳಿಯಿತು. ಅಶೋಕ ಕುಂಬಾರರವರಿಗೆ ಶರಾಬು ಕುಡಿಯುವ ಅಭ್ಯಾಸವಿದ್ದು ಅಲ್ಲದೇ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿದ್ದು, ಇದೇ ವಿಷಯದಲ್ಲಿ ಖಿನ್ನತೆಗೊಳಗಾಗಿ  ಮಾಡಿನ ಜಂತಿಗೆ ನೈಲಾನ್ ಹಗ್ಗ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತ ಪಟ್ಟಿರುವುದಾಗಿದೆ. ಪಿರ್ಯಾದಿದಾರರ ತಮ್ಮ ಅಶೋಕ ಕುಂಬಾರ ದಿನಾಂಕ 06/10/2021 ರಂದು ಬೆಳಗ್ಗೆ 08:00 ಗಂಟೆಯಿಂದ ಸಂಜೆ 5:00 ಗಂಟೆಯ ಮಧ್ಯಾವಧಿಯಲ್ಲಿ ನೇಣು ಬಿಗಿದು ಮೃತ ಪಟ್ಟಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಫಿರ್ಯಾದಿದಾರರಾಧ ಪೂರ್ಣಿಮಾ (45), ಗಂಡ ದಿ: ಪ್ರಸನ್ನ, ‘ಲಕ್ಷ್ಮೀನಾರಾಯಣ ನಿಲಯ’, ಬಳ್ಕೂರು ಪಂಚಾಯತ್‌‌‌‌‌‌‌‌‌‌ ಹಿಂಬದಿ, ಬಿ.ಹೆಚ್‌‌‌‌‌‌.ಸರ್ಕಲ್‌‌‌‌‌‌, ಬಳ್ಕೂರು. ಕುಂದಾಪುರ ಇವರ ದೊಡ್ಡ  ಮಗಳು  ಪಿ. ಮೋನಿಷಾ (22) ಇವಳು  ಈ  ಹಿಂದೆ  ಕುಂದಾಪುರ  ಪೂಜಾ  ಮೆಡಿಕಲ್‌‌‌‌ನಲ್ಲಿ  ಕೆಲಸ  ಮಾಡಿಕೊಂಡಿರುವಾಗ  ಕೋಟತಟ್ಟು  ಗ್ರಾಮದ  ಹಂದಟ್ಟುವಿನ ನಾಗೇಂದ್ರ ಎಂಬ ಹುಡುಗನ ಜೊತೆಯಲ್ಲಿ ಪ್ರೇಮವಾಗಿದ್ದು, ಪೂರ್ಣಿಮಾ ಇವರು ಬೇಡ ಅಂದರೂ ನಾಗೇಂದ್ರ ಮನೆಯವರು ಸೇರಿ 26/07/2020  ರಂದು  ಕುಂದಾಪುರದಲ್ಲಿ ಪೂರ್ಣಿಮಾ ಇವರ ಮಗಳ ಜೊತೆಯಲ್ಲಿ ಮದುವೆ ಮಾಡಿರುತ್ತಾರೆ. ನಂತರ ಮೋನಿಷಾಳು ಅವಳ ಗಂಡನ ಮನೆಯಾದ  ಕೋಟತಟ್ಟು  ಗ್ರಾಮದ ಹಂದಟ್ಟು ಎಂಬಲ್ಲಿ  ಅವರ  ಮನೆಯಲ್ಲಿ  ಇದ್ದಳು. ಅವಳು ಮದುವೆಯಾದ ಬಳಿಕ  ಕೆಲವೊಮ್ಮೆ ಮೋನಿಷಾಳು ಒಬ್ಬಳೇ ಪೂರ್ಣಿಮಾ ರವರ ಮನೆಗೆ ಬಂದು ಹೋಗುತ್ತಿದ್ದಳು. ಮಗಳು  ಮನೆಗೆ  ಬಂದಾಗ ಪೂರ್ಣಿಮಾ ಇವರಲ್ಲಿ ತನ್ನ ಗಂಡ ಸರಿಯಾಗಿ  ನೋಡಿಕೊಳ್ಳುವುದಿಲ್ಲವಾಗಿ ಹಣ ಬೇಕು ಎಂದು ಹೇಳಿ  ಕಳುಹಿಸುತ್ತಿದ್ದುದಾಗಿ ತಿಳಿಸುತ್ತಿದ್ದಳು. ಮೋನಿಷಾಳಿಗೆ ಹಣ ಕೊಟ್ಟು ಕಳುಹಿಸುತ್ತಿದ್ದರು ಮೋನಿಷಾಳು 7  ತಿಂಗಳ  ಗರ್ಭವತಿಯಾದಾಗ ಅವಳ ಶೀಮಂತ ಕಾರ್ಯಕ್ರಮವನ್ನು ಪೂರ್ಣಿಮಾ ರವರೇ ಖರ್ಚು ಮಾಡಿ  ಕುಂದಾಪುರದ  ಯುನಿಟಿ ಹಾಲ್‌‌‌‌ನಲ್ಲಿ ಮಾಡಿದ್ದು  ಆ  ಕಾರ್ಯಕ್ರಮಕ್ಕೆ  ಅವಳ  ಗಂಡ  ನಾಗೇಂದ್ರ  ಮತ್ತು  ಅವನ  ತಂದೆ, ತಾಯಿ ಹಾಗೂ ಮನೆಯವರೂ  ಬಂದಿದ್ದರು.  ಆ  ಬಳಿಕ  ಮೋನಿಷಾಳು ಪೂರ್ಣಿಮಾ ರವರ  ಮನೆಯಲ್ಲಿಯೇ  ಇದ್ದಳು.  ಆಗ ಅವಳ  ಗಂಡ  ನಮ್ಮ  ಮನೆಗೆ  ಬಂದು  ಹೋಗುತ್ತಿದ್ದರು. ಮೋನಿಷಾಳು ಗಂಡು  ಮಗುವಿಗೆ  ಜನ್ಮ  ನೀಡಿದ್ದು,  ನಂತರ  ಮಗಳನ್ನು  ಗಂಡನ  ಮನೆಯಾದ  ಹಂದಟ್ಟುವಿಗೆ  ಮಗಳನ್ನು ಹಾಗೂ ತೊಟ್ಟಿಲು ಮಗುವನ್ನು  ಪೂರ್ಣಿಮಾ ಇವರು ಕಳುಹಿಸಿಕೊಟ್ಟಿರುತ್ತಾರೆ. ಮೋನಿಷಾಳು ದಿನಾಂಕ  06/10/2021  ರಂದು  ಸಂಜೆ  6:45  ಗಂಟೆ  ಸಮಯಕ್ಕೆ  ಪೂರ್ಣಿಮಾ ರವರ   ಮೊಬೈಲ್‌‌‌‌ಗೆ  ಮೋನಿಷಾಳು ಕರೆ  ಮಾಡಿ  ಮಗುವಿಗೆ  ಹೊಟ್ಟೆ  ನೋವು  ಲೂಸ್‌‌‌‌‌‌‌ ಮೋಷನ್‌‌‌ ‌‌‌‌‌‌ಆಗುತ್ತಿದೆ. ಗಂಡನಲ್ಲಿ  ಕುಂದಾಪುರ ಆಸ್ಪತ್ರೆಗೆ ಹೋಗುವ ಎಂದು  ಹೇಳಿದಲ್ಲಿ  ಕೇಳುವುದಿಲ್ಲ,  ಸಾಲಿಗ್ರಾಮ ಡಾಕ್ಟರ್‌‌‌‌‌‌ರಲ್ಲಿ ಕರೆದುಕೊಂಡು ಹೋಗುವುದಾಗಿ ತಿಳಿಸಿರುತ್ತಾಳೆ. ಅಲ್ಲದೆ ಅಮಾವಾಸ್ಯೆಯಾಗಿದ್ದು, ಡಾಕ್ಟರ್‌‌‌‌‌‌ರಲ್ಲಿಗೆ ಕರೆದುಕೊಂಡು ಹೋಗುವುದು ಸರಿಯಲ್ಲವೆಂದು  ಹೇಳುತ್ತಾನೆ  ಎಂದು  ಹೇಳಿದಳು. ನಂತರ ಸಂಜೆ 7:44 ಗಂಟೆ ಸಮಯಕ್ಕೆ ನಾಗೇಂದ್ರನು ಪೂರ್ಣಿಮಾ ರವರಿಗೆ ಫೋನ್‌ ‌‌‌‌‌‌‌ಮಾಡಿ  ಮೋನಿಷಾ ಈ ದಿನ ಮಗುವಿಗೆ ಡಾಕ್ಟರ್‌‌‌‌‌ರಲ್ಲಿ  ಕರೆದುಕೊಂಡು  ಹೋಗಲು ವಿಳಂಬ ಮಾಡಿದ  ವಿಚಾರದಲ್ಲಿ  ಬೇಸರಗೊಂಡು  ಮಗುವನ್ನು  ನನ್ನ  ಕೈಯಲ್ಲಿ  ಕೊಟ್ಟು  ಬೆಡ್‌‌‌ ರೂಂಗೆ  ಹೋಗಿ  ಬಾಗಿಲು  ಭದ್ರಗೊಳಿಸಿ  ಚೂಡಿದಾರ ಶಾಲಿನಿಂದ ಮನೆಯ ಪಕ್ಕಾಸಿಗೆ ಸುಮಾರು 7:15 ಗಂಟೆಗೆ ನೇಣು ಹಾಕಿಕೊಂಡು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾನೆ. ಪೂರ್ಣಿಮಾ ಇವರ ಮಗಳು ಮೋನಿಷಾಳಿಗೆ ಅವಳ ಗಂಡ ನಾಗೇಂದ್ರ ಹಾಗೂ ಅವರ ಮನೆಯವರು ಸರಿಯಾಗಿ  ನೋಡಿಕೊಳ್ಳುವುದಿಲ್ಲ ಸರಿಯಾಗಿ  ಊಟೋಪಚಾರ  ನೀಡುವುದಿಲ್ಲ  ಹಾಗೂ  ಮಗುವಿಗೆ  ಬಟ್ಟೆ ಬರೆಯನ್ನು  ತೆಗೆಸಿಕೊಡುವುದಿಲ್ಲವೆಂದು  ಈ  ಹಿಂದೆ  ಮಗಳು  ಹೇಳಿದ್ದರಿಂದ   ಅವಳ  ಸಾವಿನಲ್ಲಿ ಸಂಶಯ ಇರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ:174(3)&(iii) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣಗಳು

  • ಕಾಪು: ಪಿರ್ಯಾದಿದಾರರಾದ ಹೆನ್ರಿ ಪ್ರಕಾಶ್ ಡಿಸೋಜಾ (53) ತಂದೆ: ದಿ!ಚಾರ್ಲ್ಸ ಡಿಸೋಜಾ  ವಾಸ: ಗುಡ್ಡೆಯಂಗಡಿ ಚರ್ಚ ಬಳಿ ಉದ್ಯಾವರ ಇವರಿಗೂ ಹಾಗೂ ಇವರ ತಮ್ಮ ಡೋನಾಲ್ಡ್ ರಮೇಶ್ ಡಿಸೋಜಾರಿಗೂ ಹಿರಿಯರ ಜಾಗದ ಪಾಲಿನ ವಿಚಾರದಲ್ಲಿ ತಕರಾರು ಇದ್ದು, ಸುಮಾರು 9 ತಿಂಗಳ ಹಿಂದೆ ಹೆನ್ರಿ ಪ್ರಕಾಶ್ ಡಿಸೋಜಾ ರವರ ತಮ್ಮ ಡೋನಾಲ್ಡ್ ರಮೇಶ್ ಡಿಸೋಜಾ ಹಾಗೂ ಆತನ ಹೆಂಡತಿ ವಿದ್ಯಾಡಿ ಸೋಜಾ ಹಾಗೂ ಅವರ ಮಕ್ಕಳಾದ ಉಲ್ಲಾಸ್ ಡಿಸೋಜಾ ಮತ್ತು ಉಜ್ವಲ್ ಡಿಸೋಜಾ ಎಂಬವರು  ಹೆನ್ರಿ ಪ್ರಕಾಶ್ ಡಿಸೋಜಾ ರವರ ಮನೆಗೆ ಬಂದು ಅಲ್ಲಿಯೇ ವಾಸವಾಗಿದ್ದು, ಕೊಟ್ಟಿಗೆಯಲ್ಲಿ ಅಡುಗೆ ಮಾಡಿಕೊಂಡಿದ್ದರು. ದಿನಾಂಕ 06/10/2021 ರ ಬೆಳಿಗ್ಗೆ 07:30 ಗಂಟೆ ಸುಮಾರಿಗೆ ಡೋನಾಲ್ಡ್ ರಮೇಶ್ ಡಿಸೋಜಾ ಹಾಗೂ ಆತನ ಹೆಂಡತಿ ಮಕ್ಕಳು ಬಂದು ತಡೆದು ಹೆನ್ರಿ ಪ್ರಕಾಶ್ ಡಿಸೋಜಾ ಇವರಿಗೆ ನಿನಗೆ ಬಹಳ ಅಹಂಕಾರವಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದು ಡೋನಾಲ್ಡ್ ರಮೇಶ್ ಡಿಸೋಜಾರವರು ದೊಣ್ಣೆಯಿಂದ ಹೆನ್ರಿ ಪ್ರಕಾಶ್ ಡಿಸೋಜಾ ರವರ ಎಡ ಭುಜಕ್ಕೆ ಹೊಡೆದಿದ್ದು, ಅಲ್ಲದೇ ಅವನ ಹೆಂಡತಿ ಮಕ್ಕಳು ಕೈಯಿಂದ ಹೊಡೆದಿದ್ದು, ಅಲ್ಲಿಂದ ಹೋಗುವಾಗ ನಿನ್ನನ್ನು ಮುಂದಕ್ಕೆ ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿರುತ್ತಾರೆ. ಅವರುಗಳು ಹೊಡೆದ ಪರಿಣಾಮ ಹೆನ್ರಿ ಪ್ರಕಾಶ್ ಡಿಸೋಜಾ ರವರ ಎಡಭುಜಕ್ಕೆ ಎರಡು ಕಾಲುಗಳಿಗೆ ಒಳ ನೋವು ಉಂಟಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 156/2021 ಕಲಂ: 341,323,324,504,506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾಧ ವಿದ್ಯಾ ಡಿಸೋಜಾ (45) ಗಂಡ ಡೋನಾಲ್ಡ್ ಡಿಸೋಜಾ ವಾಸ:1-72 ಗುಡ್ಡೆಯಂಗಡಿ ಆರ್.ಸಿ ಚರ್ಚ ಬಳಿ ಉದ್ಯಾವರ ಇವರು ತನ್ನ ಗಂಡ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಗಂಡನ ಅಣ್ಣಂದಿರಾದ ಪೀಟರ್ ಡಿಸೋಜಾ ಮತ್ತು ಹೆನ್ರಿ ಪ್ರಕಾಶ್ ಡಿಸೋಜಾ ಹಾಗೂ ಪೀಟರ್ ಡಿಸೋಜಾರ ಮಗ ಪ್ರೆಸ್ಬನ್ ಇವರೊಂದಿಗೆ ಮೇಲಿನ ವಿಳಾಸದ ಮನೆಯಲ್ಲಿ ವಾಸವಾಗಿದ್ದು, ವಿದ್ಯಾ ಡಿಸೋಜಾ ಇವರಿಗೆ ಹಾಗೂ ಪೀಟರ್ ಡಿಸೋಜಾ ಮತ್ತು ಹೆನ್ರಿ ಪ್ರಕಾಶ್ ಡಿಸೋಜಾ ರವರಿಗೆ ಮನೆ ಬಿಟ್ಟು ಹೋಗುವ ವಿಚಾರದಲ್ಲಿ ತಕರಾರು ಇದ್ದು ಈ ಬಗ್ಗೆ ಪ್ರತಿ ದಿನ ಗಲಾಟೆ ಆಗುತ್ತಿದ್ದು, ದಿನಾಂಕ 06/10/2021 ರ ಬೆಳಿಗ್ಗೆ 07:30 ಗಂಟೆಗೆ ವಿದ್ಯಾ ಡಿಸೋಜಾ ರವರು ಮನೆಯನ್ನು ಗುಡಿಸುತ್ತಿರುವಾಗ ಆರೋಪಿತರಾದ ಪೀಟರ್ ಡಿಸೋಜಾ ಹಾಗೂ ಹೆನ್ರಿ ಪ್ರಕಾಶ್ ಡಿಸೋಜಾ ರವರು ಏಕಾಏಕಿ ವಿದ್ಯಾ ಡಿಸೋಜಾ ರವರನ್ನು ತಡೆದು ನೀನು ಮನೆಯ ಒಳಗೆ ಯಾಕೆ ಬಂದಿದ್ದಿ ಮನೆಯಿಂದ ಹೊರಗೆ ಹೋಗು ಎಂದು ಅವಾಚ್ಯ ಶಬ್ದಗಳಿಂದ ಬೈದು, ತಲೆಗೆ ಬೆನ್ನಿಗೆ ಎರಡು ಭುಜಗಳಿಗೆ ಕೈಯಿಂದ ಹೊಡೆದು, ಕೈಯಿಂದ ತಳ್ಳಿರುತ್ತಾರೆ. ವಿದ್ಯಾ ಡಿಸೋಜಾ ರವರ ಗಂಡ ಮತ್ತು ಮಕ್ಕಳಿಗೆ ಬೈದು ನೀವು ಮನೆಬಿಟ್ಟು ಹೋಗದಿದ್ದರೆ ನಿಮ್ಮನ್ನು ನೋಡಿಕೊಳ್ಳುತ್ತೇವೆ ಎಂಬುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 157/2021 ಕಲಂ: 341, 323, 354, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಮಾನ್ಯ ನ್ಯಾಯಾಲಯದ ಖಾಸಗಿ ದೂರು ಪ್ರಕರಣದಂತೆ ಪಿರ್ಯಾದಿದಾರರಾದ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ಗಂಡ: ದಿ/ ಎಡ್ಮಾಂಡ್ ಎಡ್ವರ್ಡ್ ಡಿಸೋಜಾ ವಾಸ: ಆಶಿರ್ವಾದ್ ಕ್ವಾಟೇಜ್ ಕಲ್ಲಂಬಾಡಿ ಪದವು ನಿಟ್ಟೆ  ಗ್ರಾಮ ಕಾರ್ಕಳ ಇವರ ಗಂಡ ಎಡ್ಮಂಡ್ ಎಡ್ವರ್ಡ್ ಡಿಸೋಜಾ ಇವರು ಈ ಹಿಂದೆ ಕಾರ್ಕಳದ ನಕ್ರೆ ಎಂಬಲ್ಲಿ ಇಂಟರ್ ಲಾಕ್ ಫ್ಯಾಕ್ಟರಿ ನಡೆಸುತ್ತಿದ್ದು, ಈ ಸಮಯ ಪಿರ್ಯಾದಿಯಲ್ಲಿ ನಮೂದಿಸಿದ 1ನೇ ಆಪಾದಿತ ವಿಲ್ಪ್ರೆಡ್ ಡಿಸೋಜಾ ಈತನು ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರ ಗಂಡನಿಂದ 15,00,000/- ರೂಪಾಯಿಗಳನ್ನು ಕೇಳಿದ್ದರಿಂದ, ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರ ಗಂಡ ದಿವಂಗತ ಎಡ್ಮಂಡ್ ಎಡ್ವರ್ಡ್ ಡಿಸೋಜಾ ಇವರು ತಮ್ಮ ಹೆಸರಿನಲ್ಲಿರುವ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಸರ್ವೆ ನಂಬ್ರ 437/13 ರಲ್ಲಿ 12 ಸೆಂಟ್ಸ್ ಹಾಗೂ ಸರ್ವೆ ನಂಬ್ರ 437/13 ರಲ್ಲಿ 4 ಸೆಂಟ್ಸ್  ಸ್ಥಿರಾಸ್ಥಿಯನ್ನು ಕಾರ್ಕಳ ತಾಲೂಕು, ಕುಕ್ಕುಂದೂರು ಗ್ರಾಮದ ಜೋಡು ರಸ್ತೆಯಲ್ಲಿರುವ ರಾಜಪುರ ಸಾರಸ್ವತ ಕ್ರೆಡಿಟ್ ಕೋ ಅಪರೇಟೀವ್ ಸೊಸೈಟಿಯಲ್ಲಿ ದಿನಾಂಕ 12/12/2019 ರಂದು ಅಡವಿಟ್ಟು ಅದರ ಹಣವನ್ನು 4 ನೇ ಆರೋಪಿ ಶಿರ್ಲ ಮರಿಯಾ ಡಿಸೋಜಾರವರ ಖಾತೆಗೆ ವರ್ಗಾಯಿಸಿದ್ದು, ನಂತರ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರು ಮತ್ತು ಇವರ ಗಂಡ ಹಲವು ಬಾರಿ ಆರೋಪಿತರ ಮನೆ ಯಾದ ಕುಕ್ಕುಂದೂರು ಗ್ರಾಮದ ದೇವರ ಗುಡ್ಡೆ ಎನ್ ಹೆಚ್ ವಿಲ್ಲಾ ಎಂಬಲ್ಲಿ ಹೋಗಿ ಹಣ ಕೇಳಿದಾಗ, ಹಣವನ್ನು ಹಿಂತಿರುಗಿಸುವುದಾಗಿ ತಿಳಿಸಿದ್ದು, ಆದರೆ 1ನೇ ಆರೋಪಿಯು ಹಣವನ್ನು ವಾಪಾಸು ನೀಡದೇ ಇದ್ದರಿಂದ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರ ಗಂಡ ಅದೇ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿಯೂ, ಬಳಿಕ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರು ಆರೋಪಿತರ ಬಳಿಯಲ್ಲಿ ಬ್ಯಾಂಕ್‌‌ನಲ್ಲಿರುವ ಸಾಲವನ್ನು ಮರು ಪಾವತಿ ಮಾಡುವಂತೆ ಪ್ರಸ್ತಾಪಿಸಿದರೂ 1ನೇ ಆರೋಪಿಯು ಅವಾಚ್ಯ ಶಬ್ದಗಳಿಂದ ಬೈಯ್ದು ಕಳುಹಿಸಿರುವುದಾಗಿದೆ. ಇವರು ಪುನಹ ಹಣ ಕೇಳಲು ಆರೋಪಿತರ ಮನೆಗೆ ಹೋದಾಗ ಆರೋಪಿತ 1.ವಿಲ್ಪ್ರೆಡ್ ಡಿಸೋಜ ಬಿನ್ ನೋಬರ್ಟ್ ಡಿ ಸೋಜ, 2. ಶ್ರೇಯಸ್ ಡಿ ಸೋಜ ಬಿನ್ ವಿಲ್ಪ್ರೆಡ್ ಡಿಸೋಜ, 3.ರಾಲ್ಫಿ  ಡಿಸೋಜ ಬಿನ್ ನೋಬರ್ಟ್ ಡಿ ಸೋಜ, 4. ಶರ್ಲಿ ಮರಿಯ ಡಿ ಸೋಜ ಬಿನ್ ವಿಲ್ಪ್ರೆಡ್ ಡಿಸೋಜ, 5. ಐರಿನ್ ಡಿಸೋಜ ಬಿನ್ ವಿಲ್ಪ್ರೆಡ್ ಡಿಸೋಜ, ಇವರೆಲ್ಲರೂ ಅಕ್ರಮ ಕೂಟ ಸೇರಿಕೊಂಡು ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ಇವರನ್ನು ಉದ್ದೇಶಿಸಿ ನಿನ್ನ ಹಣ ಕೊಡುವುದಿಲ್ಲ ಏನು ಮಾಡುತ್ತೀಯಾ ಮಾಡಿಕೋ ಎಂದು ಇವರನ್ನು ನೆಲಕ್ಕೆ ದೂಡಿರುತ್ತಾರ, ಆ ಸಮಯ 5 ನೇ ಆರೋಪಿ ಐರೀನ್ ಡಿಸೋಜಾ ಇವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಇನ್ನು ಮುಂದೆ ವಿಲ್ಫ್ರೆಡ್ ಡಿಸೋಜಾನ ಕಛೇರಿಗೆ ಹೋದರೆ ನಾವೆಲ್ಲ ಸೇರಿ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ಇವರ ಕೈಕಾಲು ಮುರಿಯುವುದಾಗಿ ಜೀವ ಬೆದರಿಕೆ ಹಾಕಿದ್ದು, ಅಲ್ಲದೆ ಠಾಣೆಗೆ ಬಂದಾಗ ಆರೋಪಿತರು ಠಾಣೆಯ ಹೊರಗೆ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರನ್ನು ಉದ್ದೇಶಿಸಿ ನಿನಗೆ ನಮ್ಮನ್ನು ಏನು ಮಾಡಿಕೊಳ್ಳಲಾಗುವುದಿಲ್ಲ ನೀನು ಹೋಗಿ ನಿನ್ನ ಗಂಡನ ತರಹ ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಕೆ ಹಾಕಿದ್ದಲ್ಲದೆ, ಆರೋಪಿತರು ಹಣವನ್ನು ವಾಪಾಸು ನೀಡದೇ ಶ್ರೀಮತಿ ಪ್ರಿಯಾ ಲವೀನಾ ಡಿಸೋಜ ರವರಿಗೆ ಮೋಸ ಮಾಡಿರುವುದಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 115/2021 ಕಲಂ: 420,354,504,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ವಿಜಯನ್‌(50) ತಂದೆ; ದಿ ಕುರಿಯನ್‌ವಾಸ; ಮಾಲಾಡಿ ಅಶೋಕ್‌ಶೆಟ್ಟಿ ಎಂಬವರ ರಬ್ಬರ್‌ ಪ್ಲಾಂಟೇಶನ್‌ ಬಳಿ, ಜನ್ನಾಡಿ ಬಿದ್ಕಲ್‌ಕಟ್ಟೆ, ಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ಇವರು ಮಾಲಾಡಿ ಅಶೋಕ್‌ ಶೆಟ್ಟಿ ಎಂಬವರ ರಬ್ಬರ್‌ ಪ್ಲಾಂಟೇಶನ್‌ನಲ್ಲಿ ರಬ್ಬರ್‌ ತೆಗೆಯುವ ಕೆಲಸ ಮಾಡಿಕೊಂಡು ಸಂಸಾರದೊಂದಿಗೆ ಅಲ್ಲಿಯೇ ವಾಸ ಮಾಡಿಕೊಂಡಿದ್ದು, ಸದ್ರಿ ರಬ್ಬರ್‌ ಪ್ಲಾಂಟೆಷನ್‌ಗೆ ಬಂದ  ಸುನೀಲ್‌, ಸ್ಕರಿಯಾ ಹಾಗೂ ಜೋಸ್‌ ಎಂಬವರ ಪರಿಚಯವಾಗಿ ವಿಜಯನ್‌ ರವರು ದಿನಾಂಕ 12/06/2021 ರಂದು ರೂಪಾಯಿ 2000/ ಸಾಲವನ್ನು ಸುನಿಲ್‌ರವರಿಂದ ಪಡೆದುಕೊಂಡಿದ್ದರು. ದಿನಾಂಕ 05/10/2021 ರಂದು ಬೆಳಿಗ್ಗೆ 9:00 ಗಂಟೆಗೆ ಸುನೀಲ್‌ ವಿಜಯನ್‌ ರವರಿಗೆ ಪೋನ್‌ಮಾಡಿ ತನ್ನ ಬಳಿ ತೆಗೆದುಕೊಂಡಿರುವ ರೂಪಾಯಿ 2000/ ವನ್ನು ತಾನು ಕೆಲಸ ಮಾಡಿಕೊಂಡಿರುವ ಹುಣ್ಸೆಮಕ್ಕಿ ರಬ್ಬರ್‌ಪ್ಲಾಂಟೇಷನ್‌ಗೆ ತಂದು ಕೊಡುವಂತೆ ಹೇಳಿದ್ದು ಆಗ ವಿಜಯನ್‌ ರವರು ನೀನೇ ನಮ್ಮ ಮನೆಗೆ ಬಂದು ಹಣ ತೆಗೆದುಕೊಂಡು ಹೋಗುವಂತೆ  ತಿಳಿಸಿದ್ದು, ಅದಕ್ಕೆ ಸುನೀಲನು ಅದೇ ದಿನ ಸಂಜೆ 4:30 ಗಂಟೆಗೆ ತನ್ನ ಸ್ನೇಹಿತರಾದ ಸ್ಕರಿಯಾ ಮತ್ತು ಜೋಸ್‌ರವರೊಂದಿಗೆ ಓಮಿನಿ ಕಾರು ನಂಬ್ರ KL-05 V-7104 ನೇದರಲ್ಲಿ ವಿಜಯನ್‌ ರವರ ಮನೆಗೆ ಬಂದು ಸಿಟ್‌ಔಟ್‌ನಲ್ಲಿ ಕುಳಿತಿದ್ದ ಇವರಿಗೆ ಸುನೀಲನು ಅವಾಚ್ಯವಾಗಿ ಬೈದು, ನಿನಗೆ ಹುಣ್ಸೆಮಕ್ಕಿಗೆ ಬಂದು ತನಗೆ ಹಣ ಕೊಡಲು ಆಗುವುದಿಲ್ಲವಾ ಎಂದು ಹೇಳಿ, ವಿಜಯನ್‌ ರವರ ಕೆನ್ನೆಗೆ ಹೊಡೆದು, ಸ್ಕರಿಯಾ ಮತ್ತು ಜೋಸ್‌‌ರವರು ಕೈ ಹಿಡಿದು ಎಳೆದು ಕಾಲಿನಿಂದ ತುಳಿದಿರುತ್ತಾರೆ. ನಂತರ ಸುನೀಲನು ತಂದಿದ್ದ ರಾಡ್‌ನಲ್ಲಿ ಕೆಳಗೆ ಬಿದ್ದಿದ ವಿಜಯನ್‌ ರವರ ಬಲ ಕೋಲು ಕಾಲಿಗೆ ಬಲವಾಗಿ 3–4 ಬಾರಿ ಹೊಡೆದ ಪರಿಣಾಮ ಮೂಳೆ ಮುರಿತದ ತೀವ್ರ ತರದ ಗಾಯವಾಗಿದ್ದು, ಆ ಸಮಯ ಮನೆಯಲ್ಲಿದ್ದ ವಿಜಯನ್‌ ರವರ ಹೆಂಡತಿ ಮಕ್ಕಳು ಬೊಬ್ಬೆ ಹೊಡೆದಾಗ ನಿನ್ನನ್ನು ಬಿಡುವುದಿಲ್ಲ ನೋಡಿಕೊಳ್ಳುತ್ತೇನೆ ಎಂದು ಜೀವ  ಬೆದರಿಕೆ  ಹಾಕಿ  ತಾವು ಬಂದಿದ್ದ ಕಾರಿನಲ್ಲಿಯೇ ರಾಡ್‌ಸಮೇತ ಅಲ್ಲಿಂದ ಹೋಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 172/2021 ಕಲಂ: 326.504.323.506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಮಹೇಶ.ಟಿ.ಎಮ್, ಪಿಎಸ್ಐ ಹೆಬ್ರಿ ಪೊಲೀಸ್ ಠಾಣೆ ಇವರು ದಿನಾಂಕ 06/10/2021 ರಂದು 15:00 ಗಂಟೆಗೆ ಠಾಣೆಯಲ್ಲಿರುವಾಗ ಅವರಿಗೆ ಬಂದ ಖಚಿತ ಮಾಹಿತಿಯಂತೆ ಪಂಚರೊಂದಿಗೆ 15:35 ಗಂಟೆಗೆ ವರಂಗ ಗ್ರಾಮದ ಅಂಕದಮಾರು ಎಂಬಲ್ಲಿಗೆ ತಲುಪಿ ನೋಡಿದಾಗ ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಬಂದ ವ್ಯಕ್ತಿಗಳಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು 15:45 ಗಂಟೆಗೆ ಸಿಬ್ಬಂದಿಗಳ ಸಹಾಯದಿಂದ ದಾಳಿ ಮಾಡಿ ಆರೋಪಿತನಾದ ಸೀತಾರಾಮ ಪೂಜಾರಿ (60) ಎಂಬುವವರನ್ನು ವಶಕ್ಕೆ ಪಡೆದು ಆತನಲ್ಲಿ ಮದ್ಯವನ್ನು ಮಾರಾಟ ಮಾಡಲು ಮತ್ತು ಸ್ವಾದೀನದಲ್ಲಿ ಇಟ್ಟು ಕೊಳ್ಳಲು ಪರವಾನಿಗೆ ಇದೆಯೇ ಎಂದು ಕೇಳಿದಾಗ ಇಲ್ಲವೆಂದು ತಿಳಿಸಿರುತ್ತಾನೆ ಆತನ ಬಳಿ ಇದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ ಸುಮಾರು 3583/- ರೂಪಾಯಿ ಮೌಲ್ಯದ  ವಿವಿಧ ರೀತಿಯ 1) Mysore Lancer Whisky ಎಂದು ಬರೆದಿರುವ ಮದ್ಯ ತುಂಬಿರುವ 180 ML ನ ಪ್ಯಾಕೆಟ್ ಒಟ್ಟು 22, ಮತ್ತು 2) Original Choice Deluxe  Whisky ಎಂದು ಬರೆದಿರುವ ಮದ್ಯ ತುಂಬಿರುವ 180 MLನ ಪ್ಯಾಕೆಟ್ ಒಟ್ಟು 29  ಹಾಗೂ ಮದ್ಯ ಮಾರಾಟದಿಂದ ಸಂಗ್ರಹವಾದ ನಗದು 950/- ರೂಪಾಯಿ ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲ-1 ಇವುಗಳನ್ನು ಪಂಚರ ಸಮಕ್ಷಮ ಮಹಜರು ಮೂಲಕ ಸ್ವಾದೀನ ಪಡಿಸಿಕೊಂಡು ಆರೋಪಿತನು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಸಂಗ್ರಹ ಮಾಡಿ ಮಾರಾಟ ಮಾಡುತ್ತಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2021 ಕಲಂ: 32, 34 ಕೆ. ಇ ಆಕ್ಟ್‌ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-10-2021 10:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080