Feedback / Suggestions

ಕಳವು ಪ್ರಕರಣ

  • ಕಾರ್ಕಳ: ಫಿರ್ಯಾದಿ ಉದಯ ಕುಮಾರ್ ಇವರು ಸಿದ್ಧಿವಿನಾಯಕ ಪೆಟ್ರೋಲ್ ಬಂಕ್ ಸಾಣೂರು ಇಲ್ಲಿ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೆಟ್ರೋಲ್ ಪಂಪ್ ನಲ್ಲಿ ನಾರಾಯಣ, ಇರ್ಷಾದ್‌, ಸಚಿನ್‌, ರಂಜಿತ್‌ ರವರು ಕೆಲಸ ನಿರ್ವಹಿಸುತ್ತಿದ್ದಾರೆ.ದಿನಾಂಕ:06.10.2021 ರಂದು ರಾತ್ರಿ 9:00 ಗಂಟೆಗೆ ಪೆಟ್ರೋಲ್ ಪಂಪ್ ನ ಶೆಟರ್ ಗೆ ಕೆಲಸಗಾರರು ಬೀಗ ಹಾಕಿ ಹೋಗಿರುತ್ತಾರೆ. ದಿನಾಂಕ:07.10.2021 ರಂದು ಬೆಳಗ್ಗೆ 06.19 ಗಂಟೆಗೆ ನಾರಾಯಣರವರು ಪಿರ್ಯಾದಿದಾರರಿಗೆ  ಕರೆ ಮಾಡಿ ಪಂಪ್ ನ ಶೆಟರ್ ಗೆ ಅಳವಡಿಸಿದ ಬೀಗವನ್ನು ಮುರಿದ ವಿಚಾರವನ್ನು ತಿಳಿಸಿದ್ದು ಪಿರ್ಯಾದಿದಾರರು ಸ್ಥಳಕ್ಕೆ ಬಂದು ನೋಡಿದಾಗ ಎದುರು ಶೆಟರ್ ಗೆ ಹಾಕಿದ್ದ ಬೀಗವನ್ನು ಮುರಿದಿದ್ದಲ್ಲದೇ ಕಚೇರಿ ಒಳಗಡೆ ಇದ್ದ ಸ್ವಾಯಿಪಿಂಗ್‌ ಮಿಷನ್‌ -2.  (ಮೌಲ್ಯ10,000/-) ಪ್ಲಿಟ್‌  ಕಾರ್ಡ್‌ ಮಿಷನ್‌ -1  (ಮೌಲ್ಯ 5,000/-) ಸ್ವತ್ತುಗಳು ಕಳವಾಗಿದ್ದಲ್ಲದೆ ಹೊರಗಡೆ ಪಂಪ್‌ನ ಮೇಲೆ ಪಿಕ್ಸ್‌ ಮಾಡಿ ಇಟ್ಟ ಅಟೋ ಮಿಷನ್‌‌ ಡಿವೈಸ್‌ ಕಳವು ಮಾಡಿಕೊಂಡು ಹೋಗಿರುತ್ತಾರೆ. ಪಿರ್ಯಾದಿದಾರರು ಪೆಟ್ರೋಲ್‌ ಪಂಪ್‌ಗೆ ಅಳವಡಿಸಿದ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ  ದಿನಾಂಕ:07.10.2021 ರಂದು ಬೆಳಗ್ಗಿನ ಜಾವ 1:04 ಗಂಟೆಗೆ ಒಬ್ಬ ವ್ಯಕ್ತಿ  ಪ್ಯಾಂಟ್‌ ಮತ್ತು ತುಂಬು ತೋಳಿನ ಶರ್ಟ್‌ ಹಾಗೂ ಮಾಸ್ಕ್‌ ಧರಿಸಿಕೊಂಡು ಪೆಟ್ರೋಲ್‌ ಪಂಪ್‌ ಒಳಗಡೆ ಬಂದು ಹುಡುಕಾಡಿ ಒಳಗಡೆ  ಇದ್ದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಸಿಸಿ ಕ್ಯಾಮೇರದಲ್ಲಿ ಸೆರೆಯಾದ ದೃಶ್ಯಾವಳಿಯಲ್ಲಿ  ಕಂಡು ಬಂದಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2021 ಕಲಂ 457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಫಿರ್ಯಾದಿ ಪ್ರಭಾಕರ ಇವರ ಅತ್ತೆ ಶ್ರೀಮತಿ ಅಪ್ಪಿ(75) ರವರು ಫಿರ್ಯಾದಿದಾರರೊಂದಿಗೆ ವಾಸವಾಗಿರುತ್ತಾರೆ. ಶ್ರೀಮತಿ ಅಪ್ಪಿಯವರಿಗೆ ಕಣ್ಣು ಕಾಣಿಸದೇ ಇದ್ದುದ್ದಲ್ಲದೆ, ಕಿವಿ ಕೂಡ ಕೇಳಿಸುತ್ತಿರಲಿಲ್ಲ ಶ್ರೀಮತಿ ಅಪ್ಪಿಯವರು ದಿನಾಂಕ 06/10/2021 ರಾತ್ರಿ 9:00 ಗಂಟೆಗೆ ಊಟ ಮಾಡಿ ಮಲಗಿರುತ್ತಾರೆ,ಬೆಳಿಗ್ಗೆ 06:30 ಗಂಟೆಗೆ ಪಿರ್ಯಾದಿದಾರರು ಎದ್ದು ನೋಡಿದಾಗ ಶ್ರೀಮತಿ ಅಪ್ಪಿಯವರು ಮನೆಯಲ್ಲಿ ಕಾಣಿಸದೆ ಇದ್ದು ಪಿರ್ಯಾದಿದಾರರು ಮನೆ ಬಳಿ ಎಲ್ಲಾ ಕಡೆ ಹುಡುಕಿ ಬಳಿಕ ಮನೆಯಿಂದ 20 ಮೀಟರ್‌  ದೂರದಲ್ಲಿ ಆವರಣ ಗೋಡೆ ಇಲ್ಲದೇ ಇದ್ದ ಬಾವಿಯ ಬಳಿ ಹೋಗಿ ನೋಡಿದಾಗ ಶ್ರೀಮತಿ ಅಪ್ಪಿಯವರ ಮೃತ ದೇಹವು ಬಾವಿಯ ನೀರಿನಲ್ಲಿ ಕವುಚಿ ತೇಲುತ್ತಿತ್ತು. ಶ್ರೀಮತಿ ಅಪ್ಪಿಯವರು ತನಗೆ ಕಣ್ಣು ಕಾಣಿಸದೆ ಕಿವಿ ಕೇಳಿಸದೇ ಇರುವುದರಿಂದ ನಾನು ಬದುಕುವುದಿಲ್ಲ ಸಾಯುತ್ತೇನೆ ಎಂದು ಹಿಂದೆ ಹೇಳುತ್ತಿದ್ದು ಇದೇ ಕಾರಣದಿಂದ ದಿನಾಂಕ 06/10/2021 ರಿಂದ ರಾತ್ರಿ 9:00 ಗಂಟೆಯಿಂದ ಬೆಳಿಗ್ಗೆ 06:30 ಗಂಟೆಯ ಮದ್ಯಾವದಿಯಲ್ಲಿ ಮನೆಯ ಬಳಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

Last Updated: 07-10-2021 06:13 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : UDUPI DISTRICT POLICE
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080