ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣಗಳು:

  • ಮಲ್ಪೆ: ಪಿರ್ಯಾದಿ ಪ್ರಕಾಶ್(56) ತಂದೆ: ಕರಿಯವಾಸ: ಕೆಳಾರ್ಕಳಬೆಟ್ಟು ಇವರು   ಶ್ರೀ ಬಬ್ಬುಸ್ವಾಮಿ  ದೈವಸ್ಥಾನ  ಹಾಗೂ ಮೂಕಾಂಬಿಕ ಅಮ್ಮನವರ  ಸನ್ನಿಧಿ ಬೆಳ್ಕಳೆ ಇದರ ಗುರಿಕಾರರಾಗಿದ್ದು ,  ದೈವಸ್ಥಾನದಲ್ಲಿ  3  ಕಾಣಿಕೆಡಬ್ಬಿ ಇಟ್ಟಿದ್ದು ,ದಿನಾಂಕ: 06-09-2022 ರಂದು  ಮಧ್ಯಾಹ್ನ 2:ಗಂಟೆಯಿಂದ  4 ಗಂಟೆಯ ಮಧ್ಯಾವದಿಯಲ್ಲಿ  ಯಾರೋ ಕಳ್ಳರು ಮೂಕಾಂಬಿಕ ದೇವಿಯ ಸನ್ನಿಧಿಯಲ್ಲಿರುವ ಕಾಣಿಕೆ ಡಬ್ಬಿಯನ್ನು  ಕಳವು ಮಾಡಿಕೊಂಡು ಹೋಗಿರುತ್ತಾರೆ  ಎನ್ನುವುದಾಗಿ ದೂರು ನೀಡಿದ್ದು, ಈ ಬಗ್ಗೆ ಮಲ್ಪೆ  ಠಾಣಾ ಅಪರಾಧ ಕ್ರಮಾಂಕ  76/2022  ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು:

  • ಪಿರ್ಯಾದಿ ಶ್ರೀಮತಿ ಲೀಲಾವತಿ (45), ಗಂಡ: ಗಿರೀಶ, ವಾಸ: ಚಂದ್ರ ನಿಯ, ಬಿ ಗ್ರೌಂಡ್ ಬಳಿ,  ಪೈಯ್ಯಾರ್ ರಸ್ತೆ, ಇವರ ತಂಗಿ ವಿದ್ಯಾ (29) ಎಂಬವರು ಬಡಾ ಗ್ರಾಮದ ಮುಳ್ಳುಗುಡ್ಡೆ ವಾಸಿ ಯತಿನ್ ರಾಜ್ ಎಂಬವನನ್ನು ಪ್ರೀತಿಸಿ ದಿನಾಂಕ 28.02.2017 ರಂದು  ಮದುವೆಯಾಗಿ  ಗಂಡನ ಮನೆಗೆ ಹೋಗಿ ವಾಸವಿದ್ದು, ಅಲ್ಲಿ ಗಂಡ  ಯತಿನ್ ರಾಜ್, ಮಾವ  ರಾಘು, ಅತ್ತೆ ಗೀತಾ ಮತ್ತು ಮೈದುನ ಯಕ್ಷಿತ್ ಎಂಬವರು ಬೈಯ್ಯುತ್ತಾ, ಹೊಡೆಯುತ್ತಾ  ಕಿರುಕುಳ ನೀಡುತ್ತಿದ್ದು, ಯತಿನ್ ರಾಜ್ ನು ಸರಿಯಾಗಿ ಕೆಲಸ ಮಾಡದೇ ವಿದ್ಯಾಳಿಂದ  ಹಲವು ಬ್ಯಾಂಕ್, ಸೊಸೈಟಿ, ಸಂಘ, ಸಂಸ್ಥೆಗಳಿಂದ ಸಾಲ ತೆಗೆಸಿ ಅದನ್ನು ಖರ್ಚು ಮಾಡುತ್ತಿದ್ದು, ವಿದ್ಯಾಳ ತಂದೆ ಕೊಟ್ಟ ಹಣವನ್ನೂ ಖರ್ಚು ಮಾಡಿ, ಚಿನ್ನವನ್ನು ಮಾರಾಟ ಮಾಡಿ ಖರ್ಚು ಮಾಡಿರುತ್ತಾನೆ. ಅಲ್ಲದೇ  ಇನ್ನೂ ಹೆಚ್ಚಿನ ಸಾಲ ತೆಗೆದುಕೊಡುವಂತೆ, ತಂದೆ ಮನೆಯಿಂದ ಹಣ ತಂದು ಕೊಡುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಾ ಹೊಡೆಯುತ್ತಿದ್ದನು. ಗಂಡನ ಮನೆಯಲ್ಲಿ  ಕಿರುಕುಳ ಹೆಚ್ಚಾಗಿ  ವಿದ್ಯಾ ಮತ್ತು ಯತಿನ್ ಸುಮಾರು  2 ತಿಂಗಳ ಹಿಂದೆ ಉಚ್ಚಿಲದಲ್ಲಿ ಬಾಡಿಗೆ ಮನೆಗೆ ಹೋಗಿದ್ದು,  1 ತಿಂಗಳ ಹಿಂದೆ ಅದನ್ನು ಬಿಟ್ಟು ಕಾಪು ಲೈಟ್ ಹೌಸ್ ಬಳಿ ಬಾಡಿಗೆ ಮನೆಗೆ ಹೋಗಿರುತ್ತಾರೆ. ಅಲ್ಲಿಯೂ ಕೂಡಾ  ಯತಿನನು  ವಿದ್ಯಾಳಿಗೆ  ಕಿರುಕುಳ ಕೊಡುತ್ತಾ ಸಾಲ ತೆಗೆದುಕೊಡುವಂತೆ  ಹೇಳುತ್ತಾ, ತಂದೆ ಮನೆಯಿಂದ ಹಣ ತರುವಂತೆ ಒತ್ತಾಯಿಸುತ್ತಾ ಹೊಡೆಯುತ್ತಿದ್ದು, ದಿನಾಂಕ 01.09.2022 ರಂದು ಸಂಜೆ ಮುಳ್ಳುಗುಡ್ಡೆಯ ಮನೆಯಲ್ಲಿ ಯಾರೂ ಇಲ್ಲದೇ  ಇರುವ ಸಮಯಕ್ಕೆ ವಿದ್ಯಾ ಮತ್ತು ಯತಿನ್  ಅಲ್ಲಿಗೆ ಹೋಗಿರುತ್ತಾರೆ. ಅಲ್ಲಿ ರಾತ್ರಿ  8.00 ಗಂಟೆಯ ಸಮಯಕ್ಕೆ ಯತಿನನು ಪಕ್ಕದ ಮನೆಯ ಉಷಾ ಎಂಬವರ  ಮನೆ  ಬಳಿ ಹೋಗಿ ತಾನು  ಮತ್ತು ವಿದ್ಯಾ ವಿಷ ಸೇವಿಸಿದ್ದಾಗಿ  ಹೇಳಿದ್ದು,  ಬಳಿಕ ಪಿರ್ಯಾದುದಾರರ ಗಂಡ ಮತ್ತು ಅವಿನಾಶ್ ಎಂಬವರು ಹೋಗಿ ಇಬ್ಬರನ್ನೂ  ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುತ್ತಾರೆ.   ವಿದ್ಯಾ ಗಂಭೀರ ಸ್ಥಿತಿಯಲ್ಲಿದ್ದು, ಯತಿನನು ಸಹಜವಾಗೇ ಇದ್ದು, ಇಬ್ಬರಿಗೂ  ಐ.ಸಿ.ಯು. ವಿಭಾಗದಲ್ಲಿ ಚಿಕಿತ್ಸೆ ಕೊಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾಳು  ದಿನಾಂಕ  07.09.2022 ರಂದು  00.30 ಗಂಟೆಗೆ ಮೃತಪಟ್ಟಿರುತ್ತಾಳೆ. ಯತಿನ್ ರಾಜ್ ನು ವಿದ್ಯಾಳ ಮೂಲಕ ತುಂಬಾ ಸಾಲ ಮಾಡಿಸಿದ್ದು ಅಲ್ಲದೆ ಇನ್ನು ಮುಂದಕ್ಕೆ ಸಾಲ ಮಾಡಿಕೊಡುವುದಿಲ್ಲ  ಎಂದು  ವಿದ್ಯಾ  ಹೇಳಿದ್ದರಿಂದ ವಿದ್ಯಾಳನ್ನು  ಕೊಂದರೆ  ಅವಳಿಂದ ಮಾಡಿಸಿದ ಸಾಲ ತೀರುತ್ತದೆ ಎಂಬ ಕಾರಣಕ್ಕೆ  ಯತಿನನು ಯೋಜನೆ ರೂಪಿಸಿ ಇಬ್ಬರೂ ವಿಷ ಸೇವಿಸಿ ಸಾಯೋಣವೆಂದು ವಿದ್ಯಾಳನ್ನು ನಂಬಿಸಿ ಅವಳಿಗೆ ಹೆಚ್ಚಿನ ಪ್ರಮಾಣದಲ್ಲಿ ವಿಷ ಕುಡಿಸಿ, ತನ್ನ ಮೇಲೆ ಅನುಮಾನ  ಬರಬಾರದೆಂದು  ತಾನೂ ಸ್ವಲ್ಪ ಪ್ರಮಾಣದಲ್ಲಿ ವಿಷ ಸೇವಿಸಿ ನಾಟಕ ಮಾಡುತ್ತಿದ್ದು, ವಿದ್ಯಾಳ  ಸಾವಿಗೆ ಅವಳ ಗಂಡ, ಅತ್ತೆ, ಮಾವ, ಮೈದುನ ಕಾರಣರಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 112/2022 ಕಲಂ 498(ಎ), 302   ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ಪ್ರಮೋದ್ ಕುಮಾರ್‌ ಶೆಟ್ಟಿ ಪ್ರಾಯ:39 ವರ್ಷ ತಂದೆ:ವಿಶ್ವನಾಥ ಆರ್‌ ಶೆಟ್ಟಿ ವಾಸ:ಮಂಜುಶ್ರೀ, 3/161, ಹೆಗ್ಗುಂಜೆ ಗ್ರಾಮ, ಮಂದಾರ್ತಿ ಇವರು ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ವ್ಯವಹಾರ ಮಾಡಿಕೊಂಡಿದ್ದು ದಿನಾಂಕ:04.09.2022 ರಂದು ಇವರಿಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಿಂದ ಕರೆ ಮಾಡಿ  ತಾನು ರಾಜೇಶ್‌ ಶಾ EURO BOND ಕಂಪನಿಯ ಮಾಲೀಕನೆಂದು ನಂಬಿಸಿ ತನ್ನ ಮಗನಿಗೆ ಕಾರವಾರ - ಗೋವಾ ಮಾರ್ಗದ ನಡುವೆ ರಸ್ತೆ ಅಪಘಾತವಾಗಿದ್ದು ಆತನನ್ನು ಏರ್ ಲಿಫ್ಟ್ ಮೂಲಕ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲು ತುರ್ತಾಗಿ ರೂ. 3,00,000/- ಹಣ ಬೇಕಾಗಿರುವುದರಿಂದ  ಆ್ಯಕ್ಸಿಸ್‌ ಬ್ಯಾಂಕ್‌ ಖಾತೆ ಗೆ ಹಣ ವರ್ಗಾಯಿಸಲು ತಿಳಿಸಿದಂತೆ  ಪಿರ್ಯಾದಿದಾರರು ಆತನನ್ನು ನಂಬಿ ತನ್ನ ಹಾಗೂ ತನ್ನ ಗೆಳೆಯರಿಂದ ಒಟ್ಟು ರೂ. 3,00,000/- ಹಣವನ್ನು ಗೂಗಲ್ ಪೇ ಮುಖೇನಾ ಹಣವನ್ನು ವರ್ಗಾಯಿಸಿದ್ದು ನಂತರದಲ್ಲಿ ತಾನು ಮೋಸ ಹೋದ ವಿಚಾರ ತಿಳಿದು ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 55/2022 ಕಲಂ 66(d) ಐ.ಟಿ. ಆಕ್ಟ್ ರಂತೆ  ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಅಬ್ದುಲ್ ಸತ್ತಾರ್ (66)  ತಂದೆ: ಶೇಖ್ ಯಾಕೂಬ್ ಸಾಹೇಬ್ ವಾಸ: ಪ್ಲ್ಯಾಟ್ ನಂ: 301 3ನೇ ಮಹಡಿ ತಾಜ್ ರೆಸಿಡೆನ್ಸಿ, 7ನೇ ಅಡ್ಡ ರಸ್ತೆ, ಈಶ್ವರ ನಗರ, ಹೆರ್ಗಾ ಗ್ರಾಮ ಇವರು ಉಡುಪಿ ತಾಲೂಕು ಹೆರ್ಗಾ ಗ್ರಾಮದ ಈಶ್ವರ ನಗರ 7ನೇ ಅಡ್ಡ ರಸ್ತೆಯಲ್ಲಿರುವ ತಾಜ್‌ ರೆಸಿಡೆನ್ಸಿಯ  ಪ್ಲ್ಯಾಟ್‌ ನಂ; 301 ನ್ನು ದಿನಾಂಕ 25.06.2010 ರಂದು 1ನೇ ಆರೋಪಿಯಿಂದ ಖರೀದಿಸಿದ್ದು, 1ನೇ ಆರೋಪಿ ತಜ್‌ಮುಲ್‌ ಹುಸೇನ್‌ ನು ತಾಜ್‌ ರೆಸಿಡೆನ್ಸಿ ಅಪಾರ್ಟ್‌ಮೆಂಟ್ಸ್‌ ಓನರ್ಸ್‌ ಅಸೋಶಿಯೇಶನ್‌ (ರಿ) ಇದರ ಅದ್ಯಕ್ಷನಾಗಿದ್ದು, 2ನೇ ಆರೋಪಿತೆ ಶ್ರೀಮತಿ ಉಮಾ ಗೌಡ್‌,  ಇವರು  ಕಾರ್ಯದರ್ಶಿಯಾಗಿದ್ದು, 3 ನೇ ಆರೋಪಿ ಶಂಶುದ್ದೀನ್‌, ಇವರು 1ನೇ ಆರೋಪಿಯ ಜಿಪಿಎ ಹೋಲ್ಡರ್‌ ಆಗಿರುತ್ತಾರೆ. ಮೂರು ಜನ ಆಪಾದಿತರು ಪೂರ್ವ ದ್ವೇಷದಿಂದ, ತಕ್ಷೀರು ನಡೆಸುವ ಸಮಾನ ಉದ್ದೇಶದಿಂದ  ಪಿರ್ಯಾದುದಾರರ ನಕಲಿ ಸಹಿ ಹಾಕಿ,  ನಕಲಿ ದಾಖಲಾತಿಗಳನ್ನು ಉಡುಪಿಯಲ್ಲಿ ಸೃಷ್ಠಿಸಿ, ಸದ್ರಿ ನಕಲಿ ದಾಖಲಾತಿಗಳನ್ನು ಅಸಲಿ ದಾಖಲಾತಿಗಳೆಂದು ಸರಕಾರಿ ಅಧಿಕಾರಿಯವರಾದ  ಉಡುಪಿ ಜಿಲ್ಲಾ ರಿಜಿಸ್ಟ್ರಾರ್‌ ಅಪ್‌ ಸೊಸೈಟೀಸ್‌, ಬಡಗುಪೇಟೆ, ಉಡುಪಿ ಇವರ ಮುಂದೆ ದಿನಾಂಕ 01.01.2011 ರಂದು ಹಾಜರುಪಡಿಸಿ ತಾಜ್‌ ರೆಸಿಡೆನ್ಸಿ ಓನರ್ಸ್‌ ಅಸೋಶಿಯೇಶನ್‌ ನ್ನು ನೋಂದಾವಣೆ ಮಾಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಠಾಣೆ,  ಅಪರಾಧ ಕ್ರಮಾಂಕ 127/2022 ಕಲಂ:465, 468, 471, ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಶಿರ್ವಾ:  ದಿನಾಂಕ 06/09/202 ರಂದು ಮಧ್ಯಾಹ್ನ 18:00 ಘಂಟೆಗೆ   ರಾಘವೇಂದ್ರ ಸಿ, ಪಿಎಸ್ಐ, ಶಿರ್ವ ಪೊಲೀಸ್‌ ಠಾಣೆ ಇವರಿಗೆ  ಬಂದ ಮಾಹಿತಿಯಂತೆ  ಶಿರ್ವ ಪೊಲೀಸ್‌ ಠಾಣಾ ಸರಹದ್ದಿನ ಕಾಪು ತಾಲೂಕು ಪಿಲಾರು  ಗ್ರಾಮದ  ಮುದರಂಗಡಿ ಮೇಲ್‌ ಪೇಟ್‌ ಅಟೋರಿಕ್ಷಾ ನಿಲ್ದಾಣದ ಸಮೀಪ ಇರುವ  ಸಾರ್ವಜನಿಕ ಸ್ಥಳದಲ್ಲಿ ಸುಜೀತ್‌  ಪೂಜಾರಿ ಎಂಬಾತನು ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರನ್ನು ಗುಂಪುಗೂಡಿಸಿಕೊಂಡು 1 ರೂಪಾಯಿಗೆ 70 ರೂಪಾಯಿ ನೀಡುವುದಾಗಿ  ಹೇಳಿ  ಮಟ್ಕಾ  ಜುಗಾರಿ ಆಟದ  ಬಗ್ಗೆ ಹಣ  ಸಂಗ್ರಹ ಮಾಡುತ್ತಿದ್ದುದಾಗಿದ್ದು   ಈ  ಬಗ್ಗೆ  ದಾಳಿ ನಡೆಸಿ  ಆತನ ವಿರುದ್ದ  ಕಾನೂನು  ಕ್ರಮ ಕೈಗೊಳ್ಳುವರೇ ಮಾನ್ಯ  ನ್ಯಾಯಾಲಯದ ಅನುಮತಿ ಕೋರಲಾಗಿ ಮಾನ್ಯ ನ್ಯಾಯಾಲಯವು ಅನುಮತಿ ನೀಡಿದ್ದನ್ನು ಸ್ವೀಕರಿಸಿ ನಂತರ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಸುಜಿತ್‌ ಪೂಜಾರಿ ಈತನು ಮಟ್ಕಾ ಜುಗಾರಿ ಆಟದ   ಬಗ್ಗೆ  ಸಂಗ್ರಹ ಮಾಡಿದ ನಗದು ಹಣ 1,350/- ಮಟ್ಕಾ ಚೀಟಿ-1 ಹಾಗೂ ಬಾಲ್‌ ಪೆನ್‌‌ -1 ನ್ನು ಮುಂದಿನ ಕ್ರಮದ ಬಗ್ಗೆ  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2022,ಕಲಂ. 78 (3) KP ACT ರಂತೆ  ಪ್ರಕರಣ ದಾಖಲಿಸಲಾಗಿದೆ.\
  • ಗಂಗೊಳ್ಳಿ: ಪಿರ್ಯಾದಿದಾರರಾದ ವಿನಯ್‌ ಕೊರ್ಲಹಳ್ಳಿ ಪಿ.ಎಸ್.ಐ ಗಂಗೊಳ್ಳಿ ಠಾಣೆ ರವರು ದಿನಾಂಕ 07/09/2022 ರಂದು ಠಾಣೆಯಲ್ಲಿರುವಾಗ ಗಂಗೊಳ್ಳಿ ಗ್ರಾಮದ ಮೇಲ್‌ಗಂಗೊಳ್ಳಿ ವಾಟರ್‌ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಭಾಸ್ಕರ ಪೂಜಾರಿ,  ಎಂಬುವವರು ಅಕ್ರಮವಾಗಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ಗಂಗೊಳ್ಳಿ ಗ್ರಾಮದ ಬೀಟ್ ಸಿಬ್ಬಂದಿ ಪಿ.ಸಿ 2341 ನೇ ನಾಗರಾಜ  ರವರು ನೀಡಿದ ಖಚಿತ ಮಾಹಿತಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಮದ್ಯಾಹ್ನ 12:30 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಭಾಸ್ಕರ ಪೂಜಾರಿ, 66 ವರ್ಷ, ತಂದೆ: ದಿ ನಂಗ ಪೂಜಾರಿ, ವಾಸ: ಭಾಸ್ಕರ ಪೂಜಾರಿ, ಗುಂಡಿನಹಿತ್ಲು, ರಾಂ ಪೈ ಮಠ ರಸ್ತೆ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು ವಿಚಾರಿಸಿದಲ್ಲಿ ತಾನು ಸ್ವಂತ ಲಾಭಕ್ಕೋಸ್ಕರ ಮಟ್ಕ ಚೀಟಿ ಬರೆಯುತ್ತಿರುವುದಾಗಿ ತಿಳಿಸಿದ್ದ ಮೇರೆಗೆ  ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 615/- -ರೂ ನಗದನ್ನು ಸ್ವಾಧೀನ ಪಡಿಸಿಕೊಂಡು ಕ್ರಮ ಜರುಗಿಸಿದ್ದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ  84/2021 ಕಲಂ:78(I), (III) ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ರಂತೆ  ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಫಿರ್ಯಾದಿ ಸೀತಾರಾಮ ಶೆಟ್ಟಿ ಪ್ರಾಯ 50 ವರ್ಷ ತಂದೆ: ಶೀನಪ್ಪ ಶೆಟ್ಟಿ ವಾಸ: ಕೋಣಿಹರ ಕೆಚ್ಚಾಬಾಳು ಮೊಳಹಳ್ಳಿ ಗ್ರಾಮ ಇವರ ಅಕ್ಕ ಮೃತೆ ಜ್ಯೋತಿ ಶೆಡ್ತಿ (55 ವರ್ಷ )ರವರು ಕೃಷಿ ಹಾಗೂ ಮನೆ ಕೆಲಸ ಮಾಡಿಕೊಂಡಿದ್ದು , ಇವರಿಗೆ ಸುಮಾರು ಒಂದು ತಿಂಗಳಿನಿಂದ  ವಿಪರೀತ ನಿತ್ರಾಣ ಹಾಗೂ ಹೊಟ್ಟೆನೋವಿನಿಂದ  ಬಳಲುತ್ತಿದ್ದು ಈ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಯಲ್ಲಿ  ದಾಖಲಾಗಿ ಮೂರು ದಿನಗಳ ಬಳಿಕ ಮನೆಗೆ ಕರೆದುಕೊಂಡು ಬಂದಿರುತ್ತಾರೆ.  ಎಂದಿನಂತೆ ನಿಮ್ಮೆ ದಿನ 06/09/2022ರಂದು ರಾತ್ರಿ ಊಟ ಮಾಡಿ ಮಲಗಿದ್ದವರು ಅವರಿಗಿರುವ ವಿಪರೀತ ನಿತ್ರಾಣ ಹಾಗೂ ಹೊಟ್ಟೆನೋವಿನ ಕಾರಣಕ್ಕೆ ಮನೊಂದು ದಿನಾಂಕ: 06/09/2022ರಂದು ರಾತ್ರಿ 9.00 ಗಂಟೆಯಿಂ ದಿನಾಂಕ 07/09/2022ರ ಬೆಳಿಗ್ಗೆ 05.30  ರ ಮಧ್ಯಾವಧಿಯಲ್ಲಿ  ಮನೆಯ ಎದುರಿನ ಕೊಟ್ಟಿಗೆಯ ಹುಲ್ಲುಗಳನ್ನು ಹಾಕಲು ಮಾಡಿರುವ ರೂಮಿನಲ್ಲಿನ ಹಂಚಿನ ಮಾಡಿನ ಮರದ ಪಕ್ಕಾಸಿಗೆ ನೈಲಾನ್  ಹಗ್ಗ ಕಟ್ಟಿ ಕುತ್ತಿಗೆಗೆ  ನೇಣು ಬಿಗಿದುಕೊಂಡು  ಆತ್ಮ ಹತ್ಯೆಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಯು.ಡಿ.ಆರ್ ನಂಬ್ರ 39/ /2022 ಕಲಂ: 174 CRPCರಂತೆ  ಪ್ರಕರಣ ದಾಖಲಿಸಲಾಗಿದೆ. 

ಇತ್ತೀಚಿನ ನವೀಕರಣ​ : 07-09-2022 06:50 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080