ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಜಾರ್ಜ  ಡಿ ಸೊಜ (54), ತಂದೆ: ದಿ. ಲೂಯಿಸ್ ಡಿಸೋಜ, ವಾಸ: ಪರ್ಪಲೆ, ನಿಟ್ಟೆ ಗ್ರಾಮ, ಕಾರ್ಕಳ ಇವರ  ಹೆಂಡತಿ ರೀಟಾ, ಮಗಳಾದ ರೆನಿಟಾ (32) ರವರರೊಂದಿಗೆ ವಾಸವಾಗಿದ್ದು, ಇನ್ನೊಬ್ಬಳು ಮಗಳು ಜೆವಿಟಾ ಹಾಗೂ ಮಗ ರೆಕ್ಸನ್ ರವರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ರೆನಿಟಾ ರವರಿಗೆ 11 ವರ್ಷದ ಹಿಂದೆ ಮುಲ್ಕಿಯ ಕಿರಣ್ ರವರೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 6 ವರ್ಷದಲ್ಲೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಆಗಿರುತ್ತದೆ. ರೆನಿಟಾ ರವರು ಕಳೆದ 2-3 ದಿನಗಳಿಂದ ತಲೆ ನೋವು  ಆಗುತ್ತಿರುವುದಾಗಿ ತಿಳಿಸುತ್ತಿದ್ದು, ಅಲ್ಲದೆ ಇವರು ಮಾನಸಿಕ ಖಿನ್ನತೆ ಇಲ್ಲವೇ ಇನ್ಯಾವುದೇ ಕಾರಣದಿಂದ ದಿನಾಂಕ 06/09/2022 ರ ಅಪರಾಹ್ನ 2:30 ಗಂಟೆಯಿಂದ 4:30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ಮನೆಯ ಹಿಂಬದಿ ಹಾಡಿಯಲ್ಲಿದ್ದ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .  

ಕೊಲೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ. ಜಯಶ್ರೀ (30),  ಗಂಡ, ಬಾಲಕೃಷ್ಣ  ಭಟ್,  ಹಾಲಿ ವಿಳಾಸ. ಮೆಜಿಸ್ಟಿಕ್  ಹಾಲ್  ಬಳಿ  ಕೊಟೇಶ್ವರ, ಗ್ರಾಮ ಕುಂದಾಪುರ ತಾಲೂಕು  ಖಾಯಂ  ವಿಳಾಸ ,  ಚೌಕುಡಿ ಬೆಟ್ಟು ನೆರಂಬಳ್ಳಿ ಹಂಗಳೂರು ಗ್ರಾಮ ಕುಂದಾಪುರ ತಾಲೂಕು ಇವರ ತಮ್ಮ ವಿನಯ ಪೂಜಾರಿ ಇವರು ದಿನಾಂಕ 28/03/2022 ರಂದು ಆತನ ವಾಸದ ಮನೆಯಾದ ಕುಂದಾಪುರ ತಾಲೂಕಿನ ಹಂಗಳೂರು  ಗ್ರಾಮದ ಚೌಕುಡಿ ಬೆಟ್ಟು ನೆರಂಬಳ್ಳಿ ಎಂಬಲ್ಲಿ ಮನೆಯಿಂದ ಕಾಣೆಯಾಗಿದ್ದು, ಈ ಬಗ್ಗೆ ಕುಂದಾಪುರ ಪೊಲೀಸ್   ಠಾಣೆಯಲ್ಲಿ ಪ್ರಕರಣ  ದಾಖಲಾಗಿರುತ್ತದೆ. ಆ ಬಳಿಕ ದಿನಾಂಕ 04/04/2022 ರಂದು ಬೆಳಿಗ್ಗೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ  ಹಡಾಳಿ ಎಂಬಲ್ಲಿ ವರಾಹಿ ಹೊಳೆಯಲ್ಲಿ ಕೊಳೆತ  ಸ್ಥಿತಿಯಲ್ಲಿ  ಒಂದು ಗಂಡಸಿನ ಹೆಣ ನೀರಿನಲ್ಲಿ ತೇಲಿಕೊಂಡು ಬಂದಿದ್ದು , ಹೆಣವು ವಿನಯ ಪೂಜಾರಿ ಯರಿನಿಗೆ  ಹೋಲುತ್ತದೆ  ಎಂದು  ತಿಳಿದು ಸಂಬಂಧಿಕರು ಊರಿನವರು ಬಂದು ನೋಡಿದಾಗಿ ಹೆಣ ಕೊಳೆತು  ಹೊಳೆಯ  ದಂಡೆಯ  ಮೇಲೆ ಇದ್ದು, ಈ ಹೆಣವು ಸಂಪೂರ್ಣ  ಕೊಳೆತು  ಹೋಗಿ   ಹುಳಗಳು ಬಂದಿರುತ್ತದೆ, ಹೆಣದ  ಕೈ ಮೇಲೆ  ಇರುವ ಕಿಚ್ಚ  ಸುದೀಪ್  ಎಂದು ಇಂಗ್ಲೀಷನಲ್ಲಿ ಬರೆದಿರುವ ಹಚ್ಚೆ ಹಾಗೂ ಮುಖ ಚಹರೆ ನೋಡಿದಾಗ ಅದು ವಿನಯ ರವರ ಹೆಣ ಎಂದು  ಗುರುತಿಸಿರುತ್ತಾರೆ.  ಈ  ಬಗ್ಗೆ  ಮೃತರ  ಮಾವ ಶೀನ ಪೂಜಾರಿ  ಇವರು   ವಿನಯ ಪೂಜಾರಿ  ಯವರ ಮರಣದ ಬಗ್ಗೆ  ಸಂಶಯ ಇರುವುದಾಗಿ ದಿನಾಂಕ 04/04/2022 ರಂದು ದೂರು ನೀಡಿದ್ದು ಶಂಕರನಾರಾಯಣ  ಪೊಲೀಸ್ ಠಾಣೆಯಲ್ಲಿ ಯುಡಿಆರ್ ನಂಬ್ರ 06/2022  ಕಲಂ: 174 (ಸಿ) ಸಿಆರ್‌ಪಿಸಿಯಂತೆ  ಪ್ರಕರಣ  ದಾಖಲಾಗಿರುತ್ತದೆ.  ಆ ಬಳಿಕ ಪಿರ್ಯಾದಿದಾರರು ವಿನಯ  ಪೂಜಾರಿ  ಇವರ  ಸಾವಿನ  ಬಗ್ಗೆ ಶಂಕರನಾರಾಯಣ  ಪೊಲೀಸ್  ಠಾಣೆಯಲ್ಲಿ  ಪದೇ  ಪದೇ ವಿಚಾರ ಮಾಡುತ್ತಿದ್ದು, ವೈದ್ಯರ ವರದಿ ಬಂದಿರುವುದಿಲ್ಲ. ದಿನಾಂಕ  06/09/2022 ರಂದು  ಪೊಲೀಸ್ ಠಾಣೆಗೆ ಬಂದು  ವಿನಯ ಪೂಜಾರಿ ಇವನ ಸಾವಿನ ವರದಿ  ವಿಚಾರಿಸಿದ್ದು ವಿನಯ  ಪೂಜಾರಿ ಯವರನ್ನು  ಯಾರೋ ಕುತ್ತಿಗೆ  ಭಾಗಕ್ಕೆ  ಬಲವಾಗಿ  ಒತ್ತಿರುವುದರಿಂದ  (ಹಿಚುಕಿರುವುದರಿಂದ ) ಸಾವು ಸಂಬಂವಿಸಿದೆ ಎಂದು ವೈಧ್ಯರ  ವರದಿ  ಬಂದಿರುವುದಾಗಿ  ತಿಳಿದಿರುತ್ತದೆ. ವಿನಯ ಪೂಜಾರಿ ಯವರನ್ನು ಆತನ  ಸ್ನೇಹಿತನಾದ  ಹಾಗೂ ಪಿರ್ಯಾದಿದಾರಿಗೆ ಪರಿಚಯ ಇರುವ ಹುಣ್ಸೆಕಟ್ಟೆ ಹೊಸ ತೊಪ್ಪಲುವಿನ ವಿಜಯ ಪೂಜಾರಿ ಎಂಬುವವರ ಮಗ ಅಕ್ಷಯ ಎಂಬುವವರೊಂದಿಗೆ ತಿರುಗಾಡಿಕೊಂಡಿದ್ದು, ಆತನು  ದಿನಾಂಕ  28/03/2022  ರಂದು ಪಿರ್ಯಾದಿದಾರರ ಮನೆಯ ಬಳಿ ಬಂದು ಮನೆಯಲ್ಲಿ ಇದ್ದ ವಿನಯ  ಪೂಜಾರಿ ಯವರನ್ನು  ಕರೆದುಕೊಂಡು ಹೋದ  ಬಗ್ಗೆ  ತಿಳಿದಿದ್ದು , ಅದರಂತೆ ಮೃತ ವಿನಯ ಪೂಜಾರಿ ಇವನನ್ನು ಅಕ್ಷಯ ಹಾಗೂ   ಆತನ  ಸ್ನೇಹಿತರು  ಸೇರಿ  ಕುತ್ತಿಗೆ  ಭಾಗಕ್ಕೆ   ಬಲವಾಗಿ  ಒತ್ತಿ  (ಹಿಚುಕಿ)  ಕೊಲೆ  ಮಾಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 68/2022  ಕಲಂ: 302 , 201  ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 07-09-2022 04:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080