ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಾದೇವ ಕೆ ಗೊಂಡ (42), ತಂದೆ; ಕುಪ್ಪಯ್ಯ ಗೊಂಡ, ವಾಸ:ಹುಲ್ಲಕ್ಕಿ ಶಿರಾಲಿ,ವೆಂಕ್ಟಾಪುರ ಗ್ರಾಮ, ಭಟ್ಕಳ  ತಾಲೂಕು. ಉತ್ತರ ಕನ್ನಡ ಜಿಲ್ಲೆ ಇವರು ಕೊಂಕಣ ರೈಲ್ವೇಯ ಟ್ರಾಕ್ ಸೇಪ್ಟಿ ಮೆನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು ಅವರು  ದಿನಾಂಕ 06/09/2021 ರಂದು ಬೆಳಿಗ್ಗೆ 6:00 ಗಂಟೆಯಿಂದ ಬಿಜೂರು ರೈಲ್ವೇ ನಿಲ್ದಾಣದಿಂದ ಹೊರಟು ಕಿರಿಮಂಜೇಶ್ವರ ಚೆಕ್ ಪಾಯಿಂಟ್ ತಲುಪಿ ವಾಪಸ್ಸು ಬಿಜೂರು ಕಡೆಗೆ ಬರುತ್ತಾ ಕಿಮೀ 635/1 ಬಳಿ ಇರುವಾಗ ಬಿಜೂರು ರೈಲ್ವೇ ಸ್ಟೇಷನ್ ನಿಂದ  ಪಿರ್ಯಾದಿದಾರರಿಗೆ 12:20 ಗಂಟೆಗೆ ಕರೆ ಮಾಡಿ ಕಿಮೀ 633 /6-7 ಮಧ್ಯೇ ರನ್ ಓವರ್ ಆಗಿರುವುದಾಗಿ ತಿಳಿಸಿದ್ದು ಪಿರ್ಯಾದಿದಾರರು ಟ್ರಾಕ್ ಪರಿಶೀಲಿಸುತ್ತಾ ರೈಲ್ವೇ ಕಿ.ಮೀ ಸಂಖ್ಯೆ 633/7 ರ ಬಳಿ ಬಂದಾಗ ಕೆಲವು  ಜನರು ಟ್ರಾಕ್ ಬಳಿ ಜಮಾಯಿಸಿದ್ದು ಟ್ರಾಕ್ ನಲ್ಲಿ ಗಂಡಸಿನ ಮೃತ ದೇಹವೊಂದು ಛಿದ್ರಗೊಂಡ ರೀತಿಯಲ್ಲಿ ಇದ್ದು ಸ್ಥಳೀಯರಲ್ಲಿ ವಿಚಾರಿಸಿದಾಗ ಟ್ರಾಕ್ ಸಮೀಪ ನಡೆದುಕೊಂಡು ಬರುವಾಗ ಆಕಸ್ಮಿಕವಾಗಿ ರೈಲು ಹಳಿಯ ಬಳಿ ಬಂದಾಗ ರಾಜಧಾನಿ ಎಕ್ಸಪ್ರೆಸ್ ರೈಲಿಗೆ ಸಿಲುಕಿ ದೇಹವು ಛೀದ್ರಗೊಂಡು ಮೃತಪಟ್ಟಿರುವುದಾಗಿ ತಿಳಿಸಿದ್ದು ಮೃತಪಟ್ಟ ವ್ಯಕ್ತಿಯ ಬಗ್ಗೆ ವಿಚಾರಿಸಿದಲ್ಲಿ ಸ್ಥಳೀಯ ವಾಸಿ ಗುರುವ ದೇವಾಡಿಗ (45) ವರ್ಷ ಎಂಬುದಾಗಿ ತಿಳಿಸಿದ್ದು ರಾಜಧಾನಿ ಎಕ್ಸಪ್ರೆಸ್ ರೈಲು ಸಂಖ್ಯೆ-02432 ನೇಯದ್ದು ಹಝರತ್ ನಿಜಾಮುದ್ದಿನ್ ನಿಂದ ಹೊರಟು ಕೇರಳ-ತಿರುವನಂತಪುರ ಹೋಗುತ್ತಿದ್ದು  12:15 ಗಂಟೆ ಕೆರ್ಗಾಲ್ ನಾಯ್ಕನಕಟ್ಟೆ ರೈಲ್ವೇ ಗೇಟ್ ನಿಂದ  350 ಮೀ ದೂರದಲ್ಲಿ ಕಿಮೀ ಸಂಖ್ಯೆ 633/6-7 ರ ನಡುವೆ ಚಲಿಸುತ್ತಿದ್ದಾಗ ಟ್ರಾಕ್ ಬಳಿ ನಡೆದುಕೊಂಡು ಬರುತ್ತಿದ್ದ  ಗುರುವ ದೇವಾಡಿಗ ರವರು ಆಕಸ್ಮಿಕವಾಗಿ ರೈಲು ಹಳಿಯ ಬಳಿ ಬಂದಾಗ ಢಿಕ್ಕಿ ಹೊಡೆದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 34/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಮೊಹಮದ್ ಶಾಯಾನ್ (23), ವಾಸ: ಮನೆ ನಂ: 601,  ಕಾಪು ಮಸೀದಿ ಬಳಿ ಕಾಪು, ಖಾಯಂ ವಿಳಾಸ:  ಮನೆ ನಂ: 9/34 ಗುರುಪುರ ಕುಕ್ಕಟ್ಟೆ ಸ್ಟ್ರೀಟ್ ಗ್ರಾಮ ಮೊಗರು ಮಂಗಳೂರು ತಾಲೂಕು ಇವರು ಎ.ಕೆ.ಎಂ.ಎಸ್  ಬಸ್‌ನ  ಕಂಡಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 06/09/2021 ರಂದು ಪಿರ್ಯಾದಿದಾರರು ಮತ್ತು ಬಸ್‌‌ ಚಾಲಕ ಶೈಲೇಶ್‌‌‌ ರವರು  KA-20-C-1069 ನೇ ಬಸ್‌‌ನ ಮಂಗಳೂರು - ಮಣಿಪಾಲ  ಟ್ರಿಪ್‌ ಮುಗಿಸಿ, 16:05 ಗಂಟೆ ಸಮಯಕ್ಕೆ ಬಸ್‌ ನಿಲ್ದಾಣದ ಬಳಿಯ ಗೂಡಂಗಡಿಯಲ್ಲಿ ಚಹಾ ಕುಡಿಯುತ್ತಿದ್ದಾಗ  KA-20-AA-7199 ನೇ ಬಸ್‌‌‌ನಿಂದ ಅದರ ಚಾಲಕ ಮುನಾಫ್ @ ಮುನ್ನಾ ಮತ್ತು  ಬಸ್‌ನ  ಮಾಲಕನ ಮಗ ಶರೀಕ್ ಎಂಬುವವರು ಇಳಿದು ಬಂದು ಪಿರ್ಯಾದಿದಾರರ ಮತ್ತು  ಶೈಲೇಶ್‌‌‌ ರವರ ಬಳಿ ಬಂದು ನಮ್ಮ ಬಸ್ಸಿಗೆ  ಬರುವ ಜನರನ್ನು ನೀನು  ಯಾಕೆ ಪಿಕಪ್‌‌ ಮಾಡುತ್ತಿ?  ಎಂದು ಹೇಳಿ, ಪಿರ್ಯಾದಿದಾರನ್ನು ಅಡ್ಡಗಟ್ಟಿ ನಿಲ್ಲಿಸಿ ಅವ್ಯಾಚ್ಯ ಶಬ್ದದಿಂದ ಬೈದು ಕೈಯಿಂದ ಕೆನ್ನೆಗೆ ಹೊಡೆದಿರುತ್ತಾರೆ. ಶೈಲೇಶ್, ನಾಸಿರುದ್ದೀನ್ ಹಾಗೂ ಸಾರ್ವಜನಿಕರು ಗಲಾಟೆ ಬಿಡಿಸಲು ಬಂದಾಗ ಆರೋಪಿಗಳು  KA-20-AA-7199 ನೇ ಬಸ್‌ ಹತ್ತಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 111/2021 ಕಲಂ: 341, 323, 506, 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-09-2021 09:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080