ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಮಲ್ಪೆ: ದಿನಾಂಕ 06/09/2021 ರಂದು ಪಿರ್ಯಾದಿದಾರರಾದ ಈಶ್ವರ(45), ತಂದೆ: ಆನಂದ ಪುತ್ರನ್, ವಾಸ: 8 ನೇ  ಅಡ್ಡರಸ್ತೆ ಬಲರಾಮನಗರ  ವಢಬಾಂಡೇಶ್ವರ,ಮಲ್ಪೆ ಉಡುಪಿ ತಾಲೂಕು ಇವರು ಮಲ್ಪೆ ಬಂದರಿನಲ್ಲಿ ಕೆಲಸ ಮುಗಿಸಿ ರಾತ್ರಿ  09:50 ಗಂಟೆಗೆ ಮೋಟಾರು ಸೈಕಲ್ ನಲ್ಲಿ ಬರುತ್ತಿರುವಾಗ ಮಲ್ಪೆ ಅಂಚೆ ಕಚೇರಿಯಿಂದ ಸ್ವಲ್ಪ ಮುಂದೆ ಮತ್ಸ್ಯಾ ಮೇರಿನ್  ಐಸ್ ಪ್ಲಾಂಟ್  ಬಳಿ ತಲುಪಿದಾಗ  ಓರ್ವ ಬೊಲೇರೋ ಟೆಂಪೋ ಚಾಲಕ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ  ವಾಹನವನ್ನು ಚಲಾಯಿಸಿಕೊಂಡು  ರಸ್ತೆಯ ತೀರ  ಎಡಬದಿಗೆ ಬಂದು  ರಸ್ತೆಯ ಬದಿಯಲ್ಲಿ ನಡೆದುಕೊಂಡು  ಹೋಗುತ್ತಿರುವ ಓರ್ವ ಗಂಡಸಿಗೆ ಢಿಕ್ಕಿ ಹೊಡೆದ ಪರಿಣಾಮ ಗಂಡಸು ರಸ್ತೆಗೆ ಬಿದ್ದು ತಲೆಗೆ ತೀವ್ರ ರಕ್ತಗಾಯವಾಗಿದ್ದು ಅಲ್ಲದೆ ಕೈ,ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ,  ಅಲ್ಲದೆ ಬೊಲೆರೋ ಪಿಕ್ ಅಪ್  ವಾಹನ ರಸ್ತೆಯ ಬಲ ಬದಿಗೆ ಇರುವ ಮತ್ಸ್ಯಾ ಮೇರಿನ್ ಐಸ್ ಪ್ಲಾಂಟ್  ಕಂಪೌಂಡ್ ಗೋಡೆಗೆ  ಡಿಕ್ಕಿ ಹೊಡೆದು ನಿಂತಿದ್ದು  ಬೊಲೆರೋ ವಾಹನದ ನಂಬ್ರ KA-20-D-0429 ಆಗಿದ್ದು ,ವಾಹನದ ಚಾಲಕನ ಹೆಸರು ಕೇಳಲಾಗಿ  ಮುರ್ತುಜ ಸಾಬ್ ಬಲಕುಂದಿ ಎಂದು ತಿಳಿಸಿರುತ್ತಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ರಸ್ತೆಯಲ್ಲಿ  ಬಿದ್ದಿದ್ದ ಗಂಡಸನ್ನು ಪಿರ್ಯಾದಿದಾರರು ಉಪಚರಿಸಿದ್ದು, ಪಿರ್ಯಾದಿದಾರರ ಪರಿಚಯದ ಸುಮಾರು 70 ವರ್ಷ ಪ್ರಾಯದ ಯದುವೀರ ಎಂಬುವವರಾಗಿದ್ದು ,ಅವರನ್ನು  ಚಿಕಿತ್ಸೆಯ ಬಗ್ಗೆ  ಉಡುಪಿ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು ರಾತ್ರಿ10:15 ಗಂಟೆಗೆ ಈಗಾಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 103/2021 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಮಲ್ಪೆ: ಪಿರ್ಯಾದಿದಾರರಾದ ನಿಹಾರ್ (22), ತಂದೆ: ಹರೀಶ ಮೆಂಡನ್, ವಾಸ: ಗಜನೆ ಹೌಸ್,  ಪತ್ರೋಡಿ ಉದ್ಯಾವರ ಇವರ ತಂದೆ ಹರೀಶ ಮೆಂಡನ್ (50) ರವರು ಮಲ್ಪೆ ಬಂದರಿನಲ್ಲಿ ಟೆಂಪೋ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು , ಅವರು KA-20-B-9760 ನೇ ಟೆಂಪೊದಲ್ಲಿ ಬಾಡಿಗೆ ಮಾಡಿಕೊಂಡಿದ್ದು, ದಿನಾಂಕ 06/09/2021 ರಂದು  ಮಧ್ಯಾಹ್ನ  ಕಲ್ಮಾಡಿಯ ತನ್ನ ಮನೆಯಿಂದ  ಮಲ್ಪೆ ಕಡೆಗೆ  ಹೋಗುತ್ತಿರುವಾಗ 3:50 ಗಂಟೆಗೆ ಮಲ್ಪೆ ರೋಯಲ್ ಬಾರ್ ಹತ್ತಿರ ಮಲ್ಪೆ ಕಡೆಯಿಂದ ಒಂದು ಇನ್ಸುಲೇಟರ್ ಲಾರಿ  TN-55-AT-5964  ನೇ ದನ್ನು ಅದರ ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆಯ ತೀರ ಬಲಬದಿಗೆ ಬಂದು  ಹರೀಶ ಮೆಂಡನ್ ರವರ ಟೆಂಪೋ ಗೆ ಢಿಕ್ಕಿ ಹೊಡೆದ ಪರಿಣಾಮ ಹರೀಶ ಮೆಂಡನ್ ರವರಿಗೆ ಬಲಬದಿಯ ಸೊಂಟದಲ್ಲಿ ತೀವ್ರ ಒಳಜಖಂ  ಹಾಗೂ ಬಲಕಾಲಿನ ಮೊಣಗಂಟಿನ ಕೆಳಗೆ  ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು  ಪಿರ್ಯಾದಿದಾರರು  ಹಾಗೂ ಯತೀಶ ಎಂಬುವವರು  ಚಿಕಿತ್ಸೆಯ ಬಗ್ಗೆ ಆದರ್ಶ ಆಸ್ಪತ್ರೆ ಗೆ  ಕ್ರೆದುಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ: 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಶಂಕರನಾರಾಯಣ: ದಿನಾಂಕ  06/09/2021 ರಂದು 20:15 ಗಂಟೆಗೆ ಪಿರ್ಯಾದಿದಾರರಾದ ಶಾಂತರಾಮ (20), ತಂದೆ: ಶೇಖರ , ವಾಸ: ನಾಡೋಡಿ  ಕುಳ್ಳಂಬಳ್ಳಿ ಕೆರಾಡಿ ಗ್ರಾಮ ಬೈಂದೂರು ತಾಲೂಕು ಇವರು KA- 20-EU-7699  ನೇ  ನಂಬ್ರದ  ಮೋಟಾರ್  ಸೈಕಲ್‌‌ನಲ್ಲಿ   ಸಹ ಸವಾರರಾಗಿ   ಕುಳಿತುಕೊಂಡು  ಕುಂದಾಪುರ ತಾಲೂಕಿನ ಸಿದ್ದಾಪುರ  ಗ್ರಾಮದ  ಜನ್ಸಾಲೆ  ಮೇಲ್‌‌‌ಜೆಡ್ಡು  ಎಂಬಲ್ಲಿ   ಹೋಗುತ್ತಿರುವಾಗ  ಮೋಟಾರ್ ಸೈಕಲ್  ಸವಾರನು  ಅತೀ ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು   ಹೋಗುತ್ತಿರುವಾಗ  ಅಕಸ್ಮಾತ್ ಜಿಂಕೆ ಅಡ್ಡ ಬಂದ ಕಾರಣ  ಏಕಾಏಕೀ  ಮೋಟಾರ್ ಸೈಕಲ್‌ಗೆ ಬ್ರೇಕ್ ಹಾಕಿದ್ದು,  ಆಗ ಮೋಟಾರ ಸೈಕಲ್   ಆರೋಪಿಯ ನಿಯಂತ್ರಣ ತಪ್ಪಿ ರಸ್ತೆಯ  ಬದಿಯ  ಚರಂಡಿಗೆ  ಬಿದ್ದ  ಪರಿಣಾಮ  ಚರಂಡಿಗೆ  ಬಿದ್ದ ಆರೋಪಿ ಹಾಗೂ  ಪಿರ್ಯಾದಿದಾರರನ್ನು  ಚಿಕಿತ್ಸೆಯ  ಬಗ್ಗೆ  ಕುಂದಾಪುರ  ಚಿನ್ಮಯಿ ಆಸ್ಪತ್ರೆಗೆ   ಕರೆದುಕೊಂಡು ಹೋಗಿದ್ದು, ಅಲ್ಲಿ  ಪಿರ್ಯಾದಿದಾರರನ್ನು ಪರೀಕ್ಷಿಸಿದ ವೈಧ್ಯರು   ಎಡಕಾಲಿನ ಕೋಲು ಕಾಲಿಗೆ ಮೂಳೆ  ಮುರಿತದ  ಗಾಯವಾಗಿದೆ  ಎಂದು   ಹೇಳಿ  ಚಿಕಿತ್ಸೆ ನೀಡಿ ಒಳರೋಗಿಯಾಗಿ ದಾಖಲು  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಜ್ಯೋತಿ (32), ಗಂಡ: ಜಗದೀಶ,  ವಾಸ:.ದರ್ಖಾಸು ಮನೆ ಹೈಕಾಡಿ ಹಿಲಿಯಾಣ   ಉಡುಪಿ ಇವರಿಗೆ ದಿನಾಂಕ 27/11/2014  ರಂದು  ಕುಂದಾಪುರ ತಾಲೂಕಿನ  ಹಾಲಾಡಿ ಗ್ರಾಮದ ಮುಂಡಕೋಡು ದೇವಸ್ಥಾನದಲ್ಲಿ  ಆರೋಪಿ ಜಗದೀಶ ಎಲ್ (37), ತಂದೆ: ಲೋಕೊಜಿ ರಾವ್, ವಾಸ:  ನಂಬ್ರ  115   ಸಂತೆ ಮೈದಾನ  ರಸ್ತೆ  4 ನೇ  ಕ್ರಾಸ್  ಬೂತನಗುಡಿ  ಭದ್ರಾವತಿ ಇವರೊಂದಿಗೆ  ಮದುವೆ  ಆಗಿರುತ್ತದೆ. ಮದುವೆ ಪೂರ್ವದಲ್ಲಿ  ಆರೋಪಿಯು ಪಿರ್ಯಾದಿದಾರರ ಮನೆಯವರಲ್ಲಿ ಅವರ ವಾಸದ ಮನೆಯಾದ  ದರ್ಖಾಸ್ತು ಮನೆ  ಹೈಕಾಡಿ   ಹಿಲಿಯಾಣ ಗ್ರಾಮ  ಇಲ್ಲಿ  1  ಲಕ್ಷದ 10  ಸಾವಿರ  ರೂಪಾಯಿ  ಹಾಗೂ  15 ಪವನ್  ಚಿನ್ನಾಭರಣವನ್ನು ಕೇಳಿರುತ್ತಾನೆ.  ಈ  ಸಮಯ ಪಿರ್ಯಾದಿರರ  ಮನೆಯವರು  ಒಪ್ಪದೆ  ಇದ್ದಾಗ ಆರೋಪಿಯು ಮದುವೆ ಆಗಲು ನಿರಾಕರಿಸಿದಾಗ ಪಿರ್ಯಾದಿದಾರರ ಮನೆಯವರು ಒಪ್ಪಿ 1  ಲಕ್ಷದ 10  ಸಾವಿರ  ಹಣ  ಹಾಗೂ 12  ಪವನ್ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ನೀಡಿರುತ್ತಾರೆ. ಮದುವೆ ಆದ  ಬಳಿಕ  ಆರೋಪಿಯು  ಪಿರ್ಯಾದಿದಾರರನ್ನ ಆತನ ಮನೆಯಾದ  ಭದ್ರಾವತಿಗೆ  ಕರೆದುಕೊಂಡು  ಹೋಗಿರುತ್ತಾನೆ. ಅಲ್ಲಿ ಪಿರ್ಯಾದಿದಾರರಿಗೆ ಮಾನಸಿಕ  ಹಾಗೂ  ದೈಹಿಕ ಹಿಂಸೆ ನೀಡಿರುತ್ತಾನೆ,  ಅಲ್ಲದೆ ಮನೆಯಲ್ಲಿ  ಕೆಲಸ ಮಾಡಿದ್ದು ಸರಿ  ಇಲ್ಲ  ಎಂದು  ನಿಂದನೇ ಮಾಡಿ  ಕೈಯಿಂದ ಹಲ್ಲೆ ಮಾಡಿ  ಹೆಚ್ಚಿನ ವರದಕ್ಷಿಣೆ  ಹಣ  ತರುವಂತೆ ಮಾನಸಿಕ  ದೈಹಿಕ ಹಿಂಸೆ  ನೀಡಿರುತ್ತಾನೆ.    ದಿನಾಂಕ  19/01/2019 ರಂದು ಪಿರ್ಯಾದಿದಾರರು  ಅವರ  ತವರು ಮನೆಗೆ  ಬಂದಿದ್ದು, ಆ  ಬಳಿಕ   ಆರೋಪಿಯು ಅವರನ್ನು  ಕರೆದುಕೊಂಡು  ಹೋಗದೇ ಅವರೊಂದಿಗೆ  ಸಂಸಾರ  ಮಾಡದೆ  ಆತನೊಂದಿಗೆ ಬರುವುದಾದರೇ ಹೆಚ್ಚಿನ ವರದಕ್ಷಿಣೆ ಹಣ  ತೆಗೆದುಕೊಂಡು  ಬರುವಂತೆ ಹೇಳಿ  ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2021 ಕಲಂ:   498(A) 323,504, 506 ಐಪಿಸಿ ಮತ್ತು 3, 4 ಡಿ.ಪಿ ಆ್ಯಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-09-2021 05:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080