ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ


  • ಗಂಗೊಳ್ಳಿ: ಮೊಹಮ್ಮದ್ ಸೂಫಿರವರು ದಿನಾಂಕ 06/08/2022 ರಂದು ಮದ್ಯಾಹ್ನ ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಕ್ಲಾಸಿಕ್ ಹಾಲ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ಸರ್ವಿಸ್ ಸ್ಟೇಷನ್ ಹತ್ತಿರ ನಿಂತುಕೊಂಡಿರುವಾಗ  ಅಬ್ದುಲ್ ರಜಾಕ್ ಎಂಬವರು KA-19 EB-1517 ನೇ ಮೋಟಾರ್ ಸೈಕಲ್ ನ್ನು  ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು 13:15 ಗಂಟೆಗೆ ಸರ್ವಿಸ್ ಸ್ಟೇಷನ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಮುಳ್ಳಿಕಟ್ಟೆ ಕಡೆಯಿಂದ ಬೈಂದೂರು ಕಡೆಗೆ ನಿತೀಶ್ ಖಾರ್ವಿ ಎಂಬವರು KA-20 EQ-2911 ನೇ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ತ್ರಾಸಿ ಗ್ರಾಮದ ಕ್ಲಾಸಿಕ್ ಹಾಲ್ ಎದುರುಗಡೆ ಅಬ್ದುಲ್ ರಜಾಕ್ ರವರ ಮೋಟಾರ್ ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅಬ್ದುಲ್ ರಜಾಕ್ ರವರು ವಾಹನ ಸಮೇತ ರಸ್ತೆಗೆ ಬಿದ್ದು  ಎಡ ಕಾಲಿನ ಪಾದದ ಮೇಲ್ಭಾಗಕ್ಕೆ ತೀವ್ರ ಗಾಯವಾಗಿ ಬೆರಳು ಜಖಂ ಆಗಿರುತ್ತದೆ. ಗಾಯಗೊಂಡ ಅಬ್ದುಲ್ ರಜಾಕ್ ರವರನ್ನು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 72 /2022 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇಸ್ಪೀಟ್‌ ಜುಗಾರಿ ಪ್ರಕರಣ

  • ಕುಂದಾಪುರ: ಪ್ರಸಾದ್ ಕುಮಾರ್ ಪಿ.ಎಸ್.ಐ ಕುಂದಾಪುರ ಪೊಲೀಸ್ ಠಾಣೆ ಇವರು ದಿನಾಂಕ 06/08/2022 ರಂದು 13:00  ಗಂಟೆಗೆ ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರೀ ಪಾರ್ಕ್ ಬಳಿಯ ಇಂದಿರಾ ಕ್ಯಾಂಟೀನ್ ಹಿಂಬದಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಬಂದ ಖಚಿತ ವರ್ತಮಾನದಂತೆ ಪಂಚಾಯತ ದಾರರನ್ನು  ಬರಮಾಡಿಕೊಂಡು ಇಲಾಖಾ ವಾಹನ ನಂಬ್ರ ಕೆ.ಎ-20 ಜಿ-356  ನೇ ರಲ್ಲಿ ಸಿಬ್ಬಂದಿಯವರೊಂದಿಗೆ  13:30 ಗಂಟೆಗೆ ಠಾಣೆಯಿಂದ ಹೊರಟು 13:40 ಗಂಟೆಗೆ ಸ್ಥಳಕ್ಕೆ ತಲುಪಿ 6 ಜನರು ಗುಂಪಾಗಿ ಕುಳಿತು ಅಂದರ್ ಬಾಹರ್ ಅದೃಷ್ಟದ ಜುಗಾರಿ ಆಟವನ್ನು ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು 14:15 ಗಂಟೆಗೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಆಪಾದಿತರಾದ ಅಭಿಜೀತ್, ಸುಕೇಶ ಕೆ, ವಿಲಾಸ್ ಆಚಾರ್ಯ, ಶಶಾಂಕ ಶೆಟ್ಟಿ, ಸನತ್ ಕುಮಾರ ಶೆಟ್ಟಿ, ಸಚಿನ್ ಎಂಬುವವರನ್ನು ವಶಕ್ಕೆ ಪಡೆದು, ಇಸ್ಪೀಟ್ ಆಟಕ್ಕೆ ಬಳಸಿದ್ದ  52 ಇಸ್ಪೀಟು ಎಲೆಗಳು, ಹಳೆ ಪೇಪರ್, ಆಪಾದಿತರ ವಶದಲ್ಲಿದ್ದ 5050/-ರೂಪಾಯಿ ನಗದು ಹಣವನ್ನು ಪಂಚರ ಸಮಕ್ಷಮ ಸ್ವಾದೀನಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 83/2022 ಕಲಂ:  87  KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ಸದಾಶಿವ ಆರ್ ಗವರೋಜಿ ಪಿ.ಎಸ್.ಐ ಕುಂದಾಪುರ ಪೊಲೀಸ್ ಠಾಣೆ ಇವರು ದಿನಾಂಕ 06/08/2022 ರಂದು 15.00  ಗಂಟೆಗೆ  ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಟಿ.ಟಿ ರೋಡ್ ಎಂಬಲ್ಲಿ ನೀರಿನ ಟ್ಯಾಂಕ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಬಗ್ಗೆ ಬಂದ ಖಚಿತ ವರ್ತಮಾನದಂತೆ ಇಲಾಖಾ ವಾಹನ ನಂಬ್ರ ಕೆ.ಎ-20 ಜಿ-253  ನೇ ರಲ್ಲಿ ಸಿಬ್ಬಂದಿಯವರೊಂದಿಗೆ  13.30 ಗಂಟೆಗೆ ಠಾಣೆಯಿಂದ  ಹೊರಟು 13.40 ಗಂಟೆಗೆ ಸ್ಥಳಕ್ಕೆ ತಲುಪಿ 7 ಜನರು ಗುಂಪಾಗಿ ಕುಳಿತು ಅಂದರ್ ಬಾಹರ್ ಅದೃಷ್ಟದ ಜುಗಾರಿ ಆಟವನ್ನು ಆಡುತ್ತಿದ್ದುದನ್ನು ಖಚಿತಪಡಿಸಿಕೊಂಡು 16:15 ಗಂಟೆಗೆ ದಾಳಿ ನಡೆಸಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ಆಪಾದಿತರಾದ ವಿಶ್ವನಾಥ, ಗಣೇಶ ದೇವಾಡಿಗ, ರತ್ನಾಕರ, ಬೀರಪ್ಪ ಗೌಡರ್, ದೇವ, ಮಂಜುನಾಥ, ಶ್ರೀಕಾಂತ ಬ ಗೌಡರ್, ಎಂಬುವವರನ್ನು ವಶಕ್ಕೆ ಪಡೆದು, ಇಸ್ಪೀಟ್ ಆಟಕ್ಕೆ ಬಳಸಿದ್ದ  52 ಇಸ್ಪೀಟು ಎಲೆಗಳು, ಹಳೆ ಪೇಪರ್, ಆಪಾದಿತರ ವಶದಲ್ಲಿದ್ದ 5950/-ರೂಪಾಯಿ ನಗದು ಹಣವನ್ನು ಪಂಚರ ಸಮಕ್ಷಮ ಸ್ವಾದೀನಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 84/2022 ಕಲಂ:  87  KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಶೇಖ್ ಸಾಹಿಲ್, (26)  ತಂದೆ: ದಿ. ಅಸ್ಗರ್‌ಅಲಿ, ವಾಸ: ಶಿಫಾ ಮಂಜಿಲ್, ಅಡ್ವೆ, ನಂದಿಕೂರು ಅಂಚೆ ಮತ್ತು ಗ್ರಾಮ, ಕಾಪು ಇವರ ತಂಗಿ ಶಿಫಾ ಶೇಖ್ (25) ಹಾಗೂ ಬಾವ ರಿಯಾಜ್ (28) ಎಂಬುವವರು ಇಬ್ಬರೂ ಪ್ರೀತಿಸಿ 2 ವರ್ಷಗಳ ಹಿಂದೆ ಮದುವೆಯಾಗಿ, ಕಳೆದ ಒಂದು ವರ್ಷದಿಂದ ಕಾಪು ತಾಲೂಕು ನಂದಿಕೂರು ಗ್ರಾಮದ ಅಡ್ವೆಯಲ್ಲಿ ಪಿರ್ಯಾದಿದಾರರೊಂದಿಗೆ ವಾಸವಿದ್ದು, ರಿಯಾಜ್‌ನು ಉಚ್ಚಿಲದ ಕೋಳಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ.  ಅವರ ಎರಡೂವರೆ ತಿಂಗಳ ಹೆಣ್ಣು ಮಗುವು ಅನಾರೋಗ್ಯದಿಂದ ಒಂದು ತಿಂಗಳ ಹಿಂದೆ ಶಿವಮೊಗ್ಗದಲ್ಲಿ ಮೃತಪಟ್ಟಿದ್ದು, ಅಲ್ಲಿಯೇ ಅದರ ಅಂತ್ಯ ಸಂಸ್ಕಾರ ಮಾಡಿ ಬಂದಿರುತ್ತಾರೆ. ನಂತರ ದಿನಾಂಕ: 01/08/2022 ರಂದು ಪಿರ್ಯಾದಿದಾರರು ಕೆಲಸಕ್ಕೆಂದು  ಮನೆಯಿಂದ ಹೋಗಿದ್ದು, ಅವರ ತಂಗಿ ಶಿಫಾ ಶೇಖ್ ಮತ್ತು ಬಾವ ರಿಯಾಜ್ ರವರು ಸಂಜೆ 18:30 ಗಂಟೆಯ ವೇಳೆಗೆ ಮನೆಯಿಂದ ಯಾರಿಗೂ ಹೇಳದೇ ಹೋಗಿದ್ದು, ಈವರೆಗೂ ವಾಪಾಸ್ಸು ಬಂದಿರುವುದಿಲ್ಲ ಮತ್ತು ರಿಯಾಜ್‌ರವರ ಮೊಬೈಲ್ ನಂಬ್ರಕ್ಕೆ ಕರೆ ಮಾಡಿದಲ್ಲಿ ಸ್ವಿಚ್ ಆಫ್ ಬರುತ್ತಿದ್ದು, ನಂತರ ಸಂಬಂಧಿಕರ ಮನೆಗಳಲ್ಲಿ, ಪರಿಚಯದವರಲ್ಲಿ ವಿಚಾರಿಸಿ ಹುಡುಕಾಡಿದರೂ ಈವರೆಗೆ ಪತ್ತೆಯಾಗದೇ ಇರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 96/2022, ಕಲಂ: ಗಂಡಸು ಮತ್ತು ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಮಾನ್ಯ ಎ.ಸಿ.ಜೆ ಮತ್ತು ಜೆ.ಎಂ.ಎಫ್.ಸಿ ಕುಂದಾಪುರ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಫಿರ್ಯಾದಿದಾರರಾದ ರೆಹಾನ್ ಅಹಮ್ಮದ್ (38) ತಂದೆ: ಜಿ. ಮೊಹಮ್ಮದ್ ರಫೀಕ್, ವಾಸ: ರೆಹಾನ್ ಮಂಜಿಲ್, ರಾ.ಹೆ 66, ತ್ರಾಸಿ ಗ್ರಾಮ ಕುಂದಾಪುರ ಇವರಿಗೆ ಸುಮಾರು ಒಂದು ವರ್ಷದ ಹಿಂದೆ ಲತೇಶ್ ಸಂಜೀವ ಕುಂಬ್ಲೆ ಎಂಬವರ ಪರಿಚಯವಾಗಿದ್ದು ಆಪಾದಿತನು ಇವರ ಬಳಿ ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿರುವುದಾಗಿ ಅವರ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ತೋರಿಸಿದ್ದು ನಂತರ ಫಿರ್ಯಾದಿದಾರರ ಅಕ್ಕ ಶ್ರೀಮತಿ ಸಬೀನಾ ಅಖ್ತರ್ ರವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ 10,00,000 ರೂ ಹಣವನ್ನು ಕೇಳಿದ್ದು ರೆಹಾನ್ ಅಹಮ್ಮದ್ ರವರು ಹಣವನ್ನು ಬ್ಯಾಂಕ್ ಖಾತೆಯ ಮೂಲಕ ವರ್ಗಾವಣೆ ಮಾಡಿರುತ್ತಾರೆ. ಆಪಾದಿತನು ಇಲ್ಲಿ ತನಕ ಹೇಳಿದಂತೆ ಕೆಲಸ ಕೊಡಿಸಿಲ್ಲವೆಂದು  ಕೇಳಿಕೊಂಡಾಗ ರೂಪಾಯಿ 6,00,000/- ಹಣವನ್ನು ವಾಪಾಸು ನೀಡುವುದಾಗಿ ಹೆಚ್.ಡಿ.ಎಫ್.ಸಿ ಬ್ಯಾಂಕಿನ ಅವರ  ಖಾತೆಯ ಚೆಕ್ ನ್ನು  ನೀಡಿದ್ದು ಬ್ಯಾಂಕಿಗೆ ನಗದುಗೊಳಿಸಲು ನೀಡಿದಾಗ ಅವರ ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ವಾಪಾಸು ಬಂದಿರುತ್ತದೆ. ಆಪಾದಿತನು ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡಕೊಂಡು ಕೆಲಸ ಕೊಡಿಸದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 71/2022 ಕಲಂ: 417, 418,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-08-2022 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080