ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಕೃಷ್ಣ (39) ತಂದೆ: ರಾಜು ವಾಸ:  5-3-94 ಸಿ ಭಾಗ್ಯ ಮಂದಿರದ ಕಾಲೋನಿ ಡಯಾನ ಟಾಕೀಸನ ಹಿಂದುಗಡೆ, 76 ಬಡಗುಬೆಟ್ಟು ಇವರು ದಿನಾಂಕ 06/08/2021ರಂದು ಸಮಯ ಸುಮಾರು ಸಂಜೆ 4:30 ಗಂಟೆಗೆ ಶೇಷಗಿರಿ ನಾಯಕ್ ಎಂಬವರು KA-20-EL-2376 ಮೋಟಾರು ಸೈಕಲ್ ನ್ನು ಬೀಡಿನ ಗುಡ್ಡೆ ಕಡೆಯಿಂದ ಕುಕ್ಕಿಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬಂದು ಕೃಷ್ಣ ಇವರ ಮನೆಯ ಎದುರುಗಡೆ ಡಯಾನ ಟಾಕೀಸ್ ರೋಡ್ ನಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಮೋಟರು ಸೈಕಲ್ ನಿಯಂತ್ರಣ ತಪ್ಪಿ ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಕೈಗೆ ತರಚಿದ ಗಾಯವಾಗಿ ತಲೆಗೆ ಗಂಭಿರ ಗಾಯವಾಗಿ ಮಾತನಾಡದೇ ಇದ್ದವರನ್ನು ಚಿಕಿತ್ಸೆಗಾಗಿ ಉಡುಪಿ ಜಿಲ್ಲಾ ಆಸ್ತತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 47/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಶ್ರೀಕಾಂತ್ ನಾಯಕ್, (41) ತಂದೆ: ಪಾಂಡುರಂಗ ನಾಯಕ್, ವಾಸ: ಕರ್ವಾಲು, ಅಲೆವೂರು ಗ್ರಾಮ, ಉಡುಪಿ ಇವರು ಕ್ಯಾಟರಿಂಗ್ ಹಾಗೂ ಕಟ್ಟಡ ಕಾಮಗಾರಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 06/08/2021 ರಂದು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಟೋಲ್‌ಗಡಿ ಭಾಗದಲ್ಲಿ ಸಚಿವರನ್ನು ಸ್ವಾಗತಿಸುವ ಕಾರ್ಯಕ್ರಮಕ್ಕೆಂದು ಬಂದಿರುವ ಸಮಯ 11:00 ಗಂಟೆಗೆ ಸಚಿವರು ಬಂದಾಗ, ಸದ್ರಿ ಸ್ಥಳದಲ್ಲಿ ವಿಪರೀತ ನೂಕು ನುಗ್ಗಲು ಉಂಟಾಗಿದ್ದು, ಆ ಸಮಯ ಯಾರೋ ಕಳ್ಳರು ಇವರ ಪ್ಯಾಂಟಿನ ಎಡ ಕಿಸೆಯಲ್ಲಿ ಇರಿಸಿದ್ದ ರೂಪಾಯಿ 48,000/- ಹಣವನ್ನು ಕಳವು ಮಾಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ  06/08/2021 ರಂದು ಕಾರ್ಕಳ ತಾಲೂಕಿನ ಬೆಳ್ಮಣ್‌ಗ್ರಾಮದ ಬೆಳ್ಮಣ್ ಬಸ್ ನಿಲ್ದಾಣದ ಬಳಿ ಸಚಿವರಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಪಿರ್ಯಾದಿದಾರರಾದ ದಯಾನಂದ ಶೆಟ್ಟಿ ತಂದೆ: ರಾಮ ಶೆಟ್ಟಿ  ವಾಸ: ವನಿತಾ ನಿವಾಸ, ಬೊರ್ಗಲ್ ಗುಡ್ಡೆ  ನಿಟ್ಟೆ ಗ್ರಾಮ, ಕಾರ್ಕಳ ಇವರು ಬೆಳಿಗ್ಗೆ 11:00 ಗಂಟೆಗೆ ಸದ್ರಿ ಕಾರ್ಯಕ್ರಮಕ್ಕೆ ಹೋಗಿದ್ದು, ಕಾರ್ಯಕ್ರಮದಲ್ಲಿ ಹಲವಾರು ಸಾರ್ವಜಕನಿಕರು ಭಾಗವಹಿಸಿದ್ದು ಮದ್ಯಾಹ್ನ 1:00 ಗಂಟೆಗೆ ಮುಕ್ತಾಯಗೊಂಡಿರುತ್ತದೆ ದಯಾನಂದ ಶೆಟ್ಟಿ ರವರು ಕಾರ್ಯಕ್ರಮ ಮುಗಿಸಿ ಮನೆಗೆ ಹೊರಡುವ ಸಮಯ ತಮ್ಮ ಪ್ಯಾಂಟ್ ನ ಕೀಸೆಯನ್ನು ನೋಡಿದಾಗ ಅವರ ಕೀಸೆಯಲ್ಲಿದ್ದ ಕಂದು ಬಣ್ಣದ ಪರ್ಸ್ ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಸದ್ರಿ ಪರ್ಸ್ ನಲ್ಲಿ 500 ರೂ ಮುಖ ಬೆಲೆಯ  7 ನೋಟುಗಳು, 100 ರೂ ಮುಖ ಬೆಲೆಯ 5 ನೋಟುಗಳು ಸೇರಿ ಒಟ್ಟು 4,000 ರೂ ಹಾಗೂ ದಯಾನಂದ ಶೆಟ್ಟಿ ಇವರ ಪತ್ನಿ ಶ್ಯಾಮಲರವರ  ಕೆನರಾ ಬ್ಯಾಂಕ್ ನ ಎ ಟಿ ಎಂ ಕಾರ್ಡ್  ಇದ್ದು, ಯಾರೋ ಕಳ್ಳರು  ಅಭಿನಂದನಾ ಕಾರ್ಯಕ್ರಮದಲ್ಲಿ ದಯಾನಂದ ಶೆಟ್ಟಿ ರವರು ಭಾಗವಹಿಸಿದ ಸಮಯ ಇವರ  ಪ್ಯಾಂಟ್ ನ ಕೀಸೆಗೆ ಕೈ ಹಾಕಿ ಪರ್ಸ್ ನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 95/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಪ್ರಮೋದ್ ಕುಮಾರ್ (53) ತಂದೆ: ವೆಂಕಪ್ಪ ಸುವರ್ಣ, ವಾಸ:  ಗುರುಜ್ಯೋತಿ  ಬಾಪುತೋಟ, ಮಲ್ಪೆ ,ಕೊಡವೂರು ಗ್ರಾಮ ಉಡುಪಿ ಇವರು ಮಲ್ಪೆಯಲ್ಲಿ ಸಿದ್ದಿವಿನಾಯಕ ಬೋಟನ್ನು ಹೊಂದಿದ್ದು, ಸದ್ರಿ ಬೋಟಿನಲ್ಲಿ  ಇತರ ಕೆಲಸಗಾರರೊಂದಿಗೆ ರವೀಂದ್ರನಾಥನ್ (47) ರವರು ಕೆಲಸ ಮಾಡಿಕೊಂಡಿದ್ದು  ದಿನಾಂಕ 07/08/2021 ರಂದು ಮಲ್ಪೆ ಬಾಪುತೋಟ ಧಕ್ಕೆ ಯಲ್ಲಿ ಬೋಟಿನಲ್ಲಿ ಕೆಲಸ ಮಾಡುತ್ತಿರುವಾಗ ಬೆಳಿಗ್ಗೆ ಸುಮಾರು 11:00 ಗಂಟೆ ಸಮಯಕ್ಕೆ ರವಿಂದ್ರನಾಥನ್ ಆಕಸ್ಮಿಕವಾಗಿ ಬೋಟಿನಿಂದ  ಕಾಲು ಜಾರಿ  ಧಕ್ಕೆಯ ನೀರಿಗೆ  ಬಿದ್ದಿದ್ದು,   ಪ್ರಮೋದ್ ಕುಮಾರ್ ರವರು ಹಾಗೂ ಇತರರು  ಹುಡುಕಾಡಿದರೂ ಸಿಗದೇ ಇದ್ದು, ನಂತರ ಸುಮಾರು 14:00 ಗಂಟೆಯ ಸಮಯಕ್ಕೆ  ರವೀಂದ್ರನಾಥನ್ ಇವರ ಮೃತ ದೇಹವು ನೀರಿನಿಂದ  ಮೇಲಕ್ಕೆ  ಬಂದಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 37/2021 ಕಲಂ: 174 ಸಿ.ಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಫಿರ್ಯಾದಿದಾರರಾದ ಉತ್ತಮ ಕುಲಾಲ್ (23) ತಂದೆ,ಅಪ್ಪು  ಕುಲಾಲ್ ವಾಸ, ಮಕ್ಕಿ ಮನೆ ಹಿಲಿಯಾಣ ಗ್ರಾಮ ಬ್ರಹ್ಮಾವರ ಇವರ ತಂದೆ ಅಪ್ಪು ಕುಲಾಲ್ (58) ಇವರು  ಸುಮಾರು ವರ್ಷದಿಂದ   ಹೃದಯ ಸಂಬಂಧಿ ಕಾಯಿಲೆಯಿಂದ ಹಾಗೂ ಬೆನ್ನು ನೋವಿನಿಂದ ಬಳಲುತ್ತಿದ್ದರು, ಹಾಗೂ  ಈಗ ಸುಮಾರು  1  ತಿಂಗಳ  ಹಿಂದೆ  ಅವರ  ಹೆಂಡತಿಯ ಮನೆಯ ಜಾಗದ  ವಿಷಯದಲ್ಲಿ  ತಕರಾರು  ಆಗಿ ಅವರು ಬಾಡಿಗೆ   ಮನೆಯಲ್ಲಿವಾಸವಾಗಿದ್ದು, ಈ  ಬಗ್ಗೆ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/08/2021  ರಂದು  22;00  ಘಂಟೆಯಿಂದ ದಿನಾಂಕ 07/08/2021  ರಂದು  ಬೆಳಿಗ್ಗೆ  6;30 ಘಂಟೆಯ  ಮಧ್ಯದ ಅವಧಿಯಲ್ಲಿ ಬ್ರಹ್ಮಾವರ  ತಾಲೂಕಿನ ಹಿಲಿಯಾಣ ಗ್ರಾಮದ ಹಿಲಿಯಾಣ ಶಾಲೆಯ ಹಿಂಬದಿ ಇರುವ ಸುರೇಂದ್ರ ಶೆಟ್ಟಿ ಎಂಬುವರ ಹಾಡಿಯಲ್ಲಿ  ಇರುವ   ಆವರಣ  ಇಲ್ಲದ  ಗೋಡೆಗೆ  ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 27/2021 ಕಲಂ: 174 ಸಿ.ಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ಪಿರ್ಯಾಧಿದಾರರಾದ ನಿತಿನ್ ಕುಮಾರ್  (26)ತಂದೆ: ಜಯ ಮೂಲ್ಯ ವಾಸ: ನಿತ್ಯಾನಂದ ನಿವಾಸ, ಇಂದಿರಾನಗರ, ಮಲ್ಲಾರ್ , ಮಾಳ ಗ್ರಾಮ, ಕಾರ್ಕಳ ಇವರು 5 ವರ್ಷದಿಂದ ಅರಣ್ಯ ಇಲಾಖೆಯ ಮೂಡಬಿದ್ರೆ ವಲಯದ ಮಾಳ, ನಲ್ಲೂರು, ರೆಂಜಾಳ ದಲ್ಲಿ ಅರಣ್ಯ ವೀಕ್ಷಕನಾಗಿ ತಾತ್ಕಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿದ್ದು , ದಿನಾಂಕ 06/8/21 ರಂದು ಮಧ್ಯಾಹ್ನ  3:30 ಗಂಟೆಗೆ ನಲ್ಲೂರು ಗ್ರಾಮದ ಕರ್ಮರ್ ಕಟ್ಟೆ ಎಂಬಲ್ಲಿ ಕರ್ತವ್ಯದಲ್ಲಿದ್ದಾಗ  ಮಾಳದಿಂದ ಬಜಗೊಳಿ ಕಡೆಗೆ 407 ಈಚರ್ ವಾಹನವೊಂದು ಬರುತ್ತಿದ್ದು ನಿತಿನ್ ಕುಮಾರ್ ರವರು ಮರದ ಗಾಡಿಯೆಂದು ನಿಲ್ಲಿಸಿ ಪರಿಶೀಲಿಸಿದಾಗ ಖಾಲಿ ವಾಹನ ಆಗಿದ್ದು, ನಂತರ ಅವರು ಹೋಗಿರುತ್ತಾರೆ. ಇದೇ ದ್ವೇಷದಿಂದ ಸುರೇಂದ್ರ ಹೆಗ್ಡೆ ರವರು  ಸಂಜೆ 6:15 ಗಂಟೆಗೆ ನಿತಿನ್ ಕುಮಾರ್  ರವರ ಮೊಬೈಲ್ ಗೆ ಕರೆ ಮಾಡಿ  ಮುಡಾರು ಗ್ರಾಮದ ಸತ್ಯ ಸಾರಮಣಿ ದೈವಸ್ಥಾನದ ಬಳಿ ಬರುವಂತೆ ತಿಳಿಸಿದ್ದು ನಿತಿನ್ ಕುಮಾರ್ ರವರು ಅಲ್ಲಿಗೆ ಹೋದಾಗ ಓಮಿನಿ ಕಾರಿನಲ್ಲಿ ಇವರ ಪರಿಚಯದ ಸುರೇಂದ್ರ ಹೆಗ್ಡೆ ,ರಾಜೇಶ ಜೈನ್ ಹಾಗೂ ಪ್ರಾನ್ಸಿಸ್ ಇದ್ದು, ಈ ಪೈಕಿ ರಾಜೇಶನು ಏಕಾಏಕಿ ಕಾರಿನಿಂದ ಇಳಿದು ಬೆವರ್ಸಿ ರಂಡೆ ಮಗನೇ ನಮ್ಮ 407 ವಾಹನವನ್ನು ಅಡ್ಡ ಗಟ್ಟುತ್ತಿಯಾ ನೋಡಿಕೊಳ್ಳುತ್ತೇನೆ ಎಂದು ಹೇಳಿ ಕೈಯಿಂದ ಕೆನ್ನೆಗೆ ಹೊಡೆದು ಕೆಳಗೆ ಹಾಕಿ ಕಾಲಿನಿಂದ ತುಳಿದಿದ್ದು, ಸುರೇಂದ್ರ ಹೆಗ್ಡೆಯವರು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದು, ಪ್ರಾನ್ಸಿಸನು ಕೂಡ ಬೈದಿದ್ದು, ಅದೇ ಸಮಯಕ್ಕೆ ಜಯ ಪೂಜಾರಿ ಮತ್ತು ರೋಹಿತ್ ಎಂಬವರು ಅಲ್ಲಿಗೆ ಬಂದಿದ್ದು, ಬೈದಿದ್ದು ಜಯ ಪೂಜಾರಿ ತನ್ನ ಕೈಯಲ್ಲಿದ್ದ ಹೆಲ್ಮೆಟ್ ನಿಂದ ತಲೆಗೆ ಹೊಡೆದಿದ್ದು, ಬಳಿಕ ಆರೋಪಿಗಳು ಅಲ್ಲಿಂದ ಹೊರಟು ಹೋಗಿರುತ್ತಾರೆ. ನಿತಿನ್ ಕುಮಾರ್  ರವರು ತನ್ನ ಸ್ನೇಹಿತ ಸತೀಶನಿಗೆ ಕರೆ ಮಾಡಿದ್ದು, ಅವರು ಬಂದು ಇವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021143, 144, 147,148,504,323, 506,324 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-08-2021 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080