ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಮನೀಷ್‌ (23),  ತಂದೆ :  ಮಾಧವ,  ವಾಸ :  ಮಾತೃಛಾಯಾ ನಿಲಯ ತೆಂಕನಿಡಿಯೂರು ಉಡುಪಿ  ತಾಲ್ಲೂಕು  ಉಡುಪಿ ಜಿಲ್ಲೆ ಇವರು ದಿನಾಂಕ 06/07/2022 ರಂದು ತನ್ನ KA-20-AB- 4015 ನೇ ಟಾಟಾ ಏಸ್ ವಾಹನವನ್ನು  ಏಕಮುಖ ಸಂಚಾರ ರಾಷ್ಟ್ರೀಯ ಹೆದ್ದಾರಿ  66 ರಸ್ತೆಯ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಾಪುವಿನ ನಮ್ಮೂರು ಮಂದಾರ ಹೋಟೆಲ್‌ನ ಸ್ವಲ್ಪ ಮುಂದೆ ಹೋಗುತ್ತಿದ್ದಂತೆ ಪಿರ್ಯಾದಿದಾರರ ಎಡಬದಿಯಿಂದ TN-36-AW-7902 ನೇ ಲಾರಿಯ ಚಾಲಕ ಸತೀಶ ರವರು ಬೆಳಗ್ಗೆ 10:00 ಗಂಟೆಗೆ ತನ್ನ ಎದುರಿಗೆ ಹೋಗುತ್ತಿದ್ದ ಲಾರಿಯನ್ನು ಓವರ್‌ಟೆಕ್ ಮಾಡುವ ಉದ್ದೇಶದಿಂದ ಯಾವುದೇ ಸೂಚನೆಯನ್ನು ನೀಡದೇ ಒಮ್ಮೇಲೆ ಬಲಕ್ಕೆ ತಿರುಗಿಸಿದ ಪರಿಣಾಮ ಪಿರ್ಯಾದಿದಾರರು ಚಲಾಯಿಸುತ್ತಿದ್ದ KA-20-AB- 4015 ನೇ ಟಾಟಾ ಏಸ್‌ ವಾಹನದ ಎಡಬದಿಗೆ  ಲಾರಿಯ ಹಿಂದಿನ ಬಲಭಾಗವು ಢಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್‌ ವಾಹನದ ಎಡಬದಿ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ವಿಶು ಶೆಟ್ಟಿ (50), ತಂದೆ: ಗುಂಡು ಶೆಟ್ಟಿ, ವಾಸ: ಅಂಬಲಪಾಡಿ ಉಡುಪಿ ಇವರಿಗೆ ದಿನಾಂಕ 06/07/2022 ರಂದು ಮದ್ಯಾಹ್ನ 1:30 ಗಂಟೆಗೆ ಅವರ ಅಕ್ಕನ ಗಂಡ ಮಂಜಯ್ಯ ಎಂ ಶೆಟ್ಟಿರವರು ದೂರವಾಣಿ ಕರೆ ಮಾಡಿ, ತಾನು ತನ್ನ KA-22-Z- 6561ನೇ ಹೊಂಡ ಅಮೈಜ್ ಕಾರಿನಲ್ಲಿ ಪ್ರವೀಣ್ ಡಿ, ಕಾಮ್ಕರ್ ರವನ್ನು ಚಾಲಕರಾಗಿ ನೇಮಿಸಿಕೊಂಡು, ಹೆಂಡತಿ ರೀತಾ ಹಾಗೂ ಮಗ ವಿಶ್ವತ್ ನೊಂದಿಗೆ ಬೆಳಗಾಂನಿಂದ ಉಡುಪಿಗೆ ಬೆಳಿಗ್ಗೆ 8:15 ಗಂಟೆಗೆ ಹೊರಟು, ರಾಷ್ಟ್ರೀಯ ಹೆದ್ದಾರಿ 66 ರ ಮಾರ್ಗವಾಗಿ ಶಿರೂರು ಗ್ರಾಮದ ಶಿರೂರು ವೆಂಕಟರಮಣ ದೇವಸ್ಥಾನದ ಬಳಿ ಬರುತ್ತಿರುವಾಗ ಕಾರಿನ ಚಾಲಕನು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕಾರಿನ ನಿಯಂತ್ರಣ ತಪ್ಪಿ, ರಸ್ತೆಯ ಎಡಬದಿಯ ಹೊಂಡಕ್ಕೆ ಬಿದ್ದ ಪರಿಣಾಮ ಮಂಜಯ್ಯ ಶೆಟ್ಟಿಯವರ ಮುಖ ಹಾಗೂ ಕೈಕಾಲುಗಳಿಗೆ ರಕ್ತಗಾಯವಾಗಿದ್ದ, ರೀತಾರವರ ಎರಡೂ ಕಾಲುಗಳಿಗೆ ಒಳಜಖಂ, ವಿಶ್ವತ್ ನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಗಾಯಗೊಂಡವರು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರು ಅವರಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಬರುವಂತೆ ತಿಳಿಸಿದ ಮೇರೆಗೆ ಮಂಜಯ್ಯ ಶೆಟ್ಟಿ, ರೀತಾ ಹಾಗೂ ವಿಶ್ವತ್ ರವರು ಉಡುಪಿ ಹೈಟೆಕ್ ಆಸ್ಪತ್ರೆಗೆ ಹೋದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ, ಮಂಜಯ್ಯ ಶೆಟ್ಟಿ ಹಾಗೂ ವಿಶ್ವತ್ ರವರಿಗೆ ಹೊರರೋಗಿಯಾಗಿ ಚಿಕಿತ್ಸೆ ನೀಡಿದ್ದು, ರೀತಾರವರನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಅಪಘಾತದಿಂದ ಕಾರು ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2022 ಕಲಂ: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ವಿಜಯ ಪೂಜಾರಿ (38), ತಂದೆ: ಬೇಡು ಪೂಜಾರಿ, ವಾಸ: ನಾಗೂರು ಮನೆ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 06/07/2022 ರಂದು ಮನೆಯಲ್ಲಿರುವಾಗ ಶಿವರಾಮ ಪೂಜಾರಿಯವರು ಕರೆ ಮಾಡಿ ನಾರಾಯಣ ಮಡಿವಾಳರವರ ಮನೆಯಿಂದ ಸ್ವಲ್ಪ ಹಿಂದೆ ರೈಲ್ವೆ ಹಳಿಯ ಬದಿಯಲ್ಲಿ ಓರ್ವ ಅಪರಿಚಿತ ಗಂಡಸು ನಡೆದುಕೊಂಡು ಹೋಗುತ್ತಿರುವಾಗ ಮದ್ಯಾಹ್ನ 3:20 ಗಂಟೆಗೆ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿರುವ ಮತ್ಸ್ಯ ಗಂಧ ರೈಲು ಢಿಕ್ಕಿ ಹೊಡೆದಿದ್ದು, ಆತನ ತಲೆಗೆ ಬಲಕೈಗೆ, ಕಾಲುಗಳಿಗೆ ತೀವ್ರ ತರಹದ ಜಖಂ ಉಂಟಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಪಿರ್ಯಾದಿದಾರರ ಸ್ಥಳಕ್ಕೆ ತೆರಳಿ ಮೃತಶರೀರವನ್ನು ನೋಡಿದ್ದು, ಅದು ಅಪರಿಚಿತ ಗಂಡಸಿನದ್ದಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರಾದ ರವಿ (45), ತಂದೆ: ನಾರಾಯಣ ಕುಲಾಲ್ ವಾಸ: ಮತಾ ನಿಲಯ ಸಮೃದ್ದಿನಗರ ಮಣಿಪುರ ಅಂಚೆ ಮತ್ತು ಗ್ರಾಮ ಉಡುಪಿ ಜಿಲ್ಲೆ ಇವರ ಅಕ್ಕನ ಮಗ ಪುನೀತ್ (28) ಇವರು ತಾನು ವಾಸವಿದ್ದ ಮತಾ ನಿಲಯ ಸಮೃದ್ದಿ ನಗರ ಮಣಿಪುರ ಮನೆಯಿಂದ  ದಿನಾಂಕ 06/07/2022 ರಂದು ಬೆಳಿಗ್ಗೆ 09:00 ಗಂಟೆಗೆ ಕೆಲಸಕ್ಕೆಂದು ಹೋದವನು ವಾಪಾಸು ಮನೆಗೆ ಬಾರದೆ ಇದ್ದು ಪಿರ್ಯಾದಿದಾರರು ಕಾಣೆಯಾದ ಪುನೀತ್ ನ ಮಾಲಿಕ ಸಚಿನ್ ರವರ ಬಳಿ  ವಿಚಾರಿಸಲಾಗಿ ಆತನು ಕೆಲಸಕ್ಕೆ ಬಂದಿರುವುದಿಲ್ಲ ಎಂದು ತಿಳಿಸಿದ್ದು ಆತನ ಪತ್ತೆಗಾಗಿ ಹುಡುಕಾಡಲಾಗಿ ಪತ್ತೆಯಾಗದೆ ಇದ್ದು ಆತನ ಸ್ಕೂಟರ್ ಕಲ್ಮಂಜೆ ಸೇತುವೆ ಬಳಿ ನಿಂತಿರುವುದಾಗಿ ತಿಳಿಯಿತು ಪಿರ್ಯಾದಿದಾರು ತಮ್ಮ ಸಂಬಂದಿಕರೊಂದಿಗೆ ಹೋಗಿ ನೋಡಲಾಗಿ ಸ್ಕೂಟರ್ ಅಲ್ಲಿಯೇ ಇದ್ದು ಆತ ಯಾವುದೋ ಕಾರಣದಿಂದ ಸ್ಕೂಟರ್ ನ್ನು ನಿಲ್ಲಿಸಿ ಹೋಗಿ ಕಾಣೆಯಾಗಿರಬಹುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2022  ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.     

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಸುಮಲತಾ (45), ಗಂಡ: ದಿನಕರ, ವಾಸ: C/o ಜಗನ್ನಾಥ ಶೆಟ್ಟಿಗಾರ , ಪದವು, ನಕ್ರೆ ಅಂಚೆ, ಕಾರ್ಕಳ ತಾಲೂಕು ಇವರು 6 ತಿಂಗಳಿನಿಂದ ಉಡುಪಿ ಸಂದೀಪ ರೈಯವರ ಕೆಮಿಕಲ್ ತಯಾರಿಸುವ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 15/06/2022 ರಂದು ಸಂಜೆ 4:30 ಗಂಟೆಗೆ ಪಿರ್ಯಾದಿದಾರರೊಂದಿಗೆ ಕೆಲಸ ಮಾಡುತ್ತಿರುವ ಪೂರ್ಣಿಮಾರವರು ಕೆಮಿಕಲ್ ತಯಾರಿಸಲು ಹೇಳಿದ್ದು, ಕೆಮಿಕಲ್ ತಯಾರಿಸುವ ಸಮಯದಲ್ಲಿ ಕರಿಮಣಿ ಸರವನ್ನು ತೆಗೆದಿರಿಸಲು ನೆನಪಿಸಿದಂತೆ ಪಿರ್ಯಾದಿದಾರರು ಕರಿಮಣಿ ಸರವನ್ನು ಕರವಸ್ತ್ರದಲ್ಲಿ ಕಟ್ಟಿ ಬ್ಯಾಗಿನಲ್ಲಿಟ್ಟು ಕೆಲಸ ಮಾಡುತ್ತಿದ್ದು, ನಂತರ ಕೆಲಸ ಮುಗಿಸಿ ಸಂಜೆ 6:00 ಗಂಟೆಗೆ ಬ್ಯಾಗಿನಲ್ಲಿ ನೋಡಿದಾಗ ಬ್ಯಾಗಿನಲ್ಲಿಟ್ಟಿದ್ದ ಕರಿಮಣಿ ಸರ ಇಲ್ಲದೇ ಇದ್ದು, ಅದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಕರಿಮಣಿ ಸರದ  ಮೌಲ್ಯ ರೂಪಾಯಿ 1,44,700/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 110/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಅಶ್ಫಕ್ ಅಹ್ಮದ್ (59), ತಂದೆ: ದಿ. ಅಬ್ದುಲ್ ವಾಜೀದ್, ವಾಸ: ಶಮ ಕಾಂಪೌಂಡ್, ಹಿಮ್ಮುಂಜೆ ರಸ್ತೆ, ಬಂಗ್ಲೆಗುಡ್ಡೆ, ಕಸಬಾ ಗ್ರಾಮ, ಕಾರ್ಕಳ ತಾಲೂಕು  ಇವರು ಕಾರ್ಕಳ ತಾಲೂಕು ಕಸಬಾ ಗ್ರಾಮದ ಜೋಡುರಸ್ತೆಯಲ್ಲಿ ಸೂಪರ್ ಮಟನ್ ಸ್ಟಾಲ್ ಆಡು ಮತ್ತು ಕುರಿ ಮಾಂಸದ ಅಂಗಡಿಯನ್ನು 30 ವರ್ಷದಿಂದ ನಡೆಸಿಕೊಂಡಿದ್ದು, ಮಾಂಸ ಮಾಡಲು ಬೇಕಾದಂತಹ ಆಡು ಮತ್ತು ಕುರಿಗಳ ದೊಡ್ಡಿಯನ್ನು ಅಂಗಡಿಯ ಹತ್ತಿರದಲ್ಲಿ ಮಾಡಿದ್ದು, ಆ ದೊಡ್ಡಿಯಲ್ಲಿ ಒಟ್ಟು 24 ಆಡುಗಳು ಹಾಗೂ 6 ಕುರಿಗಳು ಇದ್ದು, ದಿನಾಂಕ 05/07/2022 ರಂದು ಅಂಗಡಿಯಲ್ಲಿ ಕೆಲಸ ಮುಗಿಸಿ ಸಂಜೆ 7:00 ಗಂಟೆಯ ಹೊತ್ತಿಗೆ ಅಂಗಡಿ ಬಂದ್ ಮಾಡಿ ಆಡುಗಳು ಹಾಗೂ ಕುರಿಗಳ ದೊಡ್ಡಿಗೆ ಬೀಗ ಹಾಕಿ ಹೋಗಿದ್ದು,  ದಿನಾಂಕ 06/07/2022 ರಂದು ಬೆಳಿಗ್ಗೆ  07:00 ಗಂಟೆಗೆ ಅಂಗಡಿ ಬಳಿ ಬಂದು ದೊಡ್ಡಿಯನ್ನು ನೋಡಿದಾಗ ದೊಡ್ಡಿಗೆ ಹಾಕಿದ ಬೀಗವನ್ನು ಒಡೆದು, ಬಾಗಿಲು ಒಡೆದಿರುತ್ತದೆ. ಪಿರ್ಯಾದಿದಾರರು ತಕ್ಷಣ ದೊಡ್ಡಿಯ ಒಳಗಡೆ ಹೋಗಿ ಆಡು ಮತ್ತು ಕುರಿಗಳನ್ನು ನೋಡಿದಾಗ 9 ಕಪ್ಪು ಬಣ್ಣದ ಆಡುಗಳನ್ನು  ಯಾರೋ ಕಳ್ಳರು ದೊಡ್ಡಿಯ ಬೀಗವನ್ನು ಮುರಿದು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಒಟ್ಟು ಕಳುವಾದ ಆಡುಗಳ ಮೌಲ್ಯ 1 ಲಕ್ಷದ 49 ಸಾವಿರ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2022 ಕಲಂ: 380, 457  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿದಾರರಾದ ಇಮ್ಯಾನುವೆಲ್ ಸ್ಟೀವನ್ (45), ತಂದೆ: ದಿ. ವಿಕ್ಟರ್ ರತ್ನಾಕರ್, ವಾಸ: ಕುದುರ ಹಾರ್ಡ್‌ವೇರ್‌ ಮೇಲೆ,ಕಲ್ಮಾಡಿ, ಕೊಡವೂರು ಗ್ರಾಮ,ಮಲ್ಪೆ,  ಉಡುಪಿ ತಾಲೂಕು ಇವರ ಮಾಲೀಕತ್ವದ ಹೋಂಡಾ ಶೈನ್ ಬೈಕ್  ನಂಬ್ರ KA-20-EV-7554 (Chassis No: ME4JC852HLG067217, Engine No: JC85EG0110101) ನೇದನ್ನು ಪಿರ್ಯಾದಿದಾರರು ಕೆಲಸದ ಸಲುವಾಗಿ ದಿನಾಂಕ 04/07/2022 ರಂದು ಬೆಳಿಗ್ಗೆ 06:20 ಗಂಟೆಯ ಸಮಯಕ್ಕೆ ಶ್ರೀದೇವಿ ಕಾಂಪ್ಲೆಕ್ಸ್ ಎದುರು ಪಂದುಬೆಟ್ಟು ವಿನಲ್ಲಿ ನಿಲ್ಲಿಸಿದ್ದು, ಪಿರ್ಯಾದಿದಾರರು ಅದೇ ದಿನ ಸಂಜೆ 5:45 ಗಂಟೆಯ ಸಮಯಕ್ಕೆ ಬಂದು ನೋಡಲಾಗಿ, ಬೈಕ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು ಕಳವಾದ ಸ್ಕೂಟರ್‌ ನ ಮೌಲ್ಯ ರೂಪಾಯಿ 1,00,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 109/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 12/06/2022 ರಂದು ಬೆಳಿಗ್ಗೆ 06:10 ಗಂಟೆಗೆ ಪಿರ್ಯಾದಿದಾರರಾದ ರಾಜೇಶ (27), ತಂದೆ: ನರಸಿಂಹ ಪೂಜಾರಿ,      ವಿಳಾಸ: 5-77, ಬೆಳ್ಳಿಬೆಟ್ಟು ಮನೆ,ಪಿಲಾರ್‌ ಪೋಸ್ಟ್‌, ಎಲ್ಲೂರು ಗ್ರಾಮ, ಉಡುಪಿ ಇವರು KA-20-EV-4233 ನೇ ಬಜಾಜ್ ಪಲ್ಸರ್ NS 200 ಮೋಟಾರ್ ಸೈಕಲ್ ನ್ನು ಮಣಿಪಾಲದ ಭಾರತ್ ಪೆಟ್ರೋಲಿಯಂ ಪೆಟ್ರೋಲ್ ಪಂಪ್ ಬಳಿ ಪಾರ್ಕ್ ಮಾಡಿ ಕೆಲಸದ ಬಗ್ಗೆ ತೆರಳಿದ್ದು ಅದೇ ದಿನ ಸಂಜೆ 07:30 ಗಂಟೆಗೆ ನೋಡಿದಾಗ ಪಾರ್ಕ್ ಮಾಡಿದ ಪಿರ್ಯಾದಿದಾರರ ಮೋಟಾರ್ ಸೈಕಲ್  ಕಾಣದೆ ಇದ್ದು ಮೋಟಾರ್ ಸೈಕಲ್ ನ್ನು ದಿನಾಂಕ 12/06/2022 ರಿಂದ ಬೆಳಿಗ್ಗೆ 06:30 ಗಂಟೆಯಿಂದ ಸಂಜೆ 07:30 ಗಂಟೆಯ ಮದ್ಯಾವಧಿಯಲ್ಲಿ  ಯಾರೋ ಕಳ್ಳರು ಕಳ್ಳತನ ಮಾಡಿರುವುದಾಗಿದೆ,  ಕಳವಾದ ಮೋಟಾರ್‌ ಸೈಕಲ್‌ನ ವಿವರ KA-20-EV-4233 ನೇ ಬಜಾಜ್‌ ಪಲ್ಸರ್‌ NS 200 ಮೋಟಾರ್‌ ಸೈಕಲ್‌ ಬಣ್ಣ:  Pearl Metalic‌, ಇಂಜಿನ್‌ ನಂಬರ್:‌JLXCLM51863, ಚಾಸಿಸ್‌ ನಂಬರ್:‌ MD2A36FX5LCM20241,  ಮೌಲ್ಯ 1,20,000/- ರೂಪಾಯಿ ಆಗಿರುತ್ತದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2022  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬೈಂದೂರು: ಪಿರ್ಯಾದಿದಾರರಾದ ಪ್ರಶಾಂತ (30), ತಂದೆ: ಅಣ್ಣಪ್ಪ ಕೊಠಾರಿ, ವಾಸ: ಅಂಗಡಿ ಮನೆ ಕಲ್ಸಂಕ ಬಿಜೂರು ಗ್ರಾಮ ಬೈಂದೂರು ತಾಲೂಕು ಇವರು ಉಪ್ಪುಂದ ಗ್ರಾಮದ ಮೂಡುಗಣಪತಿ ದೇವಸ್ಥಾನದ ಬಳಿ ಮೊಬೈಲ್ ಜೋನ್ ಎಂಬ ಅಂಗಡಿಯನ್ನು ಇಟ್ಟು ಕೊಂಡು ವ್ಯವಹಾರ ಮಾಡಿಕೊಂಡಿದ್ದು, ದಿನಾಂಕ 05/07/2022 ರಂದು ರಾತ್ರಿ 8:00 ಗಂಟೆಗೆ ಅಂಗಡಿಯ ಶೆಟರ್ ಬಾಗಿಲನ್ನು ಹಾಕಿ ಮನೆಗೆ ಹೋಗಿದ್ದು, ದಿನಾಂಕ 06/07/2022 ರ ಬೆಳಿಗ್ಗೆ 7:00 ಗಂಟೆಗೆ ಪಿರ್ಯಾದಿದಾರರ ತಮ್ಮನ ದೂರವಾಣಿ ಸಂಖ್ಯೆಗೆ ಪರಿಚಯದವರು ಕರೆ ಮಾಡಿ, ಪಿರ್ಯಾದಿದಾರರ ಅಂಗಡಿಯ ಶೆಟರ್ ನ್ನು ಒಡೆದು ಯಾರೋ ಕಳ್ಳರು ಒಳಹೋದಂತೆ ಕಂಡು ಬಂದಿರುವುದಾಗಿ ತಿಳಿಸಿದ ಮೇರೆಗೆ ಪಿರ್ಯಾದಿದಾರರು ಅಂಗಡಿ ಬಳಿ ಹೋಗಿ ನೋಡಿದಾಗ ಅವರ ಅಂಗಡಿಯ ಕಬ್ಬಿಣದ ಶೆಟರ್ ನ್ನು ಯಾರೋ ಕಳ್ಳರು ಒಡೆದು, ಅಂಗಡಿಯ ಒಳಗೆ ಹೋಗಿ ಅಂಗಡಿಯಲ್ಲಿ ಇಟ್ಟಿದ್ದ ನಗದು 3500/-ರೂಪಾಯಿ, 25,000/- ರೂಪಾಯಿ ಬೆಲೆಬಾಳುವ 17 ಕೀ ಪ್ಯಾಡ್ ಮೊಬೈಲ್ ಪೋನ್ ಗಳು ಹಾಗೂ 5,000/- ರೂಪಾಯಿ ಮೌಲ್ಯದ ಮೊಬೈಲ್ ಗೆ ಉಪಯೋಗಿಸುವ ಪವರ್ ಬ್ಯಾಂಕ್ ಹಾಗೂ ಬ್ಲೂಟೂತ್ ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ವಸ್ತುವಿನ ಒಟ್ಟು ಮೌಲ್ಯ ರೂಪಾಯಿ 33,500/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 137/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗೃತಾ ಕ್ರಮ ಕೈಗೊಳ್ಳುವಂತೆ ದಿನಾಂಕ 05/07/2022 ರಂದು ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ಅಂಗನವಾಡಿ ಸರಕಾರಿ/ಖಾಸಗಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ಅಪರ ಜಿಲ್ಲಾಧಿಕಾರಿ ಉಡುಪಿ ಇವರು ರಜೆ ಘೋಷಿಸಿ, ದಿನಾಂಕ 04/07/2022 ರಂದು ಸಂಜೆ 6:40 ಕ್ಕೆ ಆದೇಶ ಹೊರಡಿಸಿರುತ್ತಾರೆ. ಆದರೆ ಅದೇ ದಿನ ಸಂಜೆ ಯಾರೋ ಕೆಲವು ಕಿಡಿಗೇಡಿಗಳು ಈ ಹಿಂದೆ ದಿನಾಂಕ 30/06/2022 ರಂದು ಮಾನ್ಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಜಿಲ್ಲೆಯಲ್ಲಿ ಹೆಚ್ಚಿನ ಮಳೆಯ ಕಾರಣ ದಿನಾಂಕ 01/07/2022 ರಂದು ರಜೆ ಘೋಷಿಸಿದ್ದ ರಜೆ ಆದೇಶದ ಪ್ರತಿಯಲ್ಲಿನ ದಿನಾಂಕವನ್ನು ದಿನಾಂಕ 05/07/2022 ರಂದು ಜಿಲ್ಲೆಯಾಧ್ಯಂತ ರಜೆ ಘೋಷಿಸಲಾಗಿದೆ ಎಂದು ತಿದ್ದುಪಡಿಸಿ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುತ್ತಾರೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ : 66(d) ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಸುನೀಲ್ ಟಿ. ಕುಲಾಲ್ (46), ತಂದೆ: ದಿವಂಗತ ತಿಮ್ಮಪ್ಪ ಕುಲಾಲ್, ವಾಸ: ಶರಣ್ಯ, ಎಂ.ಜಿ ರಸ್ತೆ, ಸಚ್ಚೇರಿಪೇಟೆ ಅಂಚೆ, ಮುಂಡ್ಕೂರು ಗ್ರಾಮ, ಕಾರ್ಕಳ ತಾಲೂಕು ಇವರಲ್ಲಿ ಅಪಾದಿತ ಸತೀಶ @  ಮುನ್ನ ಈತನು ಆಗ್ಗಾಗ್ಗೆ ಹಣವನ್ನು ಕೇಳಿ ಪಡೆಯುತ್ತಿದ್ದು, ದಿನಾಂಕ 05/07/2022 ರಂದು ಸಚ್ಚೇರಿ ಪೇಟೆಯಲ್ಲಿ ಹಣದ ವಿಚಾರದಲ್ಲಿ ಪಿರ್ಯಾದಿದಾರರು ಹಾಗೂ ಆಪಾದಿತ ಸತೀಶನಿಗೆ ಮಾತುಕತೆಯಾಗಿ ಅವರಿಬ್ಬರೂ ಕೈಗಳಿಂದ ಹೊಡೆದಾಡಿಕೊಂಡಿದ್ದು, ದಿನಾಂಕ 06/07/2022 ರಂದು ಬೆಳಿಗ್ಗೆ ಪಿರ್ಯಾದಿದಾರರು ಉಡುಪಿಗೆ ಹೋಗುವ ಬಗ್ಗೆ ಸಚ್ಚೇರಿಪೇಟೆ ಬಸ್ಸು ನಿಲ್ದಾಣದ ಬಳಿ ನಿಂತುಕೊಂಡಿರುವ ಸಮಯ ಅಲ್ಲಿಗೆ ಬಂದ ಅಪಾದಿತನು ಪಿರ್ಯಾದಿದಾರರಲ್ಲಿ ಕುಡಿಯಲು ಹಣ ಕೇಳಿದ್ದು ಪಿರ್ಯಾದಿದಾರರು ತನ್ನಲ್ಲಿ ಹಣವಿಲ್ಲ ಎಂದು ಹೇಳಿ ಬಸ್ ಹತ್ತಿ ಉಡುಪಿಗೆ ಹೋದವರು ಸಂಜೆ 6:00 ಗಂಟೆಗೆ ಉಡುಪಿಯಿಂದ ವಾಪಾಸು ಬಂದು ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆ ಬಸ್ಸು ನಿಲ್ದಾಣದಲ್ಲಿ ಬಸ್ಸಿನಿಂದ ಇಳಿದಾಗ ಅಲ್ಲಿಗೆ ಬಂದ ಅಪಾದಿತನು ಪಿರ್ಯಾದಿದಾರರಲ್ಲಿ ಹಣಕೊಡುವಂತೆ ಹೇಳಿದಾಗ, ಪಿರ್ಯಾದಿದಾರರು ತನ್ನಲ್ಲಿ ಹಣ ಇಲ್ಲವೆಂದು ಹೇಳಿದ್ದರಿಂದ ಕೋಪಗೊಂಡ ಅಪಾದಿತನು ದ್ವೇಷದಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಕೈಯ್ಯಲ್ಲಿದ್ದ ಚೂರಿಯಿಂದ ಅವರ ಬೆನ್ನಿಗೆ, ಎದೆಗೆ, ಎಡಕಿವಿಯ ಬಳಿ ಹಾಗೂ ಹಣೆಗೆ ಇರಿದು ರಕ್ತಗಾಯವನ್ನುಂಟು ಮಾಡಿದ್ದಲ್ಲದೆ,  ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2022 ಕಲಂ: 324, 504, 506, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 07-07-2022 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080