ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾಫು: ಪಿರ್ಯಾದಿದಾರರಾಧ ಗಣೇಶ್ (44) ತಂದೆ : ದಿ. ಕೃಷ್ಣ ಕಾಂಚನ್ ವಾಸ : ಜಿ.ಎನ್ ನಗರ 5 ನೇ ಕ್ರಾಸ್ ಕಟಪಾಡಿ ಕಾಪು ತಾಲೂಕು ಇವರು ದಿನಾಂಕ 06/07/2021 ರಂದು ತನ್ನ ಸ್ಕೂಟಿ ನಂಬ್ರ KA-20-EJ- 6517 ನೇದರಲ್ಲಿ ಸುರೇಶ್ ಪೂಜಾರಿ ಎಂಬಾತನನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಇವರ ಮನೆಯಿಂದ ಕನ್ನರ್ಪಾಡಿಯ ಜಯದುರ್ಗ ಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಸ್ಸು ಉದ್ಯಾವರ ಪೇಟೆ ಕಡೆ ಬರುವರೇ ಬಲಾಯಿಪಾದೆಯಿಂದ ಉದ್ಯಾವರ ಮೇಲ್ ಪೇಟೆಯಾಗಿ ಮಸೀದಿ ಬಳಿ ಸಮಯ ಸುಮಾರು 9:45 ಗಂಟೆಗೆ ತಲುಪುವಾಗ ಎದುರುಗಡೆಯಿಂದ ಅಂದರೆ ಉದ್ಯಾವರ ಪೇಟೆ ಕಡೆಯಿಂದ ಉದ್ಯಾವರ ಮೇಲ್ ಪೇಟೆ ಕಡೆ ಬರುವ ರಸ್ತೆಯಲ್ಲಿ KA-20-MC-686 ನೇ ಕಾರಿನ ಚಾಲಕಿ ಸಫಿಯ ಎಂಬವರು ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಗಣೇಶ ರವರು ಚಲಾಯಿಸಿಕೊಂಡು ಬರುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಹಾಗೂ ಸಹ ಸವಾರ ಸುರೇಶ್ ಪೂಜಾರಿ ಎಂಬುವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು,  ಪರಿಣಾಮ ಗಣೇಶ ರವರಿಗೆ ಸೊಂಟದ ಬಳಿ ಗುದ್ದಿದ ನೋವಾಗಿದ್ದು, ಸಹ ಸವಾರ ಸುರೇಶ್ ಪೂಜಾರಿ ಎಂಬುವರಿಗೆ ಬಲಕಾಲಿನ ಗಂಟಿನ ಬಳಿ ಗುದ್ದಿದ ಒಳ ಜಖಂ ಆಗಿದ್ದು ಈ ಬಗ್ಗೆ ಚಿಕಿತ್ಸೆಯ ಬಗ್ಗೆ ಉಡುಪಿಯ ನ್ಯೂ ಸಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 111/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ:ಪಿರ್ಯಾದಿದಾರರಾಧ ಗಣೇಶ್ ಶೆಟ್ಟಿ (53) ತಂದೆ: ರಾಮಣ್ಣ ಶೆಟ್ಟಿ, ವಾಸ: ಶ್ರೀ ಗಣೇಶ, ಹಾರಾಡಿ ಗ್ರಾಮ & ಅಂಚೆ, ಬ್ರಹ್ಮಾವರ ಇವರ ಹೆಂಡತಿಯಾದ ರೇವತಿ ಜಿ. ಶೆಟ್ಟಿ (40) ಎಂಬವರು ಮನೆವಾರ್ತೆ ಕೆಲಸ ಮಾಡಿಕೊಂಡಿದ್ದು ಅವರಿಗೆ ಸುಮಾರು 15 ವರ್ಷದ ಹಿಂದೆ ಮಾನಸಿಕ ಖಾಯಿಲೆ ಇದ್ದು, ಮಣಿಪಾಲ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ. ನಂತರ ಆರೋಗ್ಯವಾಗಿದ್ದು ಇತ್ತೀಚೆಗೆ ಎರಡು  ವರ್ಷಗಳಿಂದ ಪುನಃ ಮಾನಸಿಕ ಖಾಯಿಲೆ ಕಂಡು ಬಂದಿದ್ದು, ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಕೂಡ ರೇವತಿ ಜಿ. ಶೆಟ್ಟಿ ರವರು ಗುಣಮುಖರಾಗಿರುವುದಿಲ್ಲ. ಇದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಮನನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ 06/07/2021 ರಂದು ಸಂಜೆ 5:00 ಗಂಟೆಯಿಂದ ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಅಡುಗೆ ಕೋಣೆಯ ಸೀಲಿಂಗ್‌ ಫ್ಯಾನಿಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅಲ್ಲದೇ ರೇವತಿ ಜಿ. ಶೆಟ್ಟಿ ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 37/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕಾಫು: ತಿಮ್ಮೇಶ ಬಿ. ಎನ್. (ಅಪರಾಧ) ಪೊಲೀಸ್ ಉಪನಿರೀಕ್ಷಕರು ಕಾಪು ಪೊಲೀಸ್ ಠಾಣೆ ಇವರಿಗೆ ದಿನಾಂಕ 20/06/2021 ರಂದು ಸಮಯ ಸುಮಾರು 16:00 ಗಂಟೆಗೆ ಉಡುಪಿ ಜಿಲ್ಲೆಯ ಕಾಪು ತಾಲೂಕು ಏಣಗುಡ್ಡೆ ಗ್ರಾಮದ ಅಗ್ರಹಾರ ರಸ್ತೆಯ ಅಜ್ಗರ್‌ರವರ ಮನೆಯ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಇಲಾಖಾ ಹೊಯ್ಸಳ ವಾಹನ ನಂಬ್ರ ಕೆಎ-20-ಜಿ-353 ನೇದರಲ್ಲಿ ಹೊರಟು ಕಟಪಾಡಿ ತಲುಪಿ ಕಟಪಾಡಿ ಹೊರಠಾಣೆಯಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಯವರನ್ನು ಬರಮಾಡಿಕೊಂಡು ಮಾಹಿತಿ ಬಂದ ಸ್ಥಳದ ಸಮೀಪ ಹೋಗಿ ವಾಹನವನ್ನು ನಿಲ್ಲಿಸಿ ನೋಡಲಾಗಿ ಅಗ್ರಹಾರ ರಸ್ತೆಯ ಅಜ್ಗರ್‌ರವರ ಮನೆಯ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಮಾನ್ಯ ಕರ್ನಾಟಕ ಸರ್ಕಾರದ ಕೋವಿಡ್‌ಮತ್ತು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಕೋವಿಡ್‌ ನಿಯಮವನ್ನು ಉಲ್ಲಂಘಿಸಿ, ರೋಗ ಹರಡುವ ಬಗ್ಗೆ ತಿಳುವಳಿಕೆ ಇದ್ದರೂ ಸಹ ನಿರ್ಲಕ್ಷತನದಿಂದ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವುದನ್ನು ಖಚಿತ ಪಡಿಸಿಕೊಂಡು ಇವರು ಸಿಬ್ಬಂದಿಯವರೊಂದಿಗೆ 17:45 ಗಂಟೆಗೆ ದಾಳಿ ನಡೆಸಿ 07 ಜನರನ್ನು ಹಿಡಿದು ವಿಚಾರಿಸಲಾಗಿ 01) ಅಮೀನಪ್ಪ ತಳಗಿನಮನೆ 2) ವಿರೇಶ ಹಿರೆಮಠ 3) ವಿಶಾಲ ಪಾತ್ರೋಟಿ 4) ಆನಂದ ಬಂಡಿವಡ್ಡರ್  5) ದಿವಾನ್ ಗುಡ್ಡಣನವರ್  6) ರಾಜು ಬಂಡಿವಡ್ಡರ್ 7) ರಾಮಪ್ಪ ಎಂದು ತಿಳಿಸಿದ್ದು ಆರೋಪಿಗಳನ್ನು ವಶಕ್ಕೆ ಪಡೆದು,  ಸ್ಥಳದಲ್ಲಿದ್ದ  ಆರೋಪಿಗಳು  ಇಸ್ಪೀಟ್ ಜೂಜಾಟಕ್ಕೆ ಬಳಸಿದ ನಗದು ರೂಪಾಯಿ 10,560/-, ರೂ. ಗಳು,  ಅಂದರ್ ಬಾಹರ್ ಆಟಕ್ಕೆ ಬಳಸಲಾದ 52 ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೆಯ ನ್ಯೂಸ್‌ಪೇಪರ್‌, ಸದ್ರಿ ಸೊತ್ತುಗಳನ್ನು ಮಹಜರ್ ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಅಲ್ಲದೇ ಆರೋಪಿಗಳು ರಾಜ್ಯ ಸರಕಾರದ ಕೋವಿಡ್-19 ನಿಯಮವನ್ನು ಉಲ್ಲಂಘಿಸಿ ಇಸ್ಪೀಟ್ ಜುಗಾರಿ ಆಟದಲ್ಲಿ  ಭಾಗಿಯಾಗಿರುವುದರಿಂದ ಅವರುಗಳ ವಿರುದ್ಧ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 113/2021 ಕಲಂ: 87 KP ACT &  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾಪು: ಪಿರ್ಯಾದಿದಾರರಾಧ ಸಂತೋಷ್ ಕರ್ಕೇರ (43) ತಂದೆ:ದಿ.ಸುಂದರ ಪೂಜಾರಿ ವಾಸ:ಸುಂದರ ನಿವಾಸ ಕೈಪುಂಜಾಲು ಉಳಿಯಾರಗೋಳಿ ಗ್ರಾಮ ಕಾಪು ಇವರು ಕಾಪುವಿನಲ್ಲಿ ಆಟೋ ಚಲಾಯಿಸಿಕೊಂಡಿದ್ದು,  ದಿನಾಂಕ 06/07/2021 ರಂದು ಇವರು ಕಾಫು ಪೇಟೆಯಲ್ಲಿ ಇರುವಾಗ ಇವರ ತಾಯಿ ಬೇಬಿ ರವರು ನೆರೆಮನೆಯ ವಸಂತ ಎಂಬವರ ಮೊಬೈಲ್‌‌ಪೋನ್‌‌ನಿಂದ ಇವರಿಗೆ ಕರೆ ಮಾಡಿ ನಿನ್ನ ಅಣ್ಣ ರವಿಯೊಂದಿಗೆ ಅಣ್ಣ ಹರೀಶನು ಗಲಾಟೆ ಮಾಡಿ ರವಿಗೆ ಮರದ ಸೋಂಟೆಯಿಂದ ಆತನ ತಲೆಗೆ ಹೊಡೆದಿದ್ದು ಪರಿಣಾಮ ರವಿ ವಿಪರೀತ ರಕ್ತ ಸ್ರಾವವಾಗಿ ಮನೆಯ ಅಡುಗೆ ಕೋಣೆಯಲ್ಲಿ ಬಿದ್ದುಕೊಂಡಿದ್ದು ಕೂಡಲೇ ಬರುವಂತೆ ತಿಳಿಸಿದ್ದು ಅದರಂತೆ ಸಂತೋಷ್ ಕರ್ಕೇರ ರವರು ಕೂಡಲೇ ಹೊರಟು ಮನೆಗೆ ಬಂದು ನೋಡಲಾಗಿ ಅಣ್ಣ ರವಿಯು ತಲೆಗೆ ವಿಪರೀತ ಗಾಯಗೊಂಡು ಮನೆಯ ಅಡುಗೆ ಕೋಣೆಯಲ್ಲಿ ಬಿದ್ದುಕೊಂಡಿದ್ದು ಈ ಬಗ್ಗೆ ತಾಯಿ ಬೇಬಿಯವರಲ್ಲಿ ವಿಚಾರಿಸಲಾಗಿ ಅವರು ಹರೀಶನು ಜಾಗದ ವಿಚಾರದಲ್ಲಿ ರವಿಯೊಂದಿಗೆ ತಗಾದೆ ತೆಗೆದು ಮಧ್ಯಾಹ್ನ 2:00 ಗಂಟೆಗೆ ರವಿಯನ್ನು ಕೊಲ್ಲುವ ಉದ್ಧೇಶದಿಂದ ಮರದ ಸೋಂಟೆಯಿಂದ ಹೊಡೆದಿದ್ದು ರವಿಯು ಜೋರಾಗಿ ಬೊಬ್ಬೆ ಹೊಡೆದಾಗ ನೆರೆಕರೆಯ ನಿವಾಸಿ ವಸಂತ ಕರ್ಕೇರ, ಉಮೇಶ್ ಶೆಟ್ಟಿಗಾರ್‌‌ ಬೊಬ್ಬೆ ಕೇಳಿ ಮನೆಯ ಬಳಿ ಬಂದಾಗ ಹರೀಶನು ಮರದ ಸೋಂಟೆಯನ್ನು ಅಲ್ಲಿಯೇ ಬಿಸಾಡಿ ಓಡಿ ಹೋಗಿರುವುದಾಗಿ ತಿಳಿಸಿರುತ್ತಾರೆ. ಕೂಡಲೇ ರವಿಯನ್ನು ಒಂದು ಅಂಬ್ಯೂಲೆನ್ಸ್‌‌ನಲ್ಲಿ ಉಡುಪಿ ಅಜ್ಜರಕಾಡು ಸರಕಾರಿ  ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ವೈದ್ಯರು ರವಿಯನ್ನು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಅಣ್ಣ ರವಿ ಮತ್ತು ಹರೀಶರವರಿಗೆ ಜಾಗದ ವಿಚಾರದಲ್ಲಿ ತಕರಾರು ಇದ್ದು ಜಾಗವು ಅಣ್ಣ ಹರೀಶನಿಗೆ ಸಿಗಬೇಕೆಂಬ ಉದ್ಧೇಶದಿಂದ  ರವಿಯನ್ನು ಕೊಲ್ಲುವ ಉದ್ದೇಶದಿಂದ ಮರದ ತುಂಡಿನಿಂದ ತಲೆಗೆ ಹೊಡೆದಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 112/2021 ಕಲಂ: 324, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-07-2021 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080