ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಮಲ್ಪೆ: ದಿನಾಂಕ 06/07/2021 ರಂದು ರಾತ್ರಿ 10.45 ಗಂಟೆಗೆ ಪಿರ್ಯಾದಿ ರವಿರಾಜ ಇವರಿಗೆ ಮೂಡುತೋನ್ಸೆ ಗ್ರಾಮದ ನೇಜಾರಿನ ಬೀಟ್ ಸದಸ್ಯರವರು ಕರೆ ಮಾಡಿ ಒಬ್ಬ ಕಾರು ಚಾಲಕನು ತನ್ನ ಬಾಬ್ತು ಕಾರನ್ನು ನೇಜಾರಿನಿಂದ ನಿಡಂಬಳ್ಳಿ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು  ನಿಡಂಬಳ್ಳಿಗೆ ಹೋಗುವ ರಸ್ತೆಯಲ್ಲಿ ಮುದ್ದಣ್ಣ ಎಂಬವರ ಕಂಪೌಂಡ್ ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ, ಕಾರು ಚಾಲಕನು ಕಾರನ್ನು ಅಲ್ಲಿಯೇ ಬಿಟ್ಟು ಹೋಗಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು  ಆ ಸ್ಥಳಕ್ಕೆ ರಾತ್ರಿ 11.00 ಗಂಟೆಗೆ ಹೋಗಿದ್ದು ಆ ಸ್ಥಳದಲ್ಲಿ ಒಂದು ಕಾರು ಅಪಘಾತವಾಗಿ ನಿಂತಿದ್ದು ಅದರ ನಂಬ್ರ KA-20-MA-0675  TOYOTA  ETIOS  LIVA   ಆಗಿದ್ದು ಸದ್ರಿ ಕಾರು ರಸ್ತೆ ಬದಿಯ ಚರಂಡಿಯಲ್ಲಿ ಕಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಿಂತಿದ್ದು ಕಾರಿನ ಎದುರುಗಡೆಯ ಬಾಡಿಯು ಜಖಂ ಆಗಿರುತ್ತದೆ. ಈ ಅಪಘಾತಕ್ಕೆ KA-20-MA-0675  TOYOTA  ETIOS  LIVA  ಕಾರು ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ವರದಿ ನೀಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 84/2021  ಕಲಂ:  279 ಐಪಿಸಿ ಮತ್ತು 134(ಬಿ) ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೊಲ್ಲೂರು: ಪಿರ್ಯಾದಿ ಮೋಹನ ಇವರು  ದಿನಾಂಕ: 06-07-2021 ರಂದು  ಮಧ್ಯಾಹ್ನ 12:00 ಗಂಟೆಗೆ ತನ್ನ ಬಾಬ್ತು KA 20 EE 1117 ಯಮಹಾ ಜೆಡ್‌ ಸ್ಕೂಟರ್‌ನ್ನು  ಕೆಲಸದ ನಿಮಿತ್ತ ಚಿತ್ತೂರು ಕಡೆಯಿಂದ  ವಂಡ್ಸೆ ಕಡೆಗೆ ರಾಜ್ಯ  ಹೆದ್ದಾರಿ  27 ರಲ್ಲಿ  ರಸ್ತೆಯ  ಎಡ ಬದಿಯಿಂದ ನಿಧಾನವಾಗಿ  ಸವಾರಿ ಮಾಡಿಕೊಂಡು  ಹೋಗುತ್ತಾ ವಂಡ್ಸೆ ಗ್ರಾಮದ ನಂದಿಕೇಶ್ವರ ದೇವಸ್ಥಾನ ಬಳಿ ತಿರುವು ಇಳಿಜಾರು ರಸ್ತೆಯಲ್ಲಿ ತಲುಪಿದಾಗ ಪಿರ್ಯಾದುದಾರರ  ಮೋಟಾರು ಸೈಕಲ್‌  ಹಿಂದಿನಿಂದ  ಚಿತ್ತೂರು ಕಡೆಯಿಂದ  ವಂಡ್ಸೆ ಕಡೆಗೆ  KA 20 MD 1803 ನೇ ಕಾರನ್ನು ಅದರ ಚಾಲಕ ಆರೋಪಿ ಸುರೇಂದ್ರ ಶೆಟ್ಟಿಯವರು ವೇಗವಾಗಿ  ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರು ಸೈಕಲ್‌ನ್ನು  ಓವರ್‌ಟೇಕ್‌ ಮಾಡುವ ಭರದಲ್ಲಿ ಎಡಬದಿಗೆ ಚಲಾಯಿಸಿ  ಪಿರ್ಯಾಧಿದಾರರ  ಮೋಟಾರು ಸೈಕಲ್‌ನ  ಬಲಬದಿಯ ಹ್ಯಾಂಡಲ್‌ ಬಾರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾಧಿ ದಾರರು ಮೋಟಾರು  ಸೈಕಲ್‌ ಸಮೇತ  ರಸ್ತೆಗೆ ಬಿದ್ದು  ಪಲ್ಟಿಯಾಗಿ ಪಿರ್ಯಾದುದಾರರ ಬಲ ಭುಜಕ್ಕೆ ಒಳ ಜಖುಂ ನೋವು ಉಂಟಾಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿ ರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ 06.07.2021 ರಂದು ಪಿ ಎಸ್ ಐ ರಾಜಶೇಖರ್ ವಂದಲಿ ರವರು ರಾತ್ರಿ 22:30 ಗಂಟೆಗೆ ಠಾಣೆಯಲ್ಲಿರುವಾಗ ಬಾತ್ಮಿದಾರರೊಬ್ಬರು ಕರೆ ಮಾಡಿ ಅಲೆವೂರು- ರಾಂಪುರ ಜಂಕ್ಷನ್ ಬಳಿ  KA07 5094 ನೇ ಪಿಕಪ್  ವಾಹನದಲ್ಲಿ  ಜಾನುವಾರುವೊಂದನ್ನು  ಅಕ್ರಮವಾಗಿ ಕಳ್ಳತನ ಮಾಡಿಕೊಂಡು ಸಾಗಾಟ ಮಾಡುತ್ತಿದ್ದ  ಸಮಯದಲ್ಲಿ ಯಾರೋ ಸಾರ್ವಜನಿಕರು   ಸದರಿ ವಾಹನವನ್ನು  ತಡೆದು ನಿಲ್ಲಿಸಿ ವಾಹನಕ್ಕೆ  ಹಾನಿ ಮಾಡಿರುತ್ತಾರೆ. ಎಂದು ಮಾಹಿತಿ ನೀಡಿದಂತೆ ಸಿಬ್ಬಂದಿಯವರ ಜೊತೆಯಲ್ಲಿ ಸದ್ರಿ ಸ್ಥಳಕ್ಕೆ ಹೋಗಿ ನೋಡಿದಾಗ ಬಾತ್ಮಿದಾರರು ತಿಳಿಸಿದ ವಾಹನ ಹಾಗೂ ವಾಹನದ ಹಿಂಭಾಗದಲ್ಲಿ ಒಂದು ಮಿಶ್ರ ತಳಿಯ ಹಸುವನ್ನು ಹಗ್ಗದಲ್ಲಿ ಕಟ್ಟಿರುವುದು ಕಂಡುಬಂದಿರುತ್ತದೆ. ಯಾರೋ ಆರೋಪಿತರು ಹಸುವನ್ನು ಕ್ರೂರ ರೀತಿಯಲ್ಲಿ  ಆಹಾರ ಮತ್ತು ನೀರನ್ನು ಕೊಡದೇ ಮಾಂಸಕ್ಕಾಗಿ ವಧೆ ಮಾಡುವ ಉದ್ದೇಶದಿಂದಲೇ ಎಲ್ಲಿಯೋ ಕಳವು ಮಾಡಿಕೊಂಡು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಬಗ್ಗೆ  ಕಂಡು ಬಂದಿರುತ್ತದೆ. ಸದ್ರಿ ವಾಹನ ಹಾಗೂ ದನವನ್ನು 23:00 ಗಂಟೆಗೆ  ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದು, ಸದ್ರಿ ಸ್ವತ್ತುಗಳ ಅಂದಾಜು ಮೌಲ್ಯ 1,10,000/- ರೂ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ 379  ಐಪಿಸಿ & ಕಲಂ 8,9,11 ಕರ್ನಾಟಕ ಗೋ ಹತ್ಯೆ ತಡೆ ಹಾಗೂ  ಜಾನುವಾರು ಸಂರಕ್ಷಣಾ ಕಾಯ್ದೆ 1964,ಕಲಂ 11(1)(ಡಿ) ಪ್ರಾಣಿ ಹಿಂಸೆ ತಡೆ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ಶೇಖ್ ಅಬ್ದುಲ್ ಇವರು ದಿನಾಂಕ: 06.06.2021 ರಂದು ಸಂಜೆ ಮೆಹಬೂಬ್ ಎಂಬುವರ BOLERO PICKUP ವಾಹನವನ್ನು ಬಾಡಿಗೆಗೆ ಪಡೆದುಕೊಂಡು ಇಮ್ರಾನ್ ನನ್ನು ಚಾಲಕನಾಗಿ ಕರೆದುಕೊಂಡು ಗುಣಾಕರ ರವರ ಮನೆಗೆ ಹೋಗಿ  ರಾತ್ರಿ ಹಸುವನ್ನು ಪಿಕಪ್ ವಾಹನದಲ್ಲಿ ಲೋಡ್ ಮಾಡಿಕೊಂಡು ಹಿರಿಯಡ್ಕ ಮಣಿಪುರ ರಸ್ತೆಯ ಮೂಲಕ  ಕಟಪಾಡಿ ಕಡೆಗೆ ಬರುತ್ತಿದ್ದಾಗ ರಾತ್ರಿ ಸುಮಾರು 10:00 ಗಂಟೆಗೆ ರಾಂಪುರ ಜಂಕ್ಷನ್‌‌ ಬಳಿ ತಲುಪಿದಾಗ ಅವರ ಹಿಂದಿನಿಂದ ಆರೋಪಿಗಳಾದ ಗಿರಿರಾಜ್‌‌, ರೋಮಿಯೊ ಮತ್ತು ಹರಿ ರವರು ಕಾರ್‌ನಲ್ಲಿ  ಹಿಂಬಾಲಿಸಿಕೊಂಡು ಪಿರ್ಯಾದಿದಾರರ ಪಿಕಪ್‌ ವಾಹನಕ್ಕೆ ಅಡ್ಡ ಗಟ್ಟಿ, ಹಸುವನ್ನು ಕಳ್ಳತನ ಮಾಡಿ ಸಾಗಾಟ ಮಾಡುತ್ತಿರುತ್ತಿರಾ?ಎಂದು ಹೇಳಿ ಹಲ್ಲೆ ಮಾಡಲು ಮುಂದಾದಾದ ,ಪಿಕಪ್‌‌ ವಾಹನ ಚಾಲಕ ಇಮ್ರಾನ್‌‌ ವಾಹನದಿಂದ ಇಳಿದು ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ. ನಂತರ ಆರೋಪಿಗಳು ಪಿರ್ಯಾದಿಯನ್ನು ಬಲವಂತವಾಗಿ ಕೊರಳಪಟ್ಟಿ ಹಿಡಿದು ವಾಹನದಿಂದ ಕೆಳಕ್ಕೆ ಬೀಳಿಸಿ ನನ್ನ ಮುಖಕ್ಕೆ ಮುಷ್ಠಿಯಿಂದ ಹಲ್ಲೆ ಮಾಡಿ ,ಕಲ್ಲಿನಿಂದ ಬೊಲೆರೋ ವಾಹನದ ಮುಂಭಾಗದ ಗಾಜು ಮತ್ತು ಹೆಡ್‌ಲೈಟ್‌ನ್ನು ಹೊಡೆದು ಹಾಕಿದರು. ನಂತರ ಪಿರ್ಯಾದಿದಾರರನ್ನು ಬಲವಂತವಾಗಿ ಅವರ ಇಟಿಯೋಸ್‌ ವಾಹನಕ್ಕೆ ಎಳೆದುಕೊಂಡು ಹೋಗಿ ಕೂರಿಸಿ ನಿನ್ನನ್ನು ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 365, 341, 506, 323, 427, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣಗಳು

 • ಗಂಗೊಳ್ಳಿ : ಫಿರ್ಯಾದಿ ದೀಪ್ತಿ ಇವರ ತಾಯಿ ಸಾಧು (45 ವರ್ಷ) ಎಂಬುವವರು ದಿನಾಂಕ 07/07/2021 ರಂದು ಬೆಳಿಗ್ಗಿನ ಜಾವ ಸುಮಾರು 5:30 ಗಂಟೆಯಿಂದ 8:45 ಗಂಟೆಯ ನಡುವೆ ಗದ್ದೆಯ ಉಳುಮೆಯ ಬಗ್ಗೆ ಹರ್ಕೂರು ಗ್ರಾಮದ, ನಾರ್ಕಳಿಯಲ್ಲಿರುವ ತಮ್ಮ ಗದ್ದೆಯ ಸಮೀಪ ಇರುವ ಬಾಲಕೃಷ್ಣ ಶೆಟ್ಟಿ ಎಂಬುವವರ ಗದ್ದೆಯ ಕೆರೆಯ ನೀರನ್ನು ಬಿಡಲು ಹೋದಾಗ ಕೆರೆಯ ಬದಿಯ ತಂತಿ ಸಾಧು ರವರ ಸೀರೆಗೆ ತಗುಲಿದ್ದು, ಆಗ ಅವರು ತಂತಿಯನ್ನು ತಪ್ಪಿಸುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 18/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿ ಗಣೇಶ್ ಇವರ ಪರಿಚಯದವರಾದ ಶೇಖರ್ ಕುಲಾಲ್ ಎಂಬವರು ವಿಪರೀತ ಮಧ್ಯಪಾನ ಸೇವನೆ ಮಾಡುವ ಚಟವನ್ನು ಹೊಂದಿದ್ದು, ಯಾವಾಗಲೂ ಮಧ್ಯಪಾನ ಸೇವನೆ ಮಾಡಿ ಅಲ್ಲಲ್ಲಿ ಬಿದ್ದುಕೊಳ್ಳುತ್ತಿದ್ದರು. ದಿನಾಂಕ 06.07.2021 ರಂದು 22:00 ಗಂಟೆಯಿಂದ ದಿನಾಂಕ 07.07.2021 ರಂದು ಬೆಳಿಗ್ಗೆ 08:30 ಗಂಟೆ ಮಧ್ಯಾವದಿಯಲ್ಲಿ ವಿಪರೀತ ಮಧ್ಯಪಾನ  ಸೇವಿಸಿ ನೀರು ಸೇವಿಸದೇ ಅಥವಾ ಬೇರೆ ಯಾವುದೋ ಖಾಯಿಲೆಯಿಂದ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಹೆಬ್ರಿ: ಅಮ್ಮಣ್ಣಿ ಪೂಜಾರಿ ( 47 ವರ್ಷ ) ಇವರು ಕಳ್ತೂರು ಗ್ರಾಮದ ಮಿಯ್ಯಾಲು ದರ್ಖಾಸ್ತು ಎಂಬಲ್ಲಿ ವಾಸವಾಗಿದ್ದು. ಅವರು ಜೀವನದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ; 06/07/2021 ರಂದು ರಾತ್ರಿ 11-00 ಗಂಟೆಯಿಂದ ಈ ದಿನ ದಿನಾಂಕ:07/07/2021 ರಂದು ಮುಂಜಾನೆ 05-00 ಗಂಟೆಯ ಮದ್ಯಅವಧಿಯಲ್ಲಿ ಮನೆಯ ಹೊರಗಡೆಯ ವರಾಂಡದಲ್ಲಿ ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 23/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-07-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080