ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಅಶ್ವಿನ್, (24) ತಂದೆ: ಮುರುಳಿಧರ್ ಆಚಾರ್ಯ, ವಿಳಾಸ: ಕೇರ್ ಆಫ್ ಶಂಕರ್ ನಾಯಕ್, ಎಲ್.ವಿ.ಟಿ, ಉಡುಪಿ ಇವರು ದಿನಾಂಕ 06/06/2021 ರಂದು ಬೆಳಿಗ್ಗೆ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಶ್ರೀ ಕಾಳಿಕಾಂಬಾ ಸ್ವ ಸಹಾಯ ಸಂಘಕ್ಕ್ಕೆ ಸಂಬಂಧಿಸಿದ ಪುಸ್ತಕವನ್ನು ಕೊಡಲು   KA-20-EW-5677 ನೇ ಮೋಟಾರ್‌ಸೈಕಲ್‌ನಲ್ಲಿ ‌ಕಕ್ಕುಂಜೆ ಶಾಲಾ ರಸ್ತೆ ಬಳಿಯ ರೇವತಿ ಎಂಬವರ ಮನೆಗೆ ಹೋಗಿ ವಾಪಾಸ್ ಕಕ್ಕುಂಜೆ ಯಿಂದ ಎಲ್.ವಿ.ಟಿಯಲ್ಲಿನ ತನ್ನ ಮನೆಗೆ ವಾಪಾಸ್ ಹೋಗುತ್ತಿದ್ದಾಗ ಬೆಳಿಗ್ಗೆ 8:50 ಗಂಟೆಗೆ ಪುಂಡ್ಯತ್ ಗುಡ್ಡೆ ನಾಗಬನ ಬಳಿ ತಲುಪುತ್ತಿದ್ದಂತೆ ಸದರಿ ರಸ್ತೆಯಲ್ಲಿ ಅಶ್ವಿನ್ ರವರ ಎದುರಿನಿಂದ ಕಕ್ಕುಂಜೆ ಕಡೆಗೆ KA-20-EG-4168 ನೇ ಸ್ಕೂಟರನ್ನು ಅದರ ಸವಾರನಾದ ಸೂರ್ಯಕಾಂತ ಎಂಬಾತನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲ್‌ಗೆ ಮುಖಾಮುಖಿಯಾಗಿ ಡಿಕ್ಕಿ ಹೊಡೆದು ಅಪಘಾತಪಡಿಸಿದ ಪರಿಣಾಮ ಎರಡೂ  ಮೋಟಾರ್ ಸೈಕಲ್‌ ಸವಾರರು ಮೋಟಾರ್ ಸೈಕಲ್‌ಸಮೇತ ರಸ್ತಗೆ ಬಿದ್ದು ಪಿರ್ಯಾದಿದಾರರ ಬಲಕಾಲಿನ ಪಾದದ ಗಂಟಿನಲ್ಲಿ ರಕ್ತ ಗಾಯ ಹಾಗೂ  ಬಲಭುಜದಲ್ಲಿ ಗುದ್ದಿದ ನೋವು ಉಂಟಾಗಿರುತ್ತದೆ. ಹಾಗೂ ಆಪಾದಿತನಿಗೂ  ಸಾಮಾನ್ಯ ಸ್ವರೂಪದ ಗಾಯ ಉಂಟಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ದಿನಾಂಕ 24/05/2021 ರಿಂದ ದಿನಾಂಕ 07/06/2021 ವರೆಗೆ ಲಾಕ್‌ಡೌನ್ ಘೋಷಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಈ ಬಗ್ಗೆ ಪ್ರಕಾಶ್ ,ಪೊಲೀಸ್ ವೃತ್ತ ನಿರೀಕ್ಷಕರು ಕಾಪು ವೃತ್ತ ರವರು ಸಿಬ್ಬಂದಿಯವರೊಂದಿಗೆ ದಿನಾಂಕ 06/06/2021 ರಂದು 14:00 ಗಂಟೆಯ ಸಮಯಕ್ಕೆ ಮಲ್ಲಾರು ಸಮೀಪ ಕೊಪ್ಪಲಂಗಡಿ ರಾಷ್ರೀಯ ಹೆದ್ದಾರಿ 66 ರಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ ಅನಗತ್ಯವಾಗಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆ ನಡೆಸುವರೇ ಮೂಳೂರು ಕಡೆಯಿಂದ ಕಾಪು ಕಡೆಗೆ ಮಾರುತಿ ಕಂಪನಿಯ ಶಿಪ್ಟ ಕಾರನ್ನು ಚಲಾಯಿಸಿಕೊಂಡು ಬರುತ್ತಿದ್ದವರನ್ನು  ನಿಲ್ಲಿಸಿ  ಹೆಸರು ವಿಳಾಸ ಕೇಳಲಾಗಿ ಮೊಹಮ್ಮದ್ ಷರೀಫ್, (32) ತಂದೆ : ಹುಸೇನಬ್ಬ  ವಾಸ : ರೂಮ್ ನಂ.101, ಫೇಮಸ್ ಅಪಾರ್ಟಮೆಂಟ್ ಕಾಪು, ಎಂದು ತಿಳಿಸಿದ್ದು ಕಾರು ನಂಬರ್ ನೋಡಲಾಗಿ ಮಾರುತಿ ಕಂಪನಿಯ  ಸ್ವೀಪ್ಟ್  KA-19-Z-5434 ಆಗಿದ್ದು, ಇವರು ಯಾವುದೇ ತುರ್ತು ಕಾರಣವಿಲ್ಲದೇ ಅನಗತ್ಯವಾಗಿ ಸಂಚರಿಸಿರುವುದು ಕಂಡುಬಂದಿರುತ್ತದೆ. ಸದ್ರಿ ಆರೋಪಿ ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 98/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 20/05/2021 ರಿಂದ ದಿನಾಂಕ 07/06/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ ಪಿ.ಎಸ್.ಐ. ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 06/06/2021 ರಂದು ಸಿಬ್ಬಂದಿಯವರೊಂದಿಗೆ  ಇಲಾಖಾ ವಾಹನದಲ್ಲಿ ಕಚ್ಚೂರು ಗ್ರಾಮದ ಬಾರ್ಕೂರು- ಬ್ರಹ್ಮಾವರ  ರಸ್ತೆಯ ಬಾರ್ಕೂರು ಜಂಕ್ಷನ್ ಬಳಿ ರಸ್ತೆಯಲ್ಲಿ ಅನಗತ್ಯವಾಗಿ ಜನರ ಮತ್ತು ವಾಹನಗಳ ಓಡಾಟವನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 11:30 ಗಂಟೆ ಸುಮಾರಿಗೆ  ಸೈಬ್ರಕಟ್ಟೆ ಕಡೆಯಿಂದ ಬ್ರಹ್ಮಾವರ ಕಡೆಗೆ KL-14-W-2985 ನೋಂದಣಿ ನಂಬ್ರದ ನೇ ಸಿಲ್ವರ್ ಬಣ್ಣದ ವೋಕ್ಸ್ ವೋಗನ್ ಕಾರನ್ನು ನಿಲ್ಲಿಸಿ ನೋಡಲಾಗಿ ಕಾರಿನಲ್ಲಿ ಆರೋಪಿಗಳಾದ ಚಾಲಕ ಸೇರಿ 4 ಜನರಿದ್ದು ಅವರಲ್ಲಿ ಕಾರಣ ಕೇಳಲಾಗಿ ಅವರು ಯಾವುದೇ ಯೋಗ್ಯ ಕಾರಣವಿಲ್ಲದೇ ಕಾರಿನಲ್ಲಿ ಸಂಚರಿಸುತ್ತಿದ್ದರಿಂದ ದಾಖಲಾತಿ ಪರಿಶೀಲಿಸಲು ಕಾರನ್ನು ಬದಿಗೆ ನಿಲ್ಲಿಸುವಂತೆ ಸೂಚಿಸಿದಾಗ ಕಾರಿನ ಚಾಲಕ ಒಮ್ಮೇಲೇ ಕಾರನ್ನು ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಸದ್ರಿಯವರು ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಅನಗತ್ಯವಾಗಿ ಕಾರಿನಲ್ಲಿ ತಿರುಗಾಡಿ ಕೋವಿಡ್‌-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 112/2021 ಕಲಂ: 269 ಐಪಿಸಿ  & 119, 177 ಐಎಮ್ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 07-06-2021 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080