ಅಭಿಪ್ರಾಯ / ಸಲಹೆಗಳು

ಕೊಲೆ ಯತ್ನ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಎನ್. ನಾಗರಾಜ್‌ ರಾವ್ (75) ತಂದೆ: ದಿ ನಾರಾಯಣ ಹತ್ವಾರ್ ವಾಸ: ಸುಬ್ಬಣ್ಣ ಅಡಿಗರ ಮನೆ, ಕೊರವಡಿ ವಿಷ್ಣುಮೂರ್ತಿ ದೇವಸ್ಥಾನ ಹತ್ತಿರ, ಕುಂಭಾಶಿ ಗ್ರಾಮ,ಕುಂದಾಪುರ ಇವರು ದಿನಾಂಕ 06/06/2021 ರಂದು ರಾತ್ರಿ 10:45 ಗಂಟೆಗೆ ಮನೆಯ ನಾಯಿಯನ್ನು ಕಂಪೌಂಡ್ ಒಳಗಡೆ ಸುತ್ತಾಡಿಸಲು ಮನೆಯ ಹೊರಗಡೆನ ವಿದ್ಯುತ್ ದೀಪ ಹಾಕಿಕೊಂಡು ಮನೆಯ ಅಂಗಳಕ್ಕೆ ಹೋಗುತ್ತಿರುವಾಗ ಸುಮಾರು 30-35 ವರ್ಷ ಪ್ರಾಯದ ಎಣ್ಣೆಗಪ್ಪು ಮೈ ಬಣ್ಣದ ಅಪರಿಚಿತ ವ್ಯಕ್ತಿಯು ಮನೆಯ ಅಂಗಳದಲ್ಲಿದ್ದು ಆತನು ಏಕಾಏಕಿಯಾಗಿ ಆತನ ಕೈಯಲ್ಲಿದ್ದ ಹರಿತವಾದ ಚಾಕುವನ್ನು ತೋರಿಸಿದ್ದು ಆಗ ಎನ್. ನಾಗರಾಜ್‌ ರಾವ್ ರವರು ಯಾರು ನೀನು ಏನು ವಿಚಾರ ಎಂದು ಕೇಳುವಷ್ಟರಲ್ಲಿ ಆತನು ಇವರನ್ನು ಕೊಲೆ ಮಾಡುವ ಉದ್ದೇಶದಿಂದಲೇ ಪಿರ್ಯಾದಿದಾರರ ಗಲ್ಲಕ್ಕೆ ಚೂರಿಯಿಂದ ಕೊಯ್ದನು. ಆಗ ಎನ್. ನಾಗರಾಜ್‌ ರಾವ್ ರವರು ತಪ್ಪಿಸಿಕೊಳ್ಳಲು ಹೋದಾಗ ಪುನಃ ಎಡಕೈ ಹಸ್ತಕ್ಕೆ ಚುಚ್ಚಿ ಎಡ ಭುಜಕ್ಕೂ ಕೂಡ ಚೂರಿಯಿಂದ ಚುಚ್ಚಿ ಗಾಯಮಾಡಿ ಓಡಿ ಹೋಗಿರುತ್ತಾನೆ. ಗಾಯಗೊಂಡ ಎನ್. ನಾಗರಾಜ್‌ ರಾವ್ ರವರು ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 77/2021 ಕಲಂ: 447,307 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 07-06-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ