ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 

ಕಾಪು: ಫಿರ್ಯಾದಿ ಸಂದೀಪ್ ಇವರ ತಮ್ಮನಾದ ಅಭೀಷೆಕ್‌ ನು ಈ ದಿನ ದಿನಾಂಕ: 06-05-2023 ರಂದು ತನ್ನ ಬಾಬ್ತು KA-20-AB-7092 ನೇ ಆಟೋ ರಿಕ್ಷಾದಲ್ಲಿ ವಸಂತಿ ಎಂಬುವವರನ್ನು ಪ್ರಯಾಣಿಕರನ್ನಾಗಿ ಕುರಿಸಿಕೊಂಡು ರಾ.ಹೆ 66 ಉಡುಪಿ-ಮಂಗಳೂರು ರಸ್ತೆಯಲ್ಲಿ ಉಡುಪಿ ಕಡೆಯಿಂದ ಕಾಪು ಕಡೆಗೆ ಹೋಗುತ್ತಾ ಮಧ್ಯಾಹ್ನ 3:30 ಗಂಟೆಯ ಸುಮಾರಿಗೆ ಕಾಪು ತಾಲೂಕು, ಮೂಡಬೆಟ್ಟು ಗ್ರಾಮದ, ಮಾರುತಿ ಗ್ಯಾರೇಜ್‌ ನ್ನು ತಲುಪುತ್ತಿದ್ದಂತೆ ಅದೇ ರಸ್ತೆಯಲ್ಲಿ ಆಟೋ ರಿಕ್ಷಾದ ಎದುರಿನಲ್ಲಿ ಉಡುಪಿ ಕಡೆಯಿಂದ ಕಾಪು ಕಡೆಗೆ KA-20-AB-6295 ನೇ TATA ACE ವಾಹನವನ್ನು ಚಲಾಯಿಸಿಕೊಂಡು ಹೋಗುತ್ತಿದ್ದ ಗುರುಪ್ರಸಾದ್‌ ರವರು ಹಿಂಬದಿಯಲ್ಲಿ ಬರುತ್ತಿದ್ದ ವಾಹನಗಳಿಗೆ ಯಾವುದೇ ಸೂಚನೆಯನ್ನು ನೀಡದೇ ಏಕಾಏಕಿಯಾಗಿ ವಾಹನವನ್ನು ರಸ್ತೆ ಮಧ್ಯದಲ್ಲಿ ನಿಲ್ಲಿಸಿದ್ದು, ಪರಿಣಾಮ ಹಿಂಬದಿಯಲ್ಲಿ ಬರುತ್ತಿದ್ದ ರಿಕ್ಷಾ ಚಾಲಕ ಅಭಿಜಿತ್‌ ನು ತನ್ನ ರಿಕ್ಷಾವನ್ನು ಆದಷ್ಟು ನಿಯಂತ್ರಿಸಲು ಬಲಕ್ಕೆ ತಿರುಗಿಸಿದ್ದು, ಆದರೂ ಕೂಡಾ ನಿಯಂತ್ರಣಕ್ಕೆ ಸಿಗದೇ  ರಿಕ್ಷಾದ ಎಡಭಾಗ TATA ACE ವಾಹನದ ಹಿಂಬದಿಯ ಬಲಭಾಗಕ್ಕೆ ಡಿಕ್ಕಿಹೊಡೆದು ರಸ್ತೆಯಲ್ಲಿ ಪಲ್ಟಿಯಾಗಿರುತ್ತದೆ. ಪರಿಣಾಮ ರಿಕ್ಷಾ ಚಾಲಕ ಅಭಿಜಿತ್‌ ರವರಿಗೆ ತಲೆಗೆ ಹಾಗೂ ಮುಖಕ್ಕೆ ಗಂಭೀರ ಗಾಯವಾಗಿದ್ದು, ವಸಂತಿಯವರ ಕಿವಿಯಲ್ಲಿ ರಕ್ತ ಬಂದು ಎಡಗಾಲಿನ ಮೂಳೆ ಮುರಿತವಾಗಿದ್ದು, ಚಿಕಿತ್ಸೆಯ ಬಗ್ಗೆ ಅವರನ್ನು ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ 19:40 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2023 ಕಲಂ 279,338,304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಕಾಪು: ಫಿರ್ಯಾದಿ ದಿನೇಶ್ ನಾರಾಯಣ ರಾವ್ ಇವರ ಮಗ ಪ್ರತೀಕ್ ಪ್ರಾಯ 19 ವರ್ಷ ರವರು ತಮ್ಮ  ಬಾಬ್ತು ಕೆ.ಎ. 20 ಇ.ಎಕ್ಸ್. 6602 ಸ್ಕೂಟರ್‌ನಲ್ಲಿ ಸೃಜನ್‌ ಪ್ರಾಯ 19 ವರ್ಷ ರವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ರಾ ಹೆ 66 ರಲ್ಲಿ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಕಾಪು ಪೊಲೀಪು ಜಂಕ್ಷನ್ ಬಳಿ ತಲುಪುತ್ತಿದ್ದಂತೆ ಕಾಪು ಪೇಟೆ ಕಡೆಯಿಂದ ರಾ ಹೆ 66 ರ ಪೊಲಿಪು ಜಂಕ್ಷನ್‌ ಕಡೆಗೆ ಜೊಸೇಫ್ ರವರು ಕೆ.ಎ. 20 ಬಿ. 8458 ನೇ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಗನ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪ್ರತೀಕ್ ಮತ್ತು ಸೃಜನ್ ರವರು ಸ್ಕೂಟರ್‌‌ ಸಮೇತ ರಸ್ತೆಗೆ ಬಿದ್ದು, ಪ್ರತೀಕ್‌ನಿಗೆ ಎರಡು ಕೈಕಾಲು ಹಾಗೂ ಮುಖದ ಮೇಲೆ ರಕ್ತ ಗಾಯವಾಗಿದ್ದು ಹಾಗೂ ಸೃಜನ್‌‌ನಿಗೆ ಕಾಲಿನ ಮೂಳೆ ಮುರಿತದ ವಾಗಿದ್ದು ಗಾಯಗೊಂಡ ಇಬ್ಬರನ್ನು ಕೂಡಲೇ  ಸ್ಥಳೀಯರು ಚಿಕಿತ್ಸೆಯ ಬಗ್ಗೆ ಪ್ರತ್ಯೇಕ ವಾಹನದಲ್ಲಿ ಉಡುಪಿ ಕಡೆಗೆ ಕಳುಹಿಸಿಕೊಟ್ಟಿದ್ದು,  ಸೃಜನ್‌ ನಿಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 78/2023 ಕಲಂ 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಬ್ರಹ್ಮಾವರ: ದಿನಾಂಕ 06.05.2023 ರಂದು ಫಿರ್ಯಾದಿ ಮಾಲತಿ ಎಸ್.‌ ರವರು ತನ್ನ ಬಾಬ್ತು KA.20.ES.4066 ನೇ ಹೊಂಡ ಆಕ್ಟಿವಾ ಸ್ಕೂಟರ್‌ ನಲ್ಲಿ ಮಗಳು ಸಿಂಚನಾಳನ್ನು ಸಹಸವಾರಿಣಿಯಳನ್ನಾಗಿ ಕುಳ್ಳಿರಿಸಿಕೊಂಡು ಬಾರ್ಕೂರಿನಿಂದ ಉಡುಪಿಗೆ ರಾಹೆ 66  ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಬೆಳಿಗ್ಗೆ 07:00 ಗಂಟೆಗೆ ಚಾಂತಾರು ಗ್ರಾಮದ, ಬ್ರಹ್ಮಾವರ ಆಶ್ರಯ ಹೊಟೇಲ್‌ ಎದುರು ತಲುಪುವಾಗ ಉಡುಪಿ ಕಡೆಯಿಂದ ಆರೋಪಿ ಮೊಹಮ್ಮದ್‌ ಸಮೀಮ್‌ ಎಂಬವರು ಅವರ ಬಾಬ್ತು KA.20.AA.8499 ನೇ ಅಶೋಕ ಲೈಲ್ಯಾಂಡ್‌ ಲಾರಿಯನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಪುನಃ ಉಡುಪಿ ಕಡೆಗೆ ಹೋಗಲು ಮಹೇಶ್‌ ಆಸ್ಪತ್ರೆ ಎದುರು  “U-Turn” ಮಾಡಲು ಯಾವುದೇ ಇಂಡಿಕೇಟರ್‌ ಹಾಕದೇ ರಭಸವಾಗಿ ತಿರುಗಿಸುವಾಗ ಫಿರ್ಯಾದಿದಾರರ ಸ್ಕೂಟರ್‌ ನ ಬಲಬದಿಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ಫಿರ್ಯಾದಿದಾರರ ಸ್ಕೂಟರ್‌ ಲಾರಿಯ ಎಡಭಾಗದ ಮುಂದಿನ ಬಂಪರ್‌ ಗೆ ಸಿಕ್ಕಿ ಹಾಕಿಕೊಂಡು, ಫಿರ್ಯಾದಿದಾರರ ಮುಖ ಲಾರಿಯ ಡೋರ್‌ ಗೆ ತಾಗಿ ಅವರ ಮೂಗಿಗೆ ತೀವ್ರ ರಕ್ತಗಾಯವಾಗಿ ಹಾಗೂ ಅವರ ಬಲಕೈಯ ಕಿರುಬೆರಳಿನ ಕೆಳಗೆ ಒಳ ಜಖಂ ಆಗಿರುತ್ತದೆ. ಸ್ಕೂಟರ್‌ ನಲ್ಲಿ ಸಹಸವಾರಿಣಿಯಾಗಿದ್ದ ಸಿಂಚನಾಳಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಗೊಂಡ ಫಿರ್ಯಾದಿದಾರರು ಬ್ರಹಾವರ ಮಹೇಶ್‌ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಅಲ್ಲಿಂದ ಉಡುಪಿ ಟಿಎಮ್‌ಎ ಪೈ ಆಸ್ಪತ್ರೆಯಲ್ಲಿ ದಾಖಲುಗೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2023 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಇತರ ಪ್ರಕರಣ

 

ಶಿರ್ವ: ದಿನಾಂಕ:05.05.2023 ರಂದು 22:40 ಗಂಟೆಗೆ ರಾಘವೇಂದ್ರ ಸಿ, ಪೊಲೀಸ್‌ ಉಪನಿರೀಕ್ಷಕರು, ಶಿರ್ವ ಪೊಲೀಸ್‌ ಠಾಣೆ ಇವರಿಗೆ ಬಂದ ಖಚಿತ ವರ್ತಮಾನದಂತೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ  ದ್ವಾರದ  ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು ಪಂಚರು ಮತ್ತು ಠಾಣಾ ಸಿಬ್ಬಂದಿಯವರೊಂದಿಗೆ 23:20 ಗಂಟೆಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು ದಾಳಿ ನಡೆಸಿ ಆಪಾದಿತರಾದ  ಇಕ್ಬಾಲ್‌ @ಇಕ್ಬಾಲ್‌ ಶೇಖ್‌ @  ಇಕ್ಬಾಲ್‌ ಅಹಮ್ಮದ್‌, ಪರ್ವೇಜ್‌, ಅಬ್ದುಲ್‌ ರಾಕೀಬ್‌, ಮೊಹಮ್ಮದ್‌  ಸಕ್ಲೇನ್‌, ಸಲೇಮ್‌ @ ಸಲೀಂ, ಅನಾಸ್‌ ಇವರನ್ನು  ವಶಕ್ಕೆ ಪಡೆದುಕೊಂಡು ಅವರುಗಳ  ವಶದಲ್ಲಿದ್ದ ಡ್ರಾಗನ್‌ -1, ಮೆಣಸಿನ ಹುಡಿ ಪ್ಯಾಕೆಟ್‌ -2, ಮರದ ವಿಕೆಟ್‌ - 3, KA20EQ 3582 ನೇ ನೊಂದಣಿ ಸಂಖ್ಯೆಯ  ದ್ವಿ  ಚಕ್ರವಾಹನ, KA20HA 6340 ನೇ ನೊಂದಣಿ ಸಂಖ್ಯೆಯ  ದ್ವಿ ಚಕ್ರ ವಾಹನ, YAMAHA ಕಂಪೆನಿ ತಯಾರಿಕೆಯ FZ ಮಾದರಿಯ ಕಪ್ಪುಬಣ್ಣದ ಚಾಸಿಸ್‌ ನಂಬ್ರ ME121COM262002263  ಎಂದು ನಮೂದು ಮೋಟಾರ್‌ ಸೈಕಲ್ ಹಾಗೂ ನಾಲ್ಕು  ಮೊಬೈಲ್ ಫೋನ್ ಗಳನ್ನು ಸ್ವಾಧೀನಪಡಿಸಿಕೊಂಡಿದ್ದು,ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ.2,31,000/- ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/23 ಕಲಂ 399, 402 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಮಣಿಪಾಲ: ದಿನಾಂಕ: 06.05.2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪ ನಿರೀಕ್ಷಕ ರುಕ್ಮಾ ನಾಯ್ಕ ರವರು ಠಾಣಾ ಸಿಬ್ಬಂದಿಗಳೊಂದಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ಆದೇಶದಂತೆ ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಯುಕ್ತ ಅಕ್ರಮ ಮದ್ಯ ಮಾರಾಟದ ಬಗ್ಗೆ ಮಾಹಿತಿ ಪಡೆದು ಇಂದ್ರಾಳಿ ರೈಲ್ವೆ ನಿಲ್ದಾಣದ ಬಳಿ ತಪಾಸಣೆ ಕರ್ತವ್ಯ ನಿರ್ವಹಿಸುತ್ತಿರುವಾಗ ಸಮಯ ಸುಮಾರು 19:30 ಗಂಟೆಗೆ ಇಂದ್ರಾಳಿ ರೈಲ್ವೇ ನಿಲ್ದಾಣಕ್ಕೆ ಗೋವಾ ಕಡೆಯಿಂದ ಕೇರಳಕ್ಕೆ ಹೋಗುವ ಒಂದು ರೈಲು  ಬಂದು ನಿಂತಿದ್ದು ಆ ರೈಲಿನಿಂದ ಕೆಲವು ಪ್ರಯಾಣಿಕರು ಇಳಿದಿದ್ದು ಅವರಲ್ಲಿ ಓರ್ವ ವ್ಯಕ್ತಿಯು ಒಂದು ನಸು ಹಸಿರು ಬಣ್ಣದ ಪಾಲಿಥಿನ್‌ ಚೀಲವನ್ನು ಹಿಡಿದುಕೊಂಡು ಅನುಮಾಸ್ಪದವಾಗಿ ನಡೆದುಕೊಂಡು ಬರುತ್ತಿರುವುದನ್ನು ಗಮನಿಸಿ ಆತನನ್ನು ಚೆಕ್ ಮಾಡಲು ಮುಂದಾದಾಗ ಆ ವ್ಯಕ್ತಿಯು ಸಮವಸ್ತ್ರದಲ್ಲಿದ್ದ ಪಿರ್ಯಾದಿದಾರರು ಮತ್ತು ಸಿಬ್ಬಂದಿಗಳನ್ನು ನೋಡಿ ಆತನ ಕೈನಲ್ಲಿದ್ದ ನಸು ಹಸಿರು ಬಣ್ಣದ ಪಾಲಿಥಿನ್‌ ಚೀಲವನ್ನುಎಸೆದು ಓಡಿ ಹೋಗಿರುತ್ತಾನೆ. ಸಿಬ್ಬಂದಿಗಳು ಆತನನ್ನು ಬೆನ್ನಟ್ಟಿ ಹೋಗಿ ಸುತ್ತ ಮುತ್ತ ಹುಡುಕಾಡಿದಲ್ಲಿ ಎಲ್ಲಿಯೂ  ಪತ್ತೆಯಾಗಿರುವುದಿಲ್ಲ. ಸದ್ರಿ ನಸು ಹಸಿರು ಬಣ್ಣದ ಪಾಲಿಥಿನ್‌ ಚೀಲವನ್ನು ತೆರೆದು ನೋಡಲಾಗಿ ಅದರಲ್ಲಿ ಮದ್ಯ ತುಂಬಿದ 20  ಬಾಟಲಿಗಳಿದ್ದು ಅವುಗಳು ಗೋವಾ ರಾಜ್ಯದ ಮದ್ಯದ ಬಾಟಲಿಗಳಾಗಿದ್ದು ಸದರಿ ವ್ಯಕ್ತಿಯು ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮದ್ಯದ ಬಾಟಲಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡಿರುವುದು ದೃಢಪಟ್ಟಿರುತ್ತದೆ, ಸದ್ರಿ ಸ್ಥಳಕ್ಕೆ 19:45 ಗಂಟೆಗೆ ಪಂಚರನ್ನು ಬರಮಾಡಿಕೊಂಡು  ನಸು ಹಸಿರು ಬಣ್ಣದ ಪಾಲಿಥಿನ್‌ ಚೀಲದಲ್ಲಿದ್ದ ಮದ್ಯ ತುಂಬಿದ ಬಾಟಿಲಿಗಳನ್ನು ಪರಿಶೀಲಿಸಲಾಗಿ 1) GOLD & BLACK XXX RUM ಎಂದು ಬರೆದಿರುವ 750 ಎಂ.ಎಲ್‌ ಇರುವ ಬಾಟಲಿಗಳು -20, ಇದರ ಬಾರ್‌ ಕೋಡ್‌ ನಂಬ್ರ 0711745894914 ಆಗಿರುತ್ತದೆ. ಒಟ್ಟು 15 ಲೀಟರ್‌ ಮದ್ಯ ಆಗಿದ್ದು, ಒಟ್ಟು ಮೌಲ್ಯ 4,000/- ರೂ ಆಗಿದ್ದು, ಸದರಿ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ 1965ಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಅಸ್ವಾಭಾವಿಕ ಮರಣ ಪ್ರಕರಣ

 

ಮಣಿಪಾಲ: ಪಿರ್ಯಾದಿ ರತ್ನ ಇವರ ತಮ್ಮ ಉಮೇಶ್‌ ನಾಯ್ಕ (47) ಎಂಬವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು, ದಿನಾಂಕ: 05.05.2023 ರಂದು ಮಧ್ಯಾಹ್ನ ಅಲೆವೂರಿನ ಜೋಡು ರಸ್ತೆಯ ಬಳಿ ವಿಪರೀತ ಮದ್ಯಪಾನ ಮಾಡಿ ಬಿದ್ದಾಗ ತಲೆಗೆ ಪೆಟ್ಟಾಗಿದ್ದು, ದಿನಾಂಕ: 06.05.2023 ರಂದು ಕೂಡಾ ಅಲೆವೂರಿನ ಜೋಡು ರಸ್ತೆಯ ಬಳಿ ಇರುವ ನಿರ್ಮಲಾ ಬಾರ್‌ ಬಳಿ ಮದ್ಯಪಾನ ಮಾಡಿ ಬಿದ್ದಿದ್ದ ಉಮೇಶ್‌ ನಾಯ್ಕ ನನ್ನು ನಿತ್ಯಾನಂದ ಒಳಕಾಡುರವರು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಅಜ್ಜರಕಾಡಿಗೆ ದಾಖಲಿಸಿದ್ದು, ವಿಷಯ ತಿಳಿದ ಪಿರ್ಯಾದಿದಾರರು ಅಜ್ಜರಕಾಡು ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ವಿಚಾರಿಸಿದಾಗ ಉಮೇಶ್‌ ನಾಯ್ಕನು ದಿನಾಂಕ: 06.05.2023 ರಂದು ಮಧ್ಯಾಹ್ನ 1:27 ಗಂಟೆಗೆ ಆಸ್ಪತ್ರೆಗೆ ತರುವಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 21/2023  ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-05-2023 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080