ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

  • ಕಾರ್ಕಳ : ಫಿರ್ಯಾದು ಶ್ರೀಮತಿ ಬೇಬಿ , 44 ವರ್ಷ, ಗಂಡ: ವಿಜಯ, ವಾಸ: 3 ಸೆಂಟ್ಸ್ , ಪತ್ತೊಂಜಿಕಟ್ಟೆ, ಕಾರ್ಕಳ ಕಸಬಾ ಗ್ರಾಮ, ಕಾರ್ಕಳ ತಾಲೂಕು. ಇವರು ಕಾರ್ಕಳ ಕಸಬಾದ ಪತ್ತೊಂಜಿಕಟ್ಟೆ ಎಂಬಲ್ಲಿ ಅಳಿಯ ಅಣ್ಣಪ್ಪನ ಮನೆಯಲ್ಲಿ, ಅಳಿಯ ಅಣ್ಣಪ್ಪ ಮಗಳು ಪುಷ್ಪ ಪ್ರಾಯ: 23 ವರ್ಷ, ಫಿರ್ಯಾದುದಾರರ ಮಕ್ಕಳಾದ ಜೀವಿತಾ, ಶಿವಾನಂದ, ಗಣೇಶ ಇವರೊಂದಿಗೆ ವಾಸವಾಗಿದ್ದು ಮಗಳು ಪುಷ್ಪ ಮತ್ತು ಅಣ್ಣಪ್ಪನಿಗೆ 27-05-2017 ರಂದು ಮದುವೆಯಾಗಿದ್ದು ಮದುವೆಯಾಗಿ 6 ವರ್ಷವಾಗಿದ್ದು, ನಾಲ್ಕೂವರೆ ವರ್ಷದ ಗಂಡು ಮಗು ಇರುತ್ತದೆ. ಪುಷ್ಪ ಗೇರು ಬೀಜ ಸಿಪ್ಪೆ ತೆಗೆಯುವ ಕೆಲಸ ಮಾಡಿಕೊಂಡಿದ್ದು ಅಣ್ಣಪ್ಪ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ನಿನ್ನೆ ದಿನಾಂಕ 06-05-2023 ರಂದು ಸಂಜೆ ಪುಷ್ಪ ಮತ್ತು ಅವಳ ಗಂಡ ಅಣ್ಣಪ್ಪನಿಗೆ ಸ್ವಸಹಾಯ ಸಂಘದ ಸಾಲ ಕಟ್ಟುವ ಬಗ್ಗೆ ಚರ್ಚೆಯಾಗಿದ್ದು ನಾಳೆ ಬೆಳಿಗ್ಗೆ 6 ಗಂಟೆಗೆ ಹಣದ ವ್ಯವಸ್ಥೆ ಮಾಡುತ್ತೇನೆಂದು ಅಣ್ಣಪ್ಪ ಹೇಳಿದ್ದು, ಆದರೂ ಪುಷ್ಪಳು ಈಗಲೇ ಹಣ ಬೇಕೆಂದು ಹೇಳಿ ಅವರೊಳಗೆ ಮಾತಿಗೆ ಮಾತು ಬೆಳೆದು ಚರ್ಚೆ ಆಗಿದ್ದು ಮಧ್ಯ ರಾತ್ರಿಯ ನಂತರ ದಿನಾಂಕ 07-05-2023 ರಂದು ಬೆಳಗ್ಗಿನ ಜಾವ 01-30 ಗಂಟೆಗೆ ಫಿರ್ಯಾದುದಾರರಿಗೆ ಎಚ್ಚರವಾಗಿ ಮಗಳ ರೂಮಿಗೆ ಹೋಗಿ ನೋಡಿದಾಗ ಅವಳು ಕುಳಿತುಕೊಂಡು ಮೊಬೈಲ್ ನೋಡುತ್ತಿದ್ದು ಯಾಕೆ ರೂಮಿಗೆ ಬಂದೀ ಎಂದು ಫಿರ್ಯಾದುದಾರರಿಗೆ ಜೋರು ಮಾಡಿದ್ದಳು. ನಂತರ 02-00 ಗಂಟೆ ಸುಮಾರಿಗೆ ಫಿರ್ಯಾದುದಾರರು ನೀರು ಕುಡಿಯಲೆಂದು ಅಡುಗೆ ಕೋಣೆಗೆ ಹೋದಾಗ ಅಡುಗೆಕೋಣೆ ಹತ್ತಿರ ಇರುವ ಅವಳ ರೂಮಿನಲ್ಲಿ ಕಾಲು ನೇತಾಡುತ್ತಿರುವುದು ನೋಡಿ ಲೈಟ್ ಹಾಕಿದಾಗ ಅವಳು ಸೀರೆಯಿಂದ ಕುತ್ತಿಗೆಗೆ ನೇಣು ಹಾಕಿಕೊಂಡು ಮಾಡಿಗೆ ಕಟ್ಟಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಕೂಡಲೇ ಬೊಬ್ಬೆ ಹಾಕಿದಾಗ ಅಲ್ಲಿಯೇ ಮಲಗಿದ್ದ ಅಳಿಯ ಮಕ್ಕಳು ಎದ್ದಿದ್ದು ಕೂಡಲೇ ಅವಳನ್ನು ನೇಣಿನಿಂದ ಬಿಡಿಸಿ ನೀರು ಕುಡಿಸಿ ಉಪಚರಿಸಿ ಕಾರ್ಕಳ ಸರಕಾರಿ ಆಸ್ಪತ್ರೆಗೆ 02-50 ಗಂಟೆಗೆ ಕರೆದುಕೊಂಡು ಹೋದಾಗ ಪುಷ್ಪ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪುಷ್ಪಳು ಅವಳ ಗಂಡ ಅಣ್ಣಪ್ಪನೊಂದಿಗೆ ಸ್ವಸಹಾಯ ಸಂಘದ ಸಾಲ ಕಟ್ಟುವ ವಿಚಾರಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳವಾಗಿದ್ದು ಅದೇ ಕಾರಣದಿಂದ ಮನಸ್ಸಿಗೆ ಬೇಸರಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ : 18/2023ಕಲಂ 174 CRPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು: ಫಿರ್ಯಾದು ಕಿರಣ ರಾಜ್ ಖಾರ್ವಿ ( 28 ವರ್ಷ) ತಂದೆ: ವಾಸು ಖಾರ್ವಿ ವಾಸ: ತಾರಾಪತಿ ಪೋಸ್ಟ್ , ಪಡುವರಿ ಗ್ರಾಮಬೈಂದೂರು ತಾಲೂಕು ಇವರು ಪಡುವರಿ ಗ್ರಾಮದ ತಾರಾಪತಿ ಯಲ್ಲಿ ತನ್ನ ಅಜ್ಜಿ ಲಕ್ಷ್ಮೀ (70 ವರ್ಷ) ಎಂಬವರೊಂದಿಗೆ ವಾಸಮಾಡಿಕೊಂಡಿದ್ದು, ಲಕ್ಷ್ಮೀ ಯವರು ಗಂಡ ತೀರಿ ಹೋದ ನಂತರ ಮಾನಸಿಕ ಖಿನ್ನತೆಗೆ ಒಳಗಾಗಿ ವಿಪರೀತ ಕುಡಿಯುವ ಚಟವನ್ನು ಹೊಂದಿದ್ದು ಇದೇ ಕಾರಣದಿಂದ ಮಾನಸಿಕವಾಗಿ ನೊಂದು ದಿನಾಂಕ 05/05/2023 ಸಂಜೆ 7:00 ಗಂಟೆಗೆ ಮನೆಯಲ್ಲಿ ಇಲಿಗೆ ಹಾಕಲು ಇರಿಸಿದ್ದ ಮದ್ದನ್ನು ಸೇವಿಸಿ ಅಸ್ವಸ್ಥ ಗೊಂಡವರನ್ನು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ಪರೀಕ್ಷೀಸಿದ ವೈದ್ಯರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಉಡುಪಿಗೆ ಕರೆದುಕೊಂಡು ಹೋಗಿ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದ ಲಕ್ಷ್ಮೀ ರವರು ಚಿಕಿತ್ಸೆ ಗೆ ಸ್ಪಂದಿಸದೇ ದಿನಾಂಕ 06/05/2023 ರಂದು ಸಂಜೆ 5:49 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯುಡಿಆರ್ ಕ್ರಮಾಂಕ : 28/2023 ಕಲಂ. 174 ಸಿ ಆರ್ ಪಿ ಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಇತರ ಪ್ರಕರಣ :

  • ಗಂಗೊಳ್ಳಿ : ಪಿರ್ಯಾದಿ ಮಾಲತೇಶ (33) ಇವರು ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಯ ಪಯುಕ್ತ ದಿನಾಂಕ 24/03/2023 ರಂದು ಮಾನ್ಯ ಜಿಲ್ಲಾಧಿಕಾರಿಯವರು ಎಫ್ ಎಸ್ ಟಿ 2 ಕರ್ತವ್ಯಕ್ಕೆ ನೇಮಿಸಿರುತ್ತಾರೆ ಅದರಂತೆ ದಿನಾಕ 06/05/2023 ರಂದು ಅಪರಾಹ್ನ 3.30 ಗಂಟೆಗೆ ಬೈಂದೂರಿನ ಆರ್ .ಓ ಕಛೇರಿ ಇಂದ ಪಿರ್ಯಾದಿದಾರರ ಮೊಬೈಲಿಗೆ ವಾಟ್ಸಪ್ ವಿಡಿಯೋ ಮತ್ತು ಒಂದು ಲೆಟರನ್ನು ಕಳುಹಿಸಿದ್ದು ಅದನ್ನು ಪರೀಶೀಲಿಸಿದಾಗ ದಿನಾಂಕ 05/05/2023 ರಂದು ಗಂಗೊಳ್ಳಿಯ ಮಲ್ಯಾರಬೆಟ್ಟು ಎಂಬಲ್ಲಿ ಶ್ರೀಧರ ಶೇರಿಗಾರ, ರಾಘವೇಂದ್ರ ಮ್ಯಾಣೆ, ರಾಮಪ್ಪ ಖಾರ್ವಿ ಯಶ್ವಂತ ಖಾರ್ವಿ ಮತ್ತು ಇತರರು ಸೇರಿ ಸಾರ್ವಜನಿಕ ಸ್ಥಳದಲ್ಲಿ ಚುನಾವಣಾ ಪ್ರಚಾರದ ಹೆಸರಿನಲ್ಲಿ ಯಾವುದೇ ಅನುತಿಯನ್ನು ಪಡೆಯದೇ ಸಭೆಯನ್ನು ನಡೆಸಿದ್ದು ಸಭೆಯಲ್ಲಿ ಶ್ರೀಧರ ಎಂಬವವರು ಸಾರ್ವಜನಿರನ್ನು ಉದ್ದೇಶಿಸಿ ಉದ್ರೇಖ ಕಾರಿ ಭಾಷಣವನ್ನು ಭಾಷಣವನ್ನು ಮಾಡುವ ಮೂಲಕ ಒಂದು ನಿರ್ದಿಷ್ಟ ಧರ್ಮವನ್ನು ಎತ್ತಿ ಕಟ್ಟುವುದು ಚುನಾವಣಾ ಸಮಯದಲ್ಲಿ ಕೋಮು ಗಲಾಟೆ, ದೊಂಬಿ ಉಂಟಾಗುವ ಸಾಧ್ಯತೆ ಇರುವುದಾಗಿದೆ ಹಾಗೂ ಆಪಾದಿತರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ : 55/2023 ಕಲಂ:153,171(H),,505(2) R/W 34 IPC ಮತ್ತು 125, ಆರ್‌.ಪಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
  • ಗಂಗೊಳ್ಳಿ : ಪಿರ್ಯಾದಿದಾರರಾದ ಸುಜಾತ ಪಿ ಶೆಟ್ಟಿ ( 58 ವರ್ಷ) ಗಂಡ: ಪ್ರಭಾಕರ ಶೆಟ್ಟಿ ವಾಸ: ಕಡ್ಕೆ, ಕೆಂಬೈಲು, ನಾಡಗುಡ್ಡೆಯಂಗಡಿ ನಾಡ ಗ್ರಾಮ ಬೈಂದೂರು ತಾಲೂಕು ಯವರು ಹಾಗೂ ಅವರ ಗಂಡ ಪ್ರಭಾಕರ ಶೆಟ್ಟಿಯವರು ಚಿಕ್ಕಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದು ಆಗಾಗ ಬೈಂದೂರು ತಾಲೂಕು ನಾಡ ಗ್ರಾಮದ ಕಡ್ಕೆ ಕೆಂಬೈಲು ಎಂಬಲ್ಲಿರುವ ತಮ್ಮ ಸ್ವಂತ ಮನೆಗೆ ಬಂದು ವಾಸಮಾಡುತ್ತೀರುವುದಾಗಿದೆ. ಅದರಂತೆ ಪಿರ್ಯಾದಿದಾರರಿಗೆ ಇರುವ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಮಾಡಿಕೊಳ್ಳುವ ಬಗ್ಗೆ ದಿನಾಂಕ: 30.04.2023 ರಂದು ತಮ್ಮ ಸ್ವಂತ ಮನೆಗೆ ಬಂದು ವಾಸ್ತವ್ಯ ಇದ್ದರು. ಈ ಸಮಯ ಮನೆಯಲ್ಲಿರುವ ಪಿರ್ಯಾದಿದಾರರ ಮಗ ಪ್ರದೀಪ ಶೆಟ್ಟಿ ಹಾಗೂ ಸೊಸೆ ರಿಚೆಲ್‌ ಮಿಸ್ಕಿಟಾ ರವರು ತಮಗೆ ಮನೆಯ ಪಾಲು ಕೊ,ಡುವಂತೆ ಪದೇ ಪದೇ ಕೇಳುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರು ಜಾಗದ ದಾಖಲಾತಿಗಳು ಸರಿ ಇಲ್ಲ ಪಾಲು ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದು, ಅದೇ ವಿಷಯಕ್ಕೆ ಆಪಾದಿತರು ಗಲಾಟೆ ಮಾಡುತ್ತಿದ್ದರು, ದಿನಾಂಕ: 05.05.2023 ರಂದು ಬೆಳಿಗ್ಗೆ 09:00 ಗಂಟೆಗೆ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಮಣಿಪಾಲ ಆಸ್ಪತ್ರೆಗೆ ಹೋಗುವರೇ ಮನೆಯಿಂದ ಹೋಗುವಾಗ ಆಪಾದಿತರು ಮನೆಯ ಅಂಗಳದಲ್ಲಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು, ಎಲ್ಲಿಗೆ ಹೋಗುವುದು ನೀವು ನಮಗೆ ಮನೆಯಲ್ಲಿ ಪಾಲು ಕೊಡದೆ ಇದ್ದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾದ ಕ್ರಮಾಂಕ : 53/2023 ಕಲಂ: 341, 504, 506 r/w 34 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 07-05-2023 06:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080