ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಮಾಸೆಬೈಲು : ಪಿರ್ಯಾದಿದಾರರಾದ ಸಾಜನ್ ಪಿ ಜೇಮ್ಸ್ (51), ತಂದೆ ಪಿ ಜೆ ಜೇಮ್ಸ್, ವಾಸ: ಬೂರದ ಜೆಡ್ಡು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ 05/05/2022 ರಂದು ಶೇಡಿಮನೆ ಗ್ರಾಮದಿಂದ ಗೋಳಿಯಂಗಡಿ ಕಡೆಗೆ ಜೀಪ್ ನಂಬ್ರ KA-20-Z-5094 ನೇ ದರಲ್ಲಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಶೇಡಿಮನೆ ಗ್ರಾಮದ ಅಶ್ವಿನಿ ಹೇರ್ ಆಯಿಲ್ ಪ್ಯಾಕ್ಟರಿಯ ಹತ್ತಿರ ತಲುಪುವಾಗ 17:30 ಗಂಟೆ ಸಮಯಕ್ಕೆ ಎದುರುಗಡೆಯಿಂದ ಗೋಳಿಅಂಗಡಿ ಕಡೆಯಿಂದ KA-20-EX- 4954 ನೇ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುವುದನ್ನು ಪಿರ್ಯಾದಿದಾರರು ನೋಡಿ  ತಾನು ಚಲಾಯಿಸುತ್ತಿದ್ದ ಜೀಪನ್ನು ತೀರ ಎಡಬದಿಗೆ ತಂದಿದ್ದು  KA-20-EX- 4954 ನೇ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲ್ ನ್ನು ತೀರಾ ಬಲಬದಿಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಜೀಪಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಕೆಳಗೆ ಬಿದ್ದು ಕೈಗೆ ಪೆಟ್ಟಾಗಿರುತ್ತದೆ  ನಂತರ ಸಾರ್ವಜನಿಕರು ಆತನನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಅಪಘಾತದ ಪರಿಣಾಮ ಎರಡೂ ವಾಹನ ಜಖಂ ಗೊಂಡಿರುತ್ತದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 279 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ರತ್ನಾಕರ (35), ತಂದೆ : ಶ್ರೀಧರ ಆಚಾರ್ಯ, ವಾಸ : ವ್ಯಾಸ ನಿಲಯ, ಹೊಸ ಮಾರಿಗುಡಿ ಹಿಂಬದಿ, ಪಡು ಗ್ರಾಮ, ಕಾಪು ತಾಲೂಕು  ಮತ್ತು ಉಡುಪಿ ಜಿಲ್ಲೆ ಇವರ ತಮ್ಮ ಜಗದೀಶ ಆಚಾರ್ಯ (32) ರವರಿಗೆ 8 ವರ್ಷಗಳಿಂದ ವಿಪರೀತ ಶರಾಬು ಕುಡಿತದ ಅಭ್ಯಾಸ ಇದ್ದು, ಇತ್ತೀಚೆಗೆ, ಕೆಲಸಕ್ಕೂ  ಸರಿಯಾಗಿ ಹೋಗದೇ ಶರಾಬು ಕುಡಿದುಕೊಂಡೆ ಕಾಪು ಪರಿಸರದಲ್ಲಿ ಸುತ್ತಾಡುತ್ತಿದ್ದು,  ದಿನಾಂಕ 06/05/2022 ರಂದು ಸಂಜೆ 5:45 ಗಂಟೆಗೆ ಪಿರ್ಯಾದಿದಾರರಿಗೆ ಸ್ಥಳೀಯರೊಬ್ಬರು ಫೋನ್ ಕರೆ ಮಾಡಿ ಕಾಪು ಲಕ್ಷ್ಮೀಂದ್ರ ಬಲ್ಲಾಳ್ ಎಂಬುವವರ ಗದ್ದೆಯಲ್ಲಿ ನಿಮ್ಮ ತಮ್ಮ ಜಗದೀಶ ಆಚಾರ್ಯ ರವರು ಮುಖ ಅಡಿಯಾಗಿ ಬಿದ್ದಿದ್ದು, ಮಾತನಾಡುತ್ತಿಲ್ಲ ಎಂದು ತಿಳಿಸಿದಂತೆ ಪಿರ್ಯಾದಿದಾರರು ಹೋಗಿ ಊರಿನವರೊಂದಿಗೆ ನೋಡುವಾಗ ತಮ್ಮ ಮೃತ ಪಟ್ಟಿರುವುದಾಗಿ ತಿಳಿಯಿತು.  ಜಗದೀಶ ಆಚಾರ್ಯ ವಿಪರೀತ ಶರಾಬು ಕುಡಿತದ  ಚಟ ಹೊಂದಿದ್ದು ಶರಾಬು ಕುಡಿದುಕೊಂಡು ಅನ್ನ ನೀರನ್ನು ಸೇವಿಸದೇ ಇದ್ದು ದಿನಾಂಕ 06/05/2022 ರಂದು ಬೆಳಗ್ಗೆ 11:00 ಗಂಟೆಯಿಂದ ಸಂಜೆ 5:45 ಗಂಟೆಯ ಮದ್ಯಾವಧಿಯಲ್ಲಿಯೇ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ಉಡುಪಿ ತಾಲೂಕು ,ಹಿರೇಬೆಟ್ಟು ಗ್ರಾಮದ , ಬಾಳ್ಕಟ್ಟು ಬೀಡು ಎಂಬಲ್ಲಿ ದಿನಾಂಕ 05/05/2022 ರಂದು 18:30 ಗಂಟೆಯಿಂದ ದಿನಾಂಕ 06/05/2022 ಬೆಳಿಗ್ಗೆ 09:30 ರ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಪ್ರಥ್ವಿರಾಜ ಬಿ ಶೆಟ್ಟಿ (56), ತಂದೆ: ಬಾಸ್ಕರ್ ಶೆಟ್ಟಿ ವಾಸ: B-401, ಸಾಯಿ ರಾಧಾ ಪ್ಯಾಲೆಸ್ ಬ್ರಹ್ಮಗಿರಿ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಕುಟುಂಬದ ಬಾಳ್ಕಟ್ಟು ಬೀಡು ಮನೆಯ ಆವರಣದಲ್ಲಿರುವ  ದೈವದ ಮನೆಯ ಬಾಗಿಲು ಚಿಲಕವನ್ನು ಮುರಿದು ಒಳ ಪ್ರವೇಶಿಸಿ 51,000/- ರೂಪಾಯಿ ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸಾಮಾಗ್ರಿಗಳನ್ನು ಕಳುವು ಮಾಡಿಕೊಂಡು ಹೊಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2022  ಕಲಂ: 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬಿ. ಪ್ರೇಮಾನಂದ ಶೆಟ್ಟಿ (70), ತಂದೆ:ದಿ. ಶೀನಪ್ಪ ಶೆಟ್ಟಿ, ವಾಸ: ಸುಂದರಿ, ಕಾಂಗ್ರೆಸ್ ಭವನದ ಬಳಿ, ನಾಯರ್‌ಕೆರೆ, ಬ್ರಹ್ಮಗಿರಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರಿಗೆ ಅರೋಪಿ ಸ್ಯಾಮುವೆಲ್ ರಿಜೋಯ್‌ ಆನಂದ @ ಸ್ಯಾಮುವೆಲ್ ಡಿ’ಸೋಜ ಎಂಬವರ ಪರಿಚಯವಿದ್ದು, 2019 ರಲ್ಲಿ ವ್ಯವಹಾರಕ್ಕೆ ಹಣ ಬೇಕೆಂದು ಕೇಳಿರುತ್ತಾರೆ. ಅದರಂತೆ ಆರೋಪಿಯ ಮಾತನ್ನು ನಂಬಿ ಪಿರ್ಯಾದಿದಾರರು 3,50,000/- ವನ್ನು ಸಾಲವಾಗಿ ನೀಡಿರುತ್ತಾರೆ. ನಂತರ ಆರೋಪಿಯು ಪಿರ್ಯಾದಿದಾರರಿಗೆ ಹಣವನ್ನು ವಾಪಾಸ್ಸು ನೀಡಿರುವುದಿಲ್ಲ. ನಂತರ ಆರೋಪಿಯು ಪಿರ್ಯಾದಿದಾರರಿಗೆ ತಾನು ಕೊಡಬೇಕಾದ ಸಾಲದ ಹಣಕ್ಕೆ ದಿನಾಂಕ 24/01/2022 ರ ಬ್ಯಾಂಕ್‌ ಆಫ್‌ ಬರೋಡ ಕೊರಂಗ್ರಪಾಡಿಯ ಶಾಖೆಯ ಚೆಕ್  ನ್ನು ನೀಡಿರುತ್ತಾರೆ. ಆರೋಪಿಯ ಮಾತನ್ನು ನಂಬಿ ಚೆಕ್‌ನ್ನು ಪಿರ್ಯಾದಿದಾರರು ನಗದೀಕರಣಕ್ಕೆ ಹಾಕಿದಾಗ ಆತನ ಖಾತೆಯಲ್ಲಿ ನಗದೀಕರಣಗೊಳ್ಳಲು ಸಾಕಷ್ಟು ಹಣವಿಲ್ಲವೆಂದು ಚೆಕ್ ಬೌನ್ಸ್ ಆಗಿರುತ್ತದೆ. ಆ ಬಗ್ಗೆ ಪಿರ್ಯಾದಿದಾರರಿಗೆ ಹಣವನ್ನು  ಹಿಂತಿರುಗಿಸಿ ನೀಡದೇ ಮೋಸ ವಂಚನೆ ಮಾಡುವ ಉದ್ದೇಶದಿಂದ ನಷ್ಟ ಉಂಟು ಮಾಡಿರುತ್ತಾರೆ . ಪಿರ್ಯಾದಿದಾರರು ಅರೋಪಿತರಲ್ಲಿ ವಿಚಾರಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು ಇನ್ನು ಮುಂದೆ ಹಣ ಕೇಳಿದಲ್ಲಿ ಕೊಂದು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 420,406,504,506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಮಂಜುನಾಥ ಕಾರಂತ (40), ತಂದೆ: ಗಣೇಶ್ ಕಾರಂತ, ವಾಸ:ಗುರುಪ್ರಸಾದ್,76 ಬಡಗುಬೆಟ್ಟು,ಬೈಲೂರು,ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಉಡುಪಿಯ ಔಷಧ ಮಾರಾಟ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಪಿರ್ಯಾದಿದಾರರಿಗೆ ಅರೋಪಿ ಅಶೋಕ್‌ ಕುಮಾರ್‌ ಎಂಬುವವರ ಪರಿಚಯವಿದ್ದು ಅವರು ಗ್ಲೋಬಲ್ ಟೈಮ್ಸ್‌ ಟ್ರೇಡರ್ಸ್ ಎಂಬ ಕಛೇರಿಯನ್ನು ನಡೆಸಿಕೊಂಡಿರುತ್ತಾರೆ. ಆರೋಪಿಯು ತನ್ನಲ್ಲಿ ಹಣ ಹೂಡಿಕೆ ಮಾಡಿದರೆ ಉತ್ತಮ ಲಾಭಾಂಶ ನಿಯಮಿತವಾಗಿ ಕೊಡುವುದಾಗಿ ತಿಳಿಸಿದ್ದು, ಕೇಳಿದಾಗ ಸಂಪೂರ್ಣ ಹಿಂದೆ ಕೊಡುವುದಾಗಿ ಅಶ್ವಾಸನೆ ನೀಡಿರುತ್ತಾನೆ. ಅದರಂತೆ ಆರೋಪಿಯ ಮಾತನ್ನು ನಂಬಿ ಪಿರ್ಯಾದಿದಾರರು ದಿನಾಂಕ 24/06/2021 ರಂದು 1,00,000/- ರೂಪಾಯಿ ಹಣವನ್ನು ಹೂಡಿಕೆಯ ಬಗ್ಗೆ ನೀಡಿರುತ್ತಾರೆ.  ಹಣ ಪಡೆದ ನಂತರ ಸ್ವಲ್ಪ ದಿನ ಪಿರ್ಯಾದಿದಾರರ ಬ್ಯಾಂಕ್‌ ಖಾತೆಗೆ ಲಾಭಾಂಶ ಹಣವನ್ನು ಸಂದಾಯ ಮಾಡಿರುತ್ತಾನೆ. ಪಿರ್ಯಾದಿದಾರರನ್ನು ನಂಬಿಸಿದಂತೆ ಆರೋಪಿಯು ಪಿರ್ಯಾದಿದಾರರು ನೀಡಿದ ಹೂಡಿಕೆಯ ಹಣವನ್ನು ಸಹಾ ವಾಪಾಸು ಮಾಡದೇ ನಂಬಿಕೆ ದ್ರೋಹ ಮಾಡಿ, ಮೋಸ ಮಾಡಿ ಪಿರ್ಯಾದಿದಾರರಿಗೆ ನಷ್ಟವುಂಟು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2022 ಕಲಂ: 409,417,418,420  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ: ಪಿರ್ಯಾದಿದಾರರಾದ ಎಸ್.‌ ಬಾಲಕೃಷ್ಣ ಹೆಗ್ಡೆ (58), ತಂದೆ: ಬಿ. ಜಗನ್ನಾಥ ಹೆಗ್ಡೆ, ವಾಸ: ಅಮೂಲ್ಯ ಹೌಸ್‌, ಬಾರ್ಕೂರು, ಹೊಸಾಳ  ಗ್ರಾಮ ಬ್ರಹ್ಮಾವರ ತಾಲೂಕು ಇವರು 2011-12 ರಲ್ಲಿ ಶ್ರೀನಿವಾಸ ಶೆಟ್ಟಿಗಾರ್‌ ಹನೇಹಳ್ಳಿ ರವರ ಸಹ ಭಾಗಿತ್ವದಲ್ಲಿ ಬ್ರಹ್ಮಾವರ ತಾಲೂಕಿನ ಬಾರ್ಕೂರು ಸರ್ವೋದಯ ಕ್ರೇಡಿಟ್‌ ಸೌಹಾರ್ದ ಸೋಸೈಟಿ ಎನ್.‌ ರಲ್ಲಿ JCB ವಾಹನ ( ನೊಂದಣಿ ನಂ. KA.20/P.3578] ಖರೀದಿ ಮಾಡಲು ಅದನ್ನು ಅಡಮಾನ ವಿರಿಸಿ ರೂಪಾಯಿ 30 ಲಕ್ಷ ಸಾಲವನ್ನು ಪಡೆದಿದ್ದು, ಆ ಸಮಯ  ಬ್ಯಾಂಕಿನ ವ್ಯವಸ್ಥಾಪಕರರಾದ ಆರೋಪಿ ನಿತ್ಯಾನಂದ ಕಾಮತ್‌ ರವರು ಪಿರ್ಯಾದಿದಾರರಿಂದ ಹಲವು ದಾಖಲೆ ಹಾಗೂ ಸಹಿ ಮಾಡಿದ ಖಾಲಿ ಚೆಕ್‌ ಗಳನ್ನು ತೆಗೆದುಕೊಂಡಿರುತ್ತಾರೆ. ನಂತರ  2021 ರಲ್ಲಿ ಪಿರ್ಯಾದಿದಾರರು ತಾವು ಪಡೆದ ಎಲ್ಲಾ ಸಾಲದ ಹಣವನ್ನು ಬಡ್ಡಿ ಸಮೇತ ತೀರಿಸಿದ ನಂತರ ಅವರು ಸಾಲ ಪಡೆಯುವ ಸಮಯ ಕೊಟ್ಟಿದ್ದ ದಾಖಲೆ ಹಾಗೂ  ಸಹಿ ಮಾಡಿದ ಖಾಲಿ ಚೆಕ್‌ ಗಳನ್ನು ಹಲವು ಬಾರಿ ಆರೋಪಿಯ ಬಳಿ ಕೇಳಿದರೂ  ವಾಪಾಸ್ಸು ನೀಡಿರುವುದಿಲ್ಲ. ಅಲ್ಲದೇ ಸಾಲ ಮುಕ್ತಾಯವಾದ ಬಗ್ಗೆ  ಕ್ಲೀಯರೆನ್ಸ್‌ ಲೆಟರ್‌ನ್ನು ನೀಡಿರುವುದಿಲ್ಲ. ಪಿರ್ಯಾದಿದಾರರು ತಾವು ಸಾಲದಿಂದ ಪಡೆದ  JCB ವಾಹನವನ್ನು ರಾಜೇಂದ್ರ ಪ್ರಸಾದ್‌ ಎಂಬುವವರು  ಆರೋಪಿಯ ಸಂಸ್ಥೆಯಿಂದ  ಸಾಲವನ್ನು ಪಡೆದು  ಖರೀದಿ ಮಾಡಿರುತ್ತಾರೆ.  ಆ ಸಮಯ ಬಾಬು ರಾಜೇಂದ್ರ ಪ್ರಸಾದ್‌ ರವರಿಗೆ ಸಾಲದ ಹಣ ಮಂಜೂರು ಮಾಡುವ ಬಗ್ಗೆ ಆರೋಪಿಯು  ರಾಜೇಂದ್ರ ಪ್ರಸಾದ್‌ ರವರಿಂದ ಸಾಲ ಮರು ಪಾವತಿಯ ಬಗ್ಗೆ ಸಾಕಷ್ಟು ದಾಖಲಾತಿಗಳನ್ನು ಪಡೆದಿರುವುದಾಗಿ ಪಿರ್ಯಾದಿದಾರರನ್ನು ನಂಬಿಸಿ ಅವರಿಂದ ಸಾಲಕ್ಕೆ ಸಾಕ್ಷಿ ರೂಪದಲ್ಲಿ ಸಹಿಯನ್ನು ಪಡೆದಿರುತ್ತಾರೆ. ಆಗ ಕೂಡ ಪಿರ್ಯಾದಿದಾರರು ಆರೋಪಿಯ ಹತ್ತಿರ ತನ್ನ ಸಾಲ ತೀರಿದ ಬಗ್ಗೆ ತಾವು ನೀಡಿದ ದಾಖಲೆ ಹಾಗೂ ಚೆಕ್‌ಗಳನ್ನು ವಾಪಾಸ್ಸು ನೀಡುವಂತೆ ಕೇಳಿಕೊಂಡರು ಆರೋಪಿಯು ವಾಪಾಸ್ಸು ನೀಡಿರುವುದಿಲ್ಲ. ಆದರೆ ದಿನಾಂಕ 30/05/2019 ರಂದು ಆರೋಪಿಯು ಪಿರ್ಯಾದಿದಾರರಿಗೆ ರೂಪಾಯಿ 9,83,300/- ಸಾಲದ ಮೊತ್ತ ಬಾಕಿ ಇರುವ ಬಗ್ಗೆ ನೋಟಿಸು ನೀಡಿದ್ದು, ಈ ಬಗ್ಗೆ ಪಿರ್ಯಾದಿದಾರರು ಆರೋಪಿಯ ಕಛೇರಿಗೆ ಹೋಗಿ ವಿಚಾರಿಸಿದಾಗ ಬಾಬು ರಾಜೇಂದ್ರ ಪ್ರಸಾದ್‌ಗೆ ಸಾಲ ಕೊಡುವ ಸಂಧರ್ಬ ಆರೋಪಿಯು ಕಾನೂನು ಬಾಹಿರವಾಗಿ ಪಿರ್ಯಾದಿದಾರರು ಸಾಲ ಪಡೆಯುವಾಗ ಇಟ್ಟುಕೊಂಡಿದ್ದ  ಚೆಕ್‌ನ್ನು ಸೆಕ್ಯೂರಿಟಿ  ರೂಪದಲ್ಲಿ ಉಪಯೋಗಿಸಿಕೊಂಡಿರುತ್ತಾರೆ. ಪಿರ್ಯಾದಿದಾರರು ನಂಬಿಕೆಯ ಮೇಲೆ ಆರೋಪಿಗೆ ನೀಡಿದ ದಾಖಲಾತಿಗಳನ್ನು ದುರ್ಬಳಕೆ ಮಾಡಿ ಪಿರ್ಯಾದಿದಾರರಿಂದ ಹಣವನ್ನು ಕಬಳಿಸುವ ಸಲುವಾಗಿ ಪಿರ್ಯಾದಿದಾರರ ಮೇಲೆ ಚೆಕ್‌ ಬೌನ್ಸ್‌ ಕೇಸು ದಾಖಲಿಸಿರುತ್ತಾರೆ. ಅಲ್ಲದೇ ಈ ಬಗ್ಗೆ ಆರೋಪಿಯ ಬಳಿ ಕೇಳಿದಾಗ ಆರೋಪಿಯ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದಾರರಿಗೆ ಅವರ ಚೆಕ್‌ ಹಾಗೂ ದಾಖಲಾತಿಗಳನ್ನು ನೀಡಲು ನಿರಾಕರಿಸಿ, ಪಿರ್ಯಾದಿದಾರರಿಗೆ  ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಹಣ ಮರು ಪಾವತಿಯ ಬಗ್ಗೆ ಸುಳ್ಳು ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದು ಅಲ್ಲದೇ ರೂಪಾಯಿ 21,41,625/ ಹಣವನ್ನು ಕೇಸು ದಾಖಲಿಸುವ ಮೊದಲು ಮರು ಪಾವತಿಸುವಂತೆ ಪಿರ್ಯಾದಿದಾರರಿಗೆ ಹಾಗೂ ರಾಜೇಂದ್ರ ಪ್ರಸಾದ್‌ , ಗಂಗಾಧರ ಹೆಗ್ಡೆ ರವರಿಗೆ ನೋಟಿಸು ನೀಡಿ, ಪಿರ್ಯಾದಿದಾರರಿಗೆ  ದೌರ್ಜನ್ಯ ವೆಸಗಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2022 ಕಲಂ: 417, 420, 504, 506, 406 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-05-2022 09:34 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080