ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ದಯಾಕರ ಪೂಜಾರಿ (42) ತಂದೆ: ದಿ. ಕುಷ್ಠ ಪೂಜಾರಿ ವಾಸ: ಉಪ್ಲಾಡಿ ಬಡಾಬೆಟ್ಟು ಬನ್ನಾಡಿ ಗ್ರಾಮ ಬ್ರಹ್ಮಾವರ ಇವರು ದಿನಾಂಕ 06/05/2022 ರಂದು ರಾತ್ರಿ ಎಂದಿನಂತೆ ಕೆಲಸ ಮುಗಿಸಿ ಸಾಲಿಗ್ರಾಮ ಪೇಟೆಗೆ ಬಂದಿದ್ದು ವಾಪಾಸ್ಸು ಮನೆಗೆ ಹೋಗುವರೆ ಸಾಲಿಗ್ರಾಮ ಆಂಜನೇಯ ದೇವಸ್ಥಾನದ ತಿರುವಿನ ಬಳಿ ನಿಂತಿರುವಾಗ ದಯಾಕರ ರವರ ಪರಿಚಯದ ಹಾಗೂ ಪಕ್ಕದ ಮನೆಯ ವಾಸಿಯಾದ ಶೀನ ಪೂಜಾರಿ (56) ರವರು ಅವರ TVS ಮೊಪೆಡ್ ಮೋಟಾರ್ ಸೈಕಲ್ KA-20 EG-8308 ನೇದರಲ್ಲಿ ಸಾಲಿಗ್ರಾಮ ಗುರು ನರಸಿಂಹ ದೇವಸ್ಥಾನದ ಕಡೆಯಿಂದ ಬಂದು ಬಲಗಡೆ ತಿರುಗುವ ಬಗ್ಗೆ ಇಂಡಿಕೇಟರ್ ನೀಡಿ ರಾಷ್ಟ್ರೀಯ ಹೆದ್ದಾರಿ 66 ಕ್ಕೆ ಪ್ರವೇಶಿಸಿ ಕೋಟ ಕಡೆಗೆ ಹೋಗುತ್ತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರದ ಕಡೆಗೆ ರಸ್ತೆಯ ಪಶ್ಚಿಮ ಪಥದಲ್ಲಿ ಬರುತ್ತಿದ್ದ KA-19 F-3465 ನೇ KSRTC ಬಸ್ ಚಾಲಕ ಈಶ್ವರ ಎಂಬಾತನು ನಾಲ್ಕು ರಸ್ತೆಕೂಡುವ ಜಂಕ್ಷನ್ ಹಾಗೂ ಜೀಬ್ರಾ ಕ್ರಾಸ್ ಇದೆ ಎಂದು ತಿಳಿದು ಕೂಡ ಬಸ್ಸನ್ನು ಬಸ್ಸನ್ನು ನಿಧಾನಿಸದೇ ತಿರುವಾದ ರಸ್ತೆಯಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿಕೊಂಡು ಬಂದು ರಸ್ತೆಯಲ್ಲಿ ಕ್ರಮದಂತೆ ಹೋಗುತ್ತಿದ್ದ ಶೀನ ಪೂಜಾರಿ ಯವರು ಚಲಾಯಿಸುತ್ತಿದ್ದ ಸ್ಕೂಟಿರಿನ ಹಿಂಬದಿಗೆ ಢಿಕ್ಕಿ ಹೊಡೆದಿರುತ್ತಾನೆ ಪರಿಣಾಮ ಶೀನ ಪೂಜಾರಿಯವರು ಸ್ಕೂಟರ್    ಸಮೇತ ರಸ್ತೆಗೆ ಬಿದ್ದು ತಲೆಯ ಹಿಂಬದಿಗೆ ತೀವೃ ಸ್ವರೂಪದ ರಕ್ತಗಾಯವಾಗಿರುತ್ತದೆ. ಕೂಡಲೇ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 07/05/2022 ರಂದು ಬೆಳಿಗ್ಗೆ 03:33 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾರ್ಕಳ: ದಿನಾಂಕ 06/05/2022 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಕೆಮ್ಮಣ್ಣು ದ್ವಾರದ ಬಳಿ ಹಾದು ಹೋಗುವ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಕಾರು ನಂಬ್ರ KA-20 Z-9208 ನೇಯದರ ಚಾಲಕ ವಿಜಯ ಮುರಾರಿ ಎಂಬವರು ತಮ್ಮ ಕಾರನ್ನು ನಿಟ್ಟೆ ಕಡೆಯಿಂದ ಕೆಮ್ಮಣ್ಣು ದ್ವಾರದ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೆ ಆತನ ಬಲಬದಿಯಲ್ಲಿರುವ ಕೆಮ್ಮಣ್ಣು ದ್ವಾರದ ಕಡೆಗೆ ಹೋಗುವರೇ ನಿರ್ಲಕ್ಷತನದಿಂದ ಕೆಮ್ಮಣ್ಣು ದ್ವಾರದ ಕಡೆಗೆ ಚಲಾಯಿಸಿದ ಪರಿಣಾಮ ಕಾರ್ಕಳದಿಂದ ನಿಟ್ಟೆ ಕಡೆಗೆ ಹೋಗುತ್ತಿದ್ದ ಮೋಟಾರು ಸೈಕಲ್ ನಂಬ್ರ KA-20 S-3266 ನೇಯದಕ್ಕೆ ಢಿಕ್ಕಿ ಹೊಡೆದ ಪರಿಣಾಮ, ಮೋಟಾರು ಸೈಕಲ್ ಸವಾರ ರಮೇಶ್ ಶೆಟ್ಟಿಯವರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು, ಮೋಟಾರು ಸೈಕಲ್ ಸವಾರನ ಸೊಂಟಕ್ಕೆ ಮತ್ತು ಕೈಗೆ ಗುದ್ದಿದ ಗಾಯವಾಗಿರುತ್ತದೆ. ಗಾಯಾಳು ಮೋಟಾರು ಸೈಕಲ್ ಸವಾರ ರಮೇಶ್ ಶೆಟ್ಟಿ, ಕಾರ್ಕಳ ಗಾಜ್ರಿಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಹೆಬ್ರಿ: ಪಿರ್ಯಾದಿದಾರರಾದ ಉದಯ ಮಡಿವಾಳ (37) ತಂದೆ: ನಾರಾಯಣ ಮಡಿವಾಳ ವಾಸ: ಕಜ್ಕೆ ಅರಮನೆಜಡ್ಡು ಮುದ್ದೂರು ನಾಲ್ಕುರು ಗ್ರಾಮ ಬ್ರಹ್ಮಾವರ ರವರು ದಿನಾಂಕ 04/05/2022 ರಂದು ಅವರ KA-20 AB-1640 ನೇ ಆಟೋ ರಿಕ್ಷಾವನ್ನು ಚಲಾಯಿಸಿಕೊಂಡು ನಾಲ್ಕೂರು ರಿಕ್ಷಾ ಸ್ಟ್ಯಾಂಡ್ ಗೆ ಹೋಗುತ್ತಿರುವಾಗ ಅವರು ಮಧ್ಯಾಹ್ನ ಸಮಯ ಸುಮಾರು 02:00 ಗಂಟೆಗೆ ನಾಲ್ಕೂರು ಗ್ರಾಮದ ಮುದ್ದೂರು ಅರಮನೆಜಡ್ಡು ಪ್ರಭಾಕರ ಮಡಿವಾಳ ರವರ ಮನೆಯ ಹತ್ತಿರ ತಲುಪುವಾಗ ಅವರ  ಎದುರುಗಡೆಯಿಂದ ಅಂದರೆ ನಾಲ್ಕೂರು ಕಡೆಯಿಂದ ಕಜ್ಕೆ ಕಡೆಗೆ KA-20 AB-2733 ನೇ ನಂಬ್ರದ ಆಟೋ ರಿಕ್ಷಾವನ್ನು ಅದರ ಚಾಲಕ ಪ್ರಜ್ವಲ್ ಮರಕಾಲ ಎನ್ ರವರು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಉದಯ ಮಡಿವಾಲ ರವರು ಚಲಾಯಿಸುತ್ತಿದ್ದ  ರಿಕ್ಷಾಕ್ಕೆ ವರಿಸಿಕೊಂಡು ಹೋದ ಪರಿಣಾಮ ರಿಕ್ಷಾ ಮಗುಚಿ ಬಿದ್ದು ಉದಯ ಮಡಿವಾಳ ರವರು ಡಾಮರು ರಸ್ತೆಗೆ ಬಿದ್ದಿರುತ್ತಾರೆ. ಈ ಘಟನೆಯಿಂದ ಅವರ ಹಣೆಗೆ, ಎದೆಗೆ, ಹೊಟ್ಟೆಗೆ ತೀವ್ರ ಸ್ವರೂಪದ ಗುದ್ದಿದ ನೋವಾಗಿದ್ದು ಬೆನ್ನಿಗೆ ತರಚಿದ ಗಾಯವಾಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಶಂಕರನಾರಾಯಣ: ಪಿರ್ಯಾದಿದಾರರಾದ ನಾಗರಾಜ ಪೂಜಾರಿ (50) ತಂದೆ: ಬಚ್ಚ ಪೂಜಾರಿ, ವಾಸ: ತುಂಡು ಕುಮಾರಿ ಜೆಡ್ಡು ಮೂಡುಬಗೆ ಅಂಪಾರು ಅಂಚೆ ಮತ್ತು ಗ್ರಾಮ ಕುಂದಾಪುರ ಇವರ ತಮ್ಮ ರಾಘವೇಂದ್ರ (40) ಈತನು ಸುಮಾರು 10-15 ವರ್ಷಗಳಿಂದ ವಿಪರೀತ ಮದ್ಯಸೇವನೆ ಮಾಡುತ್ತಿದ್ದು ದಿನಾಂಕ 06/05/2022 ರಂದು ಕೂಲಿ ಕೆಲಸ ಮಾಡಿ ಪಾಪಸ್ಸು ತನ್ನ ಮನೆಯಾದ ತುಂಡು ಕುಮಾರಿ ಜೆಡ್ಡು ಮೂಡುಬಗೆ ಅಂಪಾರು ಗ್ರಾಮ ಕುಂದಾಪುರ ತಾಲೂಕು  ಇಲ್ಲಿಗೆ ಬರುವಾಗ ಸರಾಬು ಸೇವನೆ ಮಾಡಿಕೊಂಡು ಬಂದು ಸಂಜೆ 16:00 ಗಂಟೆ ಮನೆಯಲ್ಲಿ ಮಲಗಿದ್ದು ಆತನ ಹೆಂಡತಿ 17:00 ಗಂಟೆ ಕರೆದಾಗ ಮಾತನಾಡದೆ ಇದ್ದು ಈ ಬಗ್ಗೆ ನಾಗರಾಜ ರವರ ಹೆಂಡತಿಗೆ ಕರೆ ಮಾಡಿ ತಿಳಿಸಿದ್ದು ಕೂಡಲೇ 108 ಅಂಬ್ಯುಲೆಸ್ಸ್ ನಲ್ಲಿ ಕುಂದಾಪುರ ಅಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಲ್ಲಿ ತೋರಿಸಿದಾಗ ರಾಘವೇಂದ್ರ ಮೃತ ಪಟ್ಟೆರುವುದಾಗಿ 19:20 ಗಂಟೆಗೆ ತಿಳಿಸಿರುತ್ತಾರೆ. ಅತೀಯಾದ ಮದ್ಯಪಾನ ಸೇವನೆ ಜೊತೆಗೆ ಅಹಾರ ಸೇವನೆ ಇಲ್ಲದೇ ದೈಹಿಕ ಬಳಲಿಕೆಯಿಂದ ಮೃತ ಪಟ್ಟಿರಬಹುದಾಗಿದೆ ಆತನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 08/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾಧ ಸುಧಾಕರ ಕರ್ಕೇರ, (50) ತಂದೆ: ದಿ.ಸುಧಮ  ಕೋಟ್ಯಾನ್, ವಾಸ:ಬಾಬು ಪುತ್ರನ್   ಮನೆ,  ಹೆಜಮಾಡಿ, ಇವರ ಅಣ್ಣನ ಮಗನಾದ ಸಾಗರ್ ಕರ್ಕೇರ (27) ಎಂಬುವರು ಸುಮಾರು ಎರಡು ವರ್ಷಗಳ ಹಿಂದೆ  ಮುಂಬಯಿಯ ಎಲ್ & ಟಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು 10 ತಿಂಗಳ ಹಿಂದೆ ಕೋರೋನ ನಿಮಿತ್ತದಿಂದ ಕೆಲಸ ಕಳೆದುಕೊಂಡು ಊರಿಗೆ ಬಂದು ತಂದೆ, ತಾಯಿರವರೊಂದಿಗೆ ವಾಸ ಮಾಡಿಕೊಂಡಿರುತ್ತಾರೆ. ಸಾಗರನು ಸುಮಾರು 10 ವರ್ಷಗಳಿಂದ ಸ್ವಲ್ಪ ಮಾನಸಿಕ  ಖಿನ್ನತೆಯಿಂದ ಬಳಲುತ್ತಿದ್ದು, ತನ್ನ ತಂದೆ ಯು ಅನಾರೋಗ್ಯದ ನಿಮಿತ್ತ  ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ 06/05/2022 ರಂದು ಸಾಗರ್ ಕರ್ಕೇರ ಮತ್ತು ಆತನ ಪತ್ನಿ  ಪ್ರಿಯಾಂಕರವರು ಆದರ್ಶ ಆಸ್ಪತ್ರೆಗೆ ಹೋಗಿ  ಅವನ ತಂದೆಯ ಆರೋಗ್ಯವನ್ನು ವಿಚಾರಿಸಿಕೊಂಡು ರಾತ್ರಿ ಸುಮಾರು 10:30 ಗಂಟೆಗೆ ಬಡಾ ಎರ್ಮಾಳು ಗ್ರಾಮ  ಸಾಲ್ಯಾನ್ ಮೂಲಸ್ಥಾನದ ಪಕ್ಕದಲ್ಲಿರುವ  ತಮ್ಮ ಮನೆಗೆ ಬಂದು ಮಲಗಿದ್ದು, ಬೆಳಿಗ್ಗೆ ಸುಮಾರು 05:00 ಗಂಟೆಯ ಸಮಯಕ್ಕೆ ಪ್ರಿಯಾಂಕ ಎದ್ದು ನೋಡಿದಾಗ,  ತನ್ನ ಗಂಡ ಮಲಗಿದ್ದಲ್ಲಿ ಇಲ್ಲದೇ ಇದ್ದು, ಮನೆಯಲ್ಲಿ ಮತ್ತು ಆಸುಪಾಸಿನಲ್ಲಿ ಹುಡುಕಿದಾಗ ಮನೆಯ ಟಾರಸಿನ ಮೇಲೆ ಕಬ್ಬಿಣದ ಪಕ್ಕಾಸಿಗೆ ಸೀರೆಯನ್ನು ಸುತ್ತಿ  ಕುತ್ತಿಗೆಗೆ ಸೀರೆಯನ್ನು ಬಳಸಿ ಉರುಳು ಹಾಕಿಕೊಂಡು ನೇತಾಡುತ್ತಿರುವ ಸ್ತಿತಿಯಲ್ಲಿ ಕಂಡು ಬಂದಿದ್ದು,ಮುಟ್ಟಿ ಅಲುಗಾಡಿಸಿದಾಗ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಸಾಗರನು ಇತ್ತೀಚೆಗೆ ಉದ್ಯೋಗವಿಲ್ಲದೆ ಮತ್ತು ತಂದೆಯ ಅನಾರೋಗ್ಯದ ವಿಚಾರದಲ್ಲಿ ಮನಸ್ಸಿಗೆ  ಹಚ್ಚಿಕೊಂಡು ಅದೇ ಚಿಂತೆಯಿಂದ ದಿನಾಂಕ 06/05/2022 ರಂದು ರಾತ್ರಿ 22.30 ಗಂಟೆಯಿಂದ ದಿನಾಂಕ 07/05/2022 ರಂದು ಬೆಳಿಗ್ಗೆ 05:00 ಗಂಟೆಯ ಮದ್ಯಾವಧಿಯಲ್ಲಿ ಟಾರಸಿನ ಮೇಲೆ  ಕಬ್ಬಿಣದ ಪಕ್ಕಾಸಿಗೆ ಸೀರೆಯನ್ನು ಸುತ್ತಿ ಕುತ್ತಿಗೆಗೆ ಸೀರೆಯನ್ನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 12/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ದೀಲಿಪ್ ಶೆಟ್ಟಿ, (39), ತಂದೆ: ದೇಜು ಶೆಟ್ಟಿ, ವಾಸ: ಕುಜಮಾರು ಮನೆ, ಸಾಣೂರು ಗ್ರಾಮ, ಕಾರ್ಕಳ ಇವರ ತಾಯಿ ಶ್ರೀಮತಿ ಸುಮತಿ ಶೆಟ್ಟಿ, (71) ರವರು ಇವರೊಂದಿಗೆ ವಾಸವಾಗಿದ್ದು, ಸುಮತಿ ಶೆಟ್ಟಿ ರವರು ದಿನಾಂಕ 09/04/2022 ರಂದು ಸುಮಾರು ಬೆಳಗ್ಗೆ 07:00 ಗಂಟೆಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಓಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಓಲೆಯ ಬೆಂಕಿ ಸೀರೆಯ ಸೆರಗಿಗೆ ಹಚ್ಚಿಕೊಂಡಿದ್ದು, ಬೆಂಕಿಯಿಂದ ತಾಯಿ ಬೊಬ್ಬೆ ಹೊಡೆದಾಗ ತೋಟದಲ್ಲಿದ್ದ ದೀಲಿಪ್ ಶೆಟ್ಟಿ ಇವರು ಓಡಿಬಂದು ನೀರು ಹಾಕಿ ಬೆಂಕಿ ನಂದಿಸಿ ಚಿಕಿತ್ಸೆ ಬಗ್ಗೆ ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ ಚಿಕಿತ್ಸೆ ಪಡೆದು ಗುಣಮುಖವಾಗಿ ಮನೆಗೆ ಬಂದಿದ್ದ, ಗಾಯ ಪುನಃ ಹೆಚ್ಚಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆ, ಅಜ್ಜರಕಾಡು ಉಡುಪಿ ಆಸ್ಪತ್ರೆ, ನಂತರ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ದಿನಾಂಕ 30/04/2022 ರಿಂದ ದಿನಾಂಕ 07/05/2022 ರವರೆಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದು ಚಿಕಿತ್ಸೆಗೆ ಸ್ಪಂದಿಸದೇ ಸುಮತಿ ಶೆಟ್ಟಿ ರವರು ದಿನಾಂಕ 07/05/2022 ರಂದು ಮದ್ಯಾಹ್ನ 12:15 ಗಂಟೆಗೆ ಮೃತಪಟ್ಟಿರುತ್ತಾರೆ. ದೀಲಿಪ್ ಶೆಟ್ಟಿ ರವರ ತಾಯಿ ಶ್ರೀಮತಿ ಸುಮತಿ ಶೆಟ್ಟಿರವರಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದ ಪರಿಣಾಮ ಗಾಯ ಉಲ್ಬಣಗೊಂಡು ಮೃತಪಟ್ಟಿದ್ದು, ಬೇರೆ ಯಾವುದೇ ಸಂಶಯವಿರುವಿದಿಲ್ಲವಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 17/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-05-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080