ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 06/05/2021 ರಂದು ಬೆಳಿಗ್ಗೆ 6:15 ಗಂಟೆಗೆ ಕಾರ್ಕಳ ತಾಲೂಕು ನಿಂಜೂರು ಗ್ರಾಮದ ಮಾರುತಿ ನಗರ ಎಂಬಲ್ಲಿ ಹಾದು ಹೋಗುವ ಪಳ್ಳಿ-ರಂಗನಪಲ್ಕೆ ಸಾರ್ವಜನಿಕ ರಸ್ತೆಯಲ್ಲಿ ಪಿರ್ಯಾದಿದಾರರಾದ ರಮೇಶ್ (38), ತಂದೆ: ರಾಘವ, ವಾಸ: ದರ್ಖಾಸು ಮನೆ, ಗಡ್ಡದಲ್ಕೆ, ರಂಗನ ಪಲ್ಕೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ಪರಿಚಯದ ರಾಮ ಹಾಂಡ ದ್ವಿಚಕ್ರ ವಾಹನ ನಂಬ್ರ KA-20-L-9374 ನೇಯದರಲ್ಲಿ ಸಹಸವಾರಾಗಿ ಕುಳಿತುಕೊಂಡು ರಂಗನ ಪಲ್ಕೆ ಕಡೆಯಿಂದ ಪಳ್ಳಿ ಕಡೆಗೆ ಹೋಗುತ್ತಿರುವಾಗ ಪಳ್ಳಿ ಕಡೆಯಿಂದ ರಂಗನ ಪಲ್ಕೆ ಕಡೆಗೆ ದ್ವಿಚಕ್ರ ವಾಹನ ನಂಬ್ರ KA-20-EM-8762 ನೇಯದರ ಸವಾರನು ಅತಿವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ರಾಮ ಹಾಂಡರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಎರಡೂ ದ್ವಿಚಕ್ರ ವಾಹನಗಳ ಸಮೇತ ರಸ್ತೆಗೆ ಬಿದ್ದ ಪರಿಣಾಮ ರಾಮ ಹಾಂಡರವರಿಗೆ ತಲೆಗೆ ಮುಖಕ್ಕೆ ತೀವೃ ಸ್ವರೂಪದ ಗಾಯವಾಗಿದ್ದು, ಪಿರ್ಯಾದಿದಾರರಿಗೆ ಬಲಕಣ್ಣಿನ ಬಳಿ ಗುದ್ದಿದ ರೀತಿಯ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ: 279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ದಿನಾಂಕ 06/05/2021 ರಂದು ಸಂಜೆ ಪ್ರಕಾಶ, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ ಇವರು ಸಿಬ್ಬಂದಿಯವರೊಂದಿಗ ಕಾಪು ವೃತ್ತ ಕಛೇರಿಯ ಎದುರು ಜಂಕ್ಷನ್ ನ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುವಾಗ ಸಂಜೆ 17:15 ಗಂಟೆಯ ವೇಳೆಗೆ ಕಾಪು ಕಡೆಯಿಂದ ಬಂದ ಬಿಳಿ ಬಣ್ಣದ ಹೊಂಡಾ ಕಂಪನಿಯ ಆಕ್ಟಿವಾ ಸ್ಕೂಟರ್ ನಂಬ್ರ KA-20-EU-0669 ನೇದನ್ನು ಯು. ರಾಹಿಲ್ ರಹಮತುಲ್ಲಾ ಅಬ್ಬಾಸ್ ಸವಾರಿ ಮಾಡಿಕೊಂಡು ಬಂದಿದ್ದು ಅವರನ್ನು ತಡೆದು ನಿಲ್ಲಿಸಿ ವಿಚಾರಿಸಲಾಗಿ ಸಮರ್ಪಕ ಕಾರಣ ನೀಡದೆ ತಾನು  ಅಕ್ಕನ ಮನೆಯಾದ ಮಲ್ಲಾರಿಗೆ ಬಟ್ಟೆಗಳನ್ನು ಕೊಡಲು ಹೋಗುತ್ತಿರುವುದಾಗಿ ತಿಳಿಸಿರುವುದಾಗಿದೆ. ರಾಜ್ಯ ಸರ್ಕಾರವು ಕೋರೊನಾ ವೈರಸ್ ಹರಡುವುದನ್ನು ತಡೆಗಟ್ಟುವ ಉದ್ದೇಶದಿಂದ ದಿನಾಂಕ 27/04/2021 ರ ರಾತ್ರಿ 9:00 ಗಂಟೆಯಿಂದ ದಿನಾಂಕ 12/05/2021 ರ ಬೆಳಗ್ಗೆ 06:00 ಗಂಟೆಯವರೆಗೆ ಲಾಕ್‌ಡೌನ್ ಘೊಷಿಸಿ ಅನಗತ್ಯ ಓಡಾಟವನ್ನು ನಿಷೇಧಿಸಿದ್ದರೂ ಯು. ರಾಹಿಲ್ ರಹಮತುಲ್ಲಾ ಅಬ್ಬಾಸ್ ರವರು ಕೋರೊನಾ ವೈರಸ್ ಹರಡುವುದಾಗಿ ತಿಳಿದರೂ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-05-2021 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080