ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಶಾಂತ ಪೂಜಾರಿ (25), ತಂದೆ:ಕುಪ್ಪಯ್ಯ ಪೂಜಾರಿ, ವಾಸ: ಚೆಕ್ಕಿ ಮನೆ ,ಕುಂಚು ಗೋಡು,ಗುಜ್ಜಾಡಿ ಗ್ರಾಮ,ಬೈಂದೂರು ತಾಲೂಕು ಇವರು ದಿನಾಂಕ 06/05/2021 ರಂದು ತನ್ನ ಗೆಳೆಯ ಸುಧಾಕರ ಪೂಜಾರಿ ಎಂಬುವವರ KA-20-8084 ನೇ 407 ಟೆಂಪೋಗೆ ಚಾಲಕನಾಗಿ ಹೋಗಿದ್ದು ಮಧ್ಯಾಹ್ನ 12:45 ಗಂಟೆಗೆ 407 ಟೆಂಪೋವನ್ನು ಚಾಲನೆ ಮಾಡಿದ್ದು ಆ ಸಮಯ ಸುಧಾಕರ ಟೆಂಪೋದ ಎಡಭಾಗದಲ್ಲಿ ಕುಳಿತುಕೊಂಡಿದ್ದು ಆಲೂರಿಗೆ ಹೋಗಿ ಟೆಂಪೊದಲ್ಲಿ ಕೆಂಪು ಕಲ್ಲುಗಳನ್ನು ತುಂಬಿಸಿಕೊಂಡು ಪಡುವರಿಯ ದಿನೇಶ ಎಂಬುವವರ ಮನೆಗೆ ಹಾಕಲು ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಬೈಂದೂರು ಕಡೆಗೆ ಬರುತ್ತಿರುವಾಗ ಮಧ್ಯಾಹ್ನ 2:30 ಗಂಟೆಗೆ ಉಪ್ಪುಂದ ಗ್ರಾಮದ ಕಂಬದಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘ ಬಳಿ ಟೆಂಪೋ ವಾಹನದ  ಹಿಂದಿನಿಂದ ಒಂದು ಮಾರುತಿ ಇಕೋ ವಾಹನ ನಂಬ್ರ KA-42-A-4370 ನೇದನ್ನು ಅದರ ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟೆಂಪೋವನ್ನು ಓವರ್ ಟೇಕ್  ಮಾಡಿ ಕೈ ಸನ್ನೆ ಹಾಗೂ ಯಾವುದೇ ಸೂಚನೆಯನ್ನು ನೀಡದೇ ಕಾರನ್ನು ಎಡಕ್ಕೆ ಚಲಾಯಿಸಿದ್ದು ಪಿರ್ಯಾದಿದಾರರು ಅಪಘಾತವನ್ನು ತಪ್ಪಿಸುವ ಭರದಲ್ಲಿ ತನ್ನ ವಾಹನದ ನಿಯಂತ್ರಣ ತಪ್ಪಿ ಬಲಕ್ಕೆ ಚಲಾಯಿಸಿ ರಾಷ್ಟ್ರೀಯ ಹೆದ್ದಾರಿ 66ರ ಮಧ್ಯಭಾಗದಲ್ಲಿರುವ ಡಿವೈಡರ್ ಗೆ ಢಿಕ್ಕಿ ಹೊಡೆದು ಚಕ್ರ ಸ್ಫೋಟಗೊಂಡು ಟೆಂಪೋ ಪೂರ್ವ ಬಾಗದ ರಸ್ತೆಗೆ ಮಗುಚಿ ಬಿದ್ದಿದ್ದು ಅದರ ಪರಿಣಾಮ ಸುಧಾಕರ ಪೂಜಾರಿಯವರಿಗೆ ಎದೆಯ ಭಾಗಕ್ಕೆ ಗುದ್ದಿದ ಒಳ ನೋವಾಗಿದ್ದು ಬಲ ಹಣೆಗೆ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರ ಬಲ ಕೈಯ ಮೊಣ ಗಂಟಿನ ಬಳಿ ತರಚಿದ ಗಾಯ ವಾಗಿರುತ್ತದೆ. ಗಾಯಗೊಂಡ ಸುಧಾಕರ ಪೂಜಾರಿಯವರನ್ನು 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ದಿನಾಂಕ 06/05/2021 ರಂದು ರಾತ್ರಿ ಪಿರ್ಯಾದಿದಾರರಾದ ಪ್ರಭಾವತಿ ಪುರುಷೋತ್ತಮ್ (52), ಗಂಡ : ಪುರುಷೋತ್ತಮ್ ಲಕ್ಷ್ಮಣ ಪುತ್ರನ್, ವಾಸ : “ಚಿರದೀಪ”  ಲೈಟ್ ಹೌಸ್ ರೋಡ ಪಡು  ಗ್ರಾಮ ಕಾಪು ಇವರ ಗಂಡ ಪುರುಷೋತ್ತಮ್ ಲಕ್ಷ್ಮಣ ಪುತ್ರನ್(61) ರವರು ಊಟ ಮಾಡಿ ಮಲಗಿದ್ದು ದಿನಾಂಕ 07/05/2021 ರಂದು ಬೆಳಗಿನ ಜಾವ 01.45 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಗಂಡ ಎದ್ದು ಸ್ವಲ್ಪ ತಿರುಗಾಡಿ ಪುನಃ ಮಲಗಿದ್ದವರು ಒಮ್ಮೇಲೆ ಬಾಯಿಯಿಂದ ಶಬ್ದ ಮಾಡಿ ಅಸ್ವಸ್ಥರಾಗಿದ್ದು, ಕೂಡಲೇ ಪಿರ್ಯಾದಿದಾರರು ಗಂಡನನ್ನು ಉಪಚರಿಸಿದಲ್ಲಿ ಅವರು ಮಾತನಾಡದೇ ಇದ್ದು, ಪಿರ್ಯಾದಿದಾರರು ನೆರೆಕೆರೆಯವರಿಗೆ ವಿಷಯ ತಿಳಿಸಿ ಒಂದು ವಾಹನದಲ್ಲಿ ಉಡುಪಿ ಆದರ್ಶ ಆಸ್ಪತ್ರೆಗೆ ಕೊಂಡು ಹೋದಲ್ಲಿ, ಪರೀಕ್ಷಿಸಿದ ಅಲ್ಲಿನ ವೈದ್ಯರು 02.10 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಗಂಡ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್‌ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ದಿನಾಂಕ 07/05/2021  ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 08:45 ಗಂಟೆಗೆ ಕಾಪು ತಾಲೂಕು, ಕಾಪು ಪಡು ಗ್ರಾಮದ ಕಾಪು ಪೇಟೆಯ ಸ್ಮಾಲ್ ವರ್ಲ್ಡ್ ಬಿಲ್ಡಿಂಗ್ ನ 1 ನೇ ಮಹಡಿಯಲ್ಲಿ ಆರೋಪಿ ಅವೇಜ್ ಇವರು  “ ಬೆಬಿಸ್ ಹಟ್ ” ಹೆಸರಿನ ಬಟ್ಟೆ ಅಂಗಡಿಯನ್ನು ತೆರೆದುಕೊಂಡು ಬಟ್ಟೆ ಮಾರಾಟ ಮಾಡಿಕೊಂಡಿರುವುದಾಗಿದೆ.  ಆರೋಪಿ ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ.  ಬಟ್ಟೆ ಅಂಗಡಿಯನ್ನು  ತೆರೆದುಕೊಂಡು ಬಟ್ಟೆ ಮಾರಾಟ ಮಾಡುತ್ತಿರುವುದಾಗಿದೆ.  ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 07/05/2021 ರಂದು ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಪ್ರಸ್ತುತ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆ ಯಂತೆ ಅನಗತ್ಯವಾಗಿ ತೆರೆದ ಅಂಗಡಿಗಳ ತಪಾಸಣೆಯ ಬಗ್ಗೆ ನಾನು ಸಿಬ್ಬಂದಿಯವರೊಂದಿಗೆ ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 10:00 ಗಂಟೆಗೆ  ಕಾಪು ತಾಲೂಕು, ಕಾಪು ಪಡು ಗ್ರಾಮದ ಕಾಪು  ಪೇಟೆಯ,  ಸ್ಮಾಲ್ ವರ್ಲ್ಡ್ ಬಿಲ್ಡಿಂಗ್ ನ   1 ನೇ ಮಹಡಿಯಲ್ಲಿ  ಇಬ್ರಾಹಿಮ್ ಖಾಜಾ ಇವರು “ ಐಜ್ಫಾ ಫ್ಯಾನ್ಸಿ ” ಹೆಸರಿನ ಫ್ಯಾನ್ಸಿ  ಅಂಗಡಿಯನ್ನು ತೆರೆದುಕೊಂಡಿದ್ದು.  ಆರೋಪಿ ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿ.  ಫ್ಯಾನ್ಸಿ ಅಂಗಡಿಯನ್ನು  ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಅಮಾಸೆಬೈಲು: ದಿನಾಂಕ 07/05/2021 ರಂದು ಸುಬ್ಬಣ್ಣ ಬಿ ಪೊಲೀಸ್ ಉಪನಿರೀಕ್ಷಕರು ಅಮಾಸೆಬೈಲು ಪೊಲೀಸ್ ಠಾಣೆ ಇವರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಇಲಾಖಾ ಜೀಪು ನಂಬ್ರ KA 20 G 375 ರಲ್ಲಿ ಸಿಬ್ಬಂದಿಯವರಾದ ಎ.ಎಸ್.ಐ ಉಮೇಶ್ ನಾಯ್ಕ , ಪಿಸಿ 1173 ಆದರ್ಶ ಜೀಪು ಚಾಲಕ ಎಪಿಸಿ 1544 ಗೋಪಾಲ ಇವರುಗಳೊಂದಿಗೆ ಠಾಣಾ ಸರಹದ್ದಿನ ಅಮಾಸೆಬೈಲು ಗ್ರಾಮದ ಅಮಾಸೆಬೈಲು ಪೇಟೆಯ ಬಳಿ ವಾಹನ ತಪಾಸಣೆ ಮಾಡಿಕೊಂಡಿರುವಾಗ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 13:00 ಗಂಟೆ ಮಧ್ಯೆ  ಈ ಕೆಳಗೆ ತಿಳಿಸಿದ ದ್ವಿಚಕ್ರ ವಾಹನಗಳನ್ನು ಆಪಾದಿತರುಗಳಾದ 1}ಎಚ್ ರಶೀದ್ ಅಹಮದ್  ತಂದೆ: ಹುಸೇನ್ ಸಾಬ್ ಅಂಬೇಲ್ಕರ್ ಎಕ್ಸ್ ಟೆನ್ಷನ್ ಸೊರಬ ನಗರ ಸೊರಬ ಶಿವಮೊಗ್ಗ  2}  ವಾಸು ಪೂಜಾರಿ ಪ್ರಾಯ 40 ವರ್ಷ ತಂದೆ:ಬಸವ ಪೂಜಾರಿ ಬಡಾಬೆಟ್ಟು ಅಮಾಸೆಬೈಲು ಗ್ರಾಮ ಕುಂದಾಪುರ ತಾಲೂಕು  3} ವಿನಯ ಶೆಟ್ಟಿ ಪ್ರಾಯ 30 ವರ್ಷ ತಂದೆ: ರಘುರಾಮ ಶೆಟ್ಟಿ ಮೈಲುಗೋಡು ಶೇಡಿಮನೆ ಗ್ರಾಮ ಹೆಬ್ರಿ ತಾಲೂಕು  4} ರವೀಂದ್ರ ಪ್ರಾಯ 28 ವರ್ಷ ತಂದೆ: ಭೋಜ ನಾಯ್ಕ 2/7 ನಂಚಾರು ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ 5} ಸಂಜೀವ ಪ್ರಾಯ 29 ವರ್ಷ ತಂದೆ: ಬಂಕಪ್ಪ ಸಿಂಚನ ಕಾಂಪ್ಲೆಕ್ಸ್ ಅಮಾಸೆಬೈಲು ಗ್ರಾಮ  6} ಹರ್ಷ ಪ್ರಾಯ 23 ವರ್ಷ ತಂದೆ: ನರಸಿಂಹ ಪೂಜಾರಿ ಮಂಡಾಡಿ ಅಮಾಸೆಬೈಲು ಗ್ರಾಮ  7} ಮಾಧವ ಪ್ರಾಯ 26 ವರ್ಷ ತಂದೆ: ರಾಮ ಆಚಾರಿ ಚಟಾರಿಕಲ್ಲು ಮಚ್ಚಟ್ಟು ಗ್ರಾಮ   8} ಮಂಜುನಾಥ ಪ್ರಾಯ 27 ವರ್ಷ ತಂದೆ:ರಾಮ ಮೊಗವೀರ ಬೈಂದಾಡಿ ರಟ್ಟಾಡಿ ಗ್ರಾಮ   9} ಪ್ರದೀಪ ಪ್ರಾಯ 23 ವರ್ಷತಂದೆ: ರಘು ನಂಚಾರು ನಾಲ್ಕೂರು ಗ್ರಾಮ   10} ರಾಘವೇಂದ್ರ ಆಚಾರಿ ತಂದೆ ರಾಮ ಆಚಾರಿ ಚಟಾರಿಕಲ್ಲು ಮಚ್ಚಟ್ಟು ಗ್ರಾಮ ಇವರುಗಳು  ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಈ ಕೆಳಗಿನ ವಾಹನದೊಂದಿಗೆ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1} KA 19 V 0619 ನೇ ಪಲ್ಸರ್  ಮೋಟಾರು ಸೈಕಲ್ಲು (2) KA 20 ED 9911 ನೇ ಸ್ಪ್ಲೆಂಡರ್ ಪ್ಲಸ್ ಮೋಟಾರು ಸೈಕಲ್ಲು  (3) KA 20 EF 4630 ನೇ ಫ್ಯಾಶನ್ ಪ್ರೋ ಮೋಟಾರು ಸೈಕಲ್ಲು (4) KA 20 EX 0395  ಪಲ್ಸರ್ ಮೋಟಾರು ಸೈಕಲ್ಲು (5) KA 20 EV 2010 ನೇ ಪಲ್ಸರ್ ಮೋಟಾರು ಸೈಕಲ್ಲು  (6) KA 20 EU 8211 ಹೋಂಡಾ ಡಿಯೋ ಸ್ಕೂಟಿ (7) KA 20 EL 9974 ಅಪಾಚಿ RTR (8) KA 20 EJ 1039 MAESTRO ಸ್ಕೂಟಿ (9) KA 20 ES  7922 ಹೋಂಡಾ ಲಿವೊ (10) KA 20 EV 4307 TVS Radeon . ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನಗಳನ್ನು ಸ್ವಾಧೀನಪಡಿಸಿಕೊಂಡು ಮೇಲ್ಕಂಡ ವ್ಯಕ್ತಿಗಳ  ವಿರುದ್ಧ  ಅಮಾಸೆಬೈಲು ಠಾಣಾ ಅಪರಾಧ ಕ್ರಮಾಂಕ  11/2021 ಕಲಂ:269 ಐಪಿಸಿ, ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 07-05-2021 06:52 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080