ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 06/04/2023 ರಂದು ಅಪರಾಹ್ನ 3:15 ಗಂಟೆಗೆ ಕಾರ್ಕಳ ತಾಲೂಕು, ಮಾಳ ಗ್ರಾಮದ ಕೂಡಬೆಟ್ಟು ಎಂಬಲ್ಲಿ ತಿರುವಿನಲ್ಲಿ ಹಾದು ಹೋಗುವ ಕಾರ್ಕಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಹಿರೋ ಕಂಪೆನಿಯ ಸ್ಪ್ಲೆಂಡರ್ ಮಾದರಿಯ ಮೋಟಾರು ಸೈಕಲನ್ನು, ಅದರ ಸವಾರನು ಮಾಳ ಚಕ್ ಪೋಸ್ಟ್ ಕಡೆಯಿಂದ ಬಜಗೋಳಿ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಬದಿಗೆ ಸವಾರಿ ಮಾಡಿಕೊಂಡು ಹೋಗಿ, ಬಜಗೋಳಿ ಕಡೆಯಿಂದ ಮಾಳ ಚಕ್ ಪೋಸ್ಟ್ ಕಡೆಗೆ ಹೋಗುತ್ತಿದ್ದ 709 ಟೆಂಪೋ ನಂಬ್ರ KA-19-C-3175 ನೇಯದರ ಬಲಬದಿಯ ಎದುರಿನ ಬಂಪರಿಗೆ ಢಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ತಲೆಗೆ ತೀವೃ ಜಖಂ, ಕೈಕಾಲುಗಳಿಗೆ ಮೂಳೆ ಮುರಿತ ಹಾಗೂ ರಕ್ತ  ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023  ಕಲಂ:  279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 06/04/2023  ರಂದು 14:50 ಗಂಟೆಗೆ ಕುಂದಾಪುರ  ತಾಲೂಕಿನ, ಹೆಮ್ಮಾಡಿ ಗ್ರಾಮದ ಜಾಲಾಡಿ ಬಳಿ ಎದುರು ಎನ್‌. ಹೆಚ್‌ 66 ಪೂರ್ವ ಬದಿಯ ರಸ್ತೆಯಲ್ಲಿಆಪಾದಿತ ಚಾಲಕ ದೀಪಕ್  MH-16-CC-2199 ನೇ ಲಾರಿಯನ್ನು ಬೈಂದೂರು ಕಡೆಯಿಂದ ಕುಂದಾಪುರದ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು  ಪಿರ್ಯಾದಿದಾರರಾದ ಸಮೀರ್‌ ಪಟ್ನಾಯಕ್‌ (28), ತಂದೆ:  ನಾರಾಯಣ ಪಟ್ನಾಯಕ್‌,   ವಾಸ: ಗಣೇಶ ನಗರ(ಪರಗ ನಾಸ್‌24) ನಂದಾವನ ಜಿಲ್ಲಾ , ಪಶ್ಚಿಮ ಬಂಗಾಳ ಇವರು ಕಂಡೆಕ್ಟರ್ ಆಗಿದ್ದ ನೀರಿನ ಟ್ಯಾಕರ್ ನಂಬ್ರ KA-19-B-3970 ನೇ ದಕ್ಕೆ ಹಿಂದಿನಿಂದ ಢಿಕ್ಕಿ ಹೊಡೆದು ಬಳಿಕ ಅದೇ ದಿಕ್ಕಿನಲ್ಲಿ ಮುಂದೆ ಹೋಗುತ್ತಿದ್ದKA-20-EM-7448 ನೇ ಸ್ಕೂಟರ್‌ ಗೆ ಕೂಡಾ ಡಿಕ್ಕಿ ಹೊಡೆದು ನಂತರ ಲಾರಿ ಚಾಲಕನ ಹತೋಟಿ ತಪ್ಪಿ ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ, ಅದೇ ಲಾರಿಯಲ್ಲಿದ್ದ ಅನಾಸ್ ಮತ್ತು ಸಾಜಿರವರಿಗೆ ಕೈಕಾಲುಗಳಿಗೆ ತರಚಿದ ರಕ್ತಗಾಯವಾಗಿ, ಕುಂದಾಪುರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದು,ಸ್ಕೂಟರ್ ಸವಾರರಾಗಿದ್ದ ಸಂಜೀವ ಮೊಗವೀರ ಮತ್ತು ರತ್ನಾರವರಿಗೆ ತಲೆಗೆ ,ಮುಖಕ್ಕೆ ಹಾಗೂ ಕಾಲುಗಳಿಗೆ ತರಚಿದ ಮತ್ತು ತೀವ್ರ ಸ್ವರೂಪದ ಗಾಯಗಳು ಉಂಟಾಗಿದ್ದು ಇವರುಗಳು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ. ಸಿ ಆಸ್ಪತ್ರೆಯಲ್ಲಿ ಒಳರೋಗಿ ಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 06/04/2023 ರಂದು 17:30 ಗಂಟೆಗೆ ಕುಂದಾಪುರ ತಾಲೂಕಿನ, ಕಸಬ ಗ್ರಾಮದ KSRTC ಬಸ್ ನಿಲ್ದಾಣದ ಎದುರು ಎನ್‌.ಹೆಚ್‌ 66 ಪೂರ್ವ ಬದಿಯ ಸರ್ವಿಸ್ ರಸ್ತೆಯಲ್ಲಿಆಪಾದಿತ ನಾಜೀಮ್ ರವರು KA-20-ME-3662 ನೇ EECO ಕಾರನ್ನು ಸಂಗಂ ಕಡೆಯಿಂದ ಶಾಸ್ತ್ರೀ ಪಾರ್ಕ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆ ಮಾಡಿಕೊಂಡು ಬರುತ್ತಾ  ಬಲಕ್ಕೆ ತಿರುಗಿಸಿ ಅದೇ ದಿಕ್ಕಿನಲ್ಲಿ ಹೋಗುತ್ತಿದ್ದ ಚೇತನ್ ರವರು ಸವಾರಿ ಮಾಡಿಕೊಂಡಿದ್ದ KA-20-EZ-8250ನೇ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್  ಸವಾರ ಬೈಕ್  ಸಮೇತ ರಸ್ತೆಗೆ ಬಿದ್ದು ಆತನ ಬಲ ಕೈಗೆ ಮೂಳೆ ಮುರಿತದ ಹಾಗೂ ಬಲ ಭುಜಕ್ಕೆ ಒಳನೋವು ಉಂಟಾಗಿದ್ದು,ಚಿಕಿತ್ಸೆಗೆ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ .ಕೆ ಅರುಂಧತಿ (42), ಗಂಡ: ಎಂ.ಎಸ್ ಪ್ರಭುಪ್ರಸಾದ್, ವಾಸ: ಸಂಖ್ಯೆ: 683, ವೆಂಕಟೇಶ್ವರ ನಿಲಯ, 4ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಕೊಮ್ಮಘಟ್ಟ ರಸ್ತೆ, ಬೆಂಗಳೂರು-60 ಇವರು ತನ್ನ ಕುಟುಂಬ ಹಾಗೂ ಸಂಬಂಧಿಕರೊಂದಿಗೆ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಹೊರಟು, ದಿನಾಂಕ 05/04/2023 ರಂದು ಸಂಜೆ ಉಡುಪಿ ಕೃಷ್ಣ ಮಠ ತಲುಪಿ, ದೇವರ ದರ್ಶನ ಮಾಡಿ, ಊಟದ ನಂತರ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕೃಷ್ಣಮಠದ ಪಾರ್ಕಿಂಗ್ ಸ್ಥಳದಲ್ಲಿ ಇರುವಾಗ 21:00 ಗಂಟೆಗೆ ಪಿರ್ಯಾದಿದಾರರ ಹಿರಿಯ ಮಗ ಕಿರಣ್ ಪಿ ಹಿರೇಮಠ್ (20) ರವರು ಎದ್ದು ಹೋಗಿದ್ದು, ವಾಪಾಸು ಬಾರದೇ ಮನೆಗೂ ಹೋಗದೆ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 48/2023 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಶ್ರೀಮತಿ ಗೀತಾ (50), ಗಂಡ: ಪ್ರಕಾಶ್ ಶೆಟ್ಟಿ, ವಾಸ: ಹೆಗ್ಡೆಬೆಟ್ಟು ಕುಚ್ಚೂರು ಗ್ರಾಮ ಹೆಬ್ರಿ ತಾಲೂಕು ಇವರ ಗಂಡ ಪ್ರಕಾಶ್ ಶೆಟ್ಟಿ (55) ಇವರು ವಿಪರೀತ ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ದಿನಾಂಕ 24/03/2023 ರಂದು ಬೆಳಿಗ್ಗೆ 10:00 ಗಂಟೆಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಮನೆಯಿಂದ ಹೋದವರು ಹೋಗುವಾಗ ಕುಚ್ಚೂರು ಗ್ರಾಮದ ಬಸವನಗುಂಡಿ ಮಠದಬೆಟ್ಟು ಹೊಳೆಯ ಬದಿ ವಿಪರೀತ ಮದ್ಯಪಾನ ಮಾಡಿ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 12/2023 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ:   ದಿನಾಂಕ 06/04/2023 ರಂದು ಪ್ರಸಾದ್ ಕುಮಾರ್ ಕೆ, ಪೊಲೀಸ್‌ ಉಪನಿರೀಕ್ಷಕರು(ತನಿಖೆ), ಕುಂದಾಪುರ ಪೊಲೀಸ್ ಠಾಣೆ  ಇವರು ಕುಂಭಾಶಿ ಗ್ರಾಮದ ಕೊರವಾಡಿ ರಸ್ತೆಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂಭಾಶಿ ಗ್ರಾಮದ ಕೊರವಾಡಿ ಶ್ರೀ ದುರ್ಗಾಪರಮೇಶ್ವರಿ ಜನರಲ್ ಸ್ಟೋರ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಟ್ಟಿರುವುದಾಗಿ  ಮಾಹಿತಿ ಬಂದ ಮೇರೆಗೆ ಸ್ಥಳದ ಬಳಿ ತಲುಪಿದಾಗ ತಲುಪಿದಾಗ ಓರ್ವ ವ್ಯಕ್ತಿಯು ಕಪ್ಪು  ಬಣ್ಣದ  ಪ್ಲಾಸ್ಟಿಕ್  ಚೀಲವನ್ನು  ಹಿಡಿದು ಅನುಮಾನಾಸ್ಪದವಾಗಿ ನಡೆದುಕೊಂಡು ಬರುತ್ತಿದ್ದುದನ್ನು  ಕಂಡು ಆತನನ್ನು ತಡೆದು ನಿಲ್ಲಿಸಿ ವಿಚಾರಿಸಿ ಆತನ ಕೈಚೀಲವನ್ನು ಪರಿಶೀಲಿಸಲಾಗಿ ಆತನ ಕೈಚೀಲದಲ್ಲಿ  Original Choice ಎಂಬ  ಹೆಸರಿನ 180 ML  ಮತ್ತು  90 ಎಂ ಎಲ್‌ನ ಮದ್ಯ  ತುಂಬಿದ  ಪ್ಯಾಕೆಟ್‌ಗಳು  ಮತ್ತು  Officer’s  Choice ಎಂಬ  ಹೆಸರಿನ 180 ML  ಮತ್ತು  90 ಎಂ ಎಲ್‌ನ ಮದ್ಯ  ತುಂಬಿದ  ಪ್ಯಾಕೆಟ್‌ಗಳಿದ್ದು,  ಮದ್ಯ ತುಂಬಿದ  ಪ್ಯಾಕೆಟ್‌ಗಳನ್ನು  ಇರಿಸಿಕೊಂಡಿದ್ದ  ವ್ಯಕ್ತಿಯಲ್ಲಿ  ವಿಚಾರಿಸಿದಾಗ  ತಾನು  ಈ  ರಸ್ತೆಯಲ್ಲಿ  ಕೆಲಸಕ್ಕೆ  ಹೋಗುವ  ಸಾರ್ವಜನಿಕರಿಗೆ  ಹಾಗೂ ವಾಹನ  ಚಾಲಕರುಗಳಿಗೆ  ಮಧ್ಯವನ್ನು ಮಾರಾಟ ಮಾಡಲು  ಇರಿಸಿಕೊಂಡಿರುವುದಾಗಿ  ತಿಳಿಸಿದ್ದು,  ಮದ್ಯವನ್ನು ಮಾರಾಟ  ಮಾಡಲು  ಪರವಾನಿಗೆ ಇದೆಯೇ  ಎಂದು  ವಿಚಾರಿಸಲಾಗಿ ತನ್ನಲ್ಲಿ  ಮದ್ಯ ಮರಾಟ  ಮಾಡಲು  ಯಾವುದೇ  ಪರವಾನಿಗೆ ಇರುವುದಿಲ್ಲವಾಗಿ  ತಿಳಿಸಿರುತ್ತಾನೆ.   ವ್ಯಕ್ತಿಯ   ಹೆಸರು  ವಿಳಾಸವನ್ನು   ವಿಚಾರಿಸಿದಾಗ ತನ್ನ  ಹೆಸರು ಪುನೀತ್  ಪ್ರಾಯ :  30  ವರ್ಷ, ತಂದೆ:  ಗೋಪಾಲ ಪೂಜಾರಿ, ವಾಸ:  ಮಾಚಿ ಮನೆ, ಕೊರವಾಡಿ, ಕುಂಭಾಶಿ ಗ್ರಾಮ, ಕುಂದಾಪುರ ತಾಲೂಕು.  ಉಡುಪಿ  ಜಿಲ್ಲೆ  ಎಂಬುದಾಗಿ  ತಿಳಿಸಿದ್ದು, ಈತನು  ಸ್ವಂತ  ಲಾಭಕ್ಕೋಸ್ಕರವಾಗಿ    ಅಕ್ರಮವಾಗಿ  ಮದ್ಯ ಮಾರಾಟ ಮಾಡುತ್ತಿರುವುದಾಗಿದೆ.  ಅಪಾದಿತನ   ವಶದಲ್ಲಿದ್ದ  ಮದ್ಯತುಂಬಿದ  ಪ್ಯಾಕೆಟ್‌ಗಳನ್ನು  ಪರಿಶೀಲಿಸಲಾಗಿ (1). 90  M.L  ನ Original Choice  ಪ್ಯಾಕೆಟ್‌ಗಳು – 28,  (2). 180  M.L  ನ Original Choice  ಪ್ಯಾಕೆಟ್‌ಗಳು – 7, (3). 90  M.L  ನ Officer’s  Choice  ಪ್ಯಾಕೆಟ್‌– 1,  (4). 180  M.L  ನ Officer’s  Choice  ಪ್ಯಾಕೆಟ್‌– 1,  ಇದ್ದು  ಒಟ್ಟು  4.05 ಲೀಟರ್ ಮದ್ಯವಿದ್ದು, ಇವುಗಳ  ಒಟ್ಟು ಮೌಲ್ಯ ರೂಪಾಯಿ 1632/-  ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
       
     

ಇತ್ತೀಚಿನ ನವೀಕರಣ​ : 07-04-2023 09:59 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080