ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 04/04/2021 ರಂದು ಮಧ್ಯಾಹ್ನ 12:30 ಗಂಟೆಗೆ ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ (62), ತಂದೆ: ಮುದ್ದಣ್ಣ ಶೆಟ್ಟಿ, ವಾಸ: ಸುಜಾತ ಸದನ, ಸೂರಾಲ್‌, ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು ಇವರ ಸಹೋದರ ಸುರೇಶ್ ಶೆಟ್ಟಿ ಎಂಬುವವರು ಕಾರ್ಕಳ ತಾಲೂಕು ಸಾಣೂರು ಗ್ರಾಮದ ಕರಿಯಕಲ್ಲು ಎಂಬಲ್ಲಿ KA-20-EJ-6586 ನೇ ನೊಂದಣಿ ಸಂಖ್ಯೆಯ ಸ್ಕೂಟರನ್ನು ರಸ್ತೆಯ ಅಂಚಿನಲ್ಲಿ ನಿಲ್ಲಿಸಿಕೊಂಡಿರುವ ಸಮಯ ಬಜಗೋಳಿ ಕಡೆಯಿಂದ ಕಾರ್ಕಳ ಪುಲ್ಕೇರಿ ಕಡೆಗೆ  KA-20-MA-6909 ನೇ ಕಾರನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರುಕತೆಯಿಂದ ತನ್ನ ತೀರಾ ಎಡಬದಿಯಲ್ಲಿ ಚಲಾಯಿಸಿಕೊಂಡು ಸ್ಕೂಟರ್‌ ಸವಾರ ಸುರೇಶ್ ಶೆಟ್ಟಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಬಲಕಾಲಿಗೆ ತೀವೃ ರಕ್ತಗಾಯ ಹಾಗೂ ಬಲ ಕೈಗೆ, ಹಣೆಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಲ್ಪೆ: ದಿನಾಂಕ 06/04/2021 ರಂದು ಪಿರ್ಯಾದಿದಾರರಾದ ಹುಲಿಯಪ್ಪ ಮುದುಕಪ್ಪ ಗಂಗೂರ(30), ತಂದೆ: ಮುದುಕಪ್ಪ ಗಂಗೂರ್,  ವಾಸ: ಚಂದ್ರಕಟ್ಟ, ಮೂಡುಬೆಟ್ಟು ಕೊಡವೂರು ಗ್ರಾಮ ಇವರು  ಮಲ್ಪೆ ಬಂದರಿನಲ್ಲಿ ಬೆಳಿಗ್ಗೆ ಕೆಲಸ ಮುಗಿಸಿ ಮೀನು ತೆಗೆದುಕೊಂಡು ಅವರ ದನಿ ಮನೆಯಾದ ಬೀಚ್ ರಸ್ತೆಯಲ್ಲಿರುವ  ವಿಠೋಭ ಹನುಮಾನ ಭಜನಾ ಮಂದಿರದ ಬಳಿಗೆ ರಸ್ತೆ ಯ ಎಡಬದಿಯಲ್ಲಿ ನಡೆದುಕೊಂಡು ಹೋಗುವಾಗ  ಬೆಳಿಗ್ಗೆ 08:15 ಗಂಟೆಗೆ  ಟೆಗ್ಮಾ ಶಿಫ್ ಯಾರ್ಡ್  ಬಳಿ ತಿರುವಿನಲ್ಲಿ  ತಲುಪುವಾಗ ಪಿರ್ಯಾದಿದಾರರ  ಹಿಂದಿನಿಂದ  ಮಲ್ಪೆ ಬೀಚ್ ಕಡೆಗೆ KA-20-C-429  ನೇ ಟೆಂಪೋ ರಿಕ್ಷಾ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ತಿರುವಿನಲ್ಲಿ ತಿರುವಿಗಿಸಿದ  ಪರಿಣಾಮ ರಿಕ್ಷಾವು ಎಡಕ್ಕೆ  ಮಗ್ಗುಲಾಗಿ ಬೀಳುವಾಗ ಪಿರ್ಯಾದಿದಾರರು  ಗಮನಿಸಿ ಕೈಯನ್ನು ರಿಕ್ಷಕ್ಕೆ  ಕೊಡುವಾಗ ರಿಕ್ಷವು ಮಗ್ಗುಲಾಗಿ ಕೆಳಗೆ ಬಿದ್ದು  ಪಿರ್ಯಾದಿದಾರರ ಎಡಕೈಯ  ಕೋಲುಕೈಗೆ  ಒಳನೋವು ಹಾಗೂ  ತಲೆಯ ಮೇಲೆ ರಕ್ತಗಾಯವಾಗಿದ್ದು ರಿಕ್ಷಾದ ಒಳಗಡೆ ಇದ್ದ ಅರುಣ ಕುಮಾರ್ ರವರು  ಕೆಳಗೆ ಬಿದ್ದು  ಅವರ ಎಡಕಾಲು ರಿಕ್ಷದ ಅಡಿಯಲ್ಲಿ ಸಿಲುಕಿಕೊಂಡಿದ್ದು , ಅವರ ಕೋಲು ಕಾಲಿಗೆ  ರಕ್ತಸೋರುವ ಮೂಳೆ ಮುರಿತದ ಗಾಯವಾಗಿದ್ದು , ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ :  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಶೇಖರ ಆಚಾರ್ಯ (78), ತಂದೆ: ದಿವಂಗತ ನಾರಾಯಣ ಆಚಾರ್ಯ,  ವಾಸ: ಬಿದ್ಕ್ಲ ಕಟ್ಟೆ 5 ಸೆಂಟ್ಸ್ ಬಿದ್ಕಲ್ ಕಟ್ಟೆ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಇವರು ಎಂದಿನಂತೆ ದಿನಾಂಕ 05/04/2021 ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಮನೆಯ ಬಳಿಯ ಕುಂದಾಪುರ ತಾಲೂಕು ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬಿದ್ಕಲ್‌ಕಟ್ಟೆ ಉಬ್ಬು ಬಳಿಯಲ್ಲಿನ ಹಾಲಾಡಿ ಶಿರಿಯಾರ ಮುಖ್ಯ ರಸ್ತೆಯ ದಕ್ಷಿಣ ಬದಿಯ ತೀರ ಬದಿಯಲ್ಲಿ ಸಂಜೆ 6:00 ಗಂಟೆಯ ಸಮಯಕ್ಕೆ ರಸ್ತೆ ದಾಟಲು ನಿಂತುಕೊಂಡಿದ್ದಾಗ KA-21-N-6376 ನೇ ಹುಂಡೈ I 20 ನೇ ಕಾರಿನ ಚಾಲಕ ರಾಘವೇಂದ್ರ ಎಂಬುವವರು ಅವರ ಕಾರನ್ನು ಹಾಲಾಡಿ ಕಡೆಯಿಂದ ಶಿರಿಯಾರ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಾ ರಸ್ತೆಯ ತೀರಾ ಎಡಕ್ಕೆ ಚಲಾಯಿಸಿ ರಸ್ತೆ ದಾಟಲು ನಿಂತುಕೊಂಡಿದ್ದ  ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಕಾರಿನ ಸೇಪ್ ಗ್ಲಾಸಿನ ಮೇಲೆ ಬಿದ್ದು ಅಲ್ಲಿಂದ ಬೋನೆಟ್ ಮೇಲೆ ಬಿದ್ದು, ನಂತರ ಕೆಳಗೆ ಬಿದ್ದು ಪರಿಣಾಮ ತಲೆಗೆ ತೀವ್ರ ತರಹದ ರಕ್ತಗಾಯ, ಎರಡೂ ಕಾಲಿಗೆ ಕೈಗೆ, ತರಚಿದ  ರಕ್ತ ಗಾಯವಾಗಿದ್ದು, ಕೂಡಲೇ ಕಾರು ಚಾಲಕ ರಾಘವೇಂದ್ರ ಮತ್ತು ಅಲ್ಲಿ ಅಲ್ಲಿ ಸೇರಿದ ಜನರು ಪಿರ್ಯಾದಿದಾರರನ್ನು ಉಪಚರಿಸಿ ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಅಲ್ಲಿನ ವ್ಯೆದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಅಶೋಕ್ ಶೆಟ್ಟಿ (39), ತಂದೆ: ಶೇಖರ ಶೆಟ್ಟಿ , ವಾಸ: ಪಡ್ಡಮ, ಬೊಮ್ಮರ ಬೆಟ್ಟು ಗ್ರಾಮ , ಹಿರಿಯಡ್ಕ  ,ಉಡುಪಿ ಇವರು 76 ಬಡಗುಬೆಟ್ಟು ಗ್ರಾಮದ ಮಾರ್ಪಳ್ಳಿಯಲ್ಲಿ ಮಾನಸ ಎಂಬ ಹೆಸರಿನ ಜನರಲ್ ಸ್ಟೋರ್‌ ಇಟ್ಟುಕೊಂಡಿದ್ದು, ದಿನಾಂಕ 05/04/2021 ರಂದು ರಾತ್ರಿ 9:00 ಗಂಟೆಗೆ ಅಂಗಡಿಗೆ ಬೀಗವನ್ನು ಹಾಕಿ ಮನೆಗೆ ಹೋಗಿದ್ದು, ಅದರಂತೆ ದಿನಾಂಕ 06/04/2021ರ ಬೆಳಿಗ್ಗೆ 08:00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಶಟರಿನ ಎಡಬದಿಯ ಬೀಗವನ್ನು ಮುರಿದು ಶಟರನ್ನು ಮೇಲಕ್ಕೆತ್ತಿರುವುದು ಕಂಡು ಬಂದಿದ್ದು ಒಳ ಹೋಗಿ ನೋಡಲಾಗಿ ಅಂಗಡಿಯ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು, ಅಂಗಡಿಯ ಡ್ರಾವರ್‌ನಲ್ಲಿ ಒಂದು ಪ್ಲಾಸ್ಟಿಕ್‌ನಲ್ಲಿ 10 ರೂಪಾಯಿ ನೋಟು ಹಾಗೂ ನಾಣ್ಯಗಳ ಕಟ್ಟು ಇಟ್ಟಿದ್ದು ಹಾಗೂ 1/4 ಕೆಜಿ ಯ 2 ಪ್ಯಾಕೆಟ್‌ ವಿಜಯ ಕ್ಯಾಶ್ಯು ಎಂದು ಬರೆದಿರುವ ಗೇರು ಬೀಜ ಕೂಡಾ ಕಳವು ಆಗಿರುತ್ತದೆ. ದಿನಾಂಕ 05/04/2021ರ ರಾತ್ರಿ 09:00 ಗಂಟೆಯಿಂದ 06/04/2021ರ ಬೆಳಿಗ್ಗೆ 08:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಅಂಗಡಿಯ ಒಳಗಡೆ ಪ್ರವೇಶಿಸಿ ಅಂಗಡಿಯ ಡ್ರಾವರ್‌ನಲ್ಲಿದ್ದ  1300/- ನಗದು ಹಣವನ್ನು ಹಾಗೂ  400 ರೂಪಾಯಿ ಮೌಲ್ಯದ ಗೇರು ಬೀಜವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಶಿರ್ವಾ: ಪಿರ್ಯಾದಿದಾರರಾದ ಸಂಗೀತ  (31), ಗಂಡ: ಸುಧೀರ್, ವಾಸ: ಕೋಡುಮೂಡುಮನೆ, ಶಿರ್ವಾ ಗ್ರಾಮ ಇವರ ಅಣ್ಣ ಅಶೋಕ ಸಫಲಿಗ(37) ರವರಿಗೆ ಮದುವೆಯಾಗದೇ ಇದ್ದು, 8 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಗುಣಮುಖವಾಗಿರುವುದಿಲ್ಲ. ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಅಲ್ಲದೇ ಮದುವೆಯಾಗದೇ ಇದ್ದುದರಿಂದಲೂ ಮನನೊಂದು  ದಿನಾಂಕ 06/04/2021 ರಂದು ಬೆಳಿಗ್ಗೆ 11:00 ಗಂಟೆಯಿಂದ 11:30  ಗಂಟೆಯ ನಡುವಿನ ಅವಧಿಯಲ್ಲಿ  ಶಿರ್ವಾ ಗ್ರಾಮದ ಕೋಡುಮೂಡು ಮನೆಯ ವಾಸ್ತವ್ಯದ ಮನೆಯಲ್ಲಿ ಶೌಚಾಲಯದ ಕೊಠಡಿಯ ಮಹಡಿಯ ಜಂತಿಗೆ ಬಟ್ಟೆ ಕಟ್ಟಿ ಕುತ್ತಿಗೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಆರೋಪಿ ಯೋಗೀಶ್ ಶೆಟ್ಟಿ ಪಿರ್ಯಾದಿದಾರರಾದ ಶ್ರೀಮತಿ ಅಂಬಾ ಶೆಟ್ಟಿ (69), ಗಂಡ; ದಿ: ರಮೇಶ್ ಶೆಟ್ಟಿ , ವಾಸ: ಮಾತ್ರಶ್ರೀ ಹೌಸ್, ಕುಡುಪ್ಲಾಜೆ, ತೆಳ್ಳಾರ್ ಅಂಚೆ, ದುರ್ಗಾ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರ ಮಗನಾಗಿದ್ದು ಅವನು ಪ್ರತಿದಿನ ವಿನಾಕಾರಣ ಪಿರ್ಯಾದಿದಾರರಿಗೆ ಕಿರುಕುಳ ನೀಡುತ್ತಿದ್ದು, ದಿನಾಂಕ 04/04/2021 ರಂದು 18:00 ಗಂಟೆಗೆ ಪಿರ್ಯಾದಿದಾರರು ಕಾರ್ಕಳ ತಾಲೂಕು ದುರ್ಗಾ ಗ್ರಾಮದ ತೆಳ್ಳಾರ್ ಕುಡುಪ್ಲಾಜೆ ಎಂಬಲ್ಲಿ ಇರುವ ಅವರ ಮನೆಯ ಹಾಲ್ ನಲ್ಲಿ ಕುಳಿತುಕೊಂಡಿರುವಾಗ ಯೋಗೀಶನು ಪಿರ್ಯಾದಿದಾರರ ಬಳಿ ಹೋಗಿ ಅವರನ್ನು ಉದ್ದೇಶಿಸಿ ಬೈದು ಹೊಡೆಯಲು ಬಂದಿದ್ದು ಆಗ ಪಿರ್ಯಾದುದಾರರು ಅಲ್ಲಿಂದ ಹೋಗಬೇಕೆಂದು ಎದ್ದಾಗ ಆರೋಪಿತನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬೆನ್ನಿಗೆ ಕೈಯಿಂದ ಗುದ್ದಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 07-04-2021 09:49 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ