ಅಭಿಪ್ರಾಯ / ಸಲಹೆಗಳು

ಕಳವು ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮುಕ್ತೇಶ್ವರ್ ಹುಸೇನ್ ಮಹಮ್ಮದ್ ಅಕೀಲ್ (57), ತಂದೆ: ದಿ. ಅಹಮ್ಮದ್ ಹುಸೇನ್, ವಾಸ: ಮುಕ್ತೇಶ್ವರ್ ಹೌಸ್, ಮೈನ್ ರೋಡ್, ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರ ಮನೆಯಾದ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಮುಕ್ತೇಶ್ವರ್ ಹೌಸ್ ನಿಂದ ಅವರ ಹೆಂಡತಿಯೊಂದಿಗೆ ದಿನಾಂಕ 02/04/2021 ರಂದು ಸಂಜೆ 07:30 ಗಂಟೆಗೆ ಭಟ್ಕಳದಲ್ಲಿರುವ ಮಗಳು ಐಶಾಳ ಬಾಡಿಗೆ ಮನೆಗೆ ಹೋಗಿದ್ದು, ವಾಪಾಸ್ಸು ದಿನಾಂಕ 07/04/2021 ರಂದು ಬೆಳಿಗ್ಗೆ 08:30 ಗಂಟೆಗೆ ಮನೆಗೆ ಬಂದು ಮನೆಯ ಬೀಗ ತೆಗೆದು ಒಳಗೆ ಹೋಗಿ ನೋಡಲಾಗಿ ಯಾರೋ ಕಳ್ಳರು ಪಿರ್ಯಾದಿದಾರರ ಅಡುಗೆ ಕೋಣೆಯ ಹಂಚುಗಳನ್ನು ತೆಗೆದು ಮನೆಯ ಒಳಗೆ ಪ್ರವೇಶಿಸಿ ಬೆಡ್ ರೂಮಿನಲ್ಲಿದ್ದ ಗೋಡ್ರೇಜಿನ ಬಾಗಿಲನ್ನು ಬಲವಾದ ಆಯುಧದಿಂದ ಮೀಟಿ ತೆಗೆದು ಗೋಡ್ರೇಜ್ ನಲ್ಲಿಟ್ಟಿದ್ದ ಬಟ್ಟೆ ಹಾಗೂ ಇತರ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ, ಗೋಡ್ರೇಜ್ ನಲ್ಲಿಟ್ಟಿದ್ದ 1) 8 ಗ್ರಾಂ ತೂಕದ 2 ಚಿನ್ನದ ನಾಣ್ಯ, 2) ನಗದು 75,000 ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಒಟ್ಟು ಮೌಲ್ಯ 1,45,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಕಸ್ತೂರಿ (35), ಗಂಡ: ಉಮೇಶ್ ಪೂಜಾರಿ, ವಾಸ: ಅರಮನೆ ಕಾಂಪೌಂಡ್, ಆನೆಕೆರೆ, ಕಸಬ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ಗಂಡ ಉಮೇಶ ಪೂಜಾರಿ (44) ಇವರು ದಿನಾಂಕ 05/04/2021 ರಂದು ಬೆಳಗ್ಗೆ 9:30 ಗಂಟೆಗೆ ತನ್ನ ಮನೆಯಿಂದ ಯಾರಿಗೂ ಹೇಳದೆ, ಕೇಳದೆ ಮನೆಯಿಂದ ಹೋದವರು ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ತೌಸೀಫ್ (32), ತಂದೆ: ಎಂ ಇಸ್ಮಾಯೀಲ್, ವಾಸ: ವಡಭಾಂಡೇಶ್ವರ ಅಮೀನ್ ಕಂಪೌಂಡ್ ಬಳಿ ಮಲ್ಪೆ ಇವರು ಆರೋಪಿತರಾದ 1) ಮೋಹಮ್ಮದ್ ಹಂಝ ಈದೀನಬ್ಬ (38), ತಂದೆ: ದಿ.ಈದೀನಬ್ಬ, ವಾಸ: ಮನೆ ನಂಬ್ರ 14-20 ಹಳೇ ಕೋಟೆ ರಸ್ತೆ ಮಸ್ಜೀದ್ ಆಲ್ ಕರೀಂನ ಹತ್ತಿರ ಉಳ್ಳಾಲ ಮಂಗಳೂರು ದ.ಕ ಜಿಲ್ಲೆ, 2) ಅಜರ್ (38), ತಂದೆ: ಮೊಹಮ್ಮದ್ ವಾಸ ಹಳೇ ಕೋಟೆ ರಸ್ತೆ ಮಸ್ಜೀದ್ ಆಲ್ ಕರೀಂನ ಹತ್ತಿರ ಉಳ್ಳಾಲ ಮಂಗಳೂರು ದ.ಕ ಜಿಲ್ಲೆ, 3)ರಶೀದ್ (60), ವಾಸ: ಪ್ಲಾಟ್ ನಂಬ್ರ 201 ಪೆರಾಡಿಂಗ್ ಪಲ್ಲಿ ಕಟ್ಟೆ ಟೆನ್ನೀಸ್ ಕೋರ್ಟ್ ಬಳಿ 1 ನೇ ಅಡ್ಡ ಮಂಗಳೂರು ತಾಲೂಕು ದ.ಕ ಜಿಲ್ಲೆ ಇವರೊಂದಿಗೆ ಮಲ್ಪೆ ಬಂದರಿನಲ್ಲಿ ಮೀನಿನ ವ್ಯವಹಾರ ಮಾಡಿಕೊಂಡಿದ್ದು, ಪಿರ್ಯಾದಿದಾರರ ಬಳಿ ಆರೋಪಿಗಳು ಆನೇಕ ಬಾರಿ ಮೀನುಗಳನ್ನು ಪಡೆದುಕೊಂಡಿದ್ದು ಆ ಪೈಕಿ ಕೆಲವು ಬಾರಿ ಹಣವನ್ನು ನೀಡುತ್ತಾ ಬಂದಿರುತ್ತಾರೆ. ಹಾಗೂ ಕೆಲವು ಬಾರಿ ಮೀನು ಪಡೆದ ಹಣಕ್ಕೆ ಭದ್ರತೆಗಾಗಿ ಆರೋಪಿಗಳು ಸೇರಿ 1 ನೇ ಆರೋಪಿ ಮೊಹಮ್ಮದ್ ಹಂಝ ಈದೀನಬ್ಬ ಇವರ ಚೆಕ್ಕ್ ನ್ನು ನೀಡಿರುತ್ತಾರೆ . ಚೆಕ್ ನೀಡಿದ ನಂತರ ಆರೋಪಿಗಳು ಪಿರ್ಯಾದಿದಾರರಿಗೆ ಯಾವುದೇ ಹಣವನ್ನು ನೀಡದೆ ಸತಾಯಿಸುತ್ತಾ ಇದ್ದು ಈ ಬಗ್ಗೆ ಪಿರ್ಯಾದಿದಾರರು ಆರೋಪಿತರ ಬಳಿ ಹಣ ಕೇಳಲು ಹೋದಾಗ ನಿನಗೂ ನನಗೂ ಯಾವುದೇ ಸಂಬಂದ ಇಲ್ಲ ಹಣ ಕೊಡಲು ಅಗುವುದಿಲ್ಲ. ಎಂದು ಜಗಳ ಮಾಡಿ ಅವಾಚ್ಯ ಶಬ್ದಗಳಲ್ಲಿ ನಿಂದಿಸಿ ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಂದ ಮೀನನ್ನು ಪಡೆದು ಹಣ ನೀಡದೆ ನಷ್ಟ ಉಂಟು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 420, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 08-04-2021 09:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ