ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಅಪೇಕ್ಷಾ (29), ತಂದೆ: ರವೀಂದ್ರ, ವಾಸ: # 1-146ಸಿ(16), ವಿಶ್ವಕರ್ಮ ಹೌಸ್, ರಾಮನಗರ, ಪಡುಬಿದ್ರಿ ಅಂಚೆ, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ತಮ್ಮ ಅನುರೂಪ್ (20) ಎಂಬುವವರು ನಿಟ್ಟೆ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡಿಕೊಂಡಿದ್ದು, ಎಂದಿನಂತೆ ದಿನಾಂಕ 05/03/2022 ರಂದು ಅವರ ತಂದೆಯ KA-20-ET-8702 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಕಾಲೇಜಿಗೆ ಹೋಗಿ ಕಾಲೇಜು ಮುಗಿಸಿ ವಾಪಸ್ಸು ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿ-01 ರಲ್ಲಿ ನಿಟ್ಟೆ ಕಡೆಯಿಂದ ಪಡುಬಿದ್ರಿ ಕಡೆಗೆ ಬರುತ್ತಾ  17:00 ಗಂಟೆಯ ವೇಳೆಗೆ ಕಾಪು ತಾಲೂಕು ಸಾಂತೂರು ಗ್ರಾಮ ಸಾಂತೂರು ಕೊಪ್ಲ ಶಾಲೆಯ ಎದುರು ತಲುಪುತ್ತಿದ್ದಂತೆ KA-01-MB-729 ನೇ ನಂಬ್ರದ ಕಾರು ಚಾಲಕ ಗಣೇಶ್ ಪೈ ತನ್ನ ಕಾರನ್ನು ಪಡುಬಿದ್ರಿ ಕಡೆಯಿಂದ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಅನುರೂಪ್‌‌‌ನ ಮೋಟಾರ್ ಸೈಕಲ್ಲಿನ ಮುಂದೆ ಹೋಗುತ್ತಿದ್ದ KA-19-HH-3108 ನೇ ನಂಬ್ರದ ಸ್ಕೂಟಿಗೆ ಡಿಕ್ಕಿ ಹೊಡೆದು ಎಳೆದುಕೊಂಡು ಬಂದು ಅನುರೂಪ್ ರವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ, ಸ್ಕೂಟಿ ಸವಾರ ಸುಕೀರ್ತನ್ ಶೆಟ್ಟಿ ಹಾಗೂ ಮೋಟಾರ್ ಸೈಕಲ್ ಸವಾರ ಅನುರೂಪ್ ರವರು  ತಮ್ಮ ಸ್ಕೂಟಿ ಹಾಗೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಸುಕೀರ್ತನ್ ಶೆಟ್ಟಿ ಹಾಗೂ ಅನುರೂಪ್‌ರವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಸುಕೀರ್ತನ್ ಶೆಟ್ಟಿ ಯವರು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆ ಮತ್ತು ಅನುರೂಪ್‌ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 26/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ  ಅಶ್ವಿಕ್ ( 23), ತಂದೆ: ಅನಂತ ದೇವಾಡಿಗ, ವಾಸ: ಟಿ.ಟಿ. ರಸ್ತೆ, ವಡೇರ ಹೋಬಳಿ ಗ್ರಾಮ  ಕುಂದಾಪುರ ತಾಲೂಕು ಇವರಿಗೆ ದಿನಾಂಕ 05/03/2022 ರಂದು ರಾತ್ರಿ 11:05 ಗಂಟೆಗೆ ಪರಿಚಯಸ್ಥರಾದ ಹರ್ಕೂರಿನ ಜನಾರ್ಧನ ಎಂಬುವವರು ಕರೆ  ಮಾಡಿ ಪಿರ್ಯಾದಿದಾರರ ಮಾವ ಅಶೋಕ ದೇವಾಡಿಗರವರು  ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ರೈಲ್ವೆ ಮೇಲ್ ಸೇತುವೆ ಬಳಿ ರಸ್ತೆಯ ಬದಿಯಲ್ಲಿ ಬೈಕ್ ಸಮೇತರಾಗಿ ಬಿದ್ದು ಅವರ ತಲೆಗೆ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ 108 ಅಂಬುಲೆನ್ಸ್ ವಾಹನದಲ್ಲಿ  ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆ ತಂದಿರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಆಸ್ಪತ್ರೆಗೆ ಹೋಗಿ ನೋಡಲಾಗಿ ಅಶೋಕ ದೇವಾಡಿಗರವರು ಮಾತನಾಡುವ ಸ್ಥಿತಿಯಲ್ಲಿ ಇಲ್ಲದ ಕಾರಣ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ವಿಚಾರಿಸಿದಲ್ಲಿ ಅಶೋಕ ದೇವಾಡಿಗರವರು  ತನ್ನ ಮನೆಯಾದ ಕಟ್ಟಿನಮಕ್ಕಿಯಿಂದ ಕುಂದಾಪುರಕ್ಕೆ ಯಕ್ಷಗಾನ ನೋಡಲು ಮೋಟಾರ್ ಸೈಕಲ್ ನಂಬ್ರ KA-20-EF-7832 ನೇದನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ರಾತ್ರಿ 1:00 ಗಂಟೆಗೆ ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ರೈಲ್ವೆ ಮೇಲ್ ಸೇತುವೆ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ತೀವ್ರತರದ ಗಾಯಗೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಯು. ಪುಂಡಲೀಕ ಶಣೈ (53), ತಂದೆ: ದಿ. ದಿವಾಕರ ಅನಂತ್ ಶೆಣೈ, ವಾಸ: ಶ್ರೀಹರಿಪ್ರಸಾದ್ , ಕೊರಂಗ್ರಪಾಡಿ ಗ್ರಾಮ, ಉಡುಪಿ ತಾಲೂಕು ಇವರ ತಾಯಿ ಕಮಲಾ ಡಿ. ಶೆಣೈ (76) ರವರು ಒಂದು ವರ್ಷದ ಹಿಂದೆ ಪಿರ್ಯಾದಿದಾರರ ತಂದೆಯವರು ತೀರಿಕೊಂಡ ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದವರು, ದಿನಾಂಕ  03/03/2022ರಂದು ಬೆಳಿಗ್ಗೆ  9:30  ಗಂಟೆಯ ಸುಮಾರಿಗೆ  ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ  ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಯಾವುದೋ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿರುತ್ತಾರೆ.  ನಂತರ ಕೆ.ಎಂ.ಸಿ ಆಸ್ಪತ್ರೆಯಲ್ಲಿ ವೈದ್ಯರು ಚಿಕಿತ್ಸೆ ಪಡೆಯುತ್ತಿದ್ದ ಕಮಲಾ ಡಿ ಶೆಣೈರವರು ದಿನಾಂಕ 06/03/2022 ರಂದು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ದೇವಾಡಿಗ (50), ತಂದೆ: ಲಿಂಗ ದೇವಾಡಿಗ,ವಾಸ:ಹಳ್ಳೀರ ಮನೆ ಬವಳಾಡಿ , ಬಿಜೂರು ಗ್ರಾಮ ಬೈಂದೂರು ತಾಲೂಕು ಇವರ ಮಗ  ಶಶಿಧರ್ (23) ರವರು ದಿನಾಂಕ 06/03/2022 ರಂದು ಸಂಜೆ 4:30 ಗಂಟೆಗೆ  ಪಿರ್ಯಾದಿದಾರರ ಮನೆಯಾದ ಬಿಜೂರು ಗ್ರಾಮದ ಬವಳಾಡಿಯಿಂದ ಸ್ನೇಹಿತರೊಂದಿಗೆ ಮೀನಿಗೆ ಗಾಳ ಹಾಕಲು  ಬೈಂದೂರು ತಾಲೂಕು ಪಡುವರಿ ಗ್ರಾಮದ  ಸೋಮೇಶ್ವರ ಬೀಚ್ ಬಳಿ ಹೋಗಿದ್ದು ಸಂಜೆ 6:00 ಗಂಟೆಗೆ ಶಶಿಧರನು ತನ್ನ ಸ್ನೇಹಿತ ರೊಂದಿಗೆ ಸೋಮೇಶ್ವರ ದೇವಸ್ಥಾನದ ಹಿಂಭಾಗ ಅರಬ್ಬೀ ಸಮುದ್ರದ  ಬಳಿ ಬಂಡೆ ಕಲ್ಲಿನ  ಮೇಲೆ ನಿಂತುಕೊಂಡು ಮೀನಿಗೆ ಗಾಳ ಹಾಕುತ್ತಿರುವಾಗ  ಗಾಳ ಕಲ್ಲಿಗೆ  ಸಿಕ್ಕಿಹಾಕಿ ಕೊಂಡಿದ್ದರಿಂದ ಶಶಿಧರನು ಸಮುದ್ರ ನೀರಿಗೆ ಇಳಿದು ಬಂಡೆ ಕಲ್ಲಿಗೆ ಸಿಕ್ಕಿಹಾಕಿ ಕೊಂಡಿರುವ ಗಾಳವನ್ನು ಬಿಡಿಸುತ್ತಿರುವ ಸಮಯ ಸಮುದ್ರದ ದೊಡ್ಡದಾದ ಅಲೆಯೊಂದು ಶಶಿಧರನಿಗೆ ಅಪ್ಪಳಿಸಿ ನೀರಿನಲ್ಲಿ ಮುಳುಗಿ ಕೊಚ್ಚಿಕೊಂಡು ಹೋದವರನ್ನು ಸ್ನೇಹಿತ ಪ್ರದೀಪ ಹಾಗೂ ಸ್ಥಳೀಯರು  ರಕ್ಷಿಸಿ  ಸಮುದ್ರದಿಂದ ಮೇಲಕ್ಕೆ ತಂದು ಚಿಕಿತ್ಸೆಯ ಬಗ್ಗೆ ಬೈಂದೂರು ಸಮುದಾಯ ಆಸ್ಪತ್ರೆಗೆ ಕರೆ ತಂದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷಿಸಿ ಶಶಿಧರನು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 11/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕುಂದಾಪುರ : ದಿನಾಂಕ 06/03/2022 ರಂದು 13:30 ಗಂಟೆಗೆ ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಉಪ್ಪಿನಕುದ್ರು ಬಾಳೆಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಮಹೇಶ್ ನಾಗರಾಳ, ಚಟ್ಟರಕಿ ಗ್ರಾಮ  ಸಿಂದಗಿ ತಾಲೂಕು ಬಿಜಾಪುರ ಜಿಲ್ಲೆ C/O ಶಾಬಾನ್, ಅಲ್ಮತ್ಲಬ್, 2) ರಾಘವೇಂದ್ರ ತಂದೆ: ಮಾಧವ ಶೇರಿಗಾರ್ ವಾಸ: ಚಿಕ್ಕನ್ ಸಾಲ್ ರಸ್ತೆ ಕಸಬಾ ಗ್ರಾಮ ಕುಂದಾಪುರ ತಾಲೂಕು, 3) ಕುಮಾರ,  ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು,  4) ರಾಘವೇಂದ್ರ, ತಂದೆ: ಬಸವ, ವಾಸ: ಕನ್ಯಾನ ಗ್ರಾಮ ಕುಂದಾಪುರ ತಾಲೂಕು, 5) ರಾಜೇಶ್,  ಉಪ್ಪಿನಕುದ್ರು ಗ್ರಾಮ, ಕುಂದಾಪುರ ತಾಲೂಕು ಇವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 950/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2022  ಕಲಂ: ಮತ್ತು  87 KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 07-03-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080