ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ದಿನಾಂಕ 06/03/2022 ರಂದು ಸಂಜೆ 5:00 ಗಂಟೆಗೆ ಪಿರ್ಯಾದಿದಾರರಾದ ಗಾಡ್ವಿನ್ ಜಯಕುಮಾರ್ ಕರ್ಕಡ (42), ತಂದೆ: ದಿ. ಜೋಸೆಫ್ ಕರ್ಕಡ, ವಾಸ: ಡೋ.ನಂಬ್ರ 2-314 (1) ಅಡೋನೈ, ಮಹಾಲಿಂಗೇಶ್ವರ ದೇವಸ್ಥಾನದ ಹತ್ತಿರ, ಮಾರ್ಪಳ್ಳಿ, ಕೊರಂಗ್ರಪಾಡಿ ಗ್ರಾಮ ಉಡುಪಿ ಇವರು ತನ್ನ ಸ್ಕೂಟರ್ ನಂಬ್ರ KA-20-EE-1425 ನೇದರಲ್ಲಿ ಕುಕ್ಕಿಕಟ್ಟೆಯಿಂದ ಹನುಮಾನ್‌ಜಂಕ್ಷನ್ -ಚಿಟ್ಪಾಡಿ ಮಾರ್ಗವಾಗಿ ಬಂದು 76 ಬಡಗುಬೆಟ್ಟು ಗ್ರಾಮದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ ನ ಬಳಿ ತಲುಪುವಾಗ ಹಿಂದಿನಿಂದ KA-19- MA-7708 ನೇ ಕಾರಿನ ಚಾಲಕ ಚಂದ್ರಶೇಖರ ಪೂಜಾರಿ ತನ್ನ ಕಾರನ್ನು ಚಿಟ್ಪಾಡಿ ಕಡೆಯಿಂದ ಮಿಷನ್ ಕಂಪೌಂಡ್ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲಕಾಲಿಗೆ ಮೂಳೆ ಮುರಿತ ಗಾಯವುಂಟಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ವಿಕ್ಟರ್‌ ಮಸ್ಕರೇನಸ್‌ (50), ತಂದೆ: ಜಾನ್‌ ಮಸ್ಕರೇನಸ್‌, ವಾಸ: ಹುಡ್ಕೋ ಕಾಲೋನಿ, ಎಲ್‌ಐಜಿ4, ಕಂಟ್ರಿ ಕ್ಲಬ್‌ ಎದುರುಗಡೆ, ಇಂಡಸ್ಟೀಯಲ್‌ಏರಿಯಾ, ಮಣಿಪಾಲ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ದಿನಾಂಕ 06/03/2022 ರಂದು ಬೆಳಿಗ್ಗೆ 7:30 ಗಂಟೆಗೆ ತನ್ನ ಆಟೋರಿಕ್ಷಾದಲ್ಲಿ ಮಣಿಪಾಲದಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಮಾಧವ ಕೃಪಾ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 169(ಎ) ಗೆ ಹೊಂದಿಕೊಂಡಂತೆ ಇರುವ ಬಸ್‌ ಸ್ಟಾಪ್‌ ಬಳಿ ತಲೆಯ ಹಿಂಭಾಗದಲ್ಲಿ ರಕ್ತಸ್ರಾವವಾಗಿ ಬಿದ್ದುಕೊಂಡಿದ್ದ ಓರ್ವ ಅಪರಿಚಿತ ವ್ಯಕ್ತಿ ಯನ್ನು ಅಂಬ್ಯಲೆನ್ಸ್ ಮೂಲಕ ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಅಪರಿಚಿತ ವ್ಯಕ್ತಿ ಬಿದ್ದ ಸ್ಥಳದಲ್ಲಿ ಆತನ ಆಧಾರ್‌ಕಾರ್ಡ್ ದೊರೆತಿದ್ದು ಅದರಲ್ಲಿ  ರಾಜೇಂದ್ರ ಶೆಟ್ಟಿ, ಪ್ರಾಯ:49 ವರ್ಷ, ವಾಸ: ಉಪ್ಪರಿಗೆ ಮನೆ, ಮುದ್ರಾಡಿ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬುದಾಗಿರುತ್ತದೆ. ಆಸ್ಪತ್ರೆಗೆ ದಾಖಲಿಸಿದ್ದ  ರಾಜೆಂದ್ರ ಶೆಟ್ಟಿ (49) ರವರು ದಿನಾಂಕ 06/03/2022 ರಂದು 17:25 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಮೃತ ರಾಜೇಂದ್ರ ಶೆಟ್ಟಿಯವರು ಸುಮಾರು 8 ದಿನಗಳಿಂದ ಅದೇ ಪರಿಸರದಲ್ಲಿ ಓಡಾಡಿಕೊಂಡು ಬಸ್‌ ಸ್ಟಾಪ್‌ನಲ್ಲಿ ಮಲಗಿಕೊಳ್ಳುತ್ತಿದ್ದವನು ಸರಿಯಾಗಿ ಆಹಾರ ಸೇವನೆಮಾಡದೇ ನಿಶ್ಯಕ್ತನಾಗಿದ್ದು, ಯಾವುದೋ ಅನಾರೋಗ್ಯ ಸಮಸ್ಯೆಯಿಂದ ಸುಸ್ತಾಗಿ ಬಿದ್ದು ತಲೆಗೆ ಗಾಯವಾಗಿ ರಕ್ತಸ್ರಾವವಾಗಿ  ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2022 ಕಲಂ: 174  ಸಿ.ಆರ್. ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕೊಲೆ ಪ್ರಕರಣ

 • ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬಜಕಳ ವಾಸಿ ಶೇಖರ (46) ಹಾಗೂ ರಾಜು ಇವರುಗಳು ಒಂದೇ ತಾಯಿಯ ಮಕ್ಕಳಾಗಿದ್ದು ಅವರಿಬ್ಬರ ತಂದೆ ಬೇರೆ ಬೇರೆಯಾಗಿದ್ದು, ತಾಯಿಯ ಮನೆಯ ವಿಚಾರದಲ್ಲಿ ಶೇಖರ ಹಾಗೂ ರಾಜುಗೆ ತಕರಾರು ಇದ್ದು ದಿನಾಂಕ 06/03/2022 ರಂದು ಬೆಳಿಗ್ಗೆ ಶೇಖರ ರವರು ತನ್ನ ಸ್ನೇಹಿತರೊಂದಿಗೆ ಮನೆಯ ಬಳಿ ಜೆಲ್ಲಿ ಹೊರುವ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ 12:15 ಗಂಟೆಗೆ ಅಲ್ಲಿಗೆ ಬಂದ ರಾಜು ತನ್ನ ಅಣ್ಣ ಶೇಖರನೊಂದಿಗೆ ಮನೆಯ ಜಾಗದ ವಿಚಾರದಲ್ಲಿ ಗಲಾಟೆ ಮಾಡಿ ಅದೇ ದ್ವೇಷದಿಂದ ಕೈಯಲ್ಲಿ ಇದ್ದ ಚೂರಿಯಿಂದ ಶೇಖರವರ ಹೊಟ್ಟೆ ಹಾಗೂ ಕುತ್ತಿಗೆಗೆ ಇರಿದು ಮಾರಣಾಂತಿಕ ಹಲ್ಲೆ ಮಾಡಿದ್ದು ತೀವ್ರ ಗಾಯಗೊಂಡ ಶೇಖರವರು ರಕ್ತಸ್ರಾವದಿಂದ ಸ್ಥಳದಲ್ಲಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2022  ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶಕುಂತಳ ಶೆಟ್ಟಿ (46), ಗಂಡ: ನಿತ್ಯಾನಂದ ಶೆಟ್ಟಿ, ವಾಸ: ನಿತ್ಯಾನಿವಾಸ ಬಾರೆ ಈದು ಗ್ರಾಮ ಕಾರ್ಕಳ ತಾಲೂಕು ಇವರು ಈದು ಗ್ರಾಮದ ಸರಕಾರಿ ಕುಮ್ಕಿ ಸ್ಥಳವಾದ ಸರ್ವೆ ನಂಬ್ರ 167 ರಲ್ಲಿ 1 ರ ಸ್ಥಳದಲ್ಲಿ ಸುಮಾರು 5 ಲಕ್ಷದಷ್ಠು ಖರ್ಚು ಮಾಡಿ ವಾಸದ ಮನೆ ಕಟ್ಟಿ ಸಂಸಾರದೊಂದಿಗೆ ವಾಸ ಮಾಡಿಕೊಂಡಿದ್ದು ಪಿರ್ಯಾದಿದಾರರು ತಮಗಿರುವ ಅನಾರೋಗ್ಯದ ನಿಮಿತ್ತ ತನ್ನ ಮಗಳ ಮನೆಯಲ್ಲಿದ್ದಾಗ ದಿನಾಂಕ 04/03/2022 ರಾತ್ರಿ 10:30 ಗಂಟೆಯಿಂದ ಬೆಳಗ್ಗಿನ ಜಾವ 4:00 ಗಂಟೆಯವರೆಗೆ ಸಮಾನ ಉದ್ದೇಶದಿಂದ ಆಪಾದಿತರಾದ ಸುಧಾಕರ ಪೂಜಾರಿ, ಸುಪ್ರಿಯ ಪುಜಾರಿ, ಅಪ್ಪು @ ರಾಜೇಸ್, ಸುಮಂಗಳ ಪೂಜಾರಿ ಹಾಗೂ ಇತರರೊಂದಿಗೆ ಸೇರಿಕೊಂಡು  ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ ಅದರಲ್ಲಿದ್ದ ಪಿರ್ಯಾದಿದಾರರಿಗೆ ಸೇರಿದ ಮೂರುವರೆ ಲಕ್ಷ ಮೌಲ್ಯದ 8 ಪವನ್‌ನಷ್ಠು ತೂಕದ ಚಿನ್ನಾಭರಣ, ಟಿವಿ, ಕಪಾಟು, ಬಟ್ಟೆ, ಪಾತ್ರೆ, ಗ್ರೈಂಡರ್, ಮಿಕ್ಸರ್, ಮರದ ಫರ್ನಿಚರ್‌‌‌‌ಗಳು, ಶೋಕೇಶ್ ಮತ್ತು ಅಮೂಲ್ಯ ದಾಖಲಾತಿ ಪತ್ರಗಳನ್ನು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಲ್ಲದೆ, ಈ ಬಗ್ಗೆ ದಿನಾಂಕ 05/03/2022 ರಂದು ಬೆಳಗ್ಗೆ 9:00 ಗಂಟೆಗೆ ಪಿರ್ಯಾದಿದಾರರು ತಮ್ಮ ಗಂಡನ ಜೊತೆಯಲ್ಲಿ  ಆರೋಪಿತರಲ್ಲಿ ವಿಚಾರಿಸಲು ಹೋದಾಗ  ಜೀವ ಬೆದರಿಕೆ ಒಡ್ಡಿದ್ದಲ್ಲದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ ಎಂದು  ಜೀವ ಬೆದರಿಕೆಯನ್ನು ಒಡ್ಡಿದ್ದು, ಆರೋಪಿಗಳು ಸುಮಾರು ಎಂಟುವರೆ ಲಕ್ಷಕ್ಕಿಂತಲೂ ಜಾಸ್ತಿ ನಷ್ಠವನ್ನುಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2022 ಕಲಂ: 427, 379, 506, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಕಾರ್ಕಳ: ಪಿರ್ಯಾದಿದಾರರಾದ  ಸುಪ್ರಿಯಾ, (30), ಗಂಡ: ರಾಜೇಶ್ ಪೂಜಾರಿ, ವಾಸ: ಇಂಜಿನಡ್ಕ ಮನೆ, ಈದು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ  ಇವರು ದಿನಾಂಕ 04/03/2022 ರಂದು ಬೆಳಗ್ಗೆ 10:00 ಗಂಟೆಗೆ ತಮ್ಮ ಹಕ್ಕಿನ ಈದು ಗ್ರಾಮದ ಸರ್ವೆ ನಂಬ್ರ 110/7 ರಲ್ಲಿ 0.20 ಎಕ್ರೆ ಜಾಗದಲ್ಲಿ ತಮ್ಮ ತಂದೆ, ಸುಧಾಕರ ಪೂಜಾರಿ, ತಂಗಿ ಸುಮಂಗಳ ಇವರ ಜೊತೆಯಲ್ಲಿ ಕೃಷಿ ಕೆಲಸ ಮಾಡುತ್ತಿರುವಾಗ, ಪಿರ್ಯಾದುದಾರರಿಗೆ ಈ ಹಿಂದೆ ಜಾಗವನ್ನು ಮಾರಾಟ ಮಾಡಿದ್ದ ಶಕುಂತಳಾ ಶೆಟ್ಟಿ ಹಾಗೂ ಆಕೆಯ ಗಂಡ ನಿತ್ಯಾನಂದ ಶೆಟ್ಟಿಯು ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿದ್ದಲ್ಲದೆ, ಪಿರ್ಯಾದಿದಾರರು ಮತ್ತು ಅವರ ಮನೆಯವರಿಗೆ ಕೆಲಸ ಮಾಡದಂತೆ ತಡೆದು  ಅವಾಚ್ಯ ಶಬ್ದಗಳಿಂದ ಬೈಯ್ದು, ನಿತ್ಯಾನಂದ ಶೆಟ್ಟಿಯು ಒಮ್ಮೆಲೇ ಪಿರ್ಯದಿದಾರರ ತಂದೆಯವರನ್ನು ಕೈಗಳಿಂದ ದೂಡಿ ಹಾಕಿದ್ದಲ್ಲದೆ, ಆಪಾದಿತರಿಬ್ಬರು  ಬೆದರಿಕೆ ಹಾಕಿ ಹೊರಟು ಹೋಗಿರುವುದಾಗಿ ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 447, 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-03-2022 06:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080