ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಶ್ರೀನಿವಾಸ ರಾವ್ ಕೆ ಇವರು ದಿನಾಂಕ: 06-03-2021  ರಂದು ಬೆಳಿಗ್ಗೆ  ಹಾಲು ತರಲು  ಕಡಿಯಾಳಿ  ಜಂಕ್ಷನ್ನ  ಓಶಿಯನ್  ಪರ್ಲ ಹೋಟೆಲ್  ಬಳಿ ಇರುವ  ಹಾಲಿನ ಅಂಗಡಿಗೆ  ಹೋಗಿ  ಮನೆಯ ಕಡೆಗೆ  ಕಲ್ಲಂಕ  ಕಡೆಯಿಂದ  ಮಣಿಪಾಲದ ಕಡೆಗೆ  ರಸ್ತೆ  ಬದಿಯಲ್ಲಿ  ನಡೆದುಕೊಂಡು ಹೋಗುತಿದ್ದಾಗ  ಬೆಳಿಗ್ಗೆ  ಸಮಯ ಸುಮಾರು  7. 45  ಗಂಟೆಗೆ  ಕಡಿಯಾಳಿ ಜಂಕ್ಷನ್ನ ಬಳಿ  ತಲುಪುವಾಗ  ಮಣಿಪಾಲ ಕಡೆಯಿಂದ  ಕಲ್ಲಂಕ  ಜಂಕ್ಷನ್ನ  ಕಡೆಗೆ  KA 20 P  2375   ನೇ ಕಾರು  ಚಾಲಕ   ಶೇಖ್ ಪರ್ವೆಜ್ ಅಹ್ಮದ್ ಎಂಬಾತ ತನ್ನ  ಕಾರನ್ನು ಚಲಾಯಿಸಿಕೊಂಡು ಬಂದು ಕಡಿಯಾಳಿ  ಜಂಕ್ಷನ್ನ ಬಳಿ  ನಿಲ್ಲಿಸಿ ತನ್ನ ಕಾರನ್ನು ಓಮ್ಮೆಲೆ  ದುಡುಕುತನ  ಮತ್ತು  ನಿರ್ಲಕ್ಯತನದಿಂದ ಹಿಂದಕ್ಕೆ  ಚಲಾಯಿಸಿ ನಡೆದುಕೊಂಡು ಹೋಗುತಿದ್ದ ಪಿರ್ಯಾಧಿದಾರರಿಗೆ  ಹಿಂದಿನಿಂದ  ಡಿಕ್ಕಿ  ಹೊಡೆದ  ಪರಿಣಾಮ  ಪಿರ್ಯಾಧಿದಾರರು ರಸ್ತೆಗೆ  ಎಸೆಯಲ್ಪಟ್ಟು   ಎಡ  ಬದಿ ಕಾಲಿನ ಸೊಂಟದ ಬಳಿ  ಇರುವ  ಮೂಳೆ ಮುರಿತ  ಉಂಟಾಗಿ  ಗಂಭೀರ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021  ಕಲಂ  279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಕಳವು ಪ್ರಕರಣ

  • ಉಡುಪಿ: ಪಿರ್ಯಾದಿ ಚಿರಂಜೀವಿ ಹೆಗಡೆ ಇವರು ದಿನಾಂಕ: 04/03/2021 ರಂದು ರಾತ್ರಿ 10:00 ಗಂಟೆಗೆ ತನ್ನ ಬಾಬ್ತು KA 31 X 8730 ನೇ ದ್ವಿಚಕ್ರ ವಾಹನವನ್ನು ವಾದಿರಾಜ 3 ನೇ ಆಡ್ಡ ರಸ್ತೆಯಲ್ಲಿರುವ  ಜೈ ಹನುಮಾನ್ ಎಂಟ್‌ಪ್ರೈಸಸ್  ಮನೆಯ ಎದುರು ಜಾಗದಲ್ಲಿ ನಿಲ್ಲಿಸಿದ್ದು ದಿನಾಂಕ: 5/03/2021 ರಂದು ಬೆಳಿಗ್ಗೆ 9:00 ಬಂದು ನೋಡಿದಾಗ ಇಟ್ಟಿದ್ದ ಸ್ಥಳದಲ್ಲಿ ದ್ವಿಚಕ್ರ ವಾಹನ ಇಲ್ಲದೇ ಇದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 35/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

  • ಕೋಟ: ದಿನಾಂಕ 06-03-2021 ರಂದು ಸಂಜೆ ಸುಮಾರು 4.00 ಗಂಟೆಯ ಸಮಯಕ್ಕೆ ಪಿರ್ಯಾದಿ ಅಶ್ವಿನಿ ಎನ್.ಪಿ ಇವರ ತಾಯಿ ಮಂಜುಳಾರವರು  ಪಿರ್ಯಾದಿದಾರರ ಜಾಗದಲ್ಲಿದ್ದ ಗೇರು ಮರದಿಂದ ಬಿದ್ದಿದ್ದ ಗೇರು ಬೀಜವನ್ನು ಹಾಗೂ ಚಿಕ್ಕಮ್ಮ ಗುಲಾಬಿ ಯವರ ಜಾಗದಲ್ಲಿ ಪಿರ್ಯಾದಿದಾರರ ಮನೆಯ ಗೇರುಮರದ ಗೇರು ಬೀಜ ಬಿದ್ದಿದ್ದನ್ನು  ಹೆಕ್ಕುತ್ತಿರುವಾಗ ಚಿಕ್ಕಮ್ಮ ಗುಲಾಬಿ ಅಲ್ಲಿಗೆ ಬಂದು ನಮ್ಮ ಜಾಗದಲ್ಲಿ ಬಿದ್ದಿದ್ದ ಗೇರು ಬೀಜ ವನ್ನು ತೆಗೆಯ ಬೇಡ ಎಂದು ಗಲಾಟೆ ಮಾಡುತ್ತಿದ್ದಾಗ ಚಿಕ್ಕಮ್ಮನ ಮಕ್ಕಳಾದ ನಿತೇಶ ಮತ್ತು ನಿಖಿಲ್ ಕೈಯಲ್ಲಿ ದೊಣ್ಣೆಯನ್ನು ತೆಗೆದುಕೊಂಡು ಬಂದು ಪಿರ್ಯಾದಿದಾರರ ಅಮ್ಮನಿಗೆ ತಲೆಯ ಹಿಂಬದಿಗೆ ದೊಣ್ಣೆಯಿಂದ ಹೊಡೆದು ಬಳಿಕ ಅಮ್ಮನು ಮನೆಗೆ ಬರುತ್ತಿರುವಾಗ ನಿಖಿಲ್ ಮತ್ತು ನಿತೇಶ ವಾಪಾಸ್ಸು ಅಮ್ಮನ ಹಿಂದೆ ಬಂದು ಹೊಡೆಯಲು ಬಂದಾಗ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ ತಂಗಿ ಐಶ್ವರ್ಯ ತಡೆಯಲು ಹೋದಾಗ ನಿಖಿಲ್ ಪಿರ್ಯಾದಿದಾರರಿಗೂ ಮತ್ತು ಪಿರ್ಯಾದಿದಾರರ ತಂಗಿಗೂ ದೊಣ್ಣೆಯಿಂದ ತಲೆಗೆ ಹೊಡೆದಿರುತ್ತಾರೆ. ನನ್ನ ಅಣ್ಣ ಅಖಿಲೇಶ ಮತ್ತು ಪಕ್ಕದ ಮನೆಯ ಸಾವಿತ್ರಿ ಬರುವುದನ್ನು ನೋಡಿ ನಿಖಿಲ್ ಮತ್ತು ನಿತೇಶ ಕೈಯಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡು ಅಲ್ಲಿಂದ ಹೋಗುವಾಗ ನಿನ್ನನ್ನು ಗಂಡನ ಜೊತೆ ಬದುಕಲು ಬಿಡುವುದಿಲ್ಲ ಎಂದು ಅವಾಚ್ಯವಾಗಿ  ಬೈದು ಪಿರ್ಯಾದಿದಾರರಿಗೆ ಹಾಗೂ ಅವರ ಮನೆಯವರಿಗೆ ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021  ಕಲಂ: 447, 324, 326, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 06-03-2021 ರಂದು ಸಂಜೆ ಸುಮಾರು 4.00 ಗಂಟೆಯ ಸಮಯಕ್ಕೆ ಪಿರ್ಯಾದಿ ಗುಲಾಬಿ ಪೂಜಾರ್ತಿ  ಇವರು ಅವರ ಮನೆಯ ಬಳಿ ಇರುವಾಗ ಅವರ ಮನೆಯ ಹತ್ತಿರ ವಾಸವಿರುವ  ಮಂಜುಳಾ ಪೂಜಾರ್ತಿರವರು  ಪಿರ್ಯಾದಿದಾರರ ಜಾಗದಲ್ಲಿದ್ದ ಗೇರು ಮರದಿಂದ ಬಿದ್ದಿದ್ದ ಗೇರು ಬೀಜವನ್ನು ಹೆಕ್ಕುತ್ತಿರುವಾಗ ಫಿರ್ಯಾದಿದಾರರು  ಅಲ್ಲಿಗೆ ಬಂದು ನಮ್ಮ ಜಾಗದಲ್ಲಿ ಬಿದ್ದಿದ್ದ ಗೇರು ಬೀಜ ವನ್ನು ತೆಗೆಯ ಬೇಡ ಎಂದು ಹೇಳಿದಕ್ಕೆ   ಮಂಜುಳ ಪೂಜಾರ್ತಿಯ ಮಗ ಅಖಿಲೇಶ, ಅಶ್ವಿನಿ ಹಾಗೂ ಐಶ್ವರ್ಯ ರವರು ಫಿರ್ಯಾದಿದಾರರ ಬಳಿ ಬಂದು  ನಾವು ಹೆಕ್ಕುತ್ತೇವೆ ನೀವು ಯಾರ ಕೇಳಲಿಕ್ಕೆ  ಎಂದು ಹೇಳಿ ಅಖಿಲೇಶನು ಕೈಯಿಂದ ಫಿರ್ಯಾದಿದಾರರಿಗೆ ಕೈಯಿಂದ ದೂಡಿರುತ್ತಾನೆ.  ಮತ್ತು ಅಲ್ಲೇ ಇದ್ದ ಕೋಲಿನಿಂದ ಫಿರ್ಯಾದಿದಾರರ ಮುಖಕ್ಕೆ ಬಲವಾಗಿ ಹೊಡೆದಿದ್ದರಿಂದ ಫಿರ್ಯಾದಿದಾರರ ಬಲಕಣ್ಣಿನ ಹಾಗೂ ಮೂಗಿನ ಬಳಿ ರಕ್ತಗಾಯವಾಗಿರುತ್ತದೆ. ಆಗ ಫಿರ್ಯಾದಿದಾರರು ಜೋರಾಗಿ ಕೂಗಿಕೊಂಡಾಗ ಫಿರ್ಯಾದಿದಾರರ ಮಗ ಬರುವುದನ್ನು ನೋಡಿ  ಆರೋಪಿತರು ಫಿರ್ಯಾದಿದಾರರನ್ನು ಉದ್ದೇಶೀಸಿ ಬೈದಿರುವುದಲ್ಲದೇ  ಜೀವ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುತ್ತಾರೆ. ಆರೋಪಿತರು ಫಿರ್ಯಾದಿದಾರರಿಗೆ ದೊಣ್ಣೆಯಿಂದ ಹಲ್ಲೆ ಮಾಡಿದ್ದರಿಂದ ಮೂಗಿನ ಬಳಿ ಮೂಳೆ ಮುರಿತವಾಗಿದ್ದು ಈ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021  ಕಲಂ: 447.324.326.504.506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಬೈಂದೂರು: ಶ್ವೇತಾ ಪ್ರಾಯ:17ವರ್ಷದವರು ಉಪ್ಪುಂದ ಪದವಿ ಪೂರ್ವ ಕಾಲೇಜಿನಲ್ಲಿ ದ್ವೀತೀಯ ಪಿಯುಸಿ ವಿದ್ಯಾಭ್ಯಾಸ  ಮಾಡಿಕೊಂಡಿದ್ದು ಕಲಿಕೆಯಲ್ಲಿ ಹಿನ್ನಡೆಯಲ್ಲಿದ್ದು ದಿನಾಂಕ 06-03-2021 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ಮದ್ಯಾಹ್ನ ವಾಪಸ್ಸು ಮನೆಗೆ ಬಂದಿದ್ದು ಸಂಜೆ:16:00 ಗಂಟೆಗೆ ಶ್ವೇತಾಳ ತಾಯಿ ಹಾಲು ತರಲೆಂದು ಮನೆಯಿಂದ ಹೊರಗೆ ಹೋಗಿದ್ದು ವಾಪಸ್ಸು 16:30 ಗಂಟೆಗೆ ಮನೆಗೆ ಬಂದು ನೋಡಿದಾಗ ಶ್ವೇತಾಳು ಮನೆಯಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ನಾಗೇಶ್ ಪೂಜಾರಿ(39) ಎಂಬುವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಸುಮಾರು 3 ವರ್ಷಗಳ ಹಿಂದೆ ಅವರ ಪತ್ನಿಯ ಮರಣಾನಂತರ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದವರಿಗೆ ಹಲವು ಬಾರಿ ಚಿಕಿತ್ಸೆ ಕೊಡಿಸಿದರೂ ಗುಣ ಮುಖವಾಗಿರುವುದಿಲ್ಲ. ಸದ್ರಿಯವರು ವಿಪರೀತ ಮದ್ಯಪಾನ ಮಾಡಿ ಅಲ್ಲಲ್ಲಿ ಬಸ್ಸು ನಿಲ್ದಾಣ, ಜಗಲಿ, ಮುಂತಾದ ಕಡೆಗಳಲ್ಲಿ ಮಲಗಿ ದಿನ ಕಳೆಯುತ್ತಿದ್ದವರು, ದಿನಾಂಕ: 06.03.2021 ರಂದು ಕಾಪು ತಾಲೂಕು ಪಲಿಮಾರು ಗ್ರಾಮದ ಹೊಯಿಗೆ ಮಲ್ಲಮಾರು ಎಂಬಲ್ಲಿ ರೈಲ್ವೆ ಗೇಟ್ ಸಮೀಪ ರೈಲ್ವೆ ಹಳಿಯ ಸಮೀಪ ನಡೆದುಕೊಂಡು ಹೋಗುತ್ತಿರುವ ಸಮಯ ಮಧ್ಯಾಹ್ನ 13:00 ಗಂಟೆಯಿಂದ 13:30 ಗಂಟೆಯ ಮದ್ಯಾವಧಿಯಲ್ಲಿ ಯಾವುದೋ ರೈಲು ಡಿಕ್ಕಿ ಹೊಡೆದು ತಲೆಗೆ ಮತ್ತು ಕಾಲಿಗೆ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 07-03-2021 10:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080